ಯತಿ ಸ್ವಂತೀ -೮೦


೨೧.೩.೨೦೧೮
ನಾನು ಇಷ್ಟ ಪಡುವ ಅನೇಕ ಹಾಲಿವುಡ್ ನಟಿಯರಲ್ಲಿ ಕೆಲವರ ಬಗ್ಗೆ. ನನ್ನ ಒಂದು ಆಯ್ಕೆ ಏಂಜೆಲಿನಾ ಜೋಲಿ. ಅದೇಕೋ ಇವಳೆಂದರೆ ಬಹಳ ಇಷ್ಟ. ಸಾಲ್ಟ್... ಮಿಸ್ಟರ್ ಆ್ಯಂಡ್ ಮಿಸೆಸ್ ಸ್ಮಿತ್ ಮತ್ತು ವಿದ್ಯಾ ಬಾಲನ್ ಜನಪ್ರಿಯಳಾದ ಕಹಾನಿ ಕ್ಲೈಮ್ಯಾಕ್ಸ್ನ ಮೂಲ ಇರುವ ಚಿತ್ರ. ಪ್ರಾಸ್ಥೆಟಿಕ್ ಹೊಟ್ಟೆ ಧರಿಸಿ ಕೊಲೆಗಾರನನ್ನು ಹೊರಗೆಳೆಯುವ ಪಾತ್ರ.
ಜ್ಯೂಲಿ ಆ್ಯಂಡ್ರೂಸ್ ನನಗೆ ಸೌಂಡ್ ಆಫ್ ಮ್ಯೂಸಿಕ್ ಮತ್ತು 10ನಲ್ಲಿ ಬಹಳ ಇಷ್ಟವಾಯಿತು.
ಆಡ್ರೆ ಹೆಪ್ಬರ್ನ್ ಮೈ ಫೇರ್ ಲೇಡಿ ಮತ್ತು ಸಿಡ್ನಿ ಶೆಲ್ಡನ್ನ ಬ್ಲಡ್ ಲೈನ್ ಚಿತ್ರಗಳು.
ಗೋಲ್ಡೀ ಹಾನ್ ಅವಳ ಕಾಮಿಕ್ ಟೈಮಿಂಗ್ಗಾಗಿ ಇಷ್ಟ. ಫೌಲ್ ಪ್ಲೇ, ಪ್ರೈವೇಟ್ ಬೆಂಜಮಿನ್, ಸೀಮ್ಸ್ ಲೈಕ್ ಓಲ್ಡ್ ಟೈಮ್ಸ್, ಡಚೆಸ್ ಆ್ಯಂಡ್ ದಿ ಡರ್ಟ್ ವಾಟರ್ ಫಾಕ್ಸ್... ಶೀ ಈಸ್ ಅಮೇಜಿಂಗ್.
ಫ್ರೆಂಡ್ಸ್ ಧಾರಾವಾಹಿ, ಮಾರ್ಲಿ ಆ್ಯಂಡ್ ಮೀ ಚಿತ್ರದ ಜೆನ್ನಿಫರ್ ಆನಿಸ್ಟನ್. ಡೀರೈಲ್ಡ್ ಚಿತ್ರದ ದುಷ್ಟ ನಯವಂಚಕಿ ಪಾತ್ರದಲ್ಲಿ ಬಹಳ ಚೆನ್ನಾಗಿ ನಟಿಸಿದ್ದಾಳೆ. ಜ್ಯೋತಿಕಾ ಇದರ ತಮಿಳು ತರ್ಜುಮೆಯಲ್ಲಿ ನಟಿಸಿದ್ದಾಳೆ.
ಇ. ಟಿ. ಸ್ಟೀವನ್ ಸ್ಪೀಲ್ಬರ್ಗ್ ತೆಗೆದ ಅಪರೂಪದ ಚಿತ್ರ. ಅದನ್ನು ಆಧರಿಸಿ ಬಹಳ ಸಿನಿಮಾಗಳು ಬಂದವು. ಇದರಲ್ಲಿನ ಬಾಲ ನಟಿ ಡ್ರಾ ಬ್ಯಾರಿಮೋರ್ ಕೂಡ ನನ್ನ ಫೇವರಿಟ್.
ಅವಳ ಫಿಫ್ಟಿ ಫಸ್ಟ್ ಡೇಟ್ಸ್ ಚಿತ್ರದಲ್ಲಿ ಶಾರ್ಟ್ ಟೈಮ್ ಮೆಮೊರಿ ಹುಡುಗಿಯ ಪಾತ್ರ ಮಾಡಿದ್ದಳು. ಆಸ್ಕರ್ ವಿಜೇತ ರಾಬರ್ಟ್ ಡಿ ನೀರೋನ ಮಗಳಾಗಿ ನಟಿಸಿದ ಎವ್ವೆರಿಬಡಿ ಈಸ್ ಫೈನ್ ಮನಸ್ಸು ಮುಟ್ಟುತ್ತದೆ. ಕೆನೆಡಿಯ ಹೆಂಡತಿ ಜಾಕ್ವೆಲಿನ್ನಳ ನೆಂಟಳ ಪಾತ್ರದ ಗ್ರೇ ಗಾರ್ಡನ್ ಕೂಡ ಅವಿಸ್ಮರಣೀಯ. ಬ್ಯಾರಿಮೋರ್ ಬಹಳ ಅದ್ಭುತವಾಗಿ ನಟಿಸಿದ್ದಾಳೆ.
ಇನ್ನೂ ಕೆಲವರು ನನಗೆ ಇಷ್ಟವಾದವರಿದ್ದಾರೆ. ಜೇನ್ ಸಿಮೋರ್ ನೋಡಲು ಬಲು ಚೆಂದ. ದ ಸ್ಪೈ ಹೂ ಲವ್ಡ್ ಮೀನಲ್ಲಿ ಬಾಂಡ್‌ನ ಗೆಳತಿಯ ಪಾತ್ರದಲ್ಲಿ ಬರುತ್ತಾಳೆ.
ಮೆರಿಲ್ ಸ್ಟ್ರೀಪ್ ಎಂತಹ ಪಾತ್ರವಾದರೂ ಸೈ. ಇಟ್ಸ್ ಕಾಂಪ್ಲಿಕೇಟೆಡ್, ಮಾನ್ಸ್ಟರ್ ಇನ್ ಲಾ ಚಿತ್ರಗಳಲ್ಲಿ ಅವಳ ನಟನೆ ಇಷ್ಟ.
ಈಗೆಲ್ಲಾ ಹೆಚ್ಚು ಇಂಗ್ಲೀಷ್ ಸಿನಿಮಾಗಳನ್ನು ನೋಡುವುದಿಲ್ಲ. ಇತ್ತೀಚೆಗೆ  ಪಾತ್ರಕ್ಕೆ ತಕ್ಕ ನಟಿಯರನ್ನು ಆರಿಸುತ್ತಾರೇನೋ.
ಹಿಂದಿಯಲ್ಲಿ ಇತ್ತೀಚೆಗೆ ನೂತನ್ ಅಭಿನಯದ ಎರಡು ಸಿನಿಮಾಗಳನ್ನು ನೋಡಿದೆ. ೧೯೫೭ರ ಪೇಯಿಂಗ್ ಗೆಸ್ಟ್ ಮತ್ತು ೧೯೬೩ರ ತೆರೆ ಘರ್ ಕೆ ಸಾಮ್ನೆ. ಈಕೆಯ ಮುಖದ ಆಕಾರ ಮೆರಿಲ್ ಸ್ಟ್ರೀಪ್‌ಳ ಮುಖವನ್ನು ಹೋಲುತ್ತದೆ ಎನಿಸುತ್ತದೆ.
ಪಾತ್ರವೊಂದನ್ನು ಮಾಡುವಾಗ ಆ ಪಾತ್ರವೇ ಆಗಿಬಿಟ್ಟರೆ ತೆರೆಯ ಮೇಲೆ ಪರಿಣಾಮಕಾರಿ ಆಗಿ ಕಾಣಿಸುತ್ತದೆ ಎಂದಿದ್ದಾಳೆ ಈಕೆ.
ಎಂತಹ ಪಾತ್ರವಾದರೂ ಸೈ. ಬಂದಿನಿ ಮತ್ತು ದಿಲ್ಲಿ ಕಾ ಠಗ್ ಈ ಎರಡು ಸಾಕು ನೂತನ್‌ಳ ಪಾತ್ರ ವೈವಿಧ್ಯತೆಗೆ.
-೦-೦-೦-

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102