Posts

Showing posts from March, 2018

ಯತಿ ಸ್ವಂತೀ -91

01-04-2018 ಕಿರ್ಲೋಸ್ಕರ್ ಬಿಟ್ಟು ಸ್ವಂತ ಬ್ಯುಸಿನೆಸ್ ಮಾಡಬೇಕೆಂದು ಪುಸ್ತಕ ಪ್ರಕಾಶನವನ್ನು ಆರಂಭಿಸಿದೆ. ಸುರಭಿ ಪ್ರಕಾಶನ ಮತ್ತು ಸುಘೋಷ ಸಾಹಿತ್ಯ ಎನ್ನುವ ಎರಡು ಪ್ರಕಾಶನ ಸಂಸ್ಥೆಗಳಿಗೆ ಎರಡು ಬ್ಯಾಂಕುಗಳಿಂದ ಓವರ್‍ಡ್ರಾಫ್ಟ್ ಪಡೆದು ಪುಸ್ತಕಗಳನ್ನು ಸಿದ್ಧಗೊಳಿಸಲು ಪ್ರಾರಂಭಿಸಿದೆ. ಕೊಮ್ಮನಾಪಲ್ಲಿ ಗಣಪತಿರಾವ್ ಅವರ ಸ್ನೇಹಗಾನ ನಮ್ಮ ಪ್ರಕಾಶನದಿಂದ ಪ್ರಕಟವಾದ ಮೊದಲ ಪುಸ್ತಕ. ಆ ನಂತರ ನನ್ನದೇ ಕಾದಂಬರಿಗಳು ಬಂದವು. ಮೊಟ್ಟಮೊದಲು ನನ್ನದೇ ಪುಸ್ತಕ ಬಂದಿದ್ದು ವೀರಾಂಬುಧಿ ಜೋಕ್ಸ್. ಹತ್ತು ರೂಪಾಯಿಗಳಿಗೆ 300+ ಜೋಕುಗಳು. ಅವುಗಳಲ್ಲಿ ಅಶ್ಲೀಲತೆಯ ಸೋಂಕು ಕೂಡ ಇರಕೂಡದು ಎನ್ನುವುದು ನನ್ನ ಆಸೆಯಾಗಿತ್ತು. ನನ್ನ ಹೆಸರನ್ನು ಅದುವರೆಗೆ ಪತ್ರಿಕೆಗಳಲ್ಲಿ ಎಂ.ವಿ.ಯತಿರಾಜ್ ಎಂದು ಪ್ರಕಟಿಸುತ್ತಿದ್ದರು. ಜೋಕ್ ಬುಕ್ ಬರೆಯುವಾಗ ಏನಾದರೂ ಒಂದು ಬ್ರ್ಯಾಂಡ್ ಹೆಸರು ಇಟ್ಟುಕೊಳ್ಳಬೇಕೆನ್ನಿಸಿತು. ಏಕೆಂದರೆ ಜೋಕ್ ಬುಕ್‍ಗಳ ಸರಮಾಲೆ ಬರೆಯುವಾಗ ಒಂದೇ ಹೆಸರಿದ್ದರೆ ಚೆನ್ನವೆನಿಸಿತು. ಖುಷ್‍ವಂತ್ ಸಿಂಗ್ ಅವರ ಜೋಕ್ ಬುಕ್‍ಗಳಂತೆ ಸರಣಿ ತರುವ ಆಸೆಯಿತ್ತು. ಆಗ ಬೇರೆ ಯಾವುದಾದರೂ ಹೆಸರೇಕೆ, ನನ್ನ ಮನೆಯ ಹೆಸರನ್ನೇ ಏಕೆ ಇಟ್ಟುಕೊಳ್ಳಬಾರದು ಎನಿಸಿ ವೀರಾಂಬುಧಿ ಜೋಕ್ಸ್ ಎಂದು ಪುಸ್ತಕಕ್ಕೆ ಹೆಸರಿಟ್ಟೆ. ಆಗ ನನ್ನ ಹೆಸರನ್ನು ಯತಿರಾಜ್ ಎಂ ವೀರಾಂಬುಧಿ ಎಂದಿಟ್ಟುಕೊಂಡೆ. ನಂತರ ಎಂ ಕತ್ತರಿಸಿ ಯತಿರಾಜ್ ವೀರಾಂಬುಧಿ ಎಂದು ಮಾತ್ರ ಇಟ್ಟುಕೊಂಡೆ. ಈ ಜೋಕ...

ಯತಿ ಸ್ವಂತೀ -90

31-03-2018 33 ವರ್ಷಗಳ ಹಿಂದೆ ಚಾಮರಾಜಪೇಟೆಯ ರಾಘವೇಂದ್ರಸ್ವಾಮಿ ಮಠಕ್ಕೆ ಸೇರಿದ ಕಲ್ಯಾಣಮಂಟಪದಲ್ಲಿ ನರಸಿಂಹನ ಮದುವೆ! ನಮ್ಮ ಗೆಳೆಯರ ಗುಂಪಿನ ಮೊದಲ ಮದುವೆ. ನಮ್ಮದು ಹದಿಮೂರು ಜನರ ಗುಂಪು. ನಾವುಗಳು 1978ರಲ್ಲಿ ಒಂದುಗೂಡಿದೆವು. ನಂತರ ಅನೇಕರು ಗುಂಪಿಗೆ ಸೇರುತ್ತಾ ಹೋದರು. ಲೋಕಸಭಾ, ರಾಜ್ಯಸಭಾ ಸದಸ್ಯರು ಎಂದು ಸೀನಿಯರ್ ಮತ್ತು ಜ್ಯೂನಿಯರ್‍ಗಳನ್ನು ಕರೆಯುತ್ತಿದ್ದೆವು. ಬಹಳವೇ ಡೈವರ್ಸಿಫೈಡ್ ಗುಂಪು ನಮ್ಮದು. ಎಲ್ಲೈಸಿಯಲ್ಲಿ ಕೆಲಸ ಮಾಡುತ್ತಿದ್ದ ನರಸಿಂಹ ನಮ್ಮ ಮೋಸ್ಟ್ ಸೀನಿಯರ್ ಸದಸ್ಯ. ನನ್ನ ಹೈಸ್ಕೂಲ್ ಸಹಪಾಠಿ. ಆದರೆ ಅವನ ಪರಿಚಯ ನನಗೆ ಅದಕ್ಕೂ ಮುಂಚಿನಿಂದ ಇತ್ತು. ಬಹುಶಃ 1964ರಲ್ಲಿಯೇ ಅವನನ್ನು ನಮ್ಮ ಕಮ್ಯೂನಿಟಿಯ ಕಾರ್ಯಕ್ರಮಗಳಲ್ಲಿ ಕಂಡಿದ್ದೆ. ನನ್ನ ಅಜ್ಜಿಯ ಅಣ್ಣನ ಮನೆಯ ಹತ್ತಿರವೆಲ್ಲೋ ಅವರ ಮನೆಯಿತ್ತು ಮೈಸೂರು ಎನ್ ಆರ್ ಮೊಹಲ್ಲಾದಲ್ಲಿ. ಅವನ ತಂದೆ, ನನ್ನ ತಂದೆ ರೈಲ್ವೆಯಲ್ಲಿ ಕೆಲಸ ಮಾಡುತ್ತಿದ್ದರು. ಹೈಸ್ಕೂಲಿಗೆ ನಾನು ಮಹಾಜನ ಪ್ರೌಢಶಾಲೆಗೆ ಸೇರಿದಾಗ ನರಸಿಂಹನೂ ಅಲ್ಲಿಗೆ ಸೇರಿಕೊಂಡ. ಅವರ ಸ್ವಂತ ಮನೆ ಒಂಟಿಕೊಪ್ಪಲ್ 16ನೇ ಕ್ರಾಸ್‍ನಲ್ಲಿತ್ತು. ಅವನೊಂದಿಗೆ ನಾನು ಸುಧಾ ಪತ್ರಿಕೆ ಬಂದಾಗಲೇ ಓದಲಾರಂಭಿಸಿದೆ. ನಮ್ಮ ಮೇಷ್ಟ್ರು ಕೆ.ಜಿ.ಆರ್. ಮನೆಯಲ್ಲಿ ಸುಧಾ ಬರುತ್ತಿತ್ತು ಎಂದು ನೆನಪು. ನರಸಿಂಹನ ಮನೆಯಲ್ಲಿ ಚಂದಮಾಮ ತರಿಸುತ್ತಿದ್ದರು. ನನಗೆ ಇವನ್ನೆಲ್ಲ ಕೊಂಡು ತಿಳಿಯದು. ಅದಕ್ಕೇ ನರಸಿಂಹನ ಮನೆಯಲ್ಲಿ ಮರೆಯದ...

ಯತಿ ಸ್ವಂತೀ -89

30-03-2018 ಜೀವನ್ ಆಗಾಗ ತುಪ್ಪ ಬೇಕು ಎನ್ನುತ್ತಿದ್ದ. ಚಪಾತಿ ಮಾಡುವಾಗ ಒಂದಿಷ್ಟೂ ತುಪ್ಪ ಯಾ ಎಣ್ಣೆ ಹಾಕುತ್ತಿರಲಿಲ್ಲ ಕಾವಲಿಯ ಮೇಲೆ. ಅಬ್ಬಾ, ಎಂತಹ ಡ್ರೈ ಚಪಾತಿ ಮಾಡುತ್ತಾನೆ ಎಂದುಕೊಂಡಿದ್ದೆ. ಆದರೆ ತುಪ್ಪ ಮಾತ್ರ ಬಹಳ ಖರ್ಚಾಗುತ್ತಿತ್ತು. ನನಗೋ ಅಡುಗೆಯ ಗಂಧವೇ ತಿಳಿಯದು. (ಆರು ತಿಂಗಳು 2003ರಲ್ಲಿ ಅಡುಗೆ ಮಾಡಿಕೊಂಡಿದ್ದೆ. ಅದರ ವಿಷಯ ಆಮೇಲೆ) ಒಂದು ದಿನ ಅವನು ಚಪಾತಿ ಹಿಟ್ಟು ಕಲಸಿ ಅಡುಗೆ ಮನೆಯ ಕಪ್ಪು ಗ್ರಾನೈಟ್ ಕಲ್ಲುಹಾಸಿನ ಮೇಲೆ ಚಪಾತಿ ಹಿಟ್ಟನ್ನು ಟಪ್ ಟಪ್ ಎಂದು ಬಡಿಯುತ್ತಿದ್ದ. ಬಡಿಯುವಾಗಲೆಲ್ಲ ತುಪ್ಪವನ್ನು ಸುರಿದು ಕಲಸುತ್ತಿದ್ದ. ಆಗ ತಿಳಿದವು ಎರಡು ವಿಷಯಗಳು. ಒಂದು ತುಪ್ಪದ ಖರ್ಚು ಹೇಗಾಗುತ್ತಿದೆ ಎಂದು! ಎರಡು ನಾನೇಕೆ ತೂಕ ಹೆಚ್ಚಿಸಿಕೊಳ್ಳುತ್ತಿದ್ದೇನೆ ಎಂದು! ಹಿಂದೊಮ್ಮೆ ಐತ್‍ರಾಝ್ ಎನ್ನುವ ಹಿಂದೀ ಸಿನಿಮಾ ನೋಡಿದ್ದೆ. ಇನ್‍ಡೀಸೆಂಟ್ ಪ್ರಪೋಜಲ್ ಸಿನಿಮಾದ ಭಾರತೀಯ ವರ್ಷನ್. ನನಗೆ ಬಹಳ ಇಷ್ಟವಾಗಿದ್ದು ಅದರ ಹಾಡುಗಳು. ಹಿಮೇಶ್ ರೇಷಮಿಯಾ ಇನ್ನೂ ತನ್ನ ರೇಷ್ಮೆಯಂತಹ ಧ್ವನಿಯಲ್ಲಿ ಹಾಡಲು ಶುರು ಮಾಡಿರದಿದ್ದ ಸಮಯವದು! ಆಂಖೇ ಬಂದ್ ಕರಕೇ, ಗಿಲ ಗಿಲ ಗಿಲ, ತಲಾತುಂ.. ಹೀಗೆ ಇಡೀ ಚಿತ್ರದ ಕಥೆ ಮತ್ತು ಎಲ್ಲ ಹಾಡುಗಳು ನನಗೆ ಬಹಳ ಇಷ್ಟವಾದವು. ಒಮ್ಮೆ ನೋಡಿದ್ದೆ. ಈಗ ನನ್ನ ರೂಮ್ಮೇಟ್ ಜೀವನ್‍ಗೆ ಅದನ್ನು ತೋರಿಸಬೇಕೆಂದುಕೊಂಡೆ. ಅದು ಮತ್ತೆ ಮಸ್ಕತ್‍ನಲ್ಲಿ ಬಿಡುಗಡೆ ಆಗಿತ್ತು. ಅಂದ ಹಾಗೆ ನಿಝ್ವಾದಲ್ಲಿ ಸಿನಿ...

ಯತಿ ಸ್ವಂತೀ -88

29-03-2018 ನಿಝ್ವಾ ನಗರದಲ್ಲಿ ನನ್ನ ಜೀವನ ಒಂದು ರೊಟೀನ್‍ಗೆ ಬಿದ್ದಿತು. ನನಗೆ ಪೈ ಅವರು ಅವರ ಮನೆಯಲ್ಲಿಯೇ ಇರಲು ಹೇಳಿದ್ದರೂ ನಾನು ಜೀವನ್ ಜೊತೆಗೆ ಅವನ ಮನೆಯಲ್ಲಿ ಇರಬೇಕೆಂದುಕೊಂಡೆ. ಅವನಿಗೂ ಬಾಯಿ ತುಂಬಾ ಹರಟುವ ಅವಕಾಶ ಸಿಕ್ಕಿತೆಂದೋ ಏನೋ ಹೂಂ ಎಂದ. ಬೆಳಗ್ಗೆ ಕಾಫಿಯಿಂದ ಹಿಡಿದು ರಾತ್ರಿ ಊಟದ ವರೆಗೆ ಅವನಿಂದ ನನಗೆ ಉಪಚಾರವಾಯಿತು. ನಿಜಕ್ಕೂ ಒಳ್ಳೆಯ ಅಡುಗೆ ಮಾಡುತ್ತಿದ್ದ ಜೀವನ್. ನನ್ನ ಕೆಲಸವೇನಿದ್ದರೂ ಅವನೊಂದಿಗೆ ಸೂಪರ್ ಮಾರ್ಕೆಟ್‍ಗೆ ಅವನೊಂದಿಗೆ ಹೋಗಿ ಅವನಿಗೆ ಬೇಕಾದ ಕಚ್ಚಾವಸ್ತುಗಳನ್ನೂ, ದಿನಸಿಗಳನ್ನೂ ಕೊಳ್ಳುವುದು. ಬಲು ಮಜದ ಸಮಯವದು. ಮಸ್ಕತ್‍ನಲ್ಲಿ ಮಳೆ ನೋಡಿದ್ದೆ. ಛಳಿ ನೋಡಿರಲಿಲ್ಲ. ಇಲ್ಲಿ ಛಳಿಯ ಅನುಭವವಾಯಿತು. ಬೆಳಗ್ಗೆ ಬೆಂಗಳೂರಿನಂತೆ ಮಂಜು ಸುರಿಯುತ್ತಿತ್ತು. ರಾತ್ರಿ ರೂಮಿನಲ್ಲಿ ರೂಂ ಹೀಟರ್ ಇಲ್ಲದೇ ಮಲಗಲು ಆಗುತ್ತಿರಲಿಲ್ಲ, ಅಷ್ಟು ಛಳಿ! ಆ ರೂಮ್ ಹೀಟರ್ ಎರಡು ಕಾಯಿಲ್‍ಗಳ ಚಿಕ್ಕ ಯಂತ್ರ. ಅದು ಕೆಂಪಗೆ ಕಾದಾಗ ಇಡೀ ರೂಮು ಬೆಂಕಿಯಂತೆ ಬಿಸಿಯಾಗುತ್ತಿತ್ತು. ಆಗ ಎದ್ದು ಅದನ್ನು ಆರಿಸಿ ಮಲಗಬೇಕಿತ್ತು. ಬಹಳ ಸಾಧು ಸ್ವಭಾವದ ಹುಡುಗ ಜೀವನ್. ಬೆಳಗ್ಗೆ ಏಳೂವರೆಗೆ ತಿಂಡಿ ತಿಂದು ಎಂಟಕ್ಕೆ ಸರಿಯಾಗಿ ಅಂಗಡಿ ತೆರೆಯುತ್ತಿದ್ದೆವು. ಮೊದಲ ಎರಡು ಮೂರು ದಿನಗಳು ಹೊರಗೆ ಹೋಗಲಿಲ್ಲ. ಅಲ್ಲಿನ ವ್ಯವಹಾರ ಹೇಗಿರುವುದೆಂದು ನೋಡಿದೆ. ಹಿಂದೆ ಮಸ್ಕತ್‍ನಲ್ಲಿ ಲೈಟಿಂಗ್ ಷೋ ರೂಮಿನಲ್ಲಿ ಕೆಲಸ ಮಾಡಿದ ಅನುಭವವಿತ್ತು. ಆದರ...

ಯತಿ ಸ್ವಂತೀ -87

28-03-2018 ಒಂದು ಭಾನುವಾರ ಬೆಳಗ್ಗೆ ಅವರ ಬಂಜಾರ ಹಿಲ್ಸ್ ಮನೆಗೆ ಹೋದೆ. ಮೊದಲು ಅವರು ಕಪಾಡಿಯ ಲೇನ್... ಮಾಸಬ್ ಟ್ಯಾಂಕ್ ಬಳಿ ಆಫೀಸ್ ಮಾಡಿಕೊಂಡಿದ್ದರು. ಅಲ್ಲಿಗೂ ಹೋಗಿದ್ದ ನೆನಪು. ಬರೆಯುತ್ತಾ ಕುಳಿತಿದ್ದರು. ನಾನು ಪ್ರಕಾಶನ ಸಂಸ್ಥೆ ಶುರು ಮಾಡುವೆನೆಂದಾಗ ಸಂತೋಷ...ನನ್ನಿಂದ ಏನು ಬೇಕು ಎಂದರು. ನಿಮ್ಮ ಹೊಸ ಪುಸ್ತಕ ಕೊಟ್ಟರೆ ನನ್ನ ಪ್ರಕಾಶನಕ್ಕೆ ಒಳ್ಳೆಯ ಬುನಾದಿ ಸಿಗುತ್ತದೆ ಎಂದೆ. ಮಾಸಿಕವೊಂದರಲ್ಲಿ ಧಾರಾವಾಹಿ ಆಗಬೇಕಿದ್ದ ದೊಡ್ಡ ಕಾದಂಬರಿ ನೀಡಿದರು. ನನ್ನ ಪ್ರಕಾಶನ ಗಟ್ಟಿಯಾಗಿ ನಿಂತಿತು. ಯಂಡಮೂರಿ ಅವರ ಅನೇಕ ಪುಸ್ತಕಗಳನ್ನು ಪ್ರಕಟಿಸಿದೆ. ಅವರು ಕಾದಂಬರಿ ಬರೆದ ಹೀರೋ ಫೌಂಟನ್ ಪೆನ್ಗಳನ್ನು ಅಭಿಮಾನಿಗಳಿಗೆ ನೀಡುತ್ತಿದ್ದರು. ನನಗೊಂದು ಸಿಕ್ಕಿತು. ಬೆಳದಿಂಗಳ ಬಾಲೆ ಕನ್ನಡ ಸಿನಿಮಾ ಬಂದಾಗ ಗೆಳೆಯರೊಡನೆ ಬೆಂಗಳೂರಿಗೆ ಬಂದರು. ಅವರೊಂದಿಗೆ ಸಾಗರ್ ಚಿತ್ರಮಂದಿರದಲ್ಲಿ ಆ ಸಿನಿಮಾ ನೋಡಿದ ಹೆಮ್ಮೆ ನನ್ನದು. ಸಂಜೆ ಬೌರಿಂಗ್ ಇನ್ಸ್ಟಿಟ್ಯೂಟ್ನಲ್ಲಿ ಸಮಾರಂಭ ಇತ್ತು. ಅನಂತನಾಗ್, ನಿರ್ದೇಶಕ ಸುನಿಲ್ ಕುಮಾರ್ ದೇಸಾಯಿ, ಅನುವಾದ ಮಾಡಿದ ವಂಶಿ ಇದ್ದರು. ತಡವಾಗಿ ಮನೆಗೆ ಬಂದೆ. ಮರುದಿನ ಬೆಳಗ್ಗೆ ಬೇಗನೆ ಯಂಡಮೂರಿ ಅವರ ಹೊಟೇಲ್ ರೂಂ ತಲುಪಿದೆ. ದೇಸಾಯಿ ಅವರು ಸಿಟಿ ಕೇಬಲ್ ಛಾನೆಲ್ಗಾಗಿ ಯಂಡಮೂರಿ ಅವರನ್ನು ಸಂದರ್ಶನ ಮಾಡಬೇಕಿತ್ತು. ಅವರು ಬರಲಿಲ್ಲ. ನೀನೇ ಮಾಡು ಸಂದರ್ಶನ ಎಂದರು ಯಂಡಮೂರಿ. ಅದೊಂದು ಖುಷಿ ಘಟನೆ. ಖೇದವೆಂದರೆ ಆ ಕ್ಯಾಸೆಟ...

ಯತಿ ಸ್ವಂತೀ -86

27-03-2018 ಪ್ರಾಯಶಃ 1983 ಇರಬಹುದು. ನನ್ನ ಅಮ್ಮ ಪ್ರಜಾಮತ ವಾರಪತ್ರಿಕೆ ಓದಿ 'ಈ ಹಾಳು ಕಾದ್ರಾ ಮುಂದಿನ ವಾರ ಆ ಪಾಪದ ಹುಡುಗಿ ತುಳಸಿಗೆ ಏನು ಕಾಟ ಕೊಡ್ತಾನೋ!' ಎಂದಾಗ ಅರೆ! ನನ್ನ ಅಮ್ಮ ಧಾರಾವಾಹಿ ಓದಿ ಈ ರೀತಿ ರಿಯಾಕ್ಟ್ ಆಗ್ತಿರೋದು ಇದೇ ಮೊದಲನೇ ಸಲ ಎಂದುಕೊಂಡೆ. ಆ ಧಾರಾವಾಹಿ ಬರೆದವರಾರೆಂದು ನೋಡಿದೆ. ಯಂಡಮೂರಿ ವೀರೇಂದ್ರನಾಥ್. ತೆಲುಗು ಮೂಲ. ಕನ್ನಡಕ್ಕೆ :ಬೇಲೂರು ಕೃಷ್ಣಕುಮಾರ್. ಓ ಇದು ಅನುವಾದ. ಸಾಮಾನ್ಯವಾಗಿ ಯದ್ದನಪೂಡಿ ಸುಲೋಚನಾ ರಾಣಿ ಮುಂತಾದ ಮಹಿಳಾ ಲೇಖಕಿಯರ ಕಾದಂಬರಿಗಳು ಕನ್ನಡಕ್ಕೆ ಬರುತ್ತಿದ್ದವು. ಈಗ ಯಾರೋ ಗಂಡಸರ ಕಾದಂಬರಿ ಎಂದುಕೊಂಡೆ. ಅಷ್ಟೇ. ಮುಂದೊಂದು ದಿನ ಬಿ. ವಿ. ವೈಕುಂಠ ರಾಜು ಅವರ 'ವಾರಪತ್ರಿಕೆ'ಯಲ್ಲಿ ಅಷ್ಟಾವಕ್ರ ಅನ್ನೋ ಧಾರಾವಾಹಿ ಅಕಸ್ಮಾತ್ ಓದಿದೆ. ಅಷ್ಟೇ! ದಬ್ಬೆಂದು ಅವರ ಶೈಲಿಗೆ ಬಿದ್ದು ಹೋದೆ. ಅಬ್ಬಾ... ಈ ಅನುವಾದವೇ ಇಷ್ಟು ಚೆನ್ನಾಗಿದ್ದರೆ ಇನ್ನು ಮೂಲಭಾಷೆಯಲ್ಲಿ ಹೇಗಿರಬಹುದು! ನಾನು 1969-72 ಹೈಸ್ಕೂಲ್ ಓದುವಾಗ ನನ್ನ ಗೆಳೆಯ ಪ್ರಸಾದ್ ಮನೆಯಲ್ಲಿ ಆಂಧ್ರಪ್ರಭ ವಾರಪತ್ರಿಕೆಯಲ್ಲಿ ಸಿನಿಮಾ ಪುಟದಲ್ಲಿ ತಾರೆಯರ ಚಿತ್ರಗಳ ಕೆಳಗೆ ಮುದ್ರಿಸಲ್ಪಟ್ಟಿದ್ದ ಅವರ ಹೆಸರುಗಳನ್ನು ಓದುತ್ತಿದ್ದೆ. ಕೆಲವು ಅಕ್ಷರಗಳನ್ನು ಓದಲು ಸಾಧ್ಯವಾಗುತ್ತಿಲ್ಲವೆನಿಸಿದಾಗ ಪ್ರಸಾದ್ ಅಕ್ಕಂದಿರಾದ ನಾಗವೇಣಿ ಮತ್ತು ವಿಮಲ ನನಗೆ ಅವನ್ನು ಓದಲು ಸಹಾಯ ಮಾಡುತ್ತಿದ್ದರು. ಈಗ ತೆಲುಗು ಕಲಿಯಲೇಬೇಕು. ನನ...

ಯತಿ ಸ್ವಂತೀ -85

26-03-2018 ನಮ್ಮ ಮೈಸೂರು ರೈಲ್ವೇ ಲೋಕೋ ಕಾಲೋನಿಯ ಮನೆಯ ಬಳಿ ಆಗಿನ ಕಾಲದಲ್ಲಿ ಒಬ್ಬರು ನಟರಿದ್ದರು. ಅವರು ರೈಲಿನಲ್ಲಿ ಗಾರ್ಡ್. ಅನೇಕ ಕನ್ನಡ ಸಿನಿಮಾಗಳಲ್ಲಿ ಪೋಷಕ ಪಾತ್ರ ವಹಿಸಿದ್ದರು. ಅವರ ಹೆಸರು ನೆನಪಿಲ್ಲ. ಅವರ ಮನೆಯ ಬಳಿ ಮತ್ತೊಬ್ಬರು ಗಾರ್ಡ್ ಇದ್ದರು. ಅವರ ಮಗಳು ನನ್ನ ತಂಗಿಯ ಗೆಳತಿ. ಅವರ ಮನೆಗೆ ನಾನು ಕೂಡ ಹೋಗುತ್ತಿದ್ದೆ. ಏಕೆಂದರೆ ಅವರ ಮನೆಯಲ್ಲಿ ಕನ್ನಡ ಸಿನಿಮಾಗಳ ಪುಸ್ತಕಗಳು ಇರುತ್ತಿದ್ದವು. ಥಿಯೇಟರಿಗೆ ಹೋದರೆ ಅಲ್ಲಿ ಐದು ಪೈಸೆಗೋ ಹತ್ತು ಪೈಸೆಗೋ ನಾಲ್ಕಾಣೆಗೋ ಒಂದು ಪುಸ್ತಕ ಮಾರುತ್ತಿದ್ದರು. ಅದು ಆಗ ಆ ಥಿಯೇಟರಿನಲ್ಲಿ ‘ಓಡುತ್ತಿದ್ದ’ ಕನ್ನಡ ಸಿನಿಮಾದ ಬಗ್ಗೆ ಪುಸ್ತಕ. ಆ ಪುಟ್ಟ ಪುಸ್ತಕದ ಮುಖಪುಟದಲ್ಲಿ ಸಿನಿಮಾದ ಹೆಸರು, ಮುಖ್ಯ ನಟರ ಕಪ್ಪುಬಿಳುಪು ಚಿತ್ರಗಳು. ಒಳಗೆ ಆ ಸಿನಿಮಾದ ಕಥೆಯ ಬಗ್ಗೆ ಕೆಲವು ಸ್ವಾರಸ್ಯಕರ ಸಾಲುಗಳಿರುತ್ತಿದ್ದವು. ಕಥೆಯನ್ನು ಒಂದು ಮುಖ್ಯ ಘಟ್ಟದಲ್ಲಿ ನಿಲ್ಲಿಸಿ, ಮುಂದೇನಾಯಿತು...? ಎಂದು ಬರೆದು, ಮುಂದಿನದನ್ನು ರಜತಪರದೆಯ ಮೇಲೆ ನೋಡಿ ಆನಂದಿಸಿ ಎಂದು ಬರೆದಿರುತ್ತಿದ್ದರು. ಅತ್ಯಂತ ಗೋಳು ಸಿನಿಮಾಗೆ ಕೂಡ ‘ಆನಂದಿಸಿ’ ಎಂದೇ ಬರೆದಿರುತ್ತಿದ್ದರು! ಮುಂದಿನ ಪುಟಗಳಲ್ಲಿ ಆ ಸಿನಿಮಾದ ಹಾಡುಗಳ ಸಾಹಿತ್ಯ. ಅದನ್ನು ಬರೆದವರು, ಹಾಡಿದವರು ಈ ವಿವರಗಳು ಕೂಡ ಇರುತ್ತಿದ್ದವು. ಗೆಜ್ಜೆಪೂಜೆ ಸಿನಿಮಾದ ಪುಸ್ತಕ ಓದಿ ಅದರಲ್ಲಿ ‘ಒಂದು ದಿನ ರಾತ್ರಿಯಲೀ ಕಂಡೇ ಕನಸೊಂದು’ ಹಾಡು ಇದೆ ಎಂದು ನೋಡಿ,...

ಯತಿ ಸ್ವಂತೀ -84

25-03-2018 ಪಿಯುಸಿ ಓದಲು ನಾನು ಬೆಂಗಳೂರಿಗೆ ಬಂದೆ. ಜಯನಗರದ ನಾಲ್ಕನೇ ಬ್ಲಾಕ್‍ನ ನನ್ನ ಸೋದರತ್ತೆಯ ಮನೆಯಲ್ಲಿದ್ದೆ. ಆ ಸಮಯದಲ್ಲಿ ನನಗೆ ಬಹಳ ದಿನಗಳು ರಜೆ ಬಂದಿದ್ದವು. ಮಾತೆತ್ತಿದರೆ ಬೆಂಗಳೂರು ಯೂನಿವರ್ಸಿಟಿಯವರು ಸ್ಟ್ರೈಕ್ ಮಾಡುತ್ತಿದ್ದರು. ಮನೆಯಲ್ಲೇ ಬಹಳ ಹೊತ್ತು ಕಾಲ ಕಳೆಯುವ ಸಮಯದಲ್ಲಿ ನನ್ನ ಸೋದರ ಮಾವನ ಬಳಿ ನೋಡಿದ್ದ ಜೇಮ್ಸ್ ಹ್ಯಾಡ್ಲಿ ಛೇಸ್ ಪುಸ್ತಕ ‘ಮಿಷನ್ ಟು ವೆನಿಸ್’ನ ನೆನಪಾಯಿತು. ಜಯನಗರದ ಮನೆಯ ಬಳಿ ನೋಚೂರ್ ಲೈಬ್ರೆರಿ ಎಂಬ ವಾಚನಾಲಯವಿತ್ತು. ಅದರ ಒಡೆಯ ಬಾಬು (ಉದಯ್) ನನಗೆ ದೋಸ್ತ್. ಅವನ ಬಳಿ ಇದ್ದ ಎಲ್ಲ ಛೇಸ್ ಕಾದಂಬರಿಗಳನ್ನು ಅನೇಕ ಸಲ ತಿರುವಿ ಹಾಕಿದೆ. ಅದೇ ಸಮಯದಲ್ಲಿ ಡೆಸ್ಮಂಡ್ ಬ್ಯಾಗ್ಲಿ, ಆಲಿಸ್ಟೈರ್ ಮ್ಯಾಕ್‍ಲೀನ್, ಅರ್ಲ್ ಸ್ಟ್ಯಾನ್ಲಿ ಗಾರ್ಡ್‍ನರ್ ಎಲ್ಲರನ್ನೂ ಓದಿದೆ. ಡೆಸ್ಮಂಡ್ ಬ್ಯಾಗ್ಲಿಯ ಟೈಟ್‍ರೋಪ್‍ಮನ್ ಓದಿದಾಗ ಏನೋ ಒಂದು ಹೊಸ ಥ್ರಿಲ್. ನನ್ನ ಅಸಂಗತ ಕಾದಂಬರಿ ಗಾಥೆ ಬರೆಯುವಾಗ ಅದರ ಒಂದು ಭಾಗವನ್ನು ಅಪ್ರಯತ್ನವಾಗಿ ಬಳಸಿದೆ! ಅದನ್ನು ಚೆನ್ನೈನ ಲೇಖಕ ನಾಗೇಶ್ ಕುಮಾರ್ ಕಂಡು ಹಿಡಿದರು ಕೂಡ! ಅದೇ ಸಮಯದಲ್ಲಿ ನನ್ನ ಸೋದರತ್ತೆಯ ಮಕ್ಕಳ ಬಳಿ ಎನಿಡ್ ಬ್ಲೈಟನ್ ಎಂಬ ಲೇಖಕಿಯ ಪುಸ್ತಕಗಳು ದೊರೆತವು. ಅಬ್ಬಾ! ಮಕ್ಕಳಿಗೆ ಆಕೆ ಎಂತೆಂತಹ ಸಾಹಸಮಯ ಪುಸ್ತಕಗಳನ್ನು ಬರೆದಿದ್ದಾಳೆ! ಮಿಸ್ಟರಿಗಳು, ಅಡ್ವೆಂಚರುಗಳು... ಇವನ್ನು ಅದೆಷ್ಟು ಸಲ ಓದಿರುವೆನೋ... ಮಕ್ಕಳಿಗಾಗಿ ಬರೆಯಲು ಇಷ್ಟವಾಗಿ ಅಕ್ಷರ ಸ...

ಯತಿ ಸ್ವಂತೀ -83

24-03-2018 2004ರ ನವೆಂಬರ್ ತಿಂಗಳಲ್ಲಿ ನನ್ನ ದೊಡ್ಡ ಬಾಸ್ ಕರೆದು ‘ನೀನು ನಿಝ್ವಾಗೆ ಹೋಗಿ ಅಲ್ಲಿನ ಲೈಟಿಂಗ್ ಷೋ ರೂಂ ನೋಡಿಕೊಳ್ಳಬೇಕು. ಅಲ್ಲಿ ಇನ್‍ಛಾರ್ಜ್ ಆಗಿರೋ ಪೈ ಅವರು ವರ್ಷದ ರಜೆಗೆ ಊರಿಗೆ ಹೋಗುತ್ತಾರೆ. ನೀನು ಅಲ್ಲಿಗೆ ಹೋಗು’ ಎಂದರು. ಏನೋ ಒಂದು ರೀತಿಯ ಥ್ರಿಲ್. ಷೋ ರೂಮ್‍ಗೆ ಇನ್‍ಛಾರ್ಜ್. ಆದರೆ ಅಷ್ಟು ಹೊತ್ತಿಗೆ ನನಗೆ ಆ ದೇಶದಲ್ಲಿನ ನನ್ನ ಒಂಟಿತನ ಬೇಸರ ತಂದುಬಿಟ್ಟಿತ್ತು. ಏನು ಮಾಡಲೂ ತೋಚದ ಪರಿಸ್ಥಿತಿ. ಸಂಬಳ ಬೇಕು, ಅಂದರೆ ಕೆಲಸ ಮಾಡಬೇಕು. ಆದರೆ ಮನೆಯವರನ್ನು ಕರೆತರಲಾರೆ. ಇದೆಂತಹ ವಿಚಿತ್ರ ಪರಿಸ್ಥಿತಿ! ಎನ್ನಿಸದಿರಲಿಲ್ಲ. ಆದರೂ ಅಲ್ಲಿ ಇರುವವರೆಗೂ ಅಲ್ಲಿನ ಬಾಸ್ ಹೇಳಿದ ಹಾಗೆ ಕೇಳಬೇಕಾದುದು ನನ್ನ ಧರ್ಮ. ಅದಕ್ಕೇ ನನ್ನ ಬಟ್ಟೆಯ ಲಗೇಜ್ ಸಹಿತ ಕಾರಿನಲ್ಲಿ ಹೊರಟೆ. ಅದು ಸುಮಾರು 180 ಕಿಮೀ ದೂರದ ಊರು. ಹೆಚ್ಚು ಕಡಿಮೆ ಅಗಲ ರಸ್ತೆಗಳಿದ್ದ ದಾರಿ. ಐದನೇ ಗೇರ್‍ನಲ್ಲೇ ಕಾರು ಚಾಲಿಸುವುದು, ರೌಂಡೆಬೌಟ್ (ಸರ್ಕಲ್) ಬಂದಾಗ ನಾಲ್ಕನೇ ಗೇರ್‍ನಲ್ಲಿ ಕಾರೋಡಿಸುವುದು ಮಾಡುತ್ತಾ ನಿಝ್ವಾ ತಲುಪಿದೆ. ಊರಿನೊಳಗೆ ಬರುತ್ತಿದ್ದಂತೆ ದೊಡ್ಡ ಕೋಟೆಯೊಂದು ನನ್ನನ್ನು ಸ್ವಾಗತಿಸಿತು. ನಿಝ್ವಾ ಫೋರ್ಟ್ ಹಿಂದೊಮ್ಮೆ ನೋಡಿದ್ದೆ ಹೊರಗಿನಿಂದ. ಅದರ ಪಕ್ಕದ ಅಂಗಡಿಯ ಗುಚ್ಛದಲ್ಲಿ ನಮ್ಮ ಕಂಪೆನಿಯ ಲೈಟಿಂಗ್ ಷೋ ರೂಂ ಇತ್ತು. ಪೈ ಮಾಮ್ ಮತ್ತು ಅವರ ಪತ್ನಿ ಬಹಳ ಆದರದಿಂದ ನೋಡಿಕೊಂಡರು. ಅವರ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಜೀವನ್‍ಪ್...

ಯತಿ ಸ್ವಂತೀ -82

23-03-2018 ಶುಕ್ರವಾರದ ದಿನ ಬೆಳಗ್ಗೆ ಇಡೀ ಮಸ್ಕತ್ ಪಟ್ಟಣ ಮನೆ ಬಿಟ್ಟು ಹೊರಬರುತ್ತಿರಲಿಲ್ಲ. ಮಧ್ಯಾಹ್ನ ನಮಾಜ್ ಸಮಯಕ್ಕೆ ಹೊರಗೆ ಬರುತ್ತಿದ್ದರು. ಮಸೀದಿಗೆ ಹೋಗುತ್ತಿದ್ದರು. ನಾವಂತೂ ಮನೆ ಬಿಟ್ಟು ಬರುತ್ತಲೇ ಇರಲಿಲ್ಲ ಎನ್ನುವಂತಿರಲಿಲ್ಲ. ನಮಗೆ ಸಮಯ ಸರಿಯುತ್ತಿರಲಿಲ್ಲ. ಅದಕ್ಕೇ ಬೆಳಗ್ಗೆ ಎದ್ದು ಸಿದ್ಧವಾಗಿ ಸರಸರನೆ ಒಂದು ಮಹಡಿ ಇಳಿದು ಆಫೀಸಿಗೆ ಬರುತ್ತಿದ್ದೆವು. ಅಂದು ಎಲ್ಲರೂ ಟೀ ಷರ್ಟ್ ಜೀನ್ಸ್ ಪ್ಯಾಂಟ್ ಚಪ್ಪಲಿ ಧರಿಸುತ್ತಿದ್ದೆವು. ಹೇಗೂ ಹತ್ತಿರದ ಹೊಟೇಲ್‍ನಲ್ಲಿ ತಿಂಡಿ ಆಗಿರುತ್ತಿತ್ತು. ನಂತರ ಆಫೀಸಿನಲ್ಲಿ ಕೆಲಸ ಮಾಡುತ್ತಾ ಕೂರುತ್ತಿದ್ದೆವು. ಮಸ್ಕತ್‍ನಲ್ಲಿ ಶುಕ್ರವಾರ ರಜೆ. ಆ  ದೇಶದ ಟೆಂಡರ್‍ಗಳೆಲ್ಲವೂ ಸಾಮಾನ್ಯವಾಗಿ ಭಾನುವಾರ ಬೆಳಗ್ಗೆ ಓಪನ್ ಆಗುತ್ತಿದ್ದವು. ನಾವು ಶುಕ್ರವಾರ ಆಫೀಸಿನಿಂದ ನಮ್ಮ ಕಂಪೆನಿಗೆ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದ ಇಂಗ್ಲೆಂಡ್ ಮತ್ತು ಅಮೆರಿಕಾ ದೇಶದ ಕಂಪೆನಿಗಳಿಗೆ ಶುಕ್ರವಾರವೇ ಫೋನ್ ಮಾಡಿ, ಫ್ಯಾಕ್ಸ್, ಮೆಯಿಲ್ ಕಳಿಸಿ ದರಗಳನ್ನು ತರಿಸಿಕೊಳ್ಳಬೇಕಿತ್ತು. ಮಧ್ಯಾಹ್ನ ಒಂದೂವರೆ ವರೆಗೆ ಕೆಲಸ ಮಾಡಿ, ಕೆಲವೊಮ್ಮೆ ರೂಮಿಗೆ ಹಿಂದಿರುಗಿ ಊಟ ಮಾಡಿ ನಿದ್ರೆ ಮಾಡುತ್ತಿದ್ದೆ. ಊಟವು ಹತ್ತಿರದ ಒಮಾನ್ ಎಕ್ಸ್‍ಪ್ರೆಸ್ ಎನ್ನುವ ಹೊಟೇಲ್‍ನಿಂದ ಕವರ್‍ಗಳಲ್ಲಿ ಬರುತ್ತಿತ್ತು. ಕಾರಿಲ್ಲದ ನಾನು, ಹೆಚ್ಚು ಗೆಳೆಯರಿಲ್ಲದ ನಾನು ಒಂಟಿಯಾಗಿ ಶುಕ್ರವಾರ ಸಂಜೆಯನ್ನು ಕಳೆಯುತ್ತಿದ್ದೆ. ಕೆಲ...

ಯತಿ ಸ್ವಂತೀ -81

22-03-2018 ಮಸ್ಕತ್‍ನಲ್ಲಿ ಕಾಲಿಟ್ಟ ಕೆಲವು ದಿನಗಳು ನಾನು ನನ್ನ ಸಹೋದ್ಯೋಗಿಗಳೊಂದಿಗೆ ಮಾತ್ರವೇ ಹೊರಗೆ ಕಾರಿನಲ್ಲಿ ಹೋಗುತ್ತಿದ್ದೆ. ಆ ನಂತರ ಯಾವುದು ಎಲ್ಲಿದೆಯೆಂಬ ಅವಗಾಹನೆ ಬಂದಿತು.  ಹತ್ತಿರದ ರೂವಿ ಹೈ ಸ್ಟ್ರೀಟ್ ನಮ್ಮೂರಿನ ಎಂ.ಜಿ. ರಸ್ತೆ ಇದ್ದ ಹಾಗೆ. ಅಲ್ಲಿ ಎಲ್ಲವೂ ಸಿಗುತ್ತಿತ್ತು. ಚಿನ್ನದಿಂದ ಮೊದಲುಗೊಂಡು ಒಂದು ಗುಂಡುಪಿನ್ ವರೆಗೂ ಎಲ್ಲವನ್ನೂ ಅಲ್ಲಿ ಕೊಳ್ಳಬಹುದಿತ್ತು. ಒಬ್ಬನೇ ಹೋದೆ ಒಮ್ಮೆ. ಆಫೀಸ್ ಮೇಲೇ ನನ್ನ ರೂಮ್. ಸಂಜೆ ಬಿಸಿಲು ಕಡಿಮೆಯಾದ ಮೇಲೆ ಸೂರ್ಯನ ಶಾಖವು ಸುಡುತ್ತಿದ್ದರೂ ಹೊರಗೆ ಹೊರಟೆ. ಏನು ಮಾಡುವುದು? ಯಾವಾಗಲೋ ಒಮ್ಮೆ ನಾನೊಬ್ಬನೇ ಹೋಗಲೇಬೇಕಾದ ಸ್ಥಿತಿ ಬಂದೇ ಬರುತ್ತದೆ. ಎಲ್ಲರೂ ಸದಾ ಯಾರಿಗೂ ಸಹಾಯ ಮಾಡಲಾರರು. ಅದೂ ಅಲ್ಲದೇ ನಾನು ಅಲ್ಲಿದ್ದ ಎಲ್ಲರಿಗೂ ಅಪರಿಚಿತ. ಮೇಲಾಗಿ ನಲವತ್ತೈದು ವರ್ಷಗಳು ಇನ್ನೇನು ಆಗುವ ಸಮಯವದು. ಉಳಿದವರೆಲ್ಲ ಚಿಕ್ಕವರು. ನನ್ನ ವಯಸ್ಸಿನವರು ಎಲ್ಲರೂ ದೊಡ್ಡ ಪದವಿಯಲ್ಲಿದ್ದರು. ಒಂದು ರೀತಿ ‘ಅಮ್ಮನಿಲ್ಲದ ಮಗು’ ನಾನು. ಎಂದಿಗೂ ಎಲ್ಲಿಯೂ ನನ್ನದೇ ಆದ ಛಾಪು ಮೂಡಿಸಲು ಸಾಧ್ಯವಾಗದ ಬದುಕು. ಈಗ ಹೇಳಲು ಅಷ್ಟು ಕಷ್ಟ ಆಗುವುದಿಲ್ಲ. ಆಗೆಲ್ಲ ನನ್ನ ಮನಃಸ್ಥಿತಿ ಹೇಗಿತ್ತೆಂದರೆ ಎರಡು ಹೊತ್ತು ಊಟ, ಮನೆಗೆ ಕಳಿಸಲು ಒಂದಿಷ್ಟು ಸಂಬಳ... ಅಷ್ಟೇ ನನ್ನ ಗುರಿಯಾಗಿತ್ತು. ಸಿಂಡಿಕೇಟ್ ಬ್ಯಾಂಕ್‍ನಲ್ಲಿ ಇಲ್ಲಿ ನನ್ನ ಅಕೌಂಟ್ ಇತ್ತು. ಅಲ್ಲಿ ಮುಸಂದಂ ಎಕ್ಸ್‍ಛೇಂಜ್ ಎನ್ನುವ ಹಣ...

ಯತಿ ಸ್ವಂತೀ -೮೦

೨೧.೩.೨೦೧೮ ನಾನು ಇಷ್ಟ ಪಡುವ ಅನೇಕ ಹಾಲಿವುಡ್ ನಟಿಯರಲ್ಲಿ ಕೆಲವರ ಬಗ್ಗೆ. ನನ್ನ ಒಂದು ಆಯ್ಕೆ ಏಂಜೆಲಿನಾ ಜೋಲಿ. ಅದೇಕೋ ಇವಳೆಂದರೆ ಬಹಳ ಇಷ್ಟ. ಸಾಲ್ಟ್... ಮಿಸ್ಟರ್ ಆ್ಯಂಡ್ ಮಿಸೆಸ್ ಸ್ಮಿತ್ ಮತ್ತು ವಿದ್ಯಾ ಬಾಲನ್ ಜನಪ್ರಿಯಳಾದ ಕಹಾನಿ ಕ್ಲೈಮ್ಯಾಕ್ಸ್ನ ಮೂಲ ಇರುವ ಚಿತ್ರ. ಪ್ರಾಸ್ಥೆಟಿಕ್ ಹೊಟ್ಟೆ ಧರಿಸಿ ಕೊಲೆಗಾರನನ್ನು ಹೊರಗೆಳೆಯುವ ಪಾತ್ರ. ಜ್ಯೂಲಿ ಆ್ಯಂಡ್ರೂಸ್ ನನಗೆ ಸೌಂಡ್ ಆಫ್ ಮ್ಯೂಸಿಕ್ ಮತ್ತು 10ನಲ್ಲಿ ಬಹಳ ಇಷ್ಟವಾಯಿತು. ಆಡ್ರೆ ಹೆಪ್ಬರ್ನ್ ಮೈ ಫೇರ್ ಲೇಡಿ ಮತ್ತು ಸಿಡ್ನಿ ಶೆಲ್ಡನ್ನ ಬ್ಲಡ್ ಲೈನ್ ಚಿತ್ರಗಳು. ಗೋಲ್ಡೀ ಹಾನ್ ಅವಳ ಕಾಮಿಕ್ ಟೈಮಿಂಗ್ಗಾಗಿ ಇಷ್ಟ. ಫೌಲ್ ಪ್ಲೇ, ಪ್ರೈವೇಟ್ ಬೆಂಜಮಿನ್, ಸೀಮ್ಸ್ ಲೈಕ್ ಓಲ್ಡ್ ಟೈಮ್ಸ್, ಡಚೆಸ್ ಆ್ಯಂಡ್ ದಿ ಡರ್ಟ್ ವಾಟರ್ ಫಾಕ್ಸ್... ಶೀ ಈಸ್ ಅಮೇಜಿಂಗ್. ಫ್ರೆಂಡ್ಸ್ ಧಾರಾವಾಹಿ, ಮಾರ್ಲಿ ಆ್ಯಂಡ್ ಮೀ ಚಿತ್ರದ ಜೆನ್ನಿಫರ್ ಆನಿಸ್ಟನ್. ಡೀರೈಲ್ಡ್ ಚಿತ್ರದ ದುಷ್ಟ ನಯವಂಚಕಿ ಪಾತ್ರದಲ್ಲಿ ಬಹಳ ಚೆನ್ನಾಗಿ ನಟಿಸಿದ್ದಾಳೆ. ಜ್ಯೋತಿಕಾ ಇದರ ತಮಿಳು ತರ್ಜುಮೆಯಲ್ಲಿ ನಟಿಸಿದ್ದಾಳೆ. ಇ. ಟಿ. ಸ್ಟೀವನ್ ಸ್ಪೀಲ್ಬರ್ಗ್ ತೆಗೆದ ಅಪರೂಪದ ಚಿತ್ರ. ಅದನ್ನು ಆಧರಿಸಿ ಬಹಳ ಸಿನಿಮಾಗಳು ಬಂದವು. ಇದರಲ್ಲಿನ ಬಾಲ ನಟಿ ಡ್ರಾ ಬ್ಯಾರಿಮೋರ್ ಕೂಡ ನನ್ನ ಫೇವರಿಟ್. ಅವಳ ಫಿಫ್ಟಿ ಫಸ್ಟ್ ಡೇಟ್ಸ್ ಚಿತ್ರದಲ್ಲಿ ಶಾರ್ಟ್ ಟೈಮ್ ಮೆಮೊರಿ ಹುಡುಗಿಯ ಪಾತ್ರ ಮಾಡಿದ್ದಳು. ಆಸ್ಕರ್ ವಿಜೇತ ರಾಬರ್ಟ್ ಡಿ ನೀರ...

ಯತಿ ಸ್ವಂತೀ -79

20-03-2018 ಮಹಾಜನ ಪ್ರೌಢಶಾಲೆಗೆ ನಮ್ಮ ಮನೆಯಿಂದ ನಡೆದು ಹೋಗುತ್ತಿದ್ದೆ. ಮನೆಯಿಂದ ಹೊರಗೆ ಬಂದು ಬಲಕ್ಕೆ ತಿರುಗಿ, ಸ್ವಲ್ಪ ದೂರ ನಡೆದರೆ ಮುಖ್ಯ ರಸ್ತೆ ಸಿಗುತ್ತಿತ್ತು. ಅಲ್ಲಿ ಎಡಕ್ಕೆ ತಿರುಗಿದರೆ ಸಿಟಿ. ಬಲಕ್ಕೆ ತಿರುಗಿದರೆ ಒಂಟಿಕೊಪ್ಪಲ್. ಮೈಸೂರು ಕೆ ಆರ್ ಎಸ್ ರಸ್ತೆ ಅದು. ಅದರಲ್ಲಿ ಸ್ವಲ್ಪ ದೂರ ನಡೆದರೆ ಬಲಗಡೆಗೆ ಚೆಲುವಾಂಬಾ ಪಾರ್ಕ್, ಅದರಾಚೆಗೆ ಮೈಸೂರು ಆಕಾಶವಾಣಿ. ಇನ್ನೂ ಸ್ವಲ್ಪ ದೂರ ನಡೆದರೆ ಕಾಳಿದಾಸ ರಸ್ತೆ. ಹಂಸಲೇಖರ ಕಾಳಿದಾಸನೂ ಇಲ್ಲಿ ರಸ್ತೆ ಆಗವ್ನೆ ಹಾಡು ಕೇಳಿದಾಗಲೆಲ್ಲ ನನಗೆ ಈ ರಸ್ತೆಯಲ್ಲಿ ನಡೆದು ಹೋಗಿದ್ದರ ನೆನಪಿದೆ. ಇನ್ನೂ ಒಂದಿಷ್ಟು ದೂರ ಹೋದರೆ ಈಶ್ವರನ ದೇವಸ್ಥಾನ, ಮಾತೃಮಂಡಳಿ ಸ್ಕೂಲ್. ಪಡುವಾರಳ್ಳಿ. ಅವನ್ನೂ ದಾಟಿ ಎಡಗಡೆಗೆ ತಿರುಗಿದರೆ ಮಹಾಜನ ಹೈಸ್ಕೂಲ್. ಕಳೆದ ವರ್ಷ ನನ್ನ ದೂರದ ಬಂಧುವಿನ ಮದುವೆಯಾದಾಗ ಈ ಶಾಲೆಯ ಮುಂದೆ ಹೋದೆ. ಅಬ್ಬಾ... ಅದೆಷ್ಟು ವರ್ಷಗಳಾದವು ಈ ಶಾಲೆಯಲ್ಲಿ ಓದಿ ಮುಗಿಸಿ! 1970ರಿಂದ 1972 ಇಲ್ಲಿ ಓದಿದ್ದು. ಮೊಟ್ಟಮೊದಲನೇ ಸಲ ಇಂಗ್ಲೀಷ್ ಮೀಡಿಯಂ. ಮೇಷ್ಟರು, ಮೇಡಂ ಏನು ಹೇಳಿದರೂ ಅರ್ಥವಾಗದ ಎಂಟನೇ ತರಗತಿ. ನಂತರ ನಿಧಾನವಾಗಿ ಎಲ್ಲವೂ ಅರ್ಥವಾಗತೊಡಗಿತ್ತು. ಕೆಲವು ಸ್ನೇಹಿತರು ಮಿಡ್ಲ್‍ಸ್ಕೂಲ್‍ನಿಂದ ಇಲ್ಲಿಗೂ ಬಂದರು. ಕೆಲವರು ಹೊಸಬರು. ಅಂತೂ ಇಂತೂ ಸೆಕೆಂಡ್‍ಕ್ಲಾಸ್‍ನಲ್ಲಿ ಹತ್ತನೇ ತರಗತಿಯನ್ನು ಪಾಸಾಗಿದ್ದೆ! ಕನ್ನಡ ಮೇಷ್ಟ್ರು ರಾಘವಾಚಾರ್, ಮ್ಯಾತ್ಸ್‍ಗೆ ಶ್ರೀಕಂ...

ಯತಿ ಸ್ವಂತೀ -78

19-03-2018 ನನ್ನ ನೆನಪಿನ ಕಣಜದಲ್ಲಿ ಅನೇಕ ತುಣುಕುಗಳಿವೆ. ಅದು ಹಿಂದೆ ಮುಂದೆ ಆಗುವುದರಲ್ಲಿ ಆಶ್ಚರ್ಯವೇನಿಲ್ಲ. ಮೈಸೂರಿನ ನಮ್ಮ ರೈಲ್ವೇ ಕಾಲೋನಿಯ  ಮನೆಯಲ್ಲಿ ಹಿತ್ತಿಲಿನಲ್ಲಿ ಒಂದು ತೊಟ್ಟಿ ಇತ್ತು. ನೀರು ಸಂಗ್ರಹ ಮಾಡಲೆಂದು ಅದನ್ನು ಕಟ್ಟಿದ್ದರು. ಆದರೆ ನಾವಿದ್ದುದು ಜ್ಯೂಯೆಲ್ ಫಿಲ್ಟರ್ ಪಕ್ಕದಲ್ಲಿ. ಅಂದರೆ ಕಾವೇರಿ ನದಿಯನ್ನು ಪೈಪುಗಳಲ್ಲಿ ತಂದು ಅದನ್ನು ಶುದ್ಧೀಕರಿಸಿ ಮೈಸೂರಿಗೆ ಸರಬರಾಜು ಮಾಡುವ ಜಾಗದ ಪಕ್ಕದಲ್ಲಿ. ಇದರಿಂದ ನಮಗೆ ಇಪ್ಪತ್ತನಾಲ್ಕು ಗಂಟೆ, ಏಳು ದಿನ, ಮುನ್ನೂರ ಅರವತ್ತೈದು ದಿನವೂ ನೀರು ನಲ್ಲಿಯಲ್ಲಿ ಬರುತ್ತಿತ್ತು. ಅದಕ್ಕೇ ನಮ್ಮ ಅಮ್ಮ ತೊಟ್ಟಿಯಲ್ಲಿ ನೀರು ಸಂಗ್ರಹಿಸುತ್ತಿರಲಿಲ್ಲ. ಅಲುಗಾಡದೇ ನಿಂತ ನೀರು ಪಾಚಿ ಕಟ್ಟುವುದೆಂದು ಅದನ್ನು ಖಾಲಿ ಇಟ್ಟಿರುತ್ತಿದ್ದರು. ನಮಗೆ ಆಗ ಬಂದಿತ್ತೊಂದು ಪ್ರಚಂಡ ಐಡಿಯಾ. ನಮ್ಮ ಮನೆಯಿಂದ ಹೊರಗೆ ಬಂದರೆ ಸ್ವಲ್ಪ ದೂರದಲ್ಲಿ ಮೋರಿಯಲ್ಲಿ ಗಲೀಜು ನೀರು ಹರಿಯುತ್ತಿತ್ತು. ಹಾರ್ಲಿಕ್ಸ್ ಬಾಟಲಿ ತೆಗೆದುಕೊಂಡು ಹೋಗಿ, ಮೋರಿಯಲ್ಲಿ ಕೈ ಹಾಕಿ ಅಲ್ಲಿ ಈಜಾಡುತ್ತಿದ್ದ ಗಪ್ಪಿ ಮೀನುಗಳನ್ನು ಹಿಡಿದು ತರುತ್ತಿದ್ದೆವು. ಮನೆಯಲ್ಲಿನ ಆ ದೊಡ್ಡ ತೊಟ್ಟಿಯಲ್ಲಿ (ನಾಲ್ಕೂ ಬೈ ನಾಲ್ಕೂ ಬೈ ನಾಲ್ಕು ಅಡಿ) ನೀರು ತುಂಬಿ ಅದರಲ್ಲಿ ಈ ಮೀನುಗಳನ್ನು ಬಿಡುತ್ತಿದ್ದೆವು. ಅಲ್ಲಿ ಇಲ್ಲಿಂದ ವಿಚಿತ್ರ ಆಕಾರದ ಕಲ್ಲುಗಳನ್ನು ತಂದು ತೊಟ್ಟಿಯೊಳಗೆ ಜೋಡಿಸುತ್ತಿದ್ದೆವು. ವ್ಯಾಲಿಸ್ನೇರಿಯಾ, ಇಲೋಡಿಯ...

ಯತಿ ಸ್ವಂತೀ -77

18-03-2018 ಒಂದು  ರೀತಿಯ ಪ್ಯಾಟ್ರನ್‍ಗೆ ಬಿದ್ದಿತು ನನ್ನ ಬದುಕು. ಆಗಾಗ ಒಂದಿಷ್ಟು ಮನೋರಂಜನೆ. ನಮ್ಮ ಮಾರ್ಕೆಟಿಂಗ್ ಹೆಡ್ ನಮ್ಮ ಆರ್ ಆಂಡ್ ಡಿ ಡಿಪಾರ್ಟ್‍ಮೆಂಟ್‍ನೋರಿಗೆ ಪಾರ್ಟಿ ಕೊಡಲು ಆಲೋಚಿಸಿದರು.  ನಮ್ಮ ಸಹೋದ್ಯೋಗಿಯೊಬ್ಬರ ತಂದೆಯ ಗೆಳೆಯರ ಒಂದು ಫಾರ್ಮ್‍ಹೌಸ್‍ನಲ್ಲಿ ಪಾರ್ಟಿ. ಒಂದು ದೊಡ್ಡ ಮನೆ ಮತ್ತು ಒಂದು ದೊಡ್ಡ ಆಲದಮರ. ಹ್ಞಾಂ... ದೊಡ್ಡಾಲದ ಮರಕ್ಕೆ ಹೋಗುವ ದಾರಿಯಲ್ಲೆಲ್ಲೋ ಒಂದು ಡೀವಿಯೇಷನ್ ತೆಗೆದುಕೊಂಡರೆ ಅಲ್ಲಿತ್ತು ಈ ಮನೆ, ಮರ. ಬಣ್ಣಬಣ್ಣದ ಬೆಳಕಿನಲ್ಲಿ ಹಾಡುಗಳಿಗೆ ಕುಣಿದು ಕುಪ್ಪಳಿಸಿದರು ಎಲ್ಲರೂ. ಮರುದಿನ ವೈಕುಂಠ ಏಕಾದಶಿ. ಅದಕ್ಕೇ ಸಾತ್ವಿಕ ಆಹಾರವನ್ನು ಸೇವಿಸಿದ ನೆನಪು. ಮರುದಿನ ಬೆಳಗ್ಗೆ ಬೆಳಗ್ಗೆಯೇ ವೇಂಕಟೇಶ್ವರನ ದರುಶನ ಪಡೆದೆ. ಒಂದು ದಿನ ನನ್ನ ಬಾಸ್ ಸುಧೀರ್ (ಈಗ ನನ್ನ ಬಾಸ್ ಮುಂಬೈನವರು. ನನ್ನ ಲೀವ್‍ಲೆಟರ್ ಕೂಡ ಅಲ್ಲಿ ಹೋಗಿ ಅಪ್ರೂವ್ ಆಗಿ ಬರುತ್ತಿತ್ತು!) ನನ್ನನ್ನು ಇಲ್ಲಿರಬೇಡ. ನೀನೇಕೆ ರೀಜಿನಲ್ ಆಫೀಸಿಗೆ ಹೋಗಬಾರದು ಎಂದರು. ಸರಿ, ಅಲ್ಲಿಗೆ ನನ್ನನ್ನು ವರ್ಗಾವಣೆ ಮಾಡಲಾಯಿತು. ಈಗ ಕೋರಮಂಗಲದಿಂದ ನನ್ನ ಗ್ರಾಹಕರನ್ನು ಭೇಟಿ ಆಗಲು ಹೋಗುತ್ತಿದ್ದೆ. ಕೆಲವೊಮ್ಮೆ ಹೆಡ್ಡಾಫೀಸಿನವರ ಸಹಾಯವನ್ನು ಡೆಮೋಗಾಗಿ ಪಡೆಯುತ್ತಿದ್ದೆ. ಮತ್ತೊಂದು ಏಕತಾನತೆಯ ಬದುಕು. ಈಗ ನನಗೆ ಕ್ಯಾಬ್ ಇರಲಿಲ್ಲ. ಒಂದು ತಿಂಗಳು ರಾಜರಾಜೇಶ್ವರಿನಗರದಿಂದ ಸ್ಕೂಟರ್‍ನಲ್ಲಿ ಆಫೀಸಿಗೆ ಹೋದೆ. ಆದ...

ಯತಿ ಸ್ವಂತೀ -76

17-03-2018 ಭೋಪಾಲ... ಮಧ್ಯಪ್ರದೇಶದ ರಾಜಧಾನಿ. ಹಿಂದೊಮ್ಮೆ 80ರ ದಶಕದಲ್ಲಿ ಹೋಗಿದ್ದ ನೆನಪು. ಅದು ಕಿರ್ಲೋಸ್ಕರ್‍ನಿಂದ. ಅದಕ್ಕೂ ಮೊದಲು ಕಾಲೇಜಿನಿಂದ ಟೂರ್ ಹೋದಾಗ ಅಲ್ಲಿನ ಬಿ.ಎಚ್.ಇ.ಎಲ್. ಕಾರ್ಖಾನೆಯನ್ನು ನೋಡಿದ ಜ್ಞಾಪಕ. ಎಲೆಕ್ಟ್ರಿಕಲ್ ಇಂಜಿನಿಯರ್ ಅಲ್ವಾ? ಈ ಸಲ ನನ್ನ ಟೂರ್ ನೇರ ಭೋಪಾಲ್‍ಗೆ ಆಗಲಿಲ್ಲ. ಮುಂಬೈಗೆ ಬೆಂಗಳೂರಿನಿಂದ ಹಾರಿ ಅಲ್ಲಿಂದ ಭೋಪಾಲಕ್ಕೆ ಮತ್ತೊಂದು ವಿಮಾನ. ಬಲು ಚಿಕ್ಕ ವಿಮಾನ ನಿಲ್ದಾಣ ಭೋಪಾಲದ್ದು. ವಿಮಾನದಿಂದ ವಿಮಾನ ನಿಲ್ದಾಣದೊಳಗೆ ನಡೆದೇ ಹೋಗಿದ್ದೆ. ಅಲ್ಲಿ ನನ್ನ ಕೆಲಸ ಸರ್ಕಾರಿ ಅಧಿಕಾರಿಗಳಿಗೆ ಟ್ಯಾಲಿ ಉತ್ಪನ್ನದ ಹೊಸ ಶಕ್ತಿಗಳನ್ನು ಪರಿಚಯಿಸುವುದು. ಎಲ್ಲ ಫಲಕಗಳೂ ಹಿಂದಿಯಲ್ಲಿದ್ದವು. ಆಗಂತುಕ್ ಎನ್ನುವ ಪದವನ್ನು ನೋಡಿ, ಅಪರಿಚಿತ ಎಂದು ತರ್ಜುಮೆ ಮಾಡಿಕೊಂಡೆ. ಆದರೆ ನಿಜವಾದ ಅರ್ಥ ಭೇಟಿ ಮಾಡುವವರು – ವ್ಹಿಜಿಟರ್ಸ್ ಎಂದು. ಎರಡು ದಿನಗಳ ಕಾಲ ಅಲ್ಲಿದ್ದ ಎಲ್ಲ ಸರ್ಕಾರಿ ಕಛೇರಿಗಳಿಗೂ ಲಗ್ಗೆ ಇಟ್ಟು ನಂತರ ಮತ್ತೆ ವಯಾ ಮುಂಬೈ ಮರಳಬೇಕಿತ್ತು. ಮುಂಬೈ ಬಂದು ಸೇರುವ ವೇಳೆಗೆ ಹುಚ್ಚು ಹುಚ್ಚು ಮಳೆ. ನನ್ನ ಬೆಂಗಳೂರು ಪ್ರಯಾಣ ಸುಮಾರು ಐದಾರು ಗಂಟೆಗಳ ಕಾಲ ತಡವಾಯಿತು. ಎಂತಹ ಬೋರ್ ಸಮಯ ಅಂತೀರಿ! ನನ್ನ ಮಗನಿಗೆ ತೋರಿಸಲೆಂದು ಅಲ್ಲಿನ ಎಲ್ಲ ವೃತ್ತಪತ್ರಿಕೆಗಳ ಪ್ರತಿಗಳನ್ನು ಒಂದೊಂದು ಎತ್ತಿಕೊಂಡೆ. ಏಕೆಂದರೆ ಅವುಗಳಲ್ಲಿ ಕೆಲವನ್ನು ನಾವು ಬೆಂಗಳೂರಿನಲ್ಲಿ ನೋಡುತ್ತಿರಲಿಲ್ಲ ಆಗ. ಈಗ ಅಂತರ್ಜಾಲದಲ್ಲ...

ಯತಿ ಸ್ವಂತೀ -75

16-03-2018 ‘ಓ.. ಸರಿ ಹಾಗಾದರೆ... ಸದ್ಯದಲ್ಲೇ ನಮ್ಮ ಬೆಂಗಳೂರು ಸಹೋದ್ಯೋಗಿ ಒಬ್ಬರು ನಿಮ್ಮನ್ನು ಭೇಟಿ ಮಾಡುತ್ತಾರೆ. ಒಳ್ಳೆಯದಾಗಲಿ’ ಎಂದು ಫೋನಿಟ್ಟರು. ಮುಂದಿನ ವಾರ ಒಂದು ಕರೆ ಬಂದಿತು. ಬನ್ನೇರುಘಟ್ಟ ರಸ್ತೆಯ ಷಾಪರ್ಸ್‍ಸ್ಟಾಪ್ ಕಟ್ಟಡದಲ್ಲಿದ್ದ ಕಂಪೆನಿಯ ಆಫೀಸಿಗೆ ಬರಹೇಳಿದರು. ಏನೋ ಒಂದು ತವಕ. ಬಂದು ತಲುಪಿದೆ. ಪ್ರವೀಣ್ ಎನ್ನುವಾತನನ್ನು ಭೇಟಿ ಆಗಬೇಕಿತ್ತು. ದೊಡ್ಡ ರಿಸೆಪ್ಷನ್. ನೂರಾರು ಜನ ಕೂರುವಂತಹ ದೊಡ್ಡ ಹಾಲ್. ಪ್ರವೀಣ್ ನನ್ನನ್ನು ಆಹ್ವಾನಿಸಿ ಕಾನ್ಫರೆನ್ಸ್ ರೂಮಿನಲ್ಲಿ ಕೂರಿಸಿ, ‘ಈ ಆರ್ ಪಿ’ ಎಂದರೇನು?’ ಎಂದ. ‘ಎಂಟರ್‍ಪ್ರೈಸಸ್ ರೀಸೋರ್ಸ್....’ ಎಂದೇನೋ ಹೇಳಿದೆ. ನನಗೆ ನಿಜಕ್ಕೂ ತಿಳಿದಿರಲಿಲ್ಲ. ಇನ್ನೂ ಒಂದಿಷ್ಟು ಪ್ರಶ್ನೆಗಳನ್ನು ಕೇಳಿದ. ಗೊತ್ತಿರುವ ಮಟ್ಟಿಗೆ ಉತ್ತರಿಸಿದೆ. ಮಾರನೇ ವಾರ ಕರೆ ಬಂದಿತು ಎಚ್ ಆರ್ ಡಿಪಾರ್ಟ್‍ಮೆಂಟ್‍ನಿಂದ. ಸಂಬಳ ಇಂತಿಷ್ಟು ಎಂದು ನಿರ್ಧರಿಸಿದರು. ಪತ್ರವು ಇನ್ನೇನು ತಲುಪಲಿದೆ ಎಂದು ಭರವಸೆ ನೀಡಿದರು. ಒಂದು ದಿನ ಅದೂ ಆಯಿತು. ಮತ್ತೆ ಕರೆದರು. ಆಫೀಸಿಗೆ ಹೋದೆ. ನನ್ನೊಂದಿಗೆ ಸುಮಾರು ಹದಿನೈದು ಜನ ಬೇರೆ ಬೇರೆ ಡಿಪಾರ್ಟ್‍ಮೆಂಟುಗಳಿಗೆ ಆಯ್ಕೆಯಾಗಿದ್ದರು. ಎಲ್ಲರನ್ನೂ ಪರಿಚಯಿಸಿಕೊಂಡೆ. ಕೊನೆಗೂ ಹಿರಿಯರೊಬ್ಬರು ಬಂದು ಜೂನ್ ಹದಿನೈದರಿಂದ ನೀವು ನಮ್ಮ ಕಂಪೆನಿಯಲ್ಲಿ ಕೆಲಸ ಮಾಡಲು ಬನ್ನಿ ಎಂದು. ಅಂತೂ ಬೆಂಗಳೂರಿನಲ್ಲಿಯೇ ಕೆಲಸ ಆಯಿತು. ಇನ್ನು ನಮ್ಮ ಮನೆಯಿಂದ ಅಷ್ಟು ...

ಯತಿ ಸ್ವಂತೀ -74

15-03-2018 “ನಿನ್ನ ಬಗ್ಗೆ ಹೇಳು” ಎಂದರು ಕಂಪೆನಿಯ ಎಂ.ಡಿ. “ನಾನು ಎಸ್ಕಿಮೋಗಳಿಗೆ ...” ಎಂದು ಆರಂಭಿಸಿದಾಗ, “ಐಸ್‍ಕ್ರೀಂ ಮಾರಬಲ್ಲೆ!” ಎಂದು ನಕ್ಕು, “ಸರಿ, ನನ್ನ ಮೂರು ಡಿವಿಜನ್‍ಗಳು ಆರಂಭವಾಗ್ತಿವೆ. ನಿನ್ನನ್ನು ಎಲ್ಲಿ ಫಿಟ್ ಮಾಡಬಹುದು ಅಂತ ತಿಳಿಸ್ತೇನೆ” ಎಂದು ಹೇಳಿದರು. ಇಂಟವ್ರ್ಯೂ ಮುಗಿಯಿತು. ನೇರ ಕೆಳಗೆ ಬಂದೆ. ಸುಮಾರು ಎರಡೂವರೆ ಗಂಟೆ ಮಾರುತಿ ಆಮ್ನಿಯ ಡ್ರೈವಿಂಗ್ ಸೀಟ್‍ನಲ್ಲಿಯೇ ಇದ್ದ ನನ್ನ ಶ್ರೀಮತಿ ನೆಮ್ಮದಿಯಿಂದ ಮನೆಯತ್ತ ವ್ಯಾನ್ ಓಡಿಸಿದಳು. ಒಂದು ವಾರವಾಯಿತು. ಆ ಸಮಯದಲ್ಲಿ ಯಾವುದರ ಭಯವಿತ್ತೋ ಅದೇ ಆಯಿತು. ನನ್ನ ದುಬಾಯ್ ವೀಸಾ ನನ್ನ ಭಾವನವರ ಆಫೀಸಿಗೆ ಫ್ಯಾಕ್ಸ್ ಆಗಿತ್ತು! ಈಗ ಮತ್ತೆ ಫಜೀತಿ. ಇದು ಕೈಯಲ್ಲಿರುವ ಹಕ್ಕಿ. ಬೆಂಗಳೂರು ಕಂಪೆನಿ ಎಂ.ಡಿ.ಯವರಿಂದ ಯಾವ ಸಂಪರ್ಕವೂ ಇರಲಿಲ್ಲ. ಈಗೇನು ಮಾಡುವುದು? ಮಕ್ಕಳ ಬೇಸರ ನೆನಪಾಗಿ, ಸೌದಿ ಕಂಪೆನಿಯ ಮುಖ್ಯಾಧಿಕಾರಿಗೆ ‘ನನ್ನ ಅಮ್ಮನ ಆರೋಗ್ಯದ ಸೆಂಟಿಮೆಂಟ್ ಪ್ಲೇ ಮಾಡಿ, ನನ್ನನ್ನು ಕ್ಷಮಿಸಿ’ ಎಂದು ಬರೆದುಬಿಟ್ಟೆ. ಆದರೂ ಬೆಂಗಳೂರಿನಿಂದ ಪತ್ರ ಬರಲಿಲ್ಲ. ಆ ಸಮಯದಲ್ಲಿ ಮತ್ತೊಂದು ಕಂಪೆನಿಗೆ ಕನ್ಸಲ್ಟೆಂಟ್ ಆಗಿದ್ದ ...ರಾಜ್ ಎನ್ನುವವರನ್ನು ಇಂದಿರಾನಗರದಲ್ಲಿ ಭೇಟಿ ಆದೆ. ಅವರು ತನ್ನ ಬಳಿ ಯಾವ ಕೆಲಸವೂ ಇಲ್ಲವೆಂದರು. ದುಬಾಯ್ ಕೆಲಸ ತ್ಯಜಿಸಿ ತಪ್ಪು ಮಾಡಿದೆನಾ ಎನ್ನಿಸಹತ್ತಿತು. ಆಗ ಆ ...ರಾಜ್ ಒಂದು ಒಳ್ಳೆಯ ಸಲಹೆ ನೀಡಿದರು. ನಿನಗೆ ಅವರ ಬಗ್ಗೆ ನೆನಪಿರಲಾ...

ಯತಿ ಸ್ವಂತೀ -73

14-3-2018 ನಾನು ಮಸ್ಕತ್‍ನಿಂದ ಭಾರತಕ್ಕೆ ಶಾಶ್ವತವಾಗಿ ಮರಳಿದ ಹೊಸತರಲ್ಲಿ ಅನೇಕರ ಪ್ರಶ್ನೆ ಇದಾಗಿತ್ತು. ‘ಮತ್ತೆ ಯಾವಾಗ ಹೋಗ್ತೀರಿ?’ ನನಗೆ ಅಚ್ಚರಿ. ಇದೇಕೆ ಹೀಗೆ ಹೇಳುತ್ತಿದ್ದಾರೆ ಎಂದು. ನಂತರ ಅದರ ಅರ್ಥ ತಿಳಿಯಿತು. ಒಮ್ಮೆ ಕೊಲ್ಲಿಯ ದೇಶಕ್ಕೆ ಉದ್ಯೋಗಕ್ಕೆಂದು ಸೇರಿದರೆ ಅಲ್ಲಿಂದ ಯಾರೂ ಮರಳಲಾರರು, ಮರಳಿದರೂ ಇನ್ನು ಸಾಕಪ್ಪಾ ಅನ್ನುವಷ್ಟು ಕಾಲ ದುಡಿದು, ಸಂಪಾದಿಸಿ ಮರಳುತ್ತಾರೆ ಎಂದು ಪ್ರತೀತಿ. ಈ ವಿಷಯದಲ್ಲಿ ನಾನು ಅಪವಾದವಾಗಿಬಿಟ್ಟೆ. ತಮಾಷೆ ಎಂದರೆ ನಾನು ಪ್ರತಿಯೊಂದು ಸಾಮಾನ್ಯ ನಂಬಿಕೆಯನ್ನೂ ಸುಳ್ಳು ಮಾಡಿದ ಹೆಗ್ಗಳಿಕೆ ಉಳ್ಳವನಾದೆ. ಉದಾಹರಣೆಗೆ, ನಾನು ಕಿರ್ಲೋಸ್ಕರ್ ಕಂಪೆನಿಗೆ ರಾಜೀನಾಮೆ ನೀಡಿದಾಗ ‘ಇಲ್ಲಿಂದ ರಿಸೈನ್ ಮಾಡಿ ಹೋದವರೆಲ್ಲಾ ಸಖತ್ತಾಗೇ ಇಂಪ್ರೂವ್ ಆಗವ್ರೆ ಗುರೂ’ ಎಂದವರೇ ಜಾಸ್ತಿ. ನನಗೇನಾದರೂ ಪೊಳ್ಳು ಖುಷಿ ಕೊಡುತ್ತಿದ್ದರಾ? ತಿಳಿಯದು. ಬಹಳ ಜನ ಕಿರ್ಲೋಸ್ಕರ್ ಬಿಟ್ಟವರು ಚೆನ್ನಾಗಿ ಬೆಳೆದಿದ್ದಾರೆ, ಆರ್ಥಿಕವಾಗಿ. ನಾನು... ಸೊನ್ನೆ! ಮಸ್ಕತ್ ಬಿಟ್ಟು ಬೆಂಗಳೂರಿಗೆ ಶಾಶ್ವತವಾಗಿ ಮರಳಿದಾಗ.. ಇದಕ್ಕೆ ಒಂದು ಕಾರಣವಿದೆ. ನಾನು ಮಸ್ಕತ್ ಕೆಲಸಕ್ಕೆ ರಾಜೀನಾಮೆ ಇತ್ತು, ಸೌದಿ ಅರೇಬಿಯಾ ಕಂಪೆನಿಯ ಕೇಬಲ್ ಮಾಡಲು ನನಗೆ ದುಬಾಯ್‍ಯಲ್ಲಿ ಉದ್ಯೋಗ ಸಿಕ್ಕಿತು. ಅಲ್ಲಿನ ದೊಡ್ಡ ಅಧಿಕಾರಿಯನ್ನು ಭೇಟಿ ಮಾಡಿ ಅವರಿಂದ ಉದ್ಯೋಗ ಗಿಟ್ಟಿಸಿಕೊಂಡು ಬೆಂಗಳೂರಿಗೆ ಮರಳಿದ್ದೆ. ಮಸ್ಕತ್‍ನಷ್ಟೇ ಸಂಬಳ. ಹೇಳಿ ಕೇಳಿ 48 ವರ್ಷ...

ಯತಿ ಸ್ವಂತೀ -72

13-03-2018 ಸ್ವಂತೀ ಅಂತ ಹೇಳಿಕೊಳ್ಳುತ್ತಿರುವುದರಿಂದ ಪ್ರತಿ ಕಂತಿನಲ್ಲೂ ನಾನು, ನನ್ನದು ಎಂದು ಬರುವುದು ಸಹಜ ಅಲ್ಲವೇ? ನನ್ನ ಪರಿಧಿ ಹಾಗೆ ನೋಡಿದರೆ ದೊಡ್ಡದೇ. ನನ್ನ ಸುತ್ತಲೂ ಇರುವ ಜನರಾರೂ ನನ್ನನ್ನು ದ್ವೇಷಿಸಿದಂತೆ ತೋರುವುದಿಲ್ಲ. ವಿಶೇಷವಾಗಿ ಎದುರಿಗೆ! ಅದಕ್ಕಿಂತ ವಿಶಿಷ್ಟವಾದ ವಿಷಯವೇನೆಂದರೆ ನನ್ನ ನಗೆಮೊಗದ ಪಟಗಳನ್ನು ಎಲ್ಲರೂ ಇಷ್ಟ ಪಡುತ್ತಾರೆ. ಫೋಟೋ ತೆಗೆಯಲು ಯಾರಾದರೂ ಮುಂದೆ ಬಂದರೆ ಮೊದಲು ನನ್ನ ಮುಖದ ಮೇಲೆ ಕಾಣಿಸಿಕೊಳ್ಳುವುದೇ - ನಗೆ! ನನಗೆ ಯಾರ ಮೇಲೂ ಕೋಪವಿಲ್ಲ. ಯಾರಿಂದಲೂ ನನಗೆ ದುಃಖವಿಲ್ಲ. ಒಂದು ವೇಳೆ ಯಾರಾದರೂ ನಾನಂದುಕೊಂಡಂತೆ ಇರದಿದ್ದರೆ ಆಶ್ಚರ್ಯವಾಗುತ್ತದೆ. ಆದರೆ ತಕ್ಷಣವೇ ಅನ್ನಿಸುತ್ತದೆ. ಅವರೇಕೆ ನಾನಂದುಕೊಂಡಂತೆ ಇರಬೇಕು ಎಂದು. ಎಲ್ಲೋ ಇತ್ತೀಚೆಗೆ ಓದಿದೆ. ಯಾರನ್ನಾದರೂ ನಾವು ಪ್ರೀತಿಸುವುದಾದರೆ ಅವರಿರುವಂತೆಯೇ ಪ್ರೀತಿಸಬೇಕಂತೆ. ಅವರನ್ನು ನಾವು ಬದಲಾಯಿಸಲು ಇಚ್ಛಿಸಿದರೆ ಅದರರ್ಥ ಅವರನ್ನು ನಾವು ಸಂಪೂರ್ಣವಾಗಿ ಪ್ರೀತಿಸುವುದಿಲ್ಲ ಎಂದು. ಕೆಲವರನ್ನು ನಾವು ಅಕಾರಣವಾಗಿ ಪ್ರೀತಿಸುತ್ತೇವೆ. ಅದಕ್ಕೆ ಯಾವುದೇ ತರ್ಕವಿರುವುದಿಲ್ಲ. ಅದು ಆಕರ್ಷಣೆ ಇರಬಹುದು. ಅಥವಾ ಅವರು ನಮ್ಮಲ್ಲಿ ಯಾವುದೋ ಒಂದು ಪ್ರೀತಿಯ ಕಣವನ್ನು ಟ್ರಿಗರ್ ಮಾಡಿರಬಹುದು. ಅಥವಾ ಏನೂ ಕಾರಣವೇ ಇಲ್ಲದೇ ನಾವು ಅವರನ್ನು ಇಷ್ಟ ಪಡಬಹುದು. ನನಗೂ ಇಂತಹ ಅನೇಕರು ಸಿಕ್ಕಿದ್ದಾರೆ. ಪ್ರೀತಿ ಎಂದೊಡನೆ ಯಾವುದೇ ಕೆಟ್ಟ ಅಭ...

ಯತಿ ಸ್ವಂತೀ -71

12-03-2018 ನನ್ನ ನೆನಪುಗಳು ಸಾಕಷ್ಟು ಕೆದರಿ ಹೋಗಿವೆ. ಮರೆಯುವ ಮುನ್ನ ಅಥವಾ ನೆನಪಲ್ಲಿ ಉಳಿದಿರುವಾಗ ಒಂದಿಷ್ಟು ದಾಖಲಿಸೋಣ ಎನ್ನಿಸುವುದು ಸಹಜ. ನನ್ನ ಜೀವನದಲ್ಲಿ ಅನೇಕ ಗೆಳೆಯರು ಬಂದಿದ್ದಾರೆ, ಹೋಗಿದ್ದಾರೆ. ಕೆಲವರು ಉಳಿದುಕೊಂಡಿದ್ದಾರೆ. ಕೆಲವರಂತೂ ನನ್ನನ್ನು ಕಂಡ ಮೊದಲ ದಿನವೇ ‘ನಿಮ್ಮ ಮನೆ ನೋಡಬೇಕು. ನಿಮ್ಮ ಮನೆಯವರನ್ನೆಲ್ಲ ನೋಡಬೇಕು’ ಎಂದಿರುವುದುಂಟು. ಒಬ್ಬ ಹುಡುಗನಂತೂ (ನನಗೆ ಆಗ 35. ಅವನಿಗೆ 24... ಸೋ ಹುಡುಗ...ನನಗಿಂತ!) ಮನೆಗೆ ಬಂದವನು ‘ನಿಮ್ಮ ಮನೆಯಲ್ಲಿ ಇರುತ್ತೇನೆ’ ಎಂದುಬಿಟ್ಟ. ನನ್ನ ಹೆಂಡತಿ, ಅಮ್ಮ ನನಗಿಂತ ‘ಒಳ್ಳೆಯವರು’. ಇರಲಿ ಬಿಡಿ ಎಂದುಬಿಟ್ಟರು. ಆ ಹುಡುಗನಿಗೆ 25ಕ್ಕೇ ಮದುವೆ ಆಗುವುದರಲ್ಲಿತ್ತು. ಬಹುಶಃ ಫ್ಯಾಮಿಲಿ ಲೈಫ್ ಹೇಗಿರಬಹುದು ಎನ್ನುವ ಅಭ್ಯಾಸ ಮಾಡಿಕೊಳ್ಳಬೇಕೆನ್ನಿಸಿತ್ತೇನೋ! ಅವನು ಬಂದಿದ್ದು ತಮಿಳುನಾಡಿನಿಂದ. ನನಗೆ ನಿರರ್ಗಳವಾಗಿ ಎನ್ನಲಾಗದಿದ್ದರೂ ತಮಿಳನ್ನು ಮಾತಾಡಬಲ್ಲವನಾಗಿದ್ದೆ. ಪ್ರಾಯಶಃ ಅದೂ ಒಂದು ಕಾರಣ ಇರಬಹುದು. ನನ್ನ ಎದುರಿನ ಡಿಪಾರ್ಟ್‍ಮೆಂಟಿನಲ್ಲೇ ಕೆಲಸ ಅವನಿಗೆ. ಮದುವೆ ಆಗುವವರೆಗೂ ಜೊತೆಯಲ್ಲಿದ್ದ. ಆಮೇಲೆ ಘಾಯಬ್! ಬೇಸರವೇನಿಲ್ಲ. ಅವನ ಬದುಕು. ಅವನು ಇಷ್ಟ. ಮತ್ತೊಬ್ಬ ಹುಡುಗ ಬಂದ ಅವನೂ ಬೇರೆ ಊರಿನಿಂದ ಬಂದವನು. ಅದೇಕೋ ನಮ್ಮ ಮಗನ ಬಗ್ಗೆ ಬಲು ಪ್ರೀತಿ ಅವನಿಗೆ. ನನ್ನ ಮಗನ ವಯಸ್ಸಾಗ ಎರಡು ವರ್ಷಗಳು. ಸದಾ ಅವನನ್ನು ಅಂಟಿಕೊಂಡಿರುತ್ತಿದ್ದ. ಅವನ ಮದುವೆಗೆ ಹೋದಾ...

ಯತಿ ಸ್ವಂತೀ -70

11-03-2018 ನನ್ನ ಚಿಕ್ಕಂದಿನ ನೆನಪುಗಳು ಅನೇಕವಿವೆ. ಕೆಲವು ಅಳಿಸಿವೆ. ಕೆಲವು ಹೇಳಬಾರದೇನೋ..! ನಾವು ಮೈಸೂರು ರೈಲ್ವೇ ಕಾಲೋನಿ ಕ್ವಾರ್ಟರ್ಸ್ ಮನೆಗೆ 1960ರಲ್ಲಿ ಬಂದೆವಂತೆ. ‘ಅಂತೆ’ ಏಕೆಂದರೆ ನನಗೆ ನೆನಪಿಲ್ಲ. ನನ್ನ ವಯಸ್ಸಾಗ ಮೂರು ವರ್ಷಗಳು. ನನ್ನ ತಂಗಿಗೆ ಒಂದು ವರ್ಷವಿರಬಹುದು. ಚಿಕ್ಕಂದಿನಲ್ಲಿ ನಾನು ಬಹಳವೇ ಸಣಕಲನಾಗಿದ್ದೆ. ಬಹಳ ಬೇಗ ಖಾಯಿಲೆ ಬೀಳುತ್ತಿದ್ದೆ. ನಮ್ಮ ಅಮ್ಮನಿಗೆ ಸಾಕಷ್ಟು ಕೆಲಸ ಕೊಟ್ಟಿದ್ದಿರಬೇಕು. ನನ್ನ ತಂಗಿ ಹಾಗಲ್ಲ. ಅವಳು ಸ್ವಲ್ಪ ಸ್ಟ್ರಾಂಗು. ಎಂದಿನಂತೆ ಸಿಬ್ಲಿಂಗ್ ರೈವಲ್ರೀ. ಬಹಳ ಸಲ ಅವಳನ್ನು ಗೋಳು ಹುಯ್ದುಕೊಂಡಿದ್ದೇನೆ. ಅವಳ ಮುಖವನ್ನು ಪರಚಿದ್ದೇನೆ. ಅವಳ ತಲೆಯನ್ನು ಹಿಡಿದು ಗೋಡೆಗೆ ಬಡಿದಿದ್ದೇನೆ. ಅಪ್ಪನ ಬಳಿ ಏಟು ತಿಂದಿದ್ದಿರಬಹುದು. ಏಕೆಂದರೆ ಅಪ್ಪನಿಗೆ ಅವಳು ಮುದ್ದು! ಅಂದ ಹಾಗೆ ನಾವು ನಮ್ಮ ಅಪ್ಪನನ್ನು ಅಯ್ಯ ಎನ್ನುತ್ತಿದ್ದೆವು. ಅದೇಕೋ ನನ್ನ ಮಕ್ಕಳು ನನ್ನನ್ನು ಅಪ್ಪ ಎನ್ನುತ್ತವೆ. ಅಯ್ಯ ಎನ್ನುವುದೇ ಚೆನ್ನಾಗಿರುತ್ತಿತ್ತು ಎನ್ನಿಸಿತು. ಅಪ್ಪ ನನ್ನ ತಂಗಿಯನ್ನು ವಹಿಸಿಕೊಳ್ಳುವುದು ನನಗಾಗ ಕೋಪ ಬರಿಸುತ್ತಿತ್ತು. ಈಗ ನಾನು ನನ್ನ ಮಗಳನ್ನು ನನ್ನ ತಲೆ ಮೇಲೆ ಕೂರಿಸಿಕೊಂಡಿದ್ದೇನೆ ಎಂದು ನನ್ನ ಹೆಂಡತಿ ಹೇಳುವಾಗ ನನ್ನ ಅಯ್ಯ ಅವರದು ತಪ್ಪಿರಲಿಲ್ಲವೇನೋ ಎನ್ನಿಸುತ್ತಿದೆ! ಅಪ್ಪ ಬೆಳಗ್ಗೆ ಏಳು ಗಂಟೆಗೆ ಕೆಲಸಕ್ಕೆ ಹೊರಟರೆ ಸಂಜೆ ಐದು ಗಂಟೆಗೆ ಬರುತ್ತಿದ್ದರು. ಮನೆಗೆ ಬೇಕಾದ ವಸ್ತುಗ...

ಯತಿ ಸ್ವಂತೀ -69

10-03-2018 ಮಸ್ಕತ್‍ನಲ್ಲಿ ನಾನಿದ್ದುದು ಜೂನ್ 2002ರಿಂದ ಏಪ್ರಿಲ್ 2005. ಮಧ್ಯೆ ಜೂನ್ 2003 ಮತ್ತು ಜೂನ್ 2004 ಈ ಎರಡು ತಿಂಗಳುಗಳು ಬೆಂಗಳೂರಿನ ನನ್ನ ಮನೆಯಲ್ಲಿದ್ದೆ. ಮೊದಲ ಒಂದು ವರ್ಷ ನಾನು ಡ್ರೈವಿಂಗ್ ಲೈಸೆನ್ಸ್ ಇಲ್ಲದೇ ನಡೆದಾಡಿದ್ದೆ. ಎಂತಹ ರಣಬಿಸಿಲೆಂದರೆ ಈಗ ನೆನೆದರೂ ನಾನು ಓಡಾಡಿದೆನಾ ಇಲ್ಲ ನನ್ನ ವಿಲ್‍ಪವರ್ ನನ್ನನ್ನು ಓಡಾಡುವಂತೆ ಮಾಡಿತ್ತಾ ಎಂಬ ವಿಷಯ ಸ್ಪಷ್ಟವಾಗದು. ಏಕೆಂದರೆ ಬಹಳ ಹಿಂದೆ ನನಗೆ ಇದೇ ಸಲ್ತನತ್ ಆಫ್ ಒಮಾನ್‍ನಲ್ಲಿ ಕೆಲಸವೊಂದಕ್ಕೆ ಆಫರ್ ಬಂದಿತ್ತು. ನನಗೆ ಎಂತಹ ಘಮ್ಮಂಡ್ ಇತ್ತೆಂದರೆ ‘ನಾನಾ? ಒಂಟಿಯಾಗಿ ಮಸ್ಕತ್‍ಗಾ? ಫ್ಯಾಮಿಲಿ ಬಿಟ್ಟಾ? ನೆವರ್!’ ಎಂದಿದ್ದೆ. ಅದು ಆ ದೇವದೇವನಿಗೆ ಕೇಳಿಸಿ ನಗು ಬಂದಿದ್ದಿರಬೇಕು. ನನ್ನ ಋಣವೇನಾದರೂ ಆ ಮಸ್ಕತ್‍ನ ಉಪ್ಪು ತೆಗೆದ ನೀರು ಕುಡಿಯಬೇಕೆಂದಿತ್ತೇನೋ... ಆ ಉರಿಬಿಸಿಲಿನಲ್ಲಿ ಬೆಣ್ಣೆಯಂತೆ ಕರಗಬೇಕೆಂಬ ನಿರ್ಧಾರ ಇದ್ದಿತೇನೋ... 2000ದ ಕೊನೆಯ ವೇಳೆಗೆ ಕೆಲಸ ಹೋಯಿತು. ನಾನಿದ್ದ ಕಂಪೆನಿ ಮುಚ್ಚಿಬಿಟ್ಟಿತು. ಇಡೀ ದೇಶವನ್ನು ಜಾಲಾಡಿ ಸುಮಾರು 200 ಕಂಪೆನಿಗಳಿಗೆ ಆನ್‍ಲೈನ್ ಅಪ್ಲೈ ಮಾಡಿದೆ. ಸಾರಿ ವೀ ಕಾನ್ಟ್ ಅಫೋರ್ಡ್ ಯೂ ಎಂದು ಉತ್ತರ ಬಂದಿತ್ತು. ದುರದೃಷ್ಟವಶಾತ್ ನಾನು ಅಮೆರಿಕನ್ ಕಂಪೆನಿಯ ಸಂಬಳವನ್ನು ಕೆಲವು ತಿಂಗಳುಗಳು ತೆಗೆದುಕೊಂಡಿದ್ದರ ಫಲಿತಾಂಶ ಅದು. ಇಲ್ಲಿನ ಒಂದು ಕಂಪೆನಿಯ ಎಂ.ಡಿ.ಯ ಬಳಿಗೆ ಹೋಗಿ ಕೆಲಸ ಬೇಕು ಎಂದೆ. ಯಾವಾಗ ಬೇಕು ಎಂದರು. ‘ನ...

ಯತಿ ಸ್ವಂತೀ -68

09-03-2018 ಇತ್ತೀಚೆಗೆ ಹಿಂದಿ ಹಾಡುಗಳ ಲಿರಿಕ್ಸ್ ಕೂಡ ಗಮನಿಸುತ್ತಿದ್ದೇನೆ. ಅವುಗಳ ಮಾಧುರ್ಯ ಇದ್ದೇ ಇದೆ. ಕೆಲವೆಡೆ ಅವುಗಳ ಪದಗಳ ಜೋಡಣೆ ಅದ್ಭುತ ಎನ್ನಿಸುತ್ತದೆ.   ನಮ್ಮ ಜೀವನದ ಎಲ್ಲ ಸನ್ನಿವೇಶಗಳಿಗೂ ಹೊಂದುವ ಹಾಡುಗಳಿವೆ ಎಂದರೆ ಅಚ್ಚರಿಯೇನಿಲ್ಲ. ಕಿಶೋರ್ ಕುಮಾರ್ ತನ್ನ ಯೂಡ್ಲಿಂಗ್‍ಗೆ ಭಾರೀ ಫೇಮಸ್ಸು. ಯುಡಲಿ ಯುಡಲಿ ಯೂ ಯೂ ಎಂದು ಅನೇಕ ಹಾಡುಗಳಲ್ಲಿ ಹಾಡಿದ್ದಾನೆ. ಕೆಲವೊಮ್ಮೆ ಅವನ ಧ್ವನಿಯನ್ನು ‘ಬೆಂಡ್’ ಮಾಡುವುದೇ ಕೇಳಲು ಮಜಾ ಬರುತ್ತದೆ. ಉದಾಹರಣೆಗೆ, ಚಲಾ ಜಾತಾ ಹೂಂ ಕಿಸೀಕೆ ಧುನ್ ಮೇ... ಹಾಡಿನಲ್ಲಿ ಎ ಆಲಂ ಭೀ ಅಜಬ್ ಹೋಗಾ ಎನ್ನುವಾಗ ಅವನ ವಾಯ್ಸ್ ಸ್ವಲ್ಪ ಬೇರೆ ರೀತಿ ಕೇಳಿಸುತ್ತದೆ. ಮೈ ಹೂಂ ಝುಮ್ ಝುಮ್ ಝುಮ್ ಝುಮ್ ಝುಮ್ರೂ... ಹಾಡಿನಲ್ಲಿ ಬೀತೀ ಬಾತೋಂ ಪೆ ಧೂಲ್ ಉಡಾತಾ ಚಲಾ ಎನ್ನುತ್ತಾನೆ. ಮೊಹಮ್ಮದ್ ರಫಿ ಒಂದು ಹಾಡಿನಲ್ಲಿ ಹರ್ ಫಿಕ್ರ್ ಕೋ ಧುವೇ ಮೆ ಉಡಾತಾ ಚಲಾ ಗಯಾ ಎಂದಿದ್ದಾನೆ. ಅಂದರೆ ಆಗಿ ಹೋಗಿದ್ದನ್ನು ಯಾರೂ ಏನೂ ಮಾಡಲಾರರು. ಅನೇಕ ಚಿಂತೆಗಳಿಗೆ ಉತ್ತರವಿಲ್ಲ. ಏಕೆಂದರೆ ನಾವೇ ಕೆಲವು ಚಿಂತೆಗಳನ್ನು ಆಲ್‍ಮೋಸ್ಟ್ ಬೇಕೆಂದೇ ಹುಟ್ಟು ಹಾಕಿಕೊಳ್ಳುತ್ತೇವೆ. ನನಗೆ ತಿಳಿದಿರುವಂತೆ ಕೆಲವರಿಗೆ ಏನೂ ತೊಂದರೆ ಇರುವುದಿಲ್ಲ. ಅಥವಾ ಚಿಕ್ಕ ತೊಂದರೆ ಇರುತ್ತದೆ. ಆದರೆ ಎಲ್ಲರಿಂದ ಅಯ್ಯೋ ಪಾಪ ಎನ್ನಿಸಿಕೊಳ್ಳುವ ಹಪಾಹಪಿ ಅವರ ಮಾತುಗಳಲ್ಲಿ ಧ್ವನಿಸುತ್ತದೆ. ಅಂತಹವರಿಗೆ ಈ ಎರಡು ಹಾಡಿನ ಸಾಲುಗಳು ನಿಜಕ...

ಯತಿ ಸ್ವಂತೀ -67

08-03-2018 ಮಸ್ಕತ್‍ಗೆ ನಾನು 2002 ಜೂನ್ ತಿಂಗಳಲ್ಲಿ ಮೊದಲ ಸಲ ಕಾಲಿಟ್ಟೆ. ನನ್ನ ಎರಡನೇ ವರ್ಷದ ಕೊನೆಯ ಹೊತ್ತಿಗೆ ನನ್ನ ತಂಗಿ, ನನ್ನ ಭಾವನವರು ಮಸ್ಕತ್‍ನಲ್ಲಿ ಕೆಲಕಾಲ ನೆಲೆಸಿದ್ದರು. ಅವರದೊಂದು ದೊಡ್ಡ ವಿಲ್ಲಾ. ಸುತ್ತಲೂ ಜಾಗ. ಅಲ್ಲಲ್ಲಿ ಪೊದೆಗಳು. ಅನೇಕ ರೂಮುಗಳ ದೊಡ್ಡ ಮನೆ ಅದು. ಮುಂದಿದ್ದ ಒಂದು ಪೊದೆಯಲ್ಲಿ ಚೀಂವ್ ಚೀಂವ್ ಎನ್ನುತ್ತಾ ನೂರಾರು ಗುಬ್ಬಚ್ಚಿಗಳು... ಹೌದು ಗುಬ್ಬಚ್ಚಿಗಳಿದ್ದವು. ಬೆಂಗಳೂರಲ್ಲಿ ರಾಜರಾಜೇಶ್ವರಿನಗರದ ಮಣಿಪಾಲ ಆಸ್ಪತ್ರೆಯಲ್ಲಿ ನನ್ನ ತಾಯಿಯವರನ್ನು ಅಡ್ಮಿಟ್ ಮಾಡಿದಾಗ ಸಂಜೆಯ ವೇಳೆ ಗಿಡಗಳಲ್ಲಿ ಗುಬ್ಬಿಗಳ ಕಲರವ ಕೇಳಿಸುತ್ತಿತ್ತು. ಮತ್ತು ದೇವನಹಳ್ಳಿಯ ನಮ್ಮ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಸೆಕ್ಯೂರಿಟಿ ಚೆಕ್ ಮಾಡಿಸಿಕೊಂಡು ಒಳಗಿನ ರೆಸ್ಟುರಾಂಟ್‍ನಲ್ಲಿ ತಿಂಡಿ ತಿನ್ನುತ್ತಿದ್ದರೆ ನಮ್ಮ ಕಾಲುಗಳ ಬಳಿ ಅನೇಕ ಗುಬ್ಬಿಗಳು ಬರುತ್ತಿದ್ದವು. ನಾನೂ ವಿಮಾನ ನಿಲ್ದಾಣಕ್ಕೆ ಹೋಗಿ ಬಹಳ ದಿನಗಳಾದವು. ಈಗ ಇವೆಯೋ ಇಲ್ಲವೋ ತಿಳಿಯದು. ಮದನಪಲ್ಲಿಯ ಬಳಿಯ ಹಾರ್ಸ್‍ಲೀ ಹಿಲ್ಸ್‍ಗೆ ಹೋಗುವಾಗ ಕೋಲಾರದ ಬಳಿ ಒಂದು ಹೊಟೇಲ್ ಬಳಿ ಗುಬ್ಬಚ್ಚಿ ನೋಡಿದ್ದೆ. ನಮ್ಮ ರೈಲ್ವೇ ಕಾಲೋನಿ ಮನೆಯಲ್ಲಿ ವರಾಂಡಾದಲ್ಲಿ ಮೇಲೆ ಆಸ್‍ಬೆಸ್ಟಾಸ್ ಶೀಟು. ಅದಕ್ಕೆ ಸಪೋರ್ಟ್‍ನಂತೆ ರೈಲ್ವೇ ಕಂಬಿಗಳನ್ನು ತೊಲೆಯನ್ನಾಗಿ ಬಳಸಿದ್ದರು. ಶೀಟ್‍ಗೂ, ತೊಲೆಗೂ ನಡುವೆ ಒಂದಿಷ್ಟು ಜಾಗವಿರುತ್ತಿತ್ತು. ಅಲ್ಲಿ ಗುಬ್ಬಚ್ಚಿಗಳು ಗೂಡು ಕಟ್ಟುತ್ತಿದ...

ಯತಿ ಸ್ವಂತೀ -66

07-03-2018 1979 ಆರಂಭವಾದಾಗ ನಮಗೆ ಥ್ರಿಲ್ಲೋ ಥ್ರಿಲ್ಲು. ನಮ್ಮ ಆಲ್ ಇಂಡಿಯಾ ಟೂರ್ ರೂಟ್ ಸಿದ್ಧವಾಯಿತು. 21 ದಿನಗಳಿಗೆ ಮಾತ್ರ ಹೋಗಬಹುದಿತ್ತು. ನಮ್ಮ ಟೂರ್‍ಗೆ ಇಪ್ಪತ್ತೆಂಟು ದಿನಗಳು ಬೇಕಿದ್ದವು. ನಮ್ಮ ಟೂರ್ ಲೀಡರ್ ಸ್ವಲ್ಪ ಸ್ಟ್ರಿಕ್ಟು. ಅವನನ್ನು ಹೇಗೋ ಒಪ್ಪಿಸಿ ಐದಾರು ಪ್ರತಿಗಳನ್ನು ಪ್ರಿನ್ಸಿಪಾಲರಿಂದ ಸಹಿ ಮಾಡಿಸುವಾಗ ನಮ್ಮ ನಿಜವಾದ ಟೂರ್‍ನ ಕಾಗದವನ್ನು ನಡುವೆ ಬಚ್ಚಿಟ್ಟು ಅದಕ್ಕೂ ಸಹಿ ಪಡೆದೆವು! (ತಪ್ಪಲ್ವಾ?) ಕೊನೆಗೂ ಎಲ್ಲರೂ ಬೆಂಗಳೂರಿನಿಂದ ಹೊರಟೆವು. ಕೆಲವರು ನಡುನಡುವೆ ಹತ್ತಿಕೊಂಡರೆ ಕೆಲವರು ನಡುವೆಯೇ ಇಳಿದುಬಿಟ್ಟರು. ಅವರವರಿಗೆ ಅವರವರ ಕಾರಣಗಳು ಇದ್ದವು ಎಂದಿಟ್ಟುಕೊಳ್ಳಿ! ಶಿಮ್ಲಾದಲ್ಲಿ ಹಿಮವು ಬಹಳ ಚೆನ್ನಾಗಿತ್ತು. ಚಂಡೀಗಢದಲ್ಲಿ ರಾಕ್ ಗಾರ್ಡನ್, ಇಡೀ ನಗರವನ್ನು ಎಂಜಾಯ್ ಮಾಡಿದೆವು.  ಜೈಪುರಕ್ಕೆ ಹೋದಾಗ ಒಂದು ಸಮಸ್ಯೆ ಆಯಿತು. ಆಮೇಲೆ ಅದರ ಬಗ್ಗೆ. ಹೀಗೆ ನಡುವೆ ಸೇರಿದವರಲ್ಲಿ ಕಲ್ಪನಾ ಎಂಬ ಹುಡುಗಿ. ನಾಲ್ಕನೇ ವರ್ಷದಲ್ಲಿ ಓದುತ್ತಿದ್ದಳು. ನಾವು ಐದನೆ ವರ್ಷದವರು. ಆಕೆಯ ತಾಯಿ ಕನ್ನಡದಲ್ಲಿ ಕಾದಂಬರಿ ಬರೆಯುತ್ತಿದ್ದರು. ಅವಳು ಮುಂಬೈನಲ್ಲಿ ಬೆಳೆದ ಹುಡುಗಿ. ಅದರಿಂದ ಸ್ವಲ್ಪ ಹೆಚ್ಚು ಸೋಷಿಯಲ್. ಅಂದರೆ ಮೈಛಳಿ ಬಿಟ್ಟು ನಮ್ಮೊಂದಿಗೆಲ್ಲ ಮಾತಾಡುತ್ತಿದ್ದಳು. ಮುಂಬೈನಲ್ಲಿ ಕಂಡ ಮತ್ತೊಂದು ವಿಶೇಷ ದೃಶ್ಯ. ಆಗಿನ ಕಾಲಕ್ಕೆ ಅಪರೂಪ, ಕನಿಷ್ಠಪಕ್ಷ ನನಗೆ. ಅಯ್ಯೋ, ಹೆಂಗಸರು, ಗಂಡಸರು ಬಿ ಇ ಎಸ್ ಟಿ ಬ...

ಯತಿ ಸ್ವಂತೀ -65

06-03-2018 ನಮ್ಮ ಎರಡನೇ ದೊಡ್ಡ ಅಧಿಕಾರಿಯ ಆಫೀಸ್ ಒಳಗೆ ಕಾಲಿಟ್ಟೆ. ಸುಮಾರು ಎರಡು ಫರ್ಲಾಂಗ್ ದೂರ ನಡೆದುಬರುವಾಗ ಏನು ಮಾಡಬೇಕೆಂದು ನಿರ್ಧರಿಸಿದೆ. ಕೊನೆಯ ಬಾಲ್. ಸಿಕ್ಸರ್ ಹೊಡೆದರೆ ಗೆದ್ದೆ. ಇಲ್ಲದಿದ್ದರೆ ಗೆಟ್ ಔಟ್. ಎರಡೇ ಆಯ್ಕೆಗಳು. ನನ್ನ ಇಮ್ಮೀಡಿಯೇಟ್ ಬಾಸ್ ಮೊದಲೇ ಹೇಳಿದಂತೆ ಊರು ಬಿಟ್ಟು ಬಾಂಬೆಗೆ ಹೋಗಿ ಆಗಿತ್ತು. ಅವರ ಕಾರ್ಯವೈಖರಿಯನ್ನು ನೆನೆದೆ. ಅವರ ಇಮ್ಮೀಡಿಯೇಟ್ ಬಾಸ್ ಕರೆದರು ಎಂದು ತಿಳಿದೊಡನೆ, ‘ಯಾಕೆ ಕರೆದಿರಬಹುದು?’ ಎಂದು ಆಲೋಚಿಸಿ, ಅವರು ಕೇಳಬಹುದಾದ ಎಲ್ಲ ಕಾಗದಗಳನ್ನೂ ತೆಗೆದೊಯ್ಯುತ್ತಿದ್ದರು. ಅದಂತೂ ನನಗೆ ಬಹಳವೇ ಶ್ಲಾಘನೀಯ ಕೃತ್ಯ ಎನ್ನಿಸುತ್ತಿತ್ತು ಯಾವಾಗಲೂ. ಹೇಗೆ ಗೆಸ್ ಮಾಡುವುದು ಬಾಸ್ ಏನು ಕೇಳಬಹುದೆಂದು? ಇದಕ್ಕೆ ಇನ್ನೊಂದು ಉದಾಹರಣೆ ನನ್ನ ಜೀವನದಲ್ಲೂ ನಡೆಯಿತು. ಅದು ಆಮೇಲೆ. ಹ್ಞಾಂ... ಕಾಲಿಟ್ಟೆ. ಅಲ್ಲಿ ಎರಡನೇ ದೊಡ್ಡ ಬಾಸ್ ಇರಲಿಲ್ಲ. ಸೆಕ್ರೆಟರಿ ಇದ್ದರು. ಆತ ಗ್ರಾಹಕರಿಗೆ ಕಾಫಿ ಉಪಚಾರ ಮಾಡಿದ್ದರು. ನೇರ ಹೋಗಿ ಗ್ರಾಹಕರನ್ನು ಭೇಟಿ ಮಾಡಿ ನಮಸ್ಕರಿಸಿ, ಅವರು ಬಾಯ್ತೆರೆಯುವ ಮೊದಲೇ, ‘ನನ್ನನ್ನು ಕ್ಷಮಿಸಿ. ಇದು ನನ್ನ ತಪ್ಪು. ಇದನ್ನು ನಾನು ಆದಷ್ಟು ಬೇಗ ಸರಿಪಡಿಸಿ ನಿಮಗೆ ಆಲ್ಟರ್‍ನೇಟರ್ ಕಳಿಸುತ್ತೇನೆ’ ಎಂದೆ. ನನ್ನ ನಗೆಮೊಗವೋ, ನನ್ನ ಮಾತಿನಲ್ಲಿ ಅವರಿಗೆ ಕೇಳಿಸಿರಬಹುದಾದ ನಿಯತ್ತೋ ತಿಳಿಯದು ಮುಗುಳ್ನಕ್ಕರು. ನಮ್ಮ ಎರಡನೇ ದೊಡ್ಡ ಬಾಸ್, ನನ್ನ ಇಮ್ಮೀಡಿಯೇಟ್ ಬಾಸ್‍ನ ಇಮ್ಮೀಡಿ...

ಯತಿ ಸ್ವಂತೀ -64

05-03-2018 ನನ್ನ ಜೀವನದಲ್ಲಿನ ಕೆಲವು ಘಟನೆಗಳನ್ನು ಈಗ ನೆನೆದಾಗ ನನ್ನ ಭಂಡತನವು ನನ್ನನ್ನು ಕಾಪಾಡಿದೆ ಎನ್ನಬಹುದೇನೋ! ಒಮ್ಮೆ ಹೀಗಾಯಿತು. ನನ್ನ ಮದುವೆಯಾದೊಡನೆ ಚಿಕ್ಕಮಗಳೂರಿಗೆ ಹೋಗಿದ್ದೆ ಪತ್ನಿಯೊಂದಿಗೆ. ಊಟಿಗೆ ಹೋಗಬೇಕಿತ್ತು, ಕಾರಣಾಂತರಗಳಿಂದ ಹೋಗಲಾಗಲಿಲ್ಲ. ಮದುವೆಯಾದ ವರ್ಷವೇ ಆಗಸ್ಟ್‍ನಲ್ಲಿ ಕಾಶ್ಮೀರದ ಪ್ರವಾಸ ಮಾಡಿದೆವು. ಆದರೂ ಊಟಿ ನಮಗೆ ಹೋಗಲಾಗಲಿಲ್ಲ. ಮರುವರ್ಷ ಮಾರ್ಚ್‍ನಲ್ಲಿ ಕೊಡೈಕೆನಾಲ್‍ಗೆ ಹೋಗೋ ಅವಕಾಶ ಸಿಕ್ಕಾಗ ಪತಿ ಪತ್ನಿ ಬೆಂಗಳೂರಿನಿಂದ ಘಾಯಬ್! ಖುಷಿಯಿಂದ ವಾಪಸ್ ಆಫೀಸಿಗೆ ಬಂದರೆ ಟೇಬಲ್ ಮೇಲೆ ಎರಡು ಪತ್ರಗಳು. ( ಈ ಹೆಸರಿನ ಕಥೆಯೊಂದು ನಾನು ಬರೆದಿರುವುದು ಯಾದೃಚ್ಛಿಕ!) ಒಂದು ಪತ್ರದಲ್ಲಿ ನಮ್ಮ ಉಪಾಧ್ಯಕ್ಷರು, ನಿನ್ನ ಅಭಿವೃದ್ಧಿ ಬಗ್ಗೆ ನಿನ್ನ ಬಾಸ್ ಹೇಳುತ್ತಿರುತ್ತಾರೆ. ನಿನ್ನನ್ನು ಸೀನಿಯರ್ ಇಂಜಿನಿಯರ್ ಆಗಿ ಬಡ್ತಿ ನೀಡುತ್ತಿದ್ದೇವೆ ಎಂದಿದ್ದರು. ಎರಡನೆಯ ಪತ್ರ ನನ್ನ ಬಾಸ್‍ನದು. ‘ನಿನ್ನ ನಿರ್ಲಕ್ಷ್ಯದಿಂದ ಒಬ್ಬ ಗ್ರಾಹಕ ತೊಂದರೆಗೊಳಗಾಗಿದ್ದಾನೆ. ನಿನ್ನ ಮೇಲೇಕೆ ನಾನು ಕ್ರಮ ಕೈಗೊಳ್ಳಬಾರದು?’ ಬಡ್ತಿಗೆ ಸಂತಸ ಪಡಬೇಕೋ, ನೋಟೀಸಿಗೆ ಸಂತಾಪ ಪಡಬೇಕೋ ತಿಳಿಯದ ಡೋಲಾಯಮಾನ ಪರಿಸ್ಥಿತಿ. ಗ್ರಾಹಕನ ವಿಷಯಕ್ಕೆ ಬರೋಣ. ಕಂಪೆನಿಯ ಆಂತರಿಕ ಹೊಂದಾಣಿಕೆಯಿಂದಾಗಿ ಒಂದು ನಿರ್ದಿಷ್ಟ ಸೈಜಿನ ಆಲ್ಟರ್‍ನೇಟರುಗಳ ಉತ್ಪಾದನೆ ನಮ್ಮ ಮೂರನೆಯ ಯೂನಿಟ್ಟಿಗೆ ಹೋಗಿತ್ತು. ಅಲ್ಲಿ ಅದನ್ನು ಫಾಲೋ ಅಪ್ ಮಾಡುವುದು ಕಷ...

Yathi swanthee - 63

04-03-2018 PÀ£ÀßqÀ J£É PÀÄtÂzÁqÀĪÀÅzÉ£ÉßzÉ ... ªÀÄ£ÉAiÀÄ°è ªÀiÁvÁqÀĪÀ ¨sÁµÉ CAiÀÄåAUÁgï vÀ«Ä¼ÀÄ. CzÀgÀ°è ºÉZÀÄÑ PÀ£ÀßqÀ ¥ÀzÀUÀ¼ÀÄ, PÀrªÉÄ vÀ«Ä¼ÀÄ ¥ÀzÀUÀ¼ÀÄ EªÉ. £À£Àß CªÀÄä, C¥Àà, CfÓ CªÀgÀÄUÀ¼À eÉÆvÉ CzÉà ¨sÁµÉ §gÀÄvÀÛzÉ. DzÀgÉ aPÀÌA¢¤AzÀ ¸ÀÄvÀÛªÀÄÄvÀÛ® ªÀÄ£ÉAiÀÄ UɼÉAiÀÄgÀ eÉÆvÉ ªÀiÁvÁqÀÄwÛzÀÄÝzÀÄ PÀ£ÀßqÀ ¨sÁµÉ. K¼À£Éà vÀgÀUÀwAiÀÄ ªÀgÉUÉ PÀ£ÀßqÀ ªÀiÁzsÀåªÀÄzÀ°è PÀ°PÉ. JAl£É vÀgÀUÀwAiÀİè EAVèÃµï «ÄÃrAiÀÄA ¸ÉÃjzÁUÀ ªÉÄõÀÖgÀÄUÀ¼ÀÄ, ªÉÄÃqÀAUÀ¼ÀÄ K£ÀÄ ºÉýzÀgÀÆ £ÀªÀÄUÉ CzÀÄ ¨É¨Éâ¨Éâ... CµÉÖÃ. PÀ£ÀßqÀ ¨sÁµÉ £ÀªÀÄä°è CµÀÄÖ ¨ÉgÉvÀÄºÉÆÃVzÉ. C£ÉÃPÀ ¸À® £ÀªÀÄä £ÉAlgÀÄ ¸ÉÃjzÀgÀÆ PÀ£ÀßqÀzÀ°èAiÉÄà ªÀiÁvÁqÀÄvÉÛêÉ. §ºÀ¼À ºÀ¼À§gÀÄ... JA§vÀÄÛ zÁnzÀªÀgÀÄ CAiÀÄåAUÁgï vÀ«Ä½£À°èAiÉÄà ªÀiÁvÁrzÁUÀ CªÀjUÉ CzÀgÀ°èAiÉÄà GvÀÛj¸ÀÄwÛzÉÝ. PÉ®ªÉǪÉÄä £ÀªÀÄä ªÀÄ£ÉAiÀÄ ¨sÁµÉ PÉ®¸ÀPÉÌ §gÀÄwÛvÀÄÛ PÀÆqÀ. £ÉÆÃqÀÄwÛzÀÄÝzÀÄ gÁdtÚ£À ¹¤ªÀiÁUÀ¼ÀÄ. J¥ÀàvÀÛgÀ ºÉÆwÛUÉ «µÀÄÚªÀzsÀð£À, CA§jÃµï »ÃUÉ M¨ÉÆâ§âgÉà avÀægÀAUÀPÉÌ §gÀvÉÆqÀV CªÀgÀ ¹¤ªÀiÁUÀ¼À£ÀÆß £ÉÆÃqÀvÉÆqÀVzɪÀÅ. ªÀÄzÀÄªÉ DVzÀÄÝ ºÁ¸À£ÀzÀ PÀqÉAiÀÄ C...

ಯತಿ ಸ್ವಂತೀ -62

03-03-2018 ನನ್ನ ಉದ್ಯೋಗದ ಸ್ಥಳಗಳಲ್ಲಿ ಊಟದ ವಿಶೇಷಗಳನ್ನು ಹೇಳಬೇಕು. ಮೊದಲ ಕೆಲಸದಲ್ಲಿ ಅಮ್ಮ ಕೊಡುತ್ತಿದ್ದ ತಿಂಡಿ ತಿನ್ನುತ್ತಿದ್ದೆ ಒಂಟಿಯಾಗಿ. ಎರಡು ಚಪಾತಿಗಳ ನಡುವೆ ತುಪ್ಪ ಸವರಿ ಸಕ್ಕರೆ ಉದುರಿಸಿ ಸುತ್ತಿ ಕೊಟ್ಟಿರುತ್ತಿದ್ದರು. ಆಫೀಸ್ನಲ್ಲಿ ಅಥವಾ ರೈಲಿನಲ್ಲಿ ಅದನ್ನು ತಿನ್ನುತ್ತಿದ್ದೆ... ಒಂಟಿಯಾಗಿ. ಜೊತೆಗೆ ಪಾರ್ಲೆ ಗ್ಲೂಕೋಸ್ ಬಿಸ್ಕತ್ತು. ಕಿರ್ಲೋಸ್ಕರ್ ಎಲೆಕ್ಟ್ರಿಕ್ ಕಂಪೆನಿಯಲ್ಲಿ ತರಬೇತಿಗೆ ಸೇರಿದಾಗ ಬೆಳಗ್ಗೆ 11.30ಕ್ಕೆ ಕ್ಯಾಂಟೀನ್ನಲ್ಲಿ ದೊಡ್ಡ ಸ್ಟೀಲ್ ತಟ್ಟೆಯಲ್ಲಿ ಅನ್ನ ಪಲ್ಯ ಸಾರು ಸಾಂಬಾರು ಜೊತೆಗೆ ಒಂದೊಂದು ದಿನ ಒಂದೊಂದು ಕರಿದ ತಿಂಡಿ. ಉದ್ದಿನ ವಡೆ, ಮಸಾಲೆ ವಡೆ, ಉದ್ದಿನ ಬೋಂಡ, ಆಲೂ ಬೋಂಡ, ತರಕಾರಿ ಬೋಂಡ ಮತ್ತು ಚೌ ಚೌ. ಇದು ಎಂತಹ ರೊಟೀನ್ ಅಂದರೆ ನಮ್ಮ ಕಂಪೆನಿಯ ಯಂತ್ರಗಳ ಪರೀಕ್ಷೆಗೆ ಬರುತ್ತಿದ್ದ ಪರೀಕ್ಷಕರೂ ಎಂದೆಂದು ಏನೇನು ಎಂದು ಅರಿತಿದ್ದರು! ನಂತರ ಸೇರಿದ ಕಂಪೆನಿಯಲ್ಲಿ ಲೋಕೇಶ್ ಗೌಡ ಎಂಬ ಹಿರಿಯರು ನನ್ನ ಊಟದ ಜತೆಗಾರ. ಅವರ ಪತ್ನಿ ಕೆಲವು ಖಾದ್ಯಗಳನ್ನು ಅದ್ಭುತವಾಗಿ ಮಾಡುತ್ತಿದ್ದರು. ಉದಾಹರಣೆಗೆ ಹಿದುಕಿದ ಅವರೇಕಾಳು ಸಾಂಬಾರು. ನಮ್ಮ ಮನೆಯ ಪುಳಿಯೋಗರೆ, ಅಕ್ಕಿ ರೊಟ್ಟಿ ಇತ್ಯಾದಿ ಎಲ್ಲವನ್ನೂ ಹಂಚಿಕೊಳ್ಳುತ್ತಿದ್ದೆವು. ಕಡಿಮೆ ಜನ ಇದ್ದ ಕಂಪೆನಿ ಅದು. ಮುಂದಿನ ಕಂಪೆನಿಯಲ್ಲಿ ನನ್ನ ಗೆಳೆಯನೇ ನನ್ನ ಬಾಸ್. ಅಲ್ಲಿ ನಾಲ್ಕೈದು ಜನ ಊಟ ಹಂಚಿಕೊಂಡು ಸವಿಯುತ್ತಿದ್ದೆವು. ಮುಂದಿನ ಕಂಪೆನಿ...

ಯತಿ ಸ್ವಂತೀ - 61

02-03-2018 ಒಂದು ಚಿಕ್ಕ ಹುಡುಗಿ. ತಾಯಿ ಇಲ್ಲದ ಹುಡುಗಿ. ಮಹಾ ತರಲೆ. ಸುಳ್ಳು ನಿರರ್ಗಳವಾಗಿ ಹೇಳಿ ಎಲ್ಲರನ್ನೂ ಹೆಡ್ಡರನ್ನಾಗಿ ಮಾಡುತ್ತಿರುತ್ತಾಳೆ. ಅವಳ ಅಪ್ಪನ ಮಾಜಿ ಗೆಳತಿಯ ಕೊಲೆಯನ್ನು ನೋಡುತ್ತಾಳೆ. ಅಪ್ಪನನ್ನು ಬಂಧಿಸುತ್ತಾರೆ.  ಅಪ್ಪನ ಮಾಜಿ ಗೆಳತಿ ಬಳಿ ಇದ್ದ ಬ್ರೂಚ್ ಇವಳಿಗೆ ಸಿಗುತ್ತದೆ. ಅದರಲ್ಲಿ ರಹಸ್ಯ ನಿಧಿಯ ನಕ್ಷೆ ಇರುತ್ತದೆ. ಇವಳನ್ನು ರೌಡಿಗಳು ಅಟ್ಟಿಸಿಕೊಂಡು ಬರುತ್ತಾರೆ. ಇವಳು ಒಂದು ಬಸ್ ಹತ್ತುತ್ತಾಳೆ. ಒಬ್ಬ ರೌಡಿ ಅದೇ ಬಸ್ ಹತ್ತುತ್ತಾನೆ... ಪ್ರೇಮಿಗಳಿಬ್ಬರು ಅದೇ ಬಸ್ ಹತ್ತುತ್ತಾರೆ. ಹುಡುಗಿ ಬಸ್ಸಿಳಿದು ಓಡುವಾಗ ರೌಡಿ ಅಟ್ಟಿಸಿಕೊಂಡು ಹೋಗುತ್ತಾನೆ. ನಾಯಕಿಯ ತಂದೆ ಒಂದು ಕಾಮಿಕಲ್ ಕ್ಯಾರೆಕ್ಟರ್. ಬಾಸ್ ಸಿಕ್ಕಾಪಟ್ಟೆ ಕ್ರೂರಿ. ಹುಡುಗಿಯನ್ನು ಅವರು ಅಪಹರಿಸುವುದು... ನಾಯಕ ನಾಯಕಿ ಅವಳನ್ನು ಬಿಡಿಸಲು ಪ್ರಯತ್ನ ಮಾಡುವುದು ಇಡೀ ಸಿನಿಮಾದಲ್ಲಿ ನಡೆಯುತ್ತಲೇ ಇರುತ್ತದೆ. ಬಾಸ್ ಮುಖ ತೋರಿಸುವುದಿಲ್ಲ. ಅವನ ಧ್ವನಿ ಕೇಳಿಸುತ್ತದೆ. ಆ ಧ್ವನಿಯೇ ನಮಗೆ ಮೋಸ ಮಾಡುತ್ತದೆ. ಒಬ್ಬ ಹುಚ್ಚನ ಕೈಗೆ ಆ ಬ್ರೂಚ್ ಸಿಗುತ್ತದೆ. ಅದರಿಂದಾಗಿ ಅವನು... ಮುಂದಿನದನ್ನು ತೆರೆಯ ಮೇಲೆ ನೋಡಿ ಆನಂದಿಸಿರಿ. ಹೌದೂ, ಈ ಮುಂದಿನದನ್ನು... ವಾಕ್ಯವು ಏಕೆ ಹೇಳಲ್ಪಡುವುದೆಂದು ತಿಳಿಯಲು ನನ್ನಂತಹ ಅರವತ್ತು ವರ್ಷದವರನ್ನೇ ಕೇಳಬೇಕು. ಆಗೆಲ್ಲಾ ಥೇಟರಿನಲ್ಲಿ ಸದರಿ ಚಿತ್ರದ ಪುಟ್ಟ ಪುಸ್ತಕವೊಂದು ಮಾರಲ್ಪಡುತ್ತಿತ್ತು. ಅದರಲ್ಲಿ...