ಯತಿ ಸ್ವಂತೀ -244
01-09-2018 ವೈಷ್ಣೋದೇವಿ ಒಂದು ಬೆಟ್ಟ. ಸುಮಾರು 16 ಕಿ.ಮೀ.ಯಷ್ಟು ನಡೆಯಬೇಕು. ಕುದುರೆ ಸವಾರಿ ಇತ್ತು. ಕುರ್ಚಿಗಳನ್ನು ಜೋಡಿಸಿ ಅವುಗಳ ನಡುವೆ ಕೂರಿಸಿಕೊಂಡು ಹೋಗಲು ಜನವಿದ್ದರು. (ಶ್ರವಣಬೆಳಗೊಳದಲ್ಲಿ ಇಂಥದ್ದು ಕಂಡಿದ್ದ ನೆನಪು). ಆದರೆ ದುರ್ಗಮವಾದ ರಸ್ತೆ. ನಡೆದೆವು ನಡೆದೆವು ನಡೆದೆವು. ಬಹಳ ತಡವಾಗಿ ನಮಗೆ ತಿಳಿದ ವಿಷಯವೇನೆಂದರೆ ರಾತ್ರಿ ಬೆಟ್ಟ ಹತ್ತಲು ಆರಂಭಿಸಿ, ಬೆಳಗಿನ ಝಾವ ಮೇಲೆ ತಲುಪಿ, ದೇವಿ ದರ್ಶನ ಮಾಡುವುದು ಅತ್ಯಂತ ಸೌಕರ್ಯಕರ ಎಂದು. ಆದರೆ ನಾವು ಹೊರಟಿದ್ದೇ ಹತ್ತು ಗಂಟೆ. ಎಲ್ಲರೂ ಸುಸ್ತು ಹೊಡೆಯುತ್ತಾ ಮೇಲೆ ತಲುಪಿದ್ದು ಸಂಜೆ ನಾಲ್ಕು ಗಂಟೆ. ಅಲ್ಲಿದ್ದ ಒಂದು ಉಚಿತ ಲಾಡ್ಜ್‍ನಲ್ಲಿ ಹೋಗಿ ಮಲಗಿದವರು ಸುಮಾರು ಎರಡು ಗಂಟೆ ಕಾಲ ಮಲಗಿದ್ದಿರಬೇಕು. ಅಷ್ಟು ಆಯಾಸ. ನಂತರ ಎದ್ದು ಅಲ್ಲಿ ವ್ಯವಸ್ಥೆ ಮಾಡಲ್ಪಟ್ಟಿದ್ದ ಮೇಲಿನಿಂದ ನೀರು ಸುರಿಯುವ ಜಾಗಕ್ಕೆ ಹೋಗಿ ನಿಂತೆವು. ಮೈ ಒದ್ದೆಯಾಯಿತು. ರೂಮಿಗೆ ಬಂದು ಬಟ್ಟೆ ಬದಲಿಸಿ ದೇವಿ ದರ್ಶನಕ್ಕೆ ಹೋದೆವು. ಎರಡು ಮೂರು ಬೆಟ್ಟಗಳ ನಡುವಿನ ಕಣಿವೆಯಲ್ಲಿದೆ ವೈಷ್ಣೋದೇವಿ ಮಂದಿರ. ಹತ್ತಿರ ಹೋದರೆ ಒಂದು ಸಣ್ಣ ಗುಹೆ. ಅದರೊಳಗೆ ತೂರಿಕೊಂಡು ಒಳಗೆ ಹೋದೆವು. ಕೇವಲ ನಾವು ತೂರುವಷ್ಟು ದೊಡ್ಡ ರಂಧ್ರವನ್ನು ಹೊಂದಿತ್ತು ಆ ಗುಹೆಯ ಬಾಗಿಲು. ಅಲ್ಲಿಂದ ಒಳಗೆ ಐಸ್‍ಕೋಲ್ಡ್ ನೀರಲ್ಲಿ ಸೊಟ್ಟವಾಗಿದ್ದ ಚುಚ್ಚುತ್ತಿದ್ದ ನೆಲದ ಮೇಲೆ ನಡೆದಾಗ ಗುಹೆ ಸ್ವಲ್ಪ ಎತ್ತರವಾಗಿತ್ತು. ಈಗ ಹೆಲಿಕಾಪ...