ಯತಿ ಸ್ವಂತೀ -221



09-08-2018

ಅವರ ಮನೆಯಲ್ಲಿ ಮತ್ತೆ ತಿಂಡಿ, ಕಾಫಿ ಮುಗಿಸಿ, ಉಷಾ ಮತ್ತು ನನ್ನ ಕಸಿನ್ ಇಬ್ಬರೂ ಒಂದೊಂದು ಕೀರ್ತನೆ ಹಾಡಿದ ನಂತರ ಬೆಂಗಳೂರಿಗೆ ಹೊರಟೆವು.

ಎದೆಯಲ್ಲಿ ಡವಡವ. ಯಾವ ಕ್ಷಣದಲ್ಲಿ ಯಾವ ರೀತಿಯ ಆಕ್ರಮಣ ನಮ್ಮ ಮೇಲೆ ನಡೆಯುವುದೋ ಎಂದು.

ದೇವರ ದಯೆ!

ಏನೂ ತೊಂದರೆ ಆಗದೇ ಬೆಂಗಳೂರು ತಲುಪಿದೆವು.

ಅದರ ಮುಂದಿನ ಭಾನುವಾರ ಅವರ ಮನೆಗೆ ಪತ್ರ ಬರೆದೆ. ಅದರ ಮುಂದಿನ ಭಾನುವಾರ ಮೈಸೂರಿಗೆ ಹೋದೆ. ಚೆನ್ನಾಗಿ ಮಾತನಾಡಿಸಿದರು ಎಲ್ಲರೂ. ನನ್ನಾಕೆಯಾಗುವವಳೊಂದಿಗೆ ಹೊರಗೆ ಸುತ್ತಾಡಿ ಮಾತಾಡಿ ಬಂದೆ. ಏನು ಮಾತನಾಡುವುದು? ನನ್ನ ಬಗ್ಗೆ ಆಕೆಗೆ ಹೇಳುವುದು, ಆಕೆ ಆಕೆಯ ಬಗ್ಗೆ ನನಗೆ ಹೇಳುವುದು. ಅಷ್ಟೇ.

ಅದರ ಮುಂದಿನ ಭಾನುವಾರ ಅವಳೇ ನಮ್ಮೂರಿಗೆ ಬಂದಳು. 

ವಧುಪರೀಕ್ಷೆಗೆ ಅವರುಗಳು ಬಂದ ದಿನ ಅದು ನಡೆದದ್ದು ನನ್ನ ಸೋದರತ್ತೆಯ 40 ಬೈ 60 ಸೈಟಿನ ದೊಡ್ಡ ಮನೆಯಲ್ಲಿ. ನಾನು ಅಮ್ಮನಿಗೆ ಹೇಳಿದೆ. ನಿನ್ನ ಭಾವೀ ಸೊಸೆಗೆ ಅವಳಿರಲಿರುವ ಮನೆಯನ್ನು ತೋರಿಸೆಂದೆ. 

ನಾವಿದ್ದುದು ಒಂದು ಪುಟ್ಟ ಹಾಲ್, ರೂಮ್, ಅಡಿಗೆಮನೆ, ಸ್ನಾನದ ಮನೆ ಮತ್ತು ಕಕ್ಕಸು ಇದ್ದ ಮನೆಯಲ್ಲಿ. ಬಹಳ ಇಕ್ಕಟ್ಟಿನ ಮನೆಯಲ್ಲಿ ನಾವಾಗಲೇ ಐವರಿದ್ದೆವು. ನಾನು, ನನ್ನ ಅಮ್ಮ, ನನ್ನ ಅಯ್ಯ, ಅಯ್ಯನ ಅಮ್ಮ ಮತ್ತು ನನ್ನ ಕಸಿನ್. ಅದೊಂದು ಔಟ್‍ಹೌಸ್.

ಹ್ಞಾಂ... ಮುಂದಿನ ಭಾನುವಾರ ನಮ್ಮೂರಿಗೆ ಬಂದಾಗ ಎಲ್ಲರೂ ವಿಮಾನ ನಿಲ್ದಾಣಕ್ಕೆ ಹೋದೆವು. ಹೆಚ್ ಎ ಎಲ್ ಏರ್‍ಪೋರ್ಟ್ ಆಗ ಇದ್ದದ್ದು.

ಉಷಾಳ  ದೊಡ್ಡ ಅಣ್ಣ ಅಮೆರಿಕಾದಿಂದ ತಂಗಿಯ ಮದುವೆಗೆ ಬಂದರು.

ಅದರ ಮುಂದಿನ ವಾರ ನನ್ನ ದೊಡ್ಡಮ್ಮನ ಮಗನಿಗೆ ಮದುವೆ ಇತ್ತು ಬೆಂಗಳೂರಿನಲ್ಲಿ. 

ಅಷ್ಟು ಹೊತ್ತಿಗಾಗಲೇ ‘ರಾಜಾ, ನಿನ್ ಹೆಣ್ತೀನ ತೋರಿಸಲ್ವೇನೋ’ ಪ್ರಶ್ನೆ ಶುರುವಾಗಿತ್ತು ನನಗೆ.

ಸರಿ, ಉಷಾಳನ್ನು ಆ ಮದುವೆಗೆ ಆಹ್ವಾನಿಸಿದೆ. ಕನಿಷ್ಠ ನನ್ನ ತಾಯಿಯ ಕಡೆಯ ನೆಂಟರೆಲ್ಲಾ ಅವಳನ್ನು ನೋಡಬಹುದು ಎಂದು. ಸಂಜೆ ರಿಸೆಪ್ಷನ್‍ಗೆ ಮುಂಚೆ ಎಂ.ಜಿ. ರೋಡಿನಲ್ಲಿ ಆಗ ಇದ್ದ ಲೇಕ್‍ವ್ಯೂಗೆ ಹೋಗಿ ಐಸ್‍ಕ್ರೀಂ ತಿಂದಿದ್ದೆವು.

ಈ ನಡುವೆ ಸಂಕ್ರಾಂತಿ ಬಂದಿತ್ತು. ನಾನು, ಅಮ್ಮ ಮೈಸೂರಿಗೆ ಹೋಗಿ ಇನ್ವಿಟೇಷನ್ ವಿಷಯ ಮಾತಾಡಿದೆವು. 

ಏಕೆಂದರೆ ಆಗೆಲ್ಲಾ ವಾಟ್ಸ್ಯಾಪ್, ಮೆಸೆಂಜರ್ ಇರಲಿಲ್ಲ. ಮನೆ ಮನೆಗೆ ಹೋಗಿ ಕರೆಯಬೇಕಿತ್ತು. ಇಲ್ಲದಿದ್ದರೆ ಲ್ಯಾಂಡ್‍ಲೈನ್‍ಗೆ ಫೋನ್ ಮಾಡಬೇಕಿತ್ತು.

ನೋಡನೋಡುತ್ತಿದ್ದಂತೆ ಜನವರಿ 31 ಬಂದೇ ಬಿಟ್ಟಿತು. ಮನೆಯ ಮುಂದೆ ಚಪ್ಪರವೆದ್ದಿತು.

ಈ ವೈಯಕ್ತಿಕ ಬದಲಾವಣೆಯ ನಡುವೆಯೇ ವೃತ್ತಿಪರವಾಗಿ ಒಂದು ಬದಲಾವಣೆ ಆಗತೊಡಗಿತು. 

ನನ್ನ ಹಳೆಯ ಬಾಸ್ ಟ್ರಾನ್ಸ್‍ಫರ್ ಆಗಿ ಅವರ ಜಾಗಕ್ಕೆ ನಮ್ಮ ಯೂನಿಟ್ ಥ್ರೀ ಇಂದ ಒಬ್ಬರು ಬಂದರು. ಅವರನ್ನು ಹಿಂದೆ ಬ್ಯಾಂಗಲೋರ್ ಮ್ಯಾನೇಜ್‍ಮೆಂಟ್ ಅಸೋಸಿಯೇಷನ್ ಮೀಟಿಂಗುಗಳಲ್ಲಿ ಮಾತನಾಡಿಸಿದ್ದುಂಟು.

ಈಗ ಅವರು ನನ್ನ ಬಾಸ್ ಆದರು.

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102