ಯತಿ ಸ್ವಂತೀ-318

 
15-11-2018
ಇನ್ನು ನೂರು ದಿನಗಳ ಕಾಲ ರೀಜಿನಲ್ ಆಫೀಸ್‌ನಲ್ಲಿದ್ದೆ. ಒಮ್ಮೆ ಹೆಡ್ ಆಫೀಸ್‌ಗೆ ಹೋಗಿ, ಹಿಂದೆ ನನ್ನ ಸಹೋದ್ಯೋಗಿ ಆಗಿದ್ದಾತ ಈಗ ಮಾರ್ಕೆಟಿಂಗ್ ಹೆಡ್ ಆಗಿದ್ದರು, ಅವರನ್ನು ಕಂಡೆ. 'ಸಾಹೇಬರೇ.. ನನಗೆ ನನ್ನ ಸಾಮರ್ಥ್ಯವನ್ನು ಪೂರ್ಣ ಉಪಯೋಗ ಮಾಡೋಂಥ ಕೆಲಸ ಬೇಕು ಅನ್ಸುತ್ತೆ. ನಿಮ್ಮ ಕಡೆ ಯಾವುದಾದರೂ ಓಪನಿಂಗ್ ಇರಬಹುದಾ?' ಎಂದು ಕೇಳಿದೆ. ನೋಡೋಣ ಎಂದರು. ಆ ಹುಲ್ಲುಕಡ್ಡಿಯನ್ನೇ ಭದ್ರವಾಗಿಟ್ಟುಕೊಂಡು ಅವರ ಕರೆಗೆ ಕಾದೆ. ನಾಲ್ಕು ತಿಂಗಳುಗಳ ನಂತರ ಆ ಕರೆ ಬಂದಿತ್ತು. ಆ ದಿನ ನನ್ನ ಇಂಜಿನಿಯರಿಂಗ್ ಸಹಪಾಠಿಯ ಮಗನ ಮುಂಜಿ ಮತ್ತು ನನ್ನ ಭಾವ ಮೈದುನನ ಮನೆಯ ಗೃಹಪ್ರವೇಶ. ರಜೆ ಹಾಕಿದ್ದೆ ಆ ದಿನ. ಅಂದು ಬಂದಿತ್ತು ಕರೆ -' ನಿನ್ನನ್ನು ತಕ್ಷಣವೇ ಮಾರ್ಕೆಟಿಂಗ್ ಡಿಪಾರ್ಟ್‌ಮೆಂಟ್‌ಗೆ ವರ್ಗ ಮಾಡಲಾಗಿದೆ' ಎಂದಿದ್ದರು ನನ್ನ ಪ್ರಸ್ತುತ ಬಾಸ್. ಬಹಳ 
ಸಂತೋಷ ಆಯಿತು. ಆದರೆ ನನ್ನ ಮುಂದೆ ದೊಡ್ಡ ಟಾಸ್ಕ್ ಇತ್ತು. ನನ್ನ ಈ ವರ್ಗದಿಂದಾಗಿ  ಹೊಸ ಸ್ಥಾನದಲ್ಲಿ ನನ್ನ ಸಾಮರ್ಥ್ಯದ ಪುರಾವೆ ನೀಡಿ, ನನ್ನ ವರ್ಗ ಸರಿಯಾದದ್ದು ಎಂದು ಸಾಬೀತು ಪಡಿಸಬೇಕಿತ್ತು. ಈ ಪುರಾವೆ ನೀಡೋದು, ಸಾಬೀತು ಮಾಡೋದು ನನ್ನ ಜನ್ಮಕ್ಕಂಟಿದ ಹಾಗೆ ಕಾಣುತ್ತದೆ!

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102