Posts

Showing posts from December, 2017
Image
ಯತಿ ಸ್ವಂತೀ   -1- 1-1-2018 ಚಿಂತೆಗಳ ಮೂಟೆ ಕಟ್ಟಿ, ಮನದ ಮೂಲೆಗೆ ಬಿಸಾಡಿ... ಬೆಳಗ್ಗೆ ಬೆಳಗ್ಗೆ ವಾಕಿಂಗ್ ಹೋದಾಗ ಒಂದು ವಿಶಿಷ್ಟ ದೃಶ್ಯ ಕಣ್ಣಿಗೆ ಬಿದ್ದಿತ್ತು. ಪಾರ್ಕ್‍‌ನಲ್ಲೊಂದು ಮಂಟಪ. ಅದಕ್ಕೆ ವೃತ್ತಾಕಾರದ ಕಲ್ಲು ನೆಲಹಾಸು. ಐದು ಬೆಂಚುಗಳು. ಅವುಗಳ ಮೇಲೆ, ಅವುಗಳ ಸುತ್ತ ಅನೇಕ ಮಹಿಳೆಯರು. ಸುಮಾರು ಹದಿನೈದು ಜನ. ಮೂವತ್ತರಿಂದ ಅರವತ್ತರ ವರೆಗೂ ಇರಬಹುದು ವಯಸ್ಸು. (ಹೆಂಗಸರ ವಯಸ್ಸು ಕೇಳುವುದಿರಲಿ, ಅಂದಾಜು ಮಾಡುವುದೂ ‘ಅಪರಾಧ’!) ಎಲ್ಲರೂ ತಮ್ಮ ಕೈಗಳನ್ನು, ಕಾಲುಗಳನ್ನು, ಸೊಂಟವನ್ನು, ಇಡೀ ದೇಹವನ್ನು ಹಾಗೆ ಹೀಗೆ ತಿರುಗಿಸುತ್ತಾ, ಹಾ, ಹೂ ಎಂದು ಗಂಟಲಿನಿಂದ ಶಬ್ದ ಹೊರಡಿಸುತ್ತಿದ್ದರು. ಆ ಪಾರ್ಕ್‍ನಲ್ಲಿ ಅವರು ಮಾಡುತ್ತಿರುವ ಆ ಕಸರತ್ತು ಮಾತ್ರವೇ ಅವರ ಜೀವನಧ್ಯೇಯವೆಂಬಂತೆ ತೋರುತ್ತಿತ್ತು. ಎಲ್ಲರೂ ಗಲಗಲನೆ ಕಿರುಚುತ್ತಾ, ಒಬ್ಬರನ್ನೊಬ್ಬರು ನೋಡಿ ಮುಗುಳ್ನಗುತ್ತಾ ಇದ್ದುದು ನಿಜಕ್ಕೂ ಮುದ ತಂದ ದೃಶ್ಯ. ವಿಶೇಷವೇನೆಂದರೆ, 2017ರ ಕೊನೆಯ ದಿನವೂ ಅದೇ ನೋಟ, 2018ರ ಮೊದಲ ದಿನವೂ ಅದೇ ನೋಟ. ನಮ್ಮ ಬದುಕಿನಲ್ಲಿ ಏಕತಾನತೆ ಎನ್ನುವುದು ಒಂದು ವರ (ಶಾಪ?)   ಕಾರ್ಖಾನೆಯೊಂದಕ್ಕೆ 22ನೇ ವಯಸ್ಸಿನಲ್ಲಿ ಸೇರಿದಾತ/ಕೆ ಕನಿಷ್ಠಪಕ್ಷ 35 ವರ್ಷಗಳ ಕಾಲ ಅದೇ ಬಸ್ಸು, ಅದೇ ರಸ್ತೆ, ಅದೇ ಕಾರ್ಖಾನೆ. ಒಂದು ವೇಳೆ ನನ್ನಂತೆ ಸೇಲ್ಸ್ ಕೆಲಸಕ್ಕೆ ಸೇರಿದರೆ, ದಿನವೂ ಬೇರೆ ಬೇರೆ ಆಟೋ, ಹೊಸ ಹೊಸ ...