ಯತಿ ಸ್ವಂತೀ-317

 
14-11-2018
ಮರುದಿನ ಶ್ರೀಕಾಕುಳಂಗೆ ಹೋದೆ. ಪುನರಾಯಾನ್ ಅದೇ ಕಥೆ. ಭೇಟಿಗಳನ್ನು ಮುಗಿಸಿ, ವೈಜಾಗ್ ಹಿಂದಿರುಗಿದೆ. ಮರುದಿನ ಬೆಳಗ್ಗೆ ಆರು ಗಂಟೆಗೆ ಛೇರ್ ಕಾರ್ ರೈಲಿನಲ್ಲಿ ಕುಳಿತು ಸಾಮರ್ಲಕೋಟ ತಲುಪಿದೆ. ನಾನು ಕಾಕಿನಾಡಕ್ಕೆ ಹೋಗಬೇಕಿತ್ತು. ಸಾಮರ್ಲಕೋಟದಿಂದ ಟ್ಯಾಕ್ಸಿ ಬಾಡಿಗೆಗೆ ಗೊತ್ತು ಮಾಡಿಕೊಂಡೆ. ದಾರಿಯಲ್ಲಿ ಎಡಗಡೆ ನನ್ನ ಕಣ್ಣಿಗೆ ಬಿತ್ತು ಆ ಶಾಲೆ. ಸರಸ್ವತೀ ವಿದ್ಯಾಪೀಠಂ! ಯಂಡಮೂರಿ ಅವರ ವಿಶಿಷ್ಟ ಶಾಲೆ. ಹೈಸ್ಕೂಲ್ ವಿದ್ಯಾರ್ಥಿಗಳು ಒಂದು ದಿನ ಅಲ್ಲಿಗೆ ಬಂದು ಸ್ವಾವಲಂಬನೆಯ ಅನೇಕ ಪಾಠಗಳನ್ನು ಕಲಿಯುತ್ತಾರೆ. ಮಕ್ಕಳನ್ನು ಸರಸ್ವತೀ ವಿಗ್ರಹದ ಮುಂದೆ ನಿಲ್ಲಿಸಿ ಒಳ್ಳೆಯ ಬುದ್ಧಿಯಿಂದ ಇರುತ್ತೇನೆ. ನನ್ನ ತಾಯಿ ತಂದೆಯರನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಪ್ರತಿ ವಿದ್ಯಾರ್ಥಿಯ ಬಳಿ ಆಣೆ ಮಾಡಿಸಿಕೊಳ್ಳುತ್ತಾರೆ. ಮುಂದಿನ ಪೀಳಿಗೆಗೆ ತಮ್ಮದೇ ರೀತಿಯಲ್ಲಿ ಪಾಠ ಹೇಳುವುದನ್ನು ರೂಢಿಸಿಕೊಂಡಿದ್ದಾರೆ ಯಂಡಮೂರಿ ಅವರು. ಕೆಲವು ಫೋಟೋ ತೆಗೆದುಕೊಂಡು ಕಾಕಿನಾಡ ತಲುಪಿದೆ. ಅಲ್ಲಿನ ಪಾರ್ಟ್‌ನರ್ ಮತ್ತು ಸರ್ಕಾರಿ ಅಧಿಕಾರಿಗಳ ಭೇಟಿ ಮಾಡಿದೆ. ಹದಿನೈದು ದಿನಗಳ ಕಾಲ ಹನ್ನೊಂದು ಊರುಗಳು! ಆಯಾಸ ಸಾಕಷ್ಟು  ... ಉಹೂಂ ಬೇಕಾದಷ್ಟು ಆಗಿತ್ತು.
ಸಂಜೆ ಐದೂವರೆಗೆ ಶೇಷಾದ್ರಿ ಎಕ್ಸ್‌ಪ್ರೆಸ್ ಹತ್ತಿ ಮರುದಿನ ಮಧ್ಯಾಹ್ನ ಹನ್ನೆರಡು ಗಂಟೆಗೆ ಬೆಂಗಳೂರು ತಲುಪಿದೆ.
ಇನ್ನು ಮುಂದೆ ಹೋಗಲಾರೆ ಇಷ್ಟು ದೊಡ್ಡ ಮತ್ತು ದೀರ್ಘ ಟೂರ್ ಎಂದುಕೊಂಡೆ. ಅದು ಸತ್ಯವಾಗುವ ಸಮಯ ಸನ್ನಿಹಿತವಾಗಿತ್ತು...

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102