ಯತಿ ಸ್ವಂತೀ -32
01-02-2018 ನನ್ನ ಅನೇಕ ಪ್ರಯಾಣಗಳಲ್ಲಿ ವಿಜಯವಾಡದ ಪ್ರಯಾಣವು ವಿಶೇಷ ಎನ್ನಬೇಕು. ಅದೆಷ್ಟು ಸಲ ಆ ಊರಿಗೆ ಹೋದೆನೋ, 2009ರಲ್ಲಿ... ಸರಿಯಾಗಿ ನೆನಪಿಲ್ಲ. ಒಮ್ಮೆ ಹೀಗಾಯಿತು. ವಿಜಯವಾಡದಿಂದ ಸಂಜೆ ಏಳು ಗಂಟೆಗೆ ಹೊರಟೆ. ಪ್ರಶಾಂತಿ ಎಕ್ಸ್‍ಪ್ರೆಸ್. ಪ್ರಶಾಂತಿ ಅನ್ನೋ ಹೆಸರು ಹೇಗೆ ಬಂತು ಅನ್ನೋ ಕುತೂಹಲ ಇದ್ದರೆ ಕೇಳಿ. ಪುಟ್ಟಪರ್ತಿ ಅನ್ನೋ ಪುಟ್ಟ ಆದರೆ ಪ್ರಸಿದ್ಧ ಊರಿನ ಬಗ್ಗೆ ಕೇಳಿರುವಿರಾ? ಅದು ಶ್ರೀ ಸತ್ಯ ಸಾಯಿಬಾಬಾ ಅವರ ಆಶ್ರಮವಿರುವ ಊರು. ಈಗ ರೈಲ್ವೇ ನಿಲ್ದಾಣವನ್ನು ಪ್ರಶಾಂತಿ ನಿಲಯ ಎಂದು ಕರೆಯುತ್ತಾರೆ. ಅದಕ್ಕೇ ಈ ರೈಲಿಗೂ ಪ್ರಶಾಂತಿ ಎಕ್ಸ್‍ಪ್ರೆಸ್ ಎಂದು ಹೆಸರು. ಅತ್ಯಂತ ಸ್ವಚ್ಛ ರೈಲು ನಿಲ್ದಾಣವದು. ಸುಮಾರು ರಾತ್ರಿ ಕಳೆದಿತ್ತು. ನಿದ್ರೆ ಕಣ್ಣಿಗೆ ಹತ್ತುತ್ತಲಿತ್ತು. ಆಗ ಇದ್ದಕ್ಕಿದ್ದಂತೆ ಹಾರ್ಮೋನಿಯಂ ಪ್ಯಾಂ ಪ್ಯಾಂ ಎನ್ನುವ ಸದ್ದು ಕೇಳಿ ಬೆಚ್ಚಿ ಕಣ್ಣುಬಿಟ್ಟೆ. ಆರೇಳು ಜನ ನನ್ನ ಬಳಿಯ ಬೆರ್ತ್‍ಗಳಲ್ಲಿ ಕುಳಿತಿದ್ದರು. ವಿವಿಧ ವಯಸ್ಸುಗಳ ಹೆಣ್ಣು, ಗಂಡುಗಳು. ಅವರಲ್ಲಿ ಅತ್ಯಂತ ವಯಸ್ಸಾದ (ಸುಮಾರು ನಲವತ್ತೈದು ಇರಬಹುದು) ವ್ಯಕ್ತಿಯನ್ನು ನೋಡಿ ಒಂದು ಕ್ಷಣ ಬೇಸರವಾಯಿತು. ಅರೆ! ಇದೇನು ಇಷ್ಟು ದೊಡ್ಡ ಕಂಠದಲ್ಲಿ ಹಾಡುತ್ತಿರುವನಲ್ಲಾ... ಉಳಿದವರು ಮಲಗಿದ್ದಾರೆ ಎಂಬ ಪರಿಜ್ಞಾನ ಬೇಡವೇ ಎಂದುಕೊಂಡೆ. ಆಮೇಲೆ ಗೊತ್ತಾಯಿತು ಅವರ ಕಾರ್ಯಕ್ರಮ ಮರುದಿನ ಬೆಳಗ್ಗೆ ಇದ್ದಿದ್ದರಿಂದ ಈ ರೈಲೇ ಅವರ ರಿಹರ್ಸಲ್ ವೇದಿಕೆಯಾಗಿತ್...