Posts

Showing posts from June, 2018

ಯತಿ ಸ್ವಂತೀ -181

30-06-2018 ಎಸ್‍ಎಸ್‍ಎಲ್‍ಸಿಯಲ್ಲಿದ್ದಾಗ ಚಿಕ್ಕ ಸೈಕಲ್ ಮೂಲಕ ಸೈಕಲ್ ಓಡಿಸೋದು ಕಲಿತೆ. ಆದರೆ ನನಗೆ ಪೆಡಲ್ ಮೇಲೆ ಎಡಗಾಲಿಟ್ಟು ಕಾಲನ್ನು ಎತ್ತಿ ಆ ಪೆಡಲ್ ಮೇಲೆ ಇಡಲು ಬರುತ್ತಿರಲಿಲ್ಲ! ಫುಟ್‍ಪಾತ್ ಬಳಿ ಹೋಗಿ ಬ್ರೇಕ್ ಹಾಕಿ, ಎಡಪಾದವನ್ನು ಫುಟ್‍ಪಾತ್ ಮೇಲೆ ಇಡುತ್ತಿದ್ದೆ. ನನ್ನ ಎರಡನೇ ವರ್ಷ ಇಂಜಿನಿಯರಿಂಗ್‍ನಲ್ಲಿ ನನಗೊಂದು ಹೊಸ ಸೈಕಲ್ ತೆಗೆಸಿಕೊಟ್ಟರು ನನ್ನ ಅಂಕಲ್. ಅಂದ ಹಾಗೆ ನಾನು ಈ ಕಡೆ ಎನ್‍ಐಈಗೆ ಸೇರುತ್ತಿದ್ದಂತೆ ಅವರ ನಾಸಿಕ್ ವರ್ಗವು ರದ್ದಾಗಿ ಅವರು ಜಯನಗರದಲ್ಲೇ ಉಳಿದುಕೊಂಡರು. ಆದರೆ ನನಗೆ ಮತ್ತೆ ವಾಪಸ್ ಹೋಗಲು ತೀರಾ ತಡವಾಗಿಬಿಟ್ಟಿತ್ತು. ಎನ್‍ಐಈ ಕ್ಯಾಂಟೀನಿನ ಶ್ರೀಕಂಠ ಮಾಡುವ ಕಾಫಿ ಕುಡಿಯಬೇಕೆಂದು ನನ್ನ ಹಣೆಯಲ್ಲಿ ಬರೆದಿದ್ದರೆ ಯಾರೇನು ಮಾಡಲಾಗುತ್ತಿತ್ತು! ಹ್ಞಾಂ... ನನ್ನ ಅಯ್ಯ ಬಳಿ ಸೈಕಲ್ ಇತ್ತು. ಎಡಗಾಲಿನ ಪ್ಯಾಂಟ್‍ಗೆ ಒಂದು ಕ್ಲಿಪ್ ಹಾಕಿಕೊಂಡು ಓಡಿಸುತ್ತಿದ್ದರು. ಏಕೆಂದರೆ ಆ ಕಡೆಯ ಪ್ಯಾಂಟು ಸೈಕಲ್ ಚಕ್ರಕ್ಕೆ ಸಿಕ್ಕಿಕೊಳ್ಳುವುದೆಂದು ಹಾಗೆ ಮಾಡುತ್ತಿದ್ದರು. ನನಗೆ ಎರಡನೇ ವರ್ಷದಲ್ಲಿ ಹೊಸ ಸೈಕಲ್ ಬಂದಿತು. ಅನಂತಶಯನ ನನ್ನ ಬಾಡಿಗಾರ್ಡ್. ಅವನು ಒಂಟಿಕೊಪ್ಪಲ್‍ನಿಂದ ನಮ್ಮ ಮನೆಗೆ ಬರುತ್ತಿದ್ದ. ಅವನು ನನ್ನ ಬಲಗಡೆ ನನಗೆ ಕಾವಲಿರುತ್ತಿದ್ದ. ಬ್ರೇಕ್ ಹಿಡಿಯಲು ಬಂದರೂ ಇಳಿಯಬೇಕೆಂದರೆ ನನಗೆ ಫುಟ್‍ಪಾತ್‍ನ ಆಸರೆ ಬೇಕಾಗುತ್ತಿತ್ತು! ಒಂದು ವರ್ಷದ ಕಾಲ ಓಡಿಸಿದೆ ಎಂದು ನೆನಪು. ನಂತರ ಬಸ್‍ನಲ್ಲಿ ಹೋದೆನೆಂದ...

ಯತಿ ಸ್ವಂತೀ -179

28-06-2018 ಮೈಸೂರನ್ನು ಖುಷಿ ಖುಷಿಯಾಗಿ ತಲುಪಿದೆ. ಅಮ್ಮ, ಅಯ್ಯ, ತಂಗಿಯರು ಇವರುಗಳ ಜೊತೆ ಇರಬಹುದು! ಇನ್ನೂ ಐದು ವರ್ಷಗಳ ಓದು.  ಹಿಂದಿನ ವರ್ಷವೇ ಐದು ವರ್ಷಗಳ ಇಂಜಿನಿಯರಿಂಗ್ ಕೋರ್ಸ್ ಆರಂಭವಾಗಿತ್ತು. ಅದಕ್ಕೆ ಮುಂಚೆ ನಾಲ್ಕು ವರ್ಷಗಳದ್ದು ಆಗಿತ್ತು. ಮನದ ಮೂಲೆಯಲ್ಲಿ ಒಂದು ವಿಷಯ ಕೊರೆಯುತ್ತಿತ್ತು. ಅಯ್ಯನಿಗೆ 1977ರಲ್ಲಿ ರಿಟೈರ್ ಆಗಲಿದೆ. ಆಗ ಏನು ಮಾಡುವುದು? ಇಷ್ಟು ವರ್ಷವೂ ನಾವಿರುವುದು ರೈಲ್ವೇ ಕಾಲೋನಿಯ ಕ್ವಾರ್ಟರ್ಸ್‍ನಲ್ಲಿ. ಆಮೇಲೆ ಅಯ್ಯ ಎಲ್ಲಿ ಇರುತ್ತಾರೆ? ಒಂದು ಕ್ಷಣ ಬಂದ ಆಲೋಚನೆ ಅದು. ಆ ಸಮಯ ಬಂದಾಗ ನೋಡಿಕೊಂಡರಾಯಿತು ಎಂದುಕೊಂಡೆ. 1974ರಲ್ಲಿ ರೈಲ್ವೇ ಮುಷ್ಕರದ ಸಮಯದಲ್ಲಿ ಕದ್ದು ಮುಚ್ಚಿ ಕೆಲಸಕ್ಕೆ ಹೋಗುತ್ತಿದ್ದರು. ಆಗ ಏನೋ ಗಲಾಟೆ. ಏನೆಂದು ಅಷ್ಟು ತಿಳಿಯದು. ಅಯ್ಯನಿಗೆ ಆ ಸಮಯದಲ್ಲಿ ಕೆಲಸ ಮಾಡಿದ್ದಕ್ಕೆ ಮೂರು ಆಯ್ಕೆಗಳನ್ನು ನೀಡಿದರು. ಒಂದು – ಹೆಚ್ಚಿನ ಸಂಬಳ. ಎರಡು – ಮಗನಿಗೆ ಕೆಲಸ. ಮೂರು - ನಿವೃತ್ತಿವೇತನದಲ್ಲಿ ಹೆಚ್ಚಳ. ನಾನಿನ್ನೂ ಐದು ವರ್ಷಗಳ ಕಾಲ ಓದಬೇಕಾಗಿದ್ದುದರಿಂದ ಅಯ್ಯ ಹೆಚ್ಚಿನ ಸಂಬಳವನ್ನು ಆಯ್ಕೆ ಮಾಡಿಕೊಂಡರೆಂದು ನೆನಪು. ನನ್ನ ದೊಡ್ಡ ತಂಗಿ ಮಹಾರಾಣಿ ಹೈಸ್ಕೂಲಿನಲ್ಲಿ ಪಿ.ಯು.ಸಿ. ಓದುತ್ತಿದ್ದಳು. ಚಿಕ್ಕವಳು ಇನ್ನೂ ಪ್ರೈಮರಿ ಸ್ಕೂಲ್. ಯಾದವಗಿರಿಯ ಸುನಂದ ಚಿಲ್ಡ್ರನ್ ಸ್ಕೂಲ್‍ನಲ್ಲಿ. ನಾನು ಸಂಭ್ರಮದಿಂದ ಎನ್ ಐ ಈ ಕಾಲೇಜಿಗೆ ಹೋದೆ. ಅಬ್ಬಾ, ರೈಲ್ವೇ ಸ್ಟೇಷನ್ ದಾಟಿ, ಒಂದೇ ರಸ್ತೆಯ...

ಯತಿ ಸ್ವಂತೀ -178

27-06-2018 ಜೇಮ್ಸ್ ಹ್ಯಾಡ್ಲಿ ಛೇಸ್ ನನ್ನನ್ನು ಬಲವಾಗಿ ಹಿಡಿದಿದ್ದಾನೆ. ಅವನ ವಿವರಣೆಗಳು ಕಣ್ಣಿಗೆ ಕಟ್ಟಿದಂತೆ ಇರುತ್ತವೆ.  ಬಹುಶಃ ನನ್ನ ಬರವಣಿಗೆಯಲ್ಲಿ ಈ ಶೈಲಿಯೂ ಬಂದಿದೆ. ಏಕೆಂದರೆ ನಾನು ಪದಗಳನ್ನು ವ್ಯರ್ಥ ಮಾಡುವುದಿಲ್ಲ. ಪುಟಗಳ ಸಂಖ್ಯೆ ಎಷ್ಟು ಕಡಿಮೆ ಇದ್ದರೂ ಸರಿಯೇ. ನಾನು ಹೇಳಬೇಕೆಂದಿರುವುದನ್ನು ಹೇಳಬೇಕು, ಪೂರ್ತಿಯಾಗಿ ಹೇಳಬೇಕು ಅಷ್ಟೇ. ಅನಗತ್ಯವಾದ ವಾಕ್ಯಗಳು ಕೂಡ ನನ್ನ ಕಾದಂಬರಿಯಲ್ಲಿ ಇರುವುದಿಲ್ಲ. ಅದಕ್ಕೇ ಯಾವ ಎರಡು ಕಾದಂಬರಿಗಳೂ ಒಂದೇ ಸೈಜಿನವಲ್ಲ. 380 ಪುಟದ ಕಾದಂಬರಿಯೂ ಇದೆ, 114 ಪುಟಗಳ ಕಾದಂಬರಿಯೂ ಇದೆ. ಛೇಸ್‍ಗೆ ವಾಪಸ್ಸಾಗೋಣ. ಅವನು ಬರೆದದ್ದು ಕೇವಲ 90. ಮೊದಮೊದಲು ಅವನ ಕಾದಂಬರಿಯು ಪ್ರಕಟವಾಗದಿದ್ದಾಗ ರೇಮಂಡ್ ಮಾರ್ಶಲ್, ಜೇಮ್ಸ್ ಎಲ್. ಡೋಖರ್ಟಿ, ಆರ್. ರೇಮಂಡ್, ಆ್ಯಂಬ್ರೋಸ್ ಗ್ರ್ಯಾಂಟ್ ಎನ್ನುವ ಹೆಸರುಗಳಲ್ಲಿ  ಬರೆದ. ಒಮ್ಮೆ ಜನಪ್ರಿಯತೆ ಬಂದ ಮೇಲೆ ಆ ಎಲ್ಲ ಬೇರೆ ಬೇರೆ ಹೆಸರುಗಳಲ್ಲಿದ್ದ ಕಾದಂಬರಿಗಳು ಅವನ ಮೂಲ ಹೆಸರಾದ ಜೇಮ್ಸ್ ಹ್ಯಾಡ್ಲಿ ಛೇಸ್ ಹೆಸರಿನಲ್ಲೇ ಮರುಮುದ್ರಣ ಕಂಡವು. ದೇಶದ್ರೋಹ, ಕೊಲೆ, ಅನೈತಿಕ ಸಂಬಂಧಗಳು, ಬ್ಯಾಂಕ್ ದರೋಡೆ, ವಿಶಿಷ್ಟವಾದ ಅಂಚೆಚೀಟಿ ದರೋಡೆ ಹೀಗೆ ಅನೇಕ ಥೀಮ್‍ಗಳು ಅವನ ಕಾದಂಬರಿಗಳು. ಪ್ರಪ್ರಥಮ ಬಾರಿಗೆ ನನಗೆ ಇವನ ಪಾತ್ರಗಳು ಎಷ್ಟೇ ದುಷ್ಟರಾಗಿದ್ದರೂ, ಅವರೊಂದಿಗೆ ನಮ್ಮನ್ನು ನಾವು ಐಡಿಂಟಿಫೈ ಮಾಡಿಕೊಳ್ಳುವಂತಹ ಒಂದು ವಿಶಿಷ್ಟ ರೀತಿಯಲ್ಲಿ ಬರೆದ. ಪ್ರಥಮ...

ಯತಿ ಸ್ವಂತೀ -177

26-06-2018 ನನ್ನ ಅಂಕಲ್ ಅವರಿಗೆ ನಾಸಿಕ್‍ಗೆ ವರ್ಗವಾಗಿಬಿಟ್ಟಿತ್ತು. ಅವರನ್ನು ಬಿಟ್ಟರೆ ನಮಗೆ ಬೆಂಗಳೂರಿನಲ್ಲಿ ಬೇರೆಲ್ಲಾದರೂ ಇದ್ದು ಓದುವಷ್ಟು ಆರ್ಥಿಕ ಶಕ್ತಿ ಇರಲಿಲ್ಲ. ವಿಧಿಯಿಲ್ಲದೇ ಮತ್ತೆ ಡಿ.ಟಿ.ಇ. ಆಫೀಸಿಗೆ ಹೋಗಿ ಮೈಸೂರು ನ್ಯಾಷನಲ್ ಇನ್ಸ್‍ಟಿಟ್ಯೂಟ್ ಆಫ್ ಇಂಜಿನಿಯರಿಂಗ್‍ಗೆ ವರ್ಗಕ್ಕೆ ವಿನಂತಿ ಪತ್ರ ನೀಡಿದೆ. ಆದರೆ ಏನೂ ಉತ್ತರ ಬರಲಿಲ್ಲ. ಕಾಲೇಜಿಗೆ ಹೋಗುವ ದಿನ ಹತ್ತಿರ ಬರುತ್ತಿತ್ತು. ಆಗ ಒಬ್ಬರು ಮನೆಗೆ ಬಂದರು. ಅವರ ಮಗನಿಗೆ ಎನ್‍ಐಈ ಕಾಲೇಜಿನಲ್ಲಿ ಸೀಟು ಸಿಕ್ಕಿತ್ತಂತೆ. ಅವರಿದ್ದುದು ಬೆಂಗಳೂರು ಜಯನಗರದಲ್ಲಿ. ನನ್ನ ಸೀಟನ್ನು ಅವರ ಮಗನಿಗೆ ಕೊಡಿಸಿ, ನನಗೆ ಅವನ ಸೀಟು ಕೊಡಿಸಲು ಪ್ರಯತ್ನಿಸಿದರು. ಅವನೂ ನನ್ನೊಂದಿಗೆ ಜಯನಗರದ ನ್ಯಾಷನಲ್ ಕಾಲೇಜಿನಲ್ಲಿ ಓದಿದ್ದ. ಅವನ ತಂದೆ ಸುಮಾರು ಸಲ ಬಂದರು. ಏನೇನೋ ಅಪ್ಲಿಕೇಷನ್‍ಗಳನ್ನು ನಾವಿಬ್ಬರೂ ಸಹಿ ಮಾಡಿದೆವು. ಉಹೂಂ. ಪ್ರಯೋಜನವಾಗಲಿಲ್ಲ. ಯುವಿಸಿಇ ಕಾಲೇಜಿಗೆ ಹೋಗುವ ದಿನ ಬಂದೇ ಬಿಟ್ಟಿತು. ಖುಷಿಯಾಗಿ ಹೊರಟೆ. ಏಕೆಂದರೆ ಡಿಗ್ರೀ ಕಾಲೇಜು. ಮೇಲಾಗಿ ಪ್ರೊಫೆಷನಲ್ ಡಿಗ್ರೀ.  ಮನದ ಮೂಲೆಯಲ್ಲಿ ಅಳುಕು. ಇದೇನು? ಇಲ್ಲಿ ನಾನು ಖಂಡಿತ ಐದು ವರ್ಷ ಓದಲಾರೆ. ಆದರೆ ಕಾಲೇಜು ಶುರುವಾಗಿರುವುದರಿಂದ ಹೋಗಲೇಬೇಕಾದ ಪರಿಸ್ಥಿತಿ. ಅಲಸೂರು ಗೇಟ್ ಪೊಲೀಸ್ ಸ್ಟೇಷನ್‍ನ ಬಳಿ ಇಳಿದು ನಡೆದೆ. ನೃಪತುಂಗ ರಸ್ತೆಯಲ್ಲಿ ಹೋಗುತ್ತಿದ್ದಂತೆ ಹುಚ್ಚು ಮಳೆ. ಸಂಪೂರ್ಣವಾಗಿ ಒದ್ದೆಯಾದೆ.  ಹಾಗೆ...

ಯತಿ ಸ್ವಂತೀ -176

25-06-2018 ನಾನೋದಿದ ಕೆಲವು ಇಂಗ್ಲಿಷ್ ಲೇಖಕರ ಬಗ್ಗೆ ಒಂದಿಷ್ಟು. ನನ್ನ ವಯಸ್ಸಾಗ ಹದಿನೈದರಿಂದ ಹದಿನೇಳು. ಎಲ್ಲವೂ ಒಂದು ರೀತಿ ಅಯೋಮಯ. ಪುಸ್ತಕಗಳಲ್ಲಿನ ಪ್ರೇಮದೃಶ್ಯಗಳ ಬಗ್ಗೆ ಏನೋ ಒಂದು ರೀತಿ ಗಲಿಬಿಲಿ. ಮಕ್ಕಳ ಪುಸ್ತಕಗಳನ್ನು ಓದಿದಾಗ ಖುಷಿ. ಎನಿಡ್ ಬ್ಲೈಟನ್ ಮಕ್ಕಳಿಗಾಗಿ ಬರೆದಷ್ಟು ಬಹುಶಃ ಬೇರಾರೂ ಬರೆದಿರಲಾರರು. ಮಿಸ್ಟರಿ (ಎರಡು ತರಹದ್ದು), ಅಡ್ವೆಂಚರ್, ಫೇಮಸ್ ಫೈವ್, ಸೀಕ್ರೆಟ್ ಸೆವೆನ್, ನಾಡ್ಡಿ ಸೀರೀಸ್, ಮ್ಯಾಲೊರಿ ಟವರ್ಸ್, ಸೈಂಟ್ ಕ್ಲೇರ್ಸ್... ಎಲ್ಲವನ್ನೂ ಓದಿದ್ದೇನೆ. ಆಕೆಯ ಮಿಸ್ಟರಿಗಳಲ್ಲಿ ಫೈವ್ ಫೈಂಡ್ ಔಟರ್ಸ್ ಆ್ಯಂಡ್ ಡಾಗ್ ಬಹಳ ಮಜಾ ಕೊಡುತ್ತದೆ. ಪ್ರತಿ ಪುಸ್ತಕವನ್ನೂ ಕನಿಷ್ಠಪಕ್ಷ ಆಗಿನಿಂದ ಇತ್ತೀಚಿನವರೆಗೆ ಹತ್ತು ಸಲವಾದರೂ ಓದಿದ್ದೇನೆ. ಫ್ಯಾಟ್ಟಿ, ಪಿಪ್, ಲ್ಯಾರಿ, ಬೆತ್ ಮತ್ತು ಡೈಸಿ ಮತ್ತು ನಾಯಿ ಬಸ್ಟರ್ ಪೀಟರ್ಸ್‍ವುಡ್ ಎನ್ನುವ ಹಳ್ಳಿಯಲ್ಲಿರುತ್ತಾರೆ. ಅಲ್ಲಿ ಅನೇಕ ಚಿಕ್ಕ ಪುಟ್ಟದಿಂದ ಹಿಡಿದು ದೊಡ್ಡದರವರೆಗೂ ಅಪರಾಧಗಳು ನಡೆಯುತ್ತವೆ. ಅಂತಹ ಹದಿನೈದು ಇವು. ಅವರ ಊರಿನ ಒಬ್ಬನೇ ಪೊಲೀಸ್ ಮಿಸ್ಟರ್ ಗೂನ್. ಅವನಿಗೆ ಈ ಹುಡುಗರನ್ನು ಕಂಡರಾಗದು. ಏಕೆಂದರೆ ಇನ್ಸ್‍ಪೆಕ್ಟರ್ (ನಂತರ ಸೂಪರಿಂಟೆಂಡೆಂಟ್ ಆಗುವ) ಜೆಂಕಿನ್ಸ್‍ಗೆ ಈ ಮಕ್ಕಳೆಂದರೆ ಪ್ರಾಣ. ಏಕೆಂದರೆ ಅವರು ಬಹಳ ಜಾಣರು. ಅದರಲ್ಲೂ ಫ್ಯಾಟ್ಟಿ ವೇಷ ಬದಲಾಯಿಸಿಕೊಂಡು ನಡೆಸುವ ಕರಾಮತ್ತುಗಳು ಬಹಳ ಚೆನ್ನ. ಹದಿನೈದು ಪುಸ್ತಕಗಳೂ ಒಂದು ಆರ್ಡರ್‍ನಲ್ಲಿ ಓ...

ಯತಿ ಸ್ವಂತೀ -175

24-06-2018 ನನ್ನ ಗೆಳೆಯ ನರಸಿಂಹ ರಾಘವನ್ ಅವರ ಜೊತೆ ನಿಂತಿದ್ದ ಎಂ.ಎಲ್.ಎ. ನನಗೆ 78% ಬಂದ ವಿಷಯ, ಮೊದಲ ದಿನ ಇಂಟರ್‍ವ್ಯೂ ಆದ ವಿಷಯ ತಿಳಿದುಕೊಂಡರು. ಅವರೇ ಮೊದಲು ಡಿ.ಟಿ.ಇ.ಯ ವಿದ್ಯಾರ್ಥಿ ಆಯ್ಕೆ ಸಮಿತಿಯ ಮುಂದೆ ಹೋದರು.  ಅವರ ಭೇಟಿಯನ್ನು ನಾನೇ ನೋಡಿದಂತೆ ಬರೆಯುತ್ತೇನೆ. “ಬನ್ನಿ” “ನಾನು ...ಎಂ.ಎಲ್.ಎ. ನಮ್ಮ ಹುಡುಗ ಇವನು. ಇವನಿಗೊಂದು ಸೀಟು ಕೊಡಿ” “ಎಷ್ಟು ಪರ್ಸೆಂಟೇಜು?” “ನಲವತ್ತೊಂಬತ್ತು” “ನಿಮ್ಮ ಹುಡುಗನಿಗೆ ಬ್ರಹ್ಮ ಬಂದರೂ ಕೊಡಿಸಕ್ಕಾಗಲ್ಲ” (ಎಂತಹ ಧಿಮಾಕಿನ ಜನ ಅನ್ನಿಸಿತು) “ಅದು ಏಕೆ ಸಾಧ್ಯ ಇಲ್ಲ? ನೀವು 78% ಬಂದವನಿಗೇ ಕೊಟ್ಟಿಲ್ಲ ಸೀಟು. ಈಗಾಗ್ಲೇ ಮೂರು ಲಿಸ್ಟು ಬಂದಾಯ್ತು” “ಅದು ಸಾಧ್ಯವೇ ಇಲ್ಲ. ನಾವೇಕೆ ಬಿಡುತ್ತೇವೆ? ಇದನ್ನು ನಾವು ನಂಬುವುದಿಲ್ಲ” “ಹೊರಗಡೆ ಇದ್ದಾನೆ ಆ ಹುಡುಗ ಕರೆಯಲಾ?” “ಕರೆಯಿರಿ” ಸರಿ, ನಾನು, ನನ್ನ ಸೋದರತ್ತೆ ಒಳಗೆ ಹೋದೆವು. ನನ್ನ ಮಾರ್ಕ್ಸ್ ಕಾರ್ಡ್, ಇಂಟರ್ವ್ಯೂ ಕಾರ್ಡ್ ನೋಡಿ ಬೆಚ್ಚಿದರು. ಇದು ಹೇಗೆ ಸಾಧ್ಯ ಎಂದು ಮಾತಾಡಿಕೊಂಡರು. ನಂತರ, “ನಿನಗೆ ಮುಂದಿನ ಲಿಸ್ಟ್‌ನಲ್ಲಿ ನೀನು ಕೇಳಿದ ಕಾಲೇಜಿನಲ್ಲಿ ಸೀಟ್ ಸಿಗುತ್ತದೆ” ಎಂದರು ಬಲ್ಲಾಳ್. ನನಗೆ ಖುಷಿ ಮತ್ತು ದುಃಖ. ನನಗೆ ಸಿಕ್ಕಿದ್ದಕ್ಕೆ ಖುಷಿ ಆದಂತೆ ನರಸಿಂಹನಿಗೆ ಸಿಗಲಿಲ್ಲವಲ್ಲಾ ಎಂಬ ದುಃಖ. ಅವನು ನಂತರ ಬಿ.ಎಸ್.ಸಿ. ಮಾಡಿ ಪೋಸ್ಟಲ್ ಡಿಪಾರ್ಟ್‍ಮೆಂಟ್ ಸೇರಿ, ನಂತರ ಎಲ್‍ಐಸಿ ಸೇರಿ ‘ಕರೋಡ್‍ಪತಿ’ ಆಗಿ ಒಂದು ವರ್ಷದ ಹಿಂದ...

ಯತಿ ಸ್ವಂತೀ -174

23-06-2018 ನನ್ನ ಸಹಪಾಠಿಗಳು ಒಬ್ಬೊಬ್ಬರೇ ‘ನನಗೆ ಇಂಜಿನಿಯರಿಂಗ್ ಸೀಟು ಸಿಕ್ಕಿತು’ ಅನ್ನೋಕ್ಕೆ ಶುರು ಮಾಡಿದರು. ಎರಡನೇ ಲಿಸ್ಟ್ ಆಯಿತು, ಮೂರನೇ ಲಿಸ್ಟೂ ಬಂತು. ಮೊದಲ ದಿನ ಇಂಟರ್‍ವ್ಯೂ ಆಗಿದ್ದ ನನಗೆ ಸೀಟು ಇನ್ನೂ ಸಿಕ್ಕಿರಲಿಲ್ಲ. ನನ್ನ ಸೋದರತ್ತೆ ಮಹಾರಾಣಿ ಕಾಲೇಜಿನಲ್ಲಿ ಉಪಾಧ್ಯಾಯಿನಿ ಆಗಿದ್ದರಲ್ಲ.. ಅವರು ತಮ್ಮ ಕಾಲೇಜಿನಿಂದ ಆಚೆ ಬಂದು ಪ್ಯಾಲೇಸ್ ರೋಡ್ ದಾಟಿದರೆ ಡಿಟಿಇ ಆಫೀಸ್ ಇತ್ತು. ಆಗ ನಿರ್ದೇಶಕರಾಗಿದ್ದವರು ಬಲ್ಲಾಳ್ ಎಂದು ನೆನಪು. ಒಮ್ಮೆ ಅಪಾಯಿಂಟ್‍ಮೆಂಟ್ ಸಿಕ್ಕಿತು ಬಲ್ಲಾಳ್‍ರೊಂದಿಗೆ. ಫೋನ್ ಮಾಡಿ ನನ್ನನ್ನು ಬರಹೇಳಿದರು. ಹ್ಞಾಂ! ಆಗ ಮನೆಯಲ್ಲಿ ನಾಲ್ಕು ಅಂಕಿಗಳ ಫೋನ್ ಇತ್ತು. ಹಳೆಯ ಸಿನಿಮಾಗಳನ್ನು ನೋಡುವಾಗ ಅವರು ಎಷ್ಟು ಸಲ ಡಯಲ್ ಅನ್ನು ತಿರುಗಿಸುತ್ತಾರೆ ಎಂದು ನೋಡುವುದು ನನ್ನ ಚಾಳಿ! ಅಲ್ಲಿಗೆ ಹೋದರೆ ಅತ್ತೆ ಕಾಯುತ್ತಿದ್ದರು.  ಅಲ್ಲಿದ್ದ ನನ್ನ ಗೆಳೆಯ ನರಸಿಂಹ ರಾಘವನ್. 1968ರಿಂದ ನನ್ನ ಗೆಳೆಯ. ಪ್ರೌಢಶಾಲೆಯಲ್ಲಿ ಒಟ್ಟಿಗೆ ಓದಿದೆವು. ಸುಧಾ, ಚಂದಮಾಮ, ಮಯೂರ ಓದಲು ನಮ್ಮಿಬ್ಬರಿಗೆ ಪೈಪೋಟಿ ಇತ್ತು. ಧಾರಾವಾಹಿ ಕಾದಂಬರಿಗಳ ಬಗ್ಗೆ ಕೂಡ ಚರ್ಚಿಸುತ್ತಿದ್ದೆವು. ನಮ್ಮ ಹೈಸ್ಕೂಲಿನ ವಯಸ್ಸಿಗೆ ಬಿ. ಪುಟ್ಟಸ್ವಾಮಯ್ಯನವರ ಹೂವುಕಾವು ಬಗೆಗೆ ಮಾತಾಡುತ್ತಿದ್ದೆವು. ಅದರಲ್ಲಿ ಪ್ರಸನ್ನ ಎನ್ನುವ (ಹೆಸರು ಸರಿಯಾ? ಅದನ್ನು ಓದಿದ ಇನ್ನಾರಾದರೂ ಹೇಳಬೇಕು) ಹುಡುಗ ಚಲನಚಿತ್ರ ನಿರ್ದೇಶಕನಾಗುತ್ತಾನೆ....

ಯತಿ ಸ್ವಂತೀ -173

22-06-2018 ಪಿ.ಯು.ಸಿ. ಎರಡನೇ ವರ್ಷದ ಪರೀಕ್ಷೆ ಮುಗಿಯಿತು. ಹೆಚ್ಚು ನೆನಪಿಲ್ಲ ಆಗಿನ ಅನುಭವಗಳು. ಹ್ಞಾಂ... ಓದಿದ ಪುಸ್ತಕಗಳ ನೆನಪುಂಟು ಅಷ್ಟೇ. ಅಂತೂ ಪರೀಕ್ಷೆ ಮುಗಿಸಿ ಹೊರಬಂದಿದ್ದೆ. ಮೈಸೂರಿನಲ್ಲಿದ್ದಾಗ ರಜೆ ಬಂದೊಡನೆ ಬೆಂಗಳೂರಿಗೆ ಹೋಗುವ ತಹತಹವಿತ್ತು. ಈಗ ಮೈಸೂರಿಗೆ, ನಮ್ಮಮ್ಮನ ಬಳಿಗೆ ಹೋಗುವ ಕಾತರವಿತ್ತು. ಇಂಜಿನಿಯರಿಂಗ್ ಕಾಲೇಜಿಗೆ ಸೇರು ಎಂದು ಅಪ್ಪಣೆ ಆಗಿತ್ತಲ್ಲ! ಅದಕ್ಕೆ ಮತ್ತ ಬೇಗನೆ ಬೆಂಗಳೂರಿಗೆ ಬಂದು ಅರ್ಜಿಪತ್ರ ಪಡೆಯಬೇಕಿತ್ತು. ಹೊಸದಾಗಿ ಡೈರೆಕ್ಟರ್ ಆಫ್ ಟೆಕ್ನಿಕಲ್ ಎಡುಕೇಷನ್ ಬಿಲ್ಡಿಂಗ್ ಮಹಾರಾಣೀಸ್ ಕಾಲೇಜ್ ಎದುರಿಗೆ ಕಟ್ಟಲ್ಪಟ್ಟಿತ್ತು. 1972ರ ವರೆಗೆ ಕೇಳುವವರಿಲ್ಲದ ಇಂಜಿನಿಯರಿಂಗ್ ಕೋರ್ಸ್‍ಗೆ 1973ರಿಂದ ಸಂದಣಿ ಹೆಚ್ಚಿತ್ತು. ನಾನು ಸೇರಿದ್ದು 1974ರಲ್ಲಿ. ಅಷ್ಟು ಹೊತ್ತಿಗೆ ಸಾಕಷ್ಟು ರಷ್ ಆಗಿತ್ತು. ಮೈಸೂರಿಗೆ ಬಂದೆ. ನಮ್ಮ ಅಮ್ಮ, ‘ರಾಜು, ನೀನೇನೂ ಹೆಚ್ಚು ಬುದ್ಧಿವಂತನಲ್ಲ. ಓದುವುದೂ ಇಲ್ಲ, ಒಳ್ಳೆಯ ಮಾರ್ಕ್ಸ್ ಕೂಡ ತಗೊಳ್ಳೋದಿಲ್ಲ. ಟೈಪಿಂಗ್ ಕಲಿತ್ಕೋ. ಕಡೇ ಪಕ್ಷ ಎಲ್ಲಾದರೂ ಟೈಪಿಸ್ಟ್ ಕೆಲಸಕ್ಕೆ ಸೇರಿಕೊಳ್ಳಬಹುದು’ ಎಂದು ನನ್ನನ್ನು ಟೈಪಿಂಗ್ ಸೇರಲು ಓಡಿಸಿದರು. ಹಾಗೆ ನಾನು ನ್ಯಾಷನಲ್ ಇನ್ಸ್‍ಟಿಟ್ಯೂಟ್ ಆಫ್ ಕಾಮರ್ಸ್ ಸೇರಿಕೊಂಡೆ. ನಮ್ಮ ಮನೆಯಿಂದ ರೈಲ್ವೇ ನಿಲ್ದಾಣ ದಾಟಿ, ಇರ್ವಿನ್ ರಸ್ತೆ, ಧನ್ವಂತ್ರಿ ರಸ್ತೆಯಲ್ಲಿ ನಡೆದು, ಸಯ್ಯಾಜಿರಾವ್ ರೋಡಿನಲ್ಲಿ ಚಾಮುಂಡೇಶ್ವರಿ ಟಾಕೀಸ್ ಮುಂದೆ ಹೋಗಿ...

ಯತಿ ಸ್ವಂತೀ -172

21-06-2018 ಒಂದು ನೆನಪು.  ವೇದಿಕೆಯ ಮೇಲೆ ನಾಟಕ, ನೃತ್ಯ ಮಾಡಿದ ಸಂಗತಿ.  ಒಮ್ಮೆ ನಮ್ಮ ಕಮ್ಯೂನಿಟಿಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಒಂದು ನೇಪಾಳಿ ನೃತ್ಯ ಮಾಡಲು ಕೆಲವರು ಯೋಜಿಸಿದರು. ಅದರಲ್ಲಿ ಒಂದು ಗಂಡು ಹೆಣ್ಣು ಜೋಡಿಯ ಡ್ಯಾನ್ಸ್‌ನಲ್ಲಿ ನನ್ನ ಜೊತೆಗೆ ಒಬ್ಬರು ಡಾಕ್ಟರಮ್ಮ! ನಾನಾಗ ಹತ್ತನೇ ತರಗತಿಯಲ್ಲಿ ಓದುತ್ತಿದ್ದೆ. ದೈಶೈಲಾ ತಸ್ವೀರ್... ಅಂತ ಆ ಹಾಡಿನ ಆರಂಭ. ಅಭ್ಯಾಸ ಮಾಡುವಾಗ ನನಗೆ ಸಿಕ್ಕಾಪಟ್ಟೆ ನಾಚಿಕೆ. ಆ ಡಾಕ್ಟರ್ ಸೊಂಟದ ಮೇಲೆ ಕೈಯಿಟ್ಟು ಕುಣಿಯಬೇಕಿತ್ತು! ಹೇ ನನ್ನ ಗಂಡ ಇಲ್ಲಿ ಕೂತಿದ್ದಾನೇಂತ ಸಂಕೋಚ ಬೇಡ. ನಾವು ಕೇವಲ ಪಾತ್ರಗಳು ಎಂದು ರೇಗಿಸಿದರು ಆಕೆ.  ಹತ್ತನೆ ತರಗತಿಯಲ್ಲಿಯೇ ದಾಶರಥಿ ದೀಕ್ಷಿತ್ ಅವರ ಅಳಿಯ ದೇವರು ನಾಟಕದಲ್ಲಿ ನಾನು ಆ ಮೂವರು ಅಳಿಯಂದಿರ ಭಾವಮೈದ. ಪ್ರಹ್ಲಾದನ ವೇಷ ನನ್ನದು. ಮೊದಲ ಭಾವ ಹಿರಣ್ಯ ಕಶಿಪು. ಎಲ್ಲರ ಡಯಲಾಗ್ ನನಗೆ ಕಂಠಪಾಠ ಆಗಿದ್ದರಿಂದ ಎಲ್ಲರಿಗೂ ನಾನೇ ಪ್ರಾಂಪ್ಟರ್ ಆಗಿದ್ದೆ.  ಕಂ ಸೆಪ್ಟೆಂಬರ್ ಟೈಟಲ್ ಸಾಂಗ್ ಸೂಪರ್. ಅದರ ನಕಲು ಒಂದು ಹಿಂದೀ ಹಾಡಿಗೆ ಮಾಧುರಿ ದೀಕ್ಷಿತ್ ನೃತ್ಯ ಮಾಡಿದ್ದಾಳೆ. ನಾನು, ನನ್ನ ತಂಗಿ ಇದಕ್ಕೆ ಟ್ವಿಸ್ಟ್ ಡ್ಯಾನ್ಸ್ ಮಾಡಿದ್ದೆವು. ಗೀತ್‌ಮಾಲಾದ ಸಿಗ್ನೇಚರ್ ಟ್ಯೂನ್ ಒಂದು ಸ್ಪ್ಯಾನಿಷ್ ಜಿಪ್ಸಿ ಹಾಡು. ಅದರಲ್ಲಿ ನಾನು ಫ್ಯಾಂಟಮ್ ವೇಷಧಾರಿ. ನನ್ನ ಮೇಲೆತ್ತಿದ ಬಲಗೈಯಲ್ಲಿ ನಾಲ್ಕು ಉದ್ದದ ರಿಬ್ಬನ್‌ಗಳು. ಅವನ್ನು ಹಿಡಿದು ನನ್ನ...

ಯತಿ ಸ್ವಂತೀ -171

20-06-2018 ಎರಡನೇ ಪಿಯುಸಿ ಸಮಯದಲ್ಲಿ ಆರ್ ಎ ಫಣಿಶಾಯಿ ಪ್ರಿನ್ಸಿಪಾಲ್ ಆದರು. ಅವರು ಶ್ರೀ ರಾಳ್ಳಪಲ್ಲಿ ಅನಂತಕೃಷ್ಣ ಶರ್ಮ ಅವರ ಪುತ್ರ. ಆರ್ ಎ ಪಿ ಅವರು ವೀಣಾ ವಿದ್ವಾನ್ ಅಂತ ಕೇಳಿದ್ದೆ. ಎರಡನೇ ವರ್ಷ ಮತ್ತೆ ಮ್ಯೂಸಿಕ್ ಸ್ಪರ್ಧೆ ಇತ್ತು. ಫೈನಲ್ ಯಿಯರ್ ನಿರುಪಮಾ ಅವರು ಶರ್ಮೀಲೀ ಚಿತ್ರದ ಮೇಘಾ ಛಾಯೇ ಆಧೀರಾತ್ ಬೈರನ್ ಬನ್ ಗಯೀ ನಿಂದಿಯಾ ಹಾಡಿ ಬಹುಮಾನ ಗೆದ್ದ ನೆನಪು.. ಪರೀಕ್ಷೆ ಬಂತು. ಸೀರಿಯಸ್ ಆಗಿ ಓದಿದೆ. ಕನ್ನಡ ಪರೀಕ್ಷೆಯಲ್ಲಿ ವ್ಯಾಕರಣ ಇತ್ತು. ಚೆನ್ನಾಗಿ ಅಭ್ಯಾಸ ಮಾಡಿದೆ. ಜೇಮ್ಸ್ ಹ್ಯಾಡ್ಲಿ ಛೇಸ್ ಇಡೀ ತೊಂಭತ್ತು ಪುಸ್ತಕಗಳನ್ನು ಓದಿ ಮುಗಿಸಿದೆ. ಅಬ್ಬಾ ಎಂತಹ ವೈವಿಧ್ಯ ಇದೆ ಈತನ ಕಾದಂಬರಿಗಳಲ್ಲಿ!  ಒಂದು ಉದಾಹರಣೆ. ವಿಕ್ ಡರ್ಮಾಟ್ ಒಬ್ಬ ಯಶಸ್ವೀ ಲೇಖಕ. ಒಂದು ಉಜ್ವಲ ಪ್ರಾತಃಕಾಲ ಊರಾಚೆಯ ಅವನ ಮನೆಯಲ್ಲಿ ಬೆಳಗ್ಗೆ ಏಳುತ್ತಾನೆ. ಹೆಂಡತಿ ಮಗಳು ತಂಗಿ ಎಲ್ಲ ನಿದ್ದೆ ಮಾಡುತ್ತಿರುತ್ತಾರೆ.  ಅವನ ನಾಯಿ ಕಾಣೆಯಾಗಿರುತ್ತದೆ. ಟೆಲಿಫೋನ್ ವೈರ್ ಕತ್ತರಿಸಲ್ಪಟ್ಟಿರುತ್ತದೆ. ಎಲ್ಲೋ ಒಂದೆಡೆ ಶೂ ಒದ್ದೆ ಆದಂತಾಗಿ ಕಾಲಿನ ಕಡೆಗೆ ನೋಡುತ್ತಾನೆ. ಬೆಚ್ಚಿ ಬೀಳುವಂತಾಗುತ್ತದೆ ಅವನಿಗೆ. ಅವನು ತನಗೇ ತಿಳಿಯದೇ ಒಂದು ರಕ್ತದ ಮಡುವಿನಲ್ಲಿ ಕಾಲಿಟ್ಟಿರುತ್ತಾನೆ.  ಇಷ್ಟು ಹೇಳಿದ ಛೇಸ್... ಕಥೆಯ ಹಿನ್ನೆಲೆಗೆ ಹೋಗುತ್ತಾನೆ. ಇಷ್ಟು ಸಾಕಲ್ಲವೇ ಓದುಗರನ್ನು ಕಥೆಯೊಳಗೆ ಸೆಳೆದು ಮುಳುಗಿಸಲು...  ಹೆಂಡತಿ ಅವಳ ತಾಯಿಗೆ ಆರ...

ಯತಿ ಸ್ವಂತೀ -170

19-06-2018 ನಾನು ಮೊದಲ ಪಿಯುಸಿ ಓದುತ್ತಿದ್ದ ಸಮಯದಲ್ಲಿ ಸೆಪ್ಟೆಂಬರ್ ತಿಂಗಳಿನಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ಮುಷ್ಕರ ಹೂಡಿತು. ವಿನೋದವೆಂದರೆ ಪ್ರತಿ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಮುಷ್ಕರ ಮಾಡುವುದು ಕಾಮನ್ ಅಂತೆ ಅಂತ ತಿಳೀತು. 'ಬ್ಲ್ಯಾಕ್ ಸೆಪ್ಟೆಂಬರ್' ಅಂತಲೇ ಹೆಸರಾಯ್ತಂತೆ ಸೆಪ್ಟೆಂಬರ್ ತಿಂಗಳಿಗೆ! ನಮಗಂತೂ ಮಜವೋ ಮಜ. ಮೊದಲ ಪಿಯುಸಿ ಪರೀಕ್ಷೆ ಮುಗಿಸಿ ಮೈಸೂರಿಗೆ ಅಯ್ಯ ಅಮ್ಮನ ಬಳಿ ಬಂದೆ. ಆಗ ಸೀಮೆಎಣ್ಣೆ ಅಕ್ಯೂಟ್ ಶಾರ್ಟೇಜು. ಪ್ರತಿ ದಿನವೂ ಒಂದು ಆಯತಾಕಾರದ ಡಬ್ಬ ಹಿಡಿದುಕೊಂಡು ಎಲ್ಲಿ ಸೀಮೆಎಣ್ಣೆ ಕೊಡುವರೋ ಅಲ್ಲಿಗೆ ದೌಡಾಯಿಸುತ್ತಿದ್ದೆವು. ರೇಷನ್ ಇತ್ತು ಸೀಮೆಎಣ್ಣೆಗೆ. ದಿನಕ್ಕೆ ಆರು ಲೀಟರ್. ನಾಲ್ಕೂವರೆ ಲೀಟರ್ ಡಬ್ಬದಲ್ಲಿ ಆರು ಲೀಟರ್ ಎಣ್ಣೆ ತುಂಬಿಕೊಡುತ್ತಿದ್ದ. ಬಾಯಿ ಎಲ್ಲಾ ಮುಚ್ಚಿಕೊಂಡು ದುಡ್ಡು ತೆತ್ತು ಸೀಮೆಎಣ್ಣೆ ತರುತ್ತಿದ್ದೆವು. ಮನೆಯ ಒಲೆ ಉರಿಯಬೇಕಿತ್ತಲ್ಲ! ಆ ಸೀಮೆಎಣ್ಣೆ ಗಾಡಿಯವನೋ... ಕ್ವಾರ್ಟರ್ಸ್ ಬಳಿ ಅಂತ ಹೇಳಿ ಅಲ್ಲಿಗೆ ಹೋದಾಗ ಯಾದವಗಿರಿ ಬಳಿ ಕೊಡುವ ಎಂದು ತಿಳಿಯುತ್ತಿತ್ತು. ಅಲ್ಲಿಗೆ ಓಡುತ್ತಿದ್ದೆವು. ಅಬ್ಬಾ... ಬಹಳ ಕಷ್ಟದ ಸಮಯವದು. ಎರಡನೇ ಪಿಯುಸಿ ಆರಂಭ ಆಯಿತು. ಹಿಂದಿನ ವರ್ಷ ಎರಡನೇ ಪಿಯುಸಿ ಮಧ್ಯಾಹ್ನ ಒಂದೂ ಕಾಲಿನಿಂದ ಐದೂಕಾಲಿನ ವರೆಗಿತ್ತು. ನಾವು ಎರಡನೇ ಪಿಯುಸಿಗೆ ಬಂದಾಗ ಮತ್ತೆ ನಮಗೆ ಬೆಳಗ್ಗೆ ಎಂಟೂವರೆ ಯಿಂದ ಮಧ್ಯಾಹ್ನ ಹನ್ನೆರಡೂ ಮುಕ್ಕಾಲು ಎಂದಾಯಿತು. ಅಬ್ಬಾ.....

ಯತಿ ಸ್ವಂತೀ -169

18-06-2018  ನನ್ನ ಅಮ್ಮನ 'ಅಶ್ವಹೃದಯ' ಪರಿಚಯ!  ಮೈಸೂರು ಟಾಂಗ ಬಹಳ ಜನಪ್ರಿಯ ಒಂದು ಕಾಲದಲ್ಲಿ. ನಮಗೆ ಅದರಲ್ಲಿ ಹೋಗೋದೇ ಒಂದು ಖುಷಿ.  ನನ್ನ ತಂದೆ ಮೈಸೂರು ದಕ್ಷಿಣದ ಅಶೋಕಪುರಂನಲ್ಲಿ ರೈಲ್ವೆ ವರ್ಕ್‌ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದರು. ನಾನು ಎನ್ ಐ ಈ ಸೇರಿದಾಗ 1974ರಲ್ಲಿ ಕೆಲವು ತಿಂಗಳುಗಳ ಕಾಲ ಅವರೊಂದಿಗೆ ರೈಲುಗಾಡಿಯಲ್ಲಿ ಹೋಗಿ ಅಶೋಕಪುರಂನಲ್ಲಿ ಇಳಿದು ಕಾಲೇಜಿಗೆ ಸುಮಾರು ಒಂದು ಕಿಲೋಮೀಟರ್ ನಡೆಯುತ್ತಿದ್ದೆ. ಅಪ್ಪ (ನಾವು ನಮ್ಮ ತಂದೆಯವರನ್ನು ಅಯ್ಯ ಎಂದು ಕರೆಯುತ್ತಿದ್ದೆವು) ಬೆಳಗ್ಗೆ ಕೆಲಸಕ್ಕೆ ಹೋದರೆ ಸಂಜೆ ಐದೂವರೆಗೆ ಹಿಂದಿರುಗುತ್ತಿದ್ದರು. ಸ್ವಾಭಾವಿಕವಾಗಿ ಅಮ್ಮ ಅಡುಗೆ ಮಾಡಿ ಮುಗಿಸಿ ದೇವರಾಜ ಮಾರುಕಟ್ಟೆಗೆ ಅಕ್ಕಪಕ್ಕದ ಮನೆಯ ಅವರ ಗೆಳತಿಯರೊಂದಿಗೆ ಹೋಗುತ್ತಿದ್ದರು. ನಾವು ಚಿಕ್ಕವರಿದ್ದಾಗ ನಮ್ಮನ್ನು ನಮ್ಮ ಮನೆಗೆ ಅಂಟಿಕೊಂಡಿದ್ದ ಕ್ವಾರ್ಟ್ರಸ್ ಮನೆಯಲ್ಲಿದ್ದ ಬೂಬಮ್ಮನ ಮನೆಯಲ್ಲಿ ಬಿಟ್ಟು ಹೋಗುತ್ತಿದ್ದರು.  ಒಮ್ಮೆ ನಾನು ಅಮ್ಮನ ಜೊತೆ ಹೋದೆ. ನನಗಾಗ ಹತ್ತು ವರ್ಷಗಳಿರಬಹುದು. ದೇವರಾಜ ಮಾರುಕಟ್ಟೆಯಲ್ಲಿ ತರಕಾರಿ ಇತ್ಯಾದಿ ಕೊಂಡು ಅದರ ದಕ್ಷಿಣದ ಕೊನೆಗಿದ್ದ ಚಿಕ್ಕ ಗಡಿಯಾರದ ಬಳಿ ಬಂದೆವು. ಅಲ್ಲಿ ಸಾಲಾಗಿ ಟಾಂಗಾಗಳು ನಿಂತಿದ್ದವು. ಮಧ್ಯಾಹ್ನ ಒಂದೂವರೆ ಇರಬಹುದು. ಅಮ್ಮ ಅಲ್ಲಿ ಮೊದಲು ಕಂಡ ಟಾಂಗ ಹತ್ತಲಿಲ್ಲ. ಎರಡು ಮೂರು ಜನರನ್ನು ವಿಚಾರಿಸಿದರು. ಬಾಡಿಗೆ ಅಲ್ಲ ಆ ಟಾಂಗ ಸಾಹೇಬನ ಮನೆ ಎಲ್...

ಯತಿ ಸ್ವಂತೀ -168

17-06-2018 ಆಡುತ್ತಾ ಓಡುತ್ತಾ ಮೊದಲ ಪಿ.ಯು.ಸಿ. ಪರೀಕ್ಷೆ ಬಂದೇಬಿಟ್ಟಿತು. ಪಾಠ ಓದುವಿಕೆಯು ರಾತ್ರಿಯೆಲ್ಲಾ ನಡೆಯುತ್ತಿತ್ತು. ಅಂದರೆ ಮಾಮೂಲಾಗಿ ರಾತ್ರಿ ಹತ್ತೂವರೆ ವರೆಗೆ ಓದುತ್ತಿದ್ದವನು ರಾತ್ರಿ ಒಂದು ಗಂಟೆ, ಒಂದೂವರೆ ವರೆಗೆ ಓದತೊಡಗಿದೆ. ಎಲ್ಲವೂ ಚೆನ್ನಾಗಿ ಓದಿದ್ದರೂ, ಕನ್ನಡದಲ್ಲಿ ಮಾತ್ರ 49 ಬಂದುಬಿಟ್ಟಿತು! ಉಳಿದ ಎಲ್ಲ ವಿಷಯಗಳಲ್ಲೂ 64% ಇತ್ತು. ಕನ್ನಡ ಮೇಷ್ಟ್ರು ಎಚ್ ಎಸ್ ರಾಘವೇಂದ್ರರಾವ್ ‘ಯತ್ರಾಜಾ, ನಾನು ಚೆನ್ನಾಗಿ ಮಾರ್ಕ್ಸ್ ತಗೊಳ್ತಾರೆ ಅಂದುಕೊಂಡಿದ್ದವರಲ್ಲಿ ನೀನೊಬ್ಬನೇ ಕಡಿಮೆ ತಗೊಂಡಿರೋದು’ ಅಂದುಬಿಟ್ಟರು. ಅಷ್ಟು ಹೊತ್ತಿಗೆ ಅವರೆಂದರೆ ಭಯ, ಭಕ್ತಿ ಜೊತೆಗೆ ಸಲಿಗೆ ಕೂಡ ಇತ್ತು. ‘ಹೋಗಿ ಸಾರ್, ಈ ಕಾಂಪೋಜಿಷನ್ ಬರೆಯೋಕ್ಕೆ ಯಾರಿಗೆ ಆಗತ್ತೆ? ಅಷ್ಟಷ್ಟು ಬರೆಯೋದು ನನಗೆ ಆಗಲ್ಲ’ ಅಂದುಬಿಟ್ಟಿದ್ದೆ. ಮೊದಲ ಪಿ.ಯು.ಸಿ.ಯಲ್ಲಿ ಪ್ರಬಂಧ ಬರೆಯುವುದು ಹೆಚ್ಚಾಗಿತ್ತು. ಬರೆದು ಕೈ ನೋವು ಬಂದು ಎಷ್ಟು ಬೇಕೋ ಅಷ್ಟೇ ಬರೆದಿದ್ದೆ. ಈಗ ನನ್ನ ಮಾತುಗಳು ನನಗೇ ನಗು ತರಿಸುತ್ತವೆ. ಕಾದಂಬರಿಗಳನ್ನು, ಕಥೆಗಳನ್ನು ಕೆಲವು ವರ್ಷಗಳ ಕಾಲ ಕಾಗದದ ಮೇಲೆ ಪೆನ್ನಿನಿಂದ ಬರೆಯುತ್ತಿದ್ದೆ. ಮೇಷ್ಟರಿಗೆ ‘ಹೋಗಿ ಸಾರ್’ ಎಂದಿದ್ದು ಈಗ ಉಲ್ಟಾ ಆಗಿದೆ. ಅಫ್ ಕೋರ್ಸ್, ನಾನು ಬರೆದ ಕಾದಂಬರಿ ‘ಚಿರಸ್ಮಿತ’ಗೆ ಎಚ್ಚೆಸ್ಸಾರ್ ಸರ್ ಮುನ್ನುಡಿ ಬರೆದಿದ್ದು ನನ್ನ ಸುಕೃತ. ಇದರ ಕಥೆ ಆಮೇಲೆ. ಕಾಲೇಜಿನಲ್ಲಿ ಇಂಟರ್‍ಕೊಲೀಜಿಯೇಟ್ ಕನ್ನಡ ಮತ್ತು ಹ...

ಯತಿ ಸ್ವಂತೀ -167

16-06-2018 ಛೇಸ್ ಕಾದಂಬರಿಗಳಲ್ಲಿ ನನಗೆ ಬಹಳ ಇಷ್ಟ ಆದ ಮೂರು ನಾಲ್ಕು ಪಾತ್ರಗಳನ್ನು ಬಳಸಿ ಎರಡು, ಮೂರು, ನಾಲ್ಕು ಕಾದಂಬರಿಗಳನ್ನು ಬರೆದಿರುವುದು. ಉದಾಹರಣೆಗೆ ಹೆಲ್ಗಾ ರಾಲ್ಫ್ : ಶ್ರೀಮಂತನನ್ನು ಮದುವೆಯಾದ ಒಬ್ಬ ಮಹದಾಭಿಲಾಷೆಯ ಹೆಣ್ಣು. ಎಲ್ಲ ತಪ್ಪುಗಳನ್ನು ಮಾಡಿಯೂ ಹೇಗೋ ಗೆಲ್ಲುತ್ತಾಳೆ. ಆನ್ ಏಸ್ ಅಪ್ ಮೈ ಸ್ಲೀವ್, ಐ ಹೋಲ್ಡ್ ಆಲ್ ಏಸಸ್, ದ ಜೋಕರ್ ಇನ್ ದ ಪ್ಯಾಕ್. ನನ್ನ ಫೇವರಿಟ್ : ಡಾನ್ ಮಿಕ್ಲೆಮ್. ಮಿಷನ್ ಟು ವೆನಿಸ್, ಮಿಷನ್ ಟು ಸಯನಾ ನನ್ನ ಮತ್ತೊಬ್ಬ ಫೇವರಿಟ್. ಮಾರ್ಕ್ ಗಿರ್ಲಾಂಡ್. ಪ್ಯಾರಿಸ್‍ನಲ್ಲಿ ನೆಲೆಸಿರುವ ಒಬ್ಬ ಅಮೆರಿಕನ್. ಮಹಾ ಅನ್‍ಸ್ಕ್ರುಪುಲಸ್ ಮನುಷ್ಯ. ಅವನ ಎರಡು ಇಷ್ಟವಾದವುಗಳು ಕೋಲ್ಡ್ ಕ್ಯಾಷ್ ಮತ್ತು ಹಾಟ್ ವಿಮೆನ್. ಅವನೆಷ್ಟು ಲಜ್ಜಾಹೀನನಾಗಿ ವರ್ತಿಸಿದರೂ ದೇಶಪ್ರೇಮವನ್ನು ಹೊಂದಿರುತ್ತಾನೆ. ಅವನನ್ನು ವಿಧಿಯಿಲ್ಲದೇ ಕೆಲವು ಕೊಳಕು ಕೆಲಸಗಳಿಗೆ ಹೋಗೆನ್ನುವ ಪ್ಯಾರಿಸ್ ಎಂಬೆಸಿಯ ಜಾನ್ ಡೋರಿಯ ಪಾತ್ರ ಕೂಡ ವಿಶೇಷವೇ. ಓದಿಯೇ ಮಜಾ ತಗೋಬೇಕು. ಗಿರ್ಲಾಂಡ್‍ನ  ನಾಲ್ಕು ಕಾದಂಬರಿಗಳು ಬಂದಿವೆ. ಪ್ರತ್ಯೇಕವಾಗಿ ಓದಿದರೂ ಓಕೆ. ಒಂದರ ನಂತರ ಒಂದು ಓದಿದರೆ ಒಂಥರಾ ಕಂಟಿನ್ಯೂಯಿಟಿ ಇದೆ. ದಿಸ್ ಈಸ್ ಫಾರ್ ರಿಯಲ್: ಇದರಲ್ಲಿ ಆಫ್ರಿಕಾದ ಸೆನೆಗಲ್‍ನ ಬುಷ್‍ಗಳ ಬಗ್ಗೆ ಓದಿದ್ದೆ. ಇತ್ತೀಚೆಗೆ ಒಂದು ಸಿನಿಮಾದಲ್ಲಿ ನೋಡಿದಾಗ ಆ ಬುಷ್‍ಗಳ ಅಗಾಧತೆ, ವೈಶಿಷ್ಟ್ಯಗಳ ಬಗ್ಗೆ ತಿಳಿಯಿತು. ಯೂ ಹ್ಯಾವ್ ಯುವರ್‍ಸೆಲ್ಫ್ ಎ ಡ...

ಯತಿ ಸ್ವಂತೀ -166

15-06-2018 ಜೇಮ್ಸ್ ಹ್ಯಾಡ್ಲಿ ಛೇಸ್ ಜೊತೆಗೆ ಅರ್ಲ್ ಸ್ಟ್ಯಾನ್ಲಿ ಗಾರ್ಡನರ್ ಅವರ ಪೆರಿ ಮೇಸನ್ ಎಂಬ ಲಾಯರನ ಕಥೆಗಳನ್ನು ಕೆಲವು ಓದಿದೆ. ಏಕೋ ಅಷ್ಟೊಂದು ಹಿಡಿಸಲಿಲ್ಲ. ಒಳ್ಳೆಯ ವಿಟ್ ಇದ್ದ ಪುಸ್ತಕಗಳು. ಅವನ ಡೆಲಾ ಸ್ಟ್ರೀಟ್ ಎಂದರೆ ಮಹಾ ಸುಂದರಿ ಎಂಬ ಊಹೆ ನನಗೆ ಬಂದಿತ್ತು. ಸರ್ ಆರ್ಥರ್ ಕಾನನ್ ಡಾಯ್ಲ್ ಅವರ ಷೆರ್ಲಾಕ್ ಹೋಮ್ಸ್ ಮತ್ತು ಅಗಾಥಾ ಕ್ರಿಸ್ಟೀಯ ಹರ್ಕ್ಯೂಲ್ ಪಾಯ್ರೋ ನನ್ನ ಇನ್ನಿಬ್ಬರು ಫೇವರಿಟ್ ಪಾತ್ರಗಳು. ಜೊತೆ ಜೊತೆಗೆ ನನ್ನ ಕಾಲೇಜು ಓದುವಿಕೆ ಮುಂದುವರಿದಿತ್ತು. ಸದಾ ಗೆಳೆಯರೊಂದಿಗೆ ಆಟ ಆಡುತ್ತಾ ಮೈಸೂರಿನಲ್ಲಿ ಕಾಲ ಕಳೆದವನಿಗೆ ಇಲ್ಲಿ ಹೆಚ್ಚು ಸ್ನೇಹಿತರಿರಲಿಲ್ಲ. ಬಿ.ಕೆ.ಅರುಣ್ ಜೊತೆಗೆ ಸಾಹಿತ್ಯ ಮತ್ತು ಸಿನಿಮಾ ಚರ್ಚೆ ನಡೆಯುತ್ತಿತ್ತು. ಸಿನಿಮಾಗಳಿಗೆ ಹೋಗುವುದೂ ಅವನೊಂದಿಗೇ ನಡೆಯುತ್ತಿತ್ತು. ಹರೀಶ ಎನ್ನುವ ಹುಡುಗ ಒಬ್ಬ ಹೆಚ್ಚಿನ ಪರಿಚಯವಾದ. 13ನೇ ಮೆಯ್ನ್‍ನಲ್ಲಿದ್ದ ಅವನ ಮನೆಗೆ ಹೋಗುತ್ತಿದ್ದೆ. ಅವನ ದೊಡ್ಡಮ್ಮನ ಪತಿ ಜನಪ್ರಿಯ ನಟ ಕೆ.ಎಸ್.ಅಶ್ವತ್ಥ್‍ರವರು. ಎರಡು ವರ್ಷಗಳ ಹರೀಶನೊಂದಿಗಿನ  ಒಡನಾಟದ ನಂತರ ಮೈಸೂರಿಗೆ ಬಂದೆ. ಆ ನಂತರ ಹರೀಶ ಇನ್ನಿಲ್ಲ ಎಂಬ ಸುದ್ದಿ ಕೇಳಿ ವ್ಯಥೆಯಾಯಿತು. ಆಲೋಚಿಸಿದರೆ, ಪ್ರೈಮರಿ ಶಾಲೆಯ ಸಹಪಾಠಿ ಶ್ರೀನಿವಾಸ ರಂಗಾಚಾರ್ ಮತ್ತು  ಕೃಷ್ಣಮೂರ್ತಿ, ಮಾಧ್ಯಮಿಕ ಮತ್ತು ಪ್ರೌಢಶಾಲೆಯ ಸಹಪಾಠಿ ಶ್ರೀಧರ್, ಪಿ.ಯು.ಸಿ. ಸಹಪಾಠಿ ಹರೀಶ, ಇಂಜಿನಿಯರಿಂಗ್ ಸಹಪಾಠಿಗಳಾದ ಓಡೋ ತಿಮ್ಮ...

ಯತಿ ಸ್ವಂತೀ -165

14-06-2018 ಜೇಮ್ಸ್ ಹ್ಯಾಡ್ಲಿ ಛೇಸ್ ಇಂಗ್ಲೆಂಡಿನವನು. ಅದೆಷ್ಟು ಚೆನ್ನಾಗಿ ಅಮೆರಿಕನ್ ಸಂಸ್ಕøತಿ ಮೈಗೂಡಿಸಿಕೊಂಡನೆಂದರೆ ಅವನ ಕೆಲವು ಕಾದಂಬರಿಗಳಲ್ಲಿ ಬರುವ ಅಮೆರಿಕಾದ ವರ್ಣನೆ ಅಮೋಘ. ಮಯಾಮಿ ಬಳಿ ಪ್ಯಾರಡೈಸ್ ಸಿಟಿ ಎನ್ನುವ ಒಂದು ನಗರವನ್ನು ಹುಟ್ಟು ಹಾಕಿ ಅಲ್ಲಿ ನಡೆದಿದೆ ಎನ್ನುವಂತಹ ಕಾದಂಬರಿಗಳನ್ನು ಬರೆಯುತ್ತಿದ್ದ. ಒಂದು ಅಕ್ಷರ ಕೂಡ ಅನಗತ್ಯವಾಗಿ ಇಲ್ಲ ಎನ್ನುವಂತಹ ಬರವಣಿಗೆ. ಬಹುಶಃ ನನಗೂ ಅದೇ ರೀತಿಯ ಶೈಲಿ ಅಂಟಿಕೊಂಡಿದೆ. ಏಕೆಂದರೆ ನನ್ನ ಕೆಲವು ಕಾದಂಬರಿಗಳಲ್ಲಿ ಹೆಚ್ಚು ಪದಗಳಿಲ್ಲ. ಆದರೆ ಅಬ್ಬಾ... ಎಷ್ಟು ದೊಡ್ಡದು! ಎನಿಸದಿರದು. ಉದಾಹರಣೆಗೆ ನನ್ನ ಅಸಂಗತ ಕಾದಂಬರಿ ಗಾಥೆ. ಇರುವುದು 160 ಪುಟಗಳಾದರೂ ಬಹಳ ಸ್ಟಫ್ ಅದರಲ್ಲಿ ಇದೆ ಎನಿಸದಿರದು. ಛೇಸ್‍ಗೆ ಮತ್ತೆ ವಾಪಸ್ ಬರೋಣ. ಮಿಶನ್ ಟು ವೆನಿಸ್ ಓದಿದಾಗ ಅಬ್ಬಾ... ಈ ನಗರವನ್ನೊಮ್ಮೆ ನೋಡಲೇಬೇಕು ಎಂದು ಮೊದಲ ಸಲವೇ ಅನ್ನಿಸಿತು. ಅದು ಸುಮಾರು ನಲವತ್ತರ ದಶಕದ ವೆನಿಸ್ ನಗರ. ಆ ನಂತರ ಛೇಸ್ ಕಾದಂಬರಿಗಳನ್ನು ಓದುತ್ತಲೇ ಹೋದೆ. ನೋಚೂರ್ ಲೈಬ್ರರಿಯಲ್ಲಿದ್ದುದನ್ನೆಲ್ಲಾ ಖಾಲಿ ಮಾಡಿದೆ. ಮೊಟ್ಟ ಮೊದಲನೆಯ ಸಲ ನನ್ನ ದೃಷ್ಟಿಕೋನ ಬದಲಾಯಿತು. ಅಲ್ಲಿಯವರೆಗೆ ರಾಮಾಯಣ, ಮಹಾಭಾರತ ಮೊದಲುಗೊಂಡು ನಮ್ಮ ಭಾರತೀಯ ಚಿತ್ರಗಳಲ್ಲಿ ಕೂಡ ಎಷ್ಟು ಬೇಗ ಸಾಧ್ಯ ಆಗ ‘ಇಂತಹವರು ಒಳ್ಳೆಯವರು, ಇಂತಹವರು ಕೆಟ್ಟವರು’ ಎನ್ನುವ ಭಾವನೆ ನಮಗೆ ಬರುವಂತೆ ಬರೆಯುತ್ತಿದ್ದರು ಆಗಿನ ಲೇಖಕರು. ಆದರೆ ಛೇಸ್ ಬರೆದ ಕ...