Posts

ಯತಿ ಸ್ವಂತೀ -319

16-11-2018 ದಾರ್ಶನಿಕರೊಬ್ಬರು ಹೇಳಿರುವುದು ಏನೆಂದರೆ ಸುಖವನ್ನು ಇತರರಿಗೆ ಹಂಚಬೇಕು; ದುಃಖವನ್ನು ಒಬ್ಬರೇ ಅನುಭವಿಸಬೇಕು... ಏಕೆಂದರೆ ಅವರವರ ನರಕ ಅವರವರದು. ಈ ಪ್ರಸಕ್ತಿ ಏಕಪ್ಪಾ ಬಂತೂಂತಂದ್ರೆ ನೀವು ನನ್ನ ಬಾಳಿನ ಕೇವಲ ಖುಷಿಯ ವಿಷಯಗಳನ್ನು ಓದುವ ಏರ್ಪಾಡು ಮಾಡುತ್ತಿದ್ದೇನಾದ್ದರಿಂದ. ಮಾರ್ಕೆಟಿಂಗ್ ಡಿಪಾರ್ಟ್‌ಮೆಂಟ್‌ಗೆ ನನ್ನನ್ನು ನನ್ನ ಸಹೋದ್ಯೋಗಿಗಳು ತೆರೆದ ಬಾಹುಗಳಿಂದ ಆಹ್ವಾನಿಸಿದರು. ಅವರಲ್ಲಿ ಬಲು ಬೇಗ ಒಂದಾಗಿ ಹೋದೆ. ದೊಡ್ಡ ಬಾಸ್ ಮೈಕ್ರೋ ಮ್ಯಾನೇಜಿಂಗ್ ಮಾಡಲಿಲ್ಲ. ಒಂದೆರಡು ಬಾರಿ ನನ್ನ ಇಮ್ಮೀಡಿಯೇಟ್ ಬಾಸ್ ಜೊತೆ ಕಸ್ಟಮರುಗಳ ಭೇಟಿ ಮಾಡಿದೆ. ನಂತರ ನನ್ನ ಕೆಲಸ ಶುರುವಾಯಿತು. ನಮ್ಮ ಉತ್ಪಾದನೆಯನ್ನು ಬಳಸಿ ಅದರ ಬಗ್ಗೆ ಖುಷಿಯಿಂದ ಮಾತನಾಡುವವರನ್ನು ಭೇಟಿ ಮಾಡಬೇಕಿತ್ತು. ಪಟ್ಟಿ ತಯಾರಿಸಿ ಭೇಟಿಗೆ ದಿನಾಂಕಗಳನ್ನು ಸಿದ್ಧತೆ ಮಾಡಿದೆ. ಸಹೋದ್ಯೋಗಿಗಳ ಬಗ್ಗೆ ಹೇಳಬೇಕು. ಅದೇನು ಆಫೀಸಾ ಅಂತ ಶಂಕೆ ಬರುವಷ್ಟು ಕೂಲ್ ದಿನಗಳು. ಕಳೆದ ಅನೇಕ ವರ್ಷಗಳಿಂದ ನನ್ನ ಪ್ರತಿ ಹೆಜ್ಜೆಯನ್ನು ಎಣಿಸುತ್ತಿದ್ದ, ನನ್ನ ಕುತ್ತಿಗೆಯ ಹಿಂಭಾಗದಲ್ಲಿ ಬಿಸಿಯುಸಿರು ಬಿಡುತ್ತಿದ್ದ ಬಾಸ್‌ಗಳಿಗಿಂತ ಈ ಬಾಸ್ ಬಹಳ ಡಿಫರೆಂಟು ವೆರಿ ವೆರಿ ಡಿಫರೆಂಟು...

ಯತಿ ಸ್ವಂತೀ-318

  15-11-2018 ಇನ್ನು ನೂರು ದಿನಗಳ ಕಾಲ ರೀಜಿನಲ್ ಆಫೀಸ್‌ನಲ್ಲಿದ್ದೆ. ಒಮ್ಮೆ ಹೆಡ್ ಆಫೀಸ್‌ಗೆ ಹೋಗಿ, ಹಿಂದೆ ನನ್ನ ಸಹೋದ್ಯೋಗಿ ಆಗಿದ್ದಾತ ಈಗ ಮಾರ್ಕೆಟಿಂಗ್ ಹೆಡ್ ಆಗಿದ್ದರು, ಅವರನ್ನು ಕಂಡೆ. 'ಸಾಹೇಬರೇ.. ನನಗೆ ನನ್ನ ಸಾಮರ್ಥ್ಯವನ್ನು ಪೂರ್ಣ ಉಪಯೋಗ ಮಾಡೋಂಥ ಕೆಲಸ ಬೇಕು ಅನ್ಸುತ್ತೆ. ನಿಮ್ಮ ಕಡೆ ಯಾವುದಾದರೂ ಓಪನಿಂಗ್ ಇರಬಹುದಾ?' ಎಂದು ಕೇಳಿದೆ. ನೋಡೋಣ ಎಂದರು. ಆ ಹುಲ್ಲುಕಡ್ಡಿಯನ್ನೇ ಭದ್ರವಾಗಿಟ್ಟುಕೊಂಡು ಅವರ ಕರೆಗೆ ಕಾದೆ. ನಾಲ್ಕು ತಿಂಗಳುಗಳ ನಂತರ ಆ ಕರೆ ಬಂದಿತ್ತು. ಆ ದಿನ ನನ್ನ ಇಂಜಿನಿಯರಿಂಗ್ ಸಹಪಾಠಿಯ ಮಗನ ಮುಂಜಿ ಮತ್ತು ನನ್ನ ಭಾವ ಮೈದುನನ ಮನೆಯ ಗೃಹಪ್ರವೇಶ. ರಜೆ ಹಾಕಿದ್ದೆ ಆ ದಿನ. ಅಂದು ಬಂದಿತ್ತು ಕರೆ -' ನಿನ್ನನ್ನು ತಕ್ಷಣವೇ ಮಾರ್ಕೆಟಿಂಗ್ ಡಿಪಾರ್ಟ್‌ಮೆಂಟ್‌ಗೆ ವರ್ಗ ಮಾಡಲಾಗಿದೆ' ಎಂದಿದ್ದರು ನನ್ನ ಪ್ರಸ್ತುತ ಬಾಸ್. ಬಹಳ  ಸಂತೋಷ ಆಯಿತು. ಆದರೆ ನನ್ನ ಮುಂದೆ ದೊಡ್ಡ ಟಾಸ್ಕ್ ಇತ್ತು. ನನ್ನ ಈ ವರ್ಗದಿಂದಾಗಿ  ಹೊಸ ಸ್ಥಾನದಲ್ಲಿ ನನ್ನ ಸಾಮರ್ಥ್ಯದ ಪುರಾವೆ ನೀಡಿ, ನನ್ನ ವರ್ಗ ಸರಿಯಾದದ್ದು ಎಂದು ಸಾಬೀತು ಪಡಿಸಬೇಕಿತ್ತು. ಈ ಪುರಾವೆ ನೀಡೋದು, ಸಾಬೀತು ಮಾಡೋದು ನನ್ನ ಜನ್ಮಕ್ಕಂಟಿದ ಹಾಗೆ ಕಾಣುತ್ತದೆ!

ಯತಿ ಸ್ವಂತೀ-317

  14-11-2018 ಮರುದಿನ ಶ್ರೀಕಾಕುಳಂಗೆ ಹೋದೆ. ಪುನರಾಯಾನ್ ಅದೇ ಕಥೆ. ಭೇಟಿಗಳನ್ನು ಮುಗಿಸಿ, ವೈಜಾಗ್ ಹಿಂದಿರುಗಿದೆ. ಮರುದಿನ ಬೆಳಗ್ಗೆ ಆರು ಗಂಟೆಗೆ ಛೇರ್ ಕಾರ್ ರೈಲಿನಲ್ಲಿ ಕುಳಿತು ಸಾಮರ್ಲಕೋಟ ತಲುಪಿದೆ. ನಾನು ಕಾಕಿನಾಡಕ್ಕೆ ಹೋಗಬೇಕಿತ್ತು. ಸಾಮರ್ಲಕೋಟದಿಂದ ಟ್ಯಾಕ್ಸಿ ಬಾಡಿಗೆಗೆ ಗೊತ್ತು ಮಾಡಿಕೊಂಡೆ. ದಾರಿಯಲ್ಲಿ ಎಡಗಡೆ ನನ್ನ ಕಣ್ಣಿಗೆ ಬಿತ್ತು ಆ ಶಾಲೆ. ಸರಸ್ವತೀ ವಿದ್ಯಾಪೀಠಂ! ಯಂಡಮೂರಿ ಅವರ ವಿಶಿಷ್ಟ ಶಾಲೆ. ಹೈಸ್ಕೂಲ್ ವಿದ್ಯಾರ್ಥಿಗಳು ಒಂದು ದಿನ ಅಲ್ಲಿಗೆ ಬಂದು ಸ್ವಾವಲಂಬನೆಯ ಅನೇಕ ಪಾಠಗಳನ್ನು ಕಲಿಯುತ್ತಾರೆ. ಮಕ್ಕಳನ್ನು ಸರಸ್ವತೀ ವಿಗ್ರಹದ ಮುಂದೆ ನಿಲ್ಲಿಸಿ ಒಳ್ಳೆಯ ಬುದ್ಧಿಯಿಂದ ಇರುತ್ತೇನೆ. ನನ್ನ ತಾಯಿ ತಂದೆಯರನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಪ್ರತಿ ವಿದ್ಯಾರ್ಥಿಯ ಬಳಿ ಆಣೆ ಮಾಡಿಸಿಕೊಳ್ಳುತ್ತಾರೆ. ಮುಂದಿನ ಪೀಳಿಗೆಗೆ ತಮ್ಮದೇ ರೀತಿಯಲ್ಲಿ ಪಾಠ ಹೇಳುವುದನ್ನು ರೂಢಿಸಿಕೊಂಡಿದ್ದಾರೆ ಯಂಡಮೂರಿ ಅವರು. ಕೆಲವು ಫೋಟೋ ತೆಗೆದುಕೊಂಡು ಕಾಕಿನಾಡ ತಲುಪಿದೆ. ಅಲ್ಲಿನ ಪಾರ್ಟ್‌ನರ್ ಮತ್ತು ಸರ್ಕಾರಿ ಅಧಿಕಾರಿಗಳ ಭೇಟಿ ಮಾಡಿದೆ. ಹದಿನೈದು ದಿನಗಳ ಕಾಲ ಹನ್ನೊಂದು ಊರುಗಳು! ಆಯಾಸ ಸಾಕಷ್ಟು  ... ಉಹೂಂ ಬೇಕಾದಷ್ಟು ಆಗಿತ್ತು. ಸಂಜೆ ಐದೂವರೆಗೆ ಶೇಷಾದ್ರಿ ಎಕ್ಸ್‌ಪ್ರೆಸ್ ಹತ್ತಿ ಮರುದಿನ ಮಧ್ಯಾಹ್ನ ಹನ್ನೆರಡು ಗಂಟೆಗೆ ಬೆಂಗಳೂರು ತಲುಪಿದೆ. ಇನ್ನು ಮುಂದೆ ಹೋಗಲಾರೆ ಇಷ್ಟು ದೊಡ್ಡ ಮತ್ತು ದೀರ್ಘ ಟೂರ್ ಎಂದು...

ಯತಿ ಸ್ವಂತೀ -316

13-11-2018 ಬೆಳಗ್ಗೆ ಕಾಂಪ್ಲಿಮೆಂಟರಿ ಬ್ರೇಕ್‌ಫಾಸ್ಟ್ ತಟ್ಟೆಗೆ ತುಂಬಿಕೊಂಡು ಬಾಯಿಗೆ ಇನ್ನೇನು ಹಾಕಿಕೊಳ್ಳುವ ಸಮಯದಲ್ಲಿ ನನ್ನ ಎದುರು ಬಂದವರನ್ನು ಕಂಡು ಬಾಯಿ ಆ...ಎಂದು ತೆರೆದುಕೊಂಡಿತು! ಬಹಳ ಸಂತಸದಿಂದ ಮಾತಾಡಿಸಿದೆ. ನಾಲ್ಕು ವರ್ಷಗಳಾಗಿದ್ದವು ಅವರನ್ನು ಭೇಟಿ ಮಾಡಿ. 'ನೆನ್ನೆ ಒಬ್ಬನೇ ಬೋರ್ ಹೊಡೆಸಿಕೊಂಡೆ. ನೀನಿರುವೆ ಎಂದು ತಿಳಿದಿದ್ದರೆ ಚೆನ್ನಾಗಿತ್ತು' ಎಂದರು. ತೀರಾ ಪಕ್ಕಪಕ್ಕದ ಕೊಠಡಿ. ಒಂದೇ ಗೋಡೆ ಮಧ್ಯೆ. ಮರೋಚರಿತ್ರದಲ್ಲಿ ಏತೀಗ ಪೂವುನು... ಶಿವರಂಜನಿ ರಾಗದಲ್ಲಿ ಎಸ್ಪಿಬಿ ಹಾಡುವ ಸಮಯದಲ್ಲಿ ಆ ಸಿನಿಮಾದಲ್ಲಿ ನಾಯಕ ನಾಯಕಿ ಹೀಗೇ ಪಕ್ಕ ಪಕ್ಕದ ರೂಮಿನಲ್ಲಿ ಇರುತ್ತಾರೆ. ಅದನ್ನೇ ಹೇಳಿದೆ ನಾನು. ನಕ್ಕರು. ಅಂದೇ ಅವರು ಹೊರಟುಬಿಡುವವರಿದ್ದರು. ನಾನು ವಿಜಯನಗರಂಗೆ ಹೋಗಬೇಕಿತ್ತು. ಕಾಕಿನಾಡ ಬಳಿ ಅವರ ಶಾಲೆಯನ್ನು ನೋಡೆಂದರು. ಭಾರವಾದ ಮನದಿಂದ ನನ್ನ ಕೆಲಸಕ್ಕೆ ಹೊರಟುಬಿಟ್ಟೆ. ಧೋನಿ ನೂರೆಪ್ಪತ್ತೈದು ರನ್ ಚಚ್ಚಿದ್ದ ಸ್ಟೇಡಿಯಮ್ ಮೂಲಕ ವಿಜಯನಗರಂ ತಲುಪಿದೆ. ಎಲ್ಲೆಡೆ ಪಾರ್ಟ್‌ನರ್‌ಗಳು ಆದರದಿಂದ ಸ್ವಾಗತಿಸಿ, ಅವರ ವಿದ್ಯಾರ್ಥಿಗಳಿಗೆ ನಾನು ಸೂಕ್ತ ಸಲಹೆಗಳನ್ನು ನೀಡಲು ಅನುವು ಮಾಡಿಕೊಡುತ್ತಿದ್ದರು. ಸರ್ಕಾರಿ ಅಧಿಕಾರಿಗಳ ಬಳಿ ನಮಗೆ ಬರಬೇಕಾದ ಹಣದ ಬಗ್ಗೆ ಮಾತನಾಡಿ  ವಿಶಾಖಪಟ್ಟಣಂಗೆ ವಾಪಸ್ ಬಂದೆ. ಅವರು ಹೊರಟುಬಿಟ್ಟಿದ್ದರು ಹೈದರಾಬಾದ್‌ಗೆ. ಯಾರೈ ಅವರ್ ಎಂದು ಅರಿವಾಗಿರಬೇಕು ನಿಮಗೆ. ನನ್ನ ಫೇವರಿಟ್ ಲೇಖಕ  ಯ...

ಯತಿ ಸ್ವಂತೀ -315

Image
12-11-2018 ಬೆಳಗ್ಗೆ ಸಿಕಂದರಾಬಾದ್‌, ನಂತರ ನಾಂಪಲ್ಲಿಯನ್ನು ಆಟೋದಲ್ಲಿ ತಲುಪಿದೆ. ಅಂದು ಅಲ್ಲಿ ಲೋಕಲ್ ಟೂರು. ರಾತ್ರಿ ಸ್ಲೀಪರ್ ಬಸ್ ಹತ್ತಿ ವಿಜಯವಾಡಕ್ಕೆ ಹೋದೆ. ಈ ಸ್ಲೀಪರ್ ಬಸ್‍ನ ಬರ್ತ್ ರೈಲುಗಾಡಿಯ ಬರ್ತ್‌ ಹೋಲುತ್ತದೆ. ನೆಮ್ಮದಿಯ ನಿದ್ರಿಸುವ ಮಾಡುವ ಪ್ರಯತ್ನ ಮಾಡಬಹುದು. ಆದರೆ ಸಾಂಗ್ಲಿಗೆ ಹೋದ ಬಸ್ಸಿನ ಸ್ಲೀಪರ್‍ನಲ್ಲಿ ಇಬ್ಬರು ಮಲಗಬೇಕು. ಅದರಲ್ಲಿ ಒಬ್ಬರು ಮಲಗಿದರೂ ತೊಂದರೆ. ಬಸ್ ತಿರುಗಿದಾಗಲೆಲ್ಲ ಉರುಳಾಡಬೇಕು! ಬೆಲ್ಟ್ ಪ್ರೊವೈಡ್ ಮಾಡಿಕೊಟ್ಟರೆ ಅಲುಗಾಡದೇ ಮಲಗಬಹುದು! ಇಂತಹ ಬಸ್ಸಿನಲ್ಲಿ ಪಾಂಡಿಚೆರಿಯಿಂದ ಒಮ್ಮೆ ಬೆಂಗಳೂರಿಗೆ ಪಯಣಿಸಿದ್ದೆ.   ವಿಜಯವಾಡದ ಕೆಲಸ ಮುಗಿಸಿ ಮರುದಿನ ಬೆಳಗ್ಗೆ ಹೊರಡುವ ಪ್ಲಾನ್ ಮಾಡಿದ್ದೆ. ಆಗ ಬಂದಿತು ಗುಂಟೂರಿನಿಂದ ತುರ್ತು ಕರೆ. ಸ್ಥಳೀಯ ಸರ್ಕಾರೀ ಅಧಿಕಾರಿಗಳ ಜೊತೆ ಆ ಸಂಜೆ ಮೀಟಿಂಗ್ ಎಂದು ಅರಿತು ಆಗಲೇ ಗುಂಟೂರಿಗೆ ಹೊರಟೆ. ಮೂವತ್ತು ಕಿಮೀ ದೂರವನ್ನು ಬಸ್ಸಿನಲ್ಲಿ ಕ್ರಮಿಸಿದೆ. ಸಂಜೆ ಮೀಟಿಂಗ್ ಮುಗಿಸಿ ನಾಗಾರ್ಜುನ ಹೊಟೇಲ್‌ನಲ್ಲಿ ಉಳಿದುಕೊಂಡು ಮರುದಿನ ವಿದ್ಯಾರ್ಥಿಗಳನ್ನು ಭೇಟಿ ಮಾಡಿದೆ. ಉದ್ಯೋಗ ಕೊಡಿಸುತ್ತಾರೆ ನಮ್ಮ ಕಂಪೆನಿಯವರು ಈ ಮುಫತ್ ತರಬೇತಿ ಪಡೆದರೆ ಎಂಬ ಮಾತು ಎಲ್ಲೆಡೆ ಹರಡಿತ್ತು. ಉದ್ಯೋಗಾವಕಾಶ ಕೊಡಿಸುತ್ತೇವೆ ಎಂದು ಎಲ್ಲ ಕಡೆ ತಿದ್ದುಪಡಿ ಮಾಡಿದೆ ನಾನು ಮಾತಾಡಿದೆಡೆಯಲ್ಲೆಲ್ಲಾ. Reply...

ಯತಿ ಸ್ವಂತೀ -314

11-11-2018 ರಾತ್ರಿ ವಾರಂಗಲ್‍ನ ಸುಮಾರಾಗಿದ್ದ ಹೊಟೇಲ್‌ನಲ್ಲಿದ್ದು ಬೆಳಗ್ಗೆ ಕರೀಂನಗರಕ್ಕೆ ಹೊರಟೆ. ಹಿಂದೊಮ್ಮೆ ನನ್ನ ಬಾಸ್ ಒಬ್ಬರು ಬೆಂಗಳೂರಿನಿಂದ ನನ್ನೊಂದಿಗೆ ಕರೀಂನಗರಕ್ಕೆ ಬಂದಿದ್ದ ನೆನಪು. ಬೆಂಗಳೂರಿನಿಂದ ಹೈದರಾಬಾದ್‌ಗೆ ವಿಮಾನ. ಅಲ್ಲಿಂದ ಹೈದರಾಬಾದ್‌ ಬಸ್ ನಿಲ್ದಾಣಕ್ಕೆ ಬಸ್. ಆಮೇಲೆ ಮತ್ತೊಂದು ಬಸ್ಸಿನಲ್ಲಿ ಕರೀಂನಗರ. ಅಲ್ಲಿ ಆವತ್ತು ಉಳಿದುಕೊಳ್ಳದೇ ರಾತ್ರಿ ಆದಿಲಾಬಾದ್‌ಗೆ ಬಸ್ ಹತ್ತಿದೆವು. ಆ ಕಾಡಿನ ರಸ್ತೆಯಲ್ಲಿ ಪ್ರಯಾಣಿಕರನ್ನು ದಾರಿಗಳ್ಳರು ತಡೆಗಟ್ಟಿದ್ದಾರೆಂದು ಕೇಳಿದ್ದೆ. ನಮ್ಮ ಪುಣ್ಯ! ಯಾರೂ ನಮ್ಮ ಬಸ್‌ಗೆ ಅಡ್ಡ ಹಾಕಲಿಲ್ಲ! ಬೆಳಗ್ಗೆ ಆದಿಲಾಬಾದ್ ತಲುಪಿದರೆ ಹೊಟೇಲ್ ರೂಂ ಸಿಗದೇ ಮೂರು ಹೊಟೇಲ್‌ಗಳಿಗೆ ಆಟೋದಲ್ಲಿ ತಿರುಗಾಟಗಳಿಂದ ನಿಜವಾಗಿಯೂ ಬಲು ಆಯಾಸವಾದ ಸಮಯವದು. ಈ ಸಲ ಬೆಳಗ್ಗೆ ಕರೀಂನಗರ ತಲುಪಿ ಕೆಲಸ ಮುಗಿಸಿ ಅಲ್ಲಿನ ಒಳ್ಳೆಯ ಹೊಟೇಲ್‌ನಲ್ಲಿದ್ದು ಬೆಳಗ್ಗೆ ಆದಿಲಾಬಾದ್. ಮಳೆ ಆ ಸಲ ಆ ಊರಲ್ಲಿ. ಹಾಗೆಯೇ ಪಾರ್ಟ್‌ನರ್ ಮತ್ತು ಕೆಲವು ಗ್ರಾಹಕರ ಭೇಟಿ ಮಾಡಿ ರಾತ್ರಿ ಸ್ಟೇಶನ್‌ಗೆ ಬಂದೆ. ಯಥಾಪ್ರಕಾರ ಕತ್ತಲೆ. ರೈಲು ಹೊರಡುವವರೆಗೂ ಜನರ ಸುಳಿವೇ ಇರದು.

ಯತಿ ಸ್ವಂತೀ -313

10-11-2018 ನನ್ನ ದೊಡ್ಡ ಟ್ರಿಪ್‌ನ ಬಗ್ಗೆ ನೋಡೋಣ. ನಾನು ಊರುಗಳ ಪಟ್ಟಿ ಮಾಡಿಕೊಂಡು ಬಾಸ್ ಬಳಿ ಹೋದೆ. ಅವರು ಅದನ್ನು ಒಮ್ಮೆ ನೋಡಿ, ಯಾಕೆ ಉಳಿದ ಜಿಲ್ಲೆಗಳನ್ನು ಕೂಡ ನೋಡಿ ಬರಬಾರದು? ಎಂದರು. ಸರಿ, ನಮ್ಮ ಟಿಕೆಟಿಂಗ್ ಸೆಲ್‌ಗೆ ಹೋದೆ. ನನ್ನ ಟೂರು ನೋಡಿ ಬೆರಳು ಕಚ್ಚಿದ (ಅವನದೇ!). ಒಟ್ಟಿನಲ್ಲಿ ಎಲ್ಲ ಪ್ರಯಾಣಗಳ ಟಿಕೆಟ್ ಪಡೆದು ಹೊರಟೆ. ರಾತ್ರಿ ಯಶವಂತಪುರದಿಂದ ಸಿಕಂದರಾಬಾದ್‌ಗೆ ಹೊರಟೆ. ಯಥಾಪ್ರಕಾರ ನನ್ನ ಗೆಳೆತನ ನನ್ನ ಮೊಬೈಲ್‌ಗೆ ತುಂಬಿಕೊಂಡಿದ್ದ ರಫಿ ಲತಾ ಕಿಶೋರ್ ಮುಕೇಶ್ ರಾಜಣ್ಣ ಪಿಬಿಎಸ್ ಎಸ್ಪೀಬಿ ಜಾನಕಿ ಸುಶೀಲ ಮುಂತಾದವರ ಮಧುರ ಗಾನ. ಬೆಳಗ್ಗೆ ಅದೇ ಹರ್ಷ ಹೊಟೇಲ್. ಶುಚಿ ರುಚಿ ತಿಂಡಿ. ನಡೆದು ನಮ್ಮ ಹೈದರಾಬಾದ್ ಆಫೀಸ್ ತಲುಪಿದೆ. ಅಲ್ಲಿಯೂ ಎಲ್ಲ ಯುವಕರೂ ದೋಸ್ತ್‌ಗಳು. ಪಟಪಟನೆ ತೆಲುಗು ಮಾತನಾಡಿದರು. ನಾನೂ ಅಷ್ಟೇ ತೆಲುಗು ಸುಲಭವಾಗಿ ಬಳಸಿದೆ. ಅಂದು ಬೆಳಗ್ಗೆ ಸರ್ಕಾರೀ ಕಛೇರಿಗಳ ಮುಖ್ಯ ಶಾಖೆಯ ಅಧಿಕಾರಿಗಳ ಭೇಟಿ ಮಾಡಿದೆ. ಮರುದಿನ ಬೆಳಗ್ಗೆ ಸಿಕಂದರಾಬಾದ್‌ಗೆ ಹೋಗಿ ಅಲ್ಲಿ ಕೃಷ್ಣ ಎಕ್ಸ್‌ಪ್ರೆಸ್ ಏರಿ ವಾರಂಗಲ್ ತಲುಪಿದೆ. ಕೆಲಸ ಮುಗಿಸಿ ಆ ಊರಲ್ಲಿದ್ದ ಕಾಕತೀಯ ಗುಡಿಗೆ ಹೋದೆ. ಸಾವಿರ ಕಂಬಗಳ ದೇವಾಲಯ ಅದು. ನಮ್ಮ ಮೂಡಬಿದರೆಯ ಸಾವಿರ ಕಂಬದ ಬಸದಿಗೂ ಇದಕ್ಕೂ ಕಂಬಗಳ ಜೋಡಣೆಯಲ್ಲಿ ಬಹಳ ವ್ಯತ್ಯಾಸ ಇದೆ.