ಯತಿ ಸ್ವಂತೀ -170


19-06-2018

ನಾನು ಮೊದಲ ಪಿಯುಸಿ ಓದುತ್ತಿದ್ದ ಸಮಯದಲ್ಲಿ ಸೆಪ್ಟೆಂಬರ್ ತಿಂಗಳಿನಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ಮುಷ್ಕರ ಹೂಡಿತು. ವಿನೋದವೆಂದರೆ ಪ್ರತಿ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಮುಷ್ಕರ ಮಾಡುವುದು ಕಾಮನ್ ಅಂತೆ ಅಂತ ತಿಳೀತು. 'ಬ್ಲ್ಯಾಕ್ ಸೆಪ್ಟೆಂಬರ್' ಅಂತಲೇ ಹೆಸರಾಯ್ತಂತೆ ಸೆಪ್ಟೆಂಬರ್ ತಿಂಗಳಿಗೆ!
ನಮಗಂತೂ ಮಜವೋ ಮಜ.
ಮೊದಲ ಪಿಯುಸಿ ಪರೀಕ್ಷೆ ಮುಗಿಸಿ ಮೈಸೂರಿಗೆ ಅಯ್ಯ ಅಮ್ಮನ ಬಳಿ ಬಂದೆ.
ಆಗ ಸೀಮೆಎಣ್ಣೆ ಅಕ್ಯೂಟ್ ಶಾರ್ಟೇಜು.
ಪ್ರತಿ ದಿನವೂ ಒಂದು ಆಯತಾಕಾರದ ಡಬ್ಬ ಹಿಡಿದುಕೊಂಡು ಎಲ್ಲಿ ಸೀಮೆಎಣ್ಣೆ ಕೊಡುವರೋ ಅಲ್ಲಿಗೆ ದೌಡಾಯಿಸುತ್ತಿದ್ದೆವು.
ರೇಷನ್ ಇತ್ತು ಸೀಮೆಎಣ್ಣೆಗೆ. ದಿನಕ್ಕೆ ಆರು ಲೀಟರ್. ನಾಲ್ಕೂವರೆ ಲೀಟರ್ ಡಬ್ಬದಲ್ಲಿ ಆರು ಲೀಟರ್ ಎಣ್ಣೆ ತುಂಬಿಕೊಡುತ್ತಿದ್ದ.
ಬಾಯಿ ಎಲ್ಲಾ ಮುಚ್ಚಿಕೊಂಡು ದುಡ್ಡು ತೆತ್ತು ಸೀಮೆಎಣ್ಣೆ ತರುತ್ತಿದ್ದೆವು. ಮನೆಯ ಒಲೆ ಉರಿಯಬೇಕಿತ್ತಲ್ಲ!
ಆ ಸೀಮೆಎಣ್ಣೆ ಗಾಡಿಯವನೋ... ಕ್ವಾರ್ಟರ್ಸ್ ಬಳಿ ಅಂತ ಹೇಳಿ ಅಲ್ಲಿಗೆ ಹೋದಾಗ ಯಾದವಗಿರಿ ಬಳಿ ಕೊಡುವ ಎಂದು ತಿಳಿಯುತ್ತಿತ್ತು. ಅಲ್ಲಿಗೆ ಓಡುತ್ತಿದ್ದೆವು. ಅಬ್ಬಾ... ಬಹಳ ಕಷ್ಟದ ಸಮಯವದು.
ಎರಡನೇ ಪಿಯುಸಿ ಆರಂಭ ಆಯಿತು.
ಹಿಂದಿನ ವರ್ಷ ಎರಡನೇ ಪಿಯುಸಿ ಮಧ್ಯಾಹ್ನ ಒಂದೂ ಕಾಲಿನಿಂದ ಐದೂಕಾಲಿನ ವರೆಗಿತ್ತು. ನಾವು ಎರಡನೇ ಪಿಯುಸಿಗೆ ಬಂದಾಗ ಮತ್ತೆ ನಮಗೆ ಬೆಳಗ್ಗೆ ಎಂಟೂವರೆ ಯಿಂದ ಮಧ್ಯಾಹ್ನ ಹನ್ನೆರಡೂ ಮುಕ್ಕಾಲು ಎಂದಾಯಿತು. ಅಬ್ಬಾ...
ಮೊದಲ ವರ್ಷ ಜುವಾಲಜಿ ತರಗತಿಯಲ್ಲಿ ಜಿರಳೆ ಕತ್ತರಿಸಿದ್ದೆ (ವ್ಯಾ...!) ಎರಡನೇ ವರ್ಷ ಕಪ್ಪೆ.
ಕೆಮಿಸ್ಟ್ರಿ ಲ್ಯಾಬ್ ಬಹಳ ಖುಷಿ ತರುತ್ತಿತ್ತು. ಬ್ಯೂರೆಟ್ ಪಿಪೆಟ್ ಸಾಲ್ಟ್ ವಿಶ್ಲೇಷಣೆ. ಫಿಸಿಕ್ಸ್ ಟ್ಯೂನಿಂಗ್ ಫೋರ್ಕ್ ಪ್ರಯೋಗ...
ಬಾರ್ಬರಾ ಸ್ಟ್ರೈಸ್ಯಾಂಡ್, ರಾನ್ ಓನೀಲ್ ವಾಟ್ಸ್ ಅಪ್ ಡಾಕ್ ನೋಡಿದ ನೆನಪು. ಅದರಲ್ಲಿ ಓನೀಲ್ ಒಬ್ಬ ಭೌತವಿಜ್ಞಾನಿ. ಟ್ಯೂನಿಂಗ್ ಫೋರ್ಕ್ ಬಳಸುತ್ತಾನೆ.
ಬಹಳ ಸುಂದರ ದಿನಗಳು. ಆದರೆ ನಮ್ಮ ಪ್ರಿನ್ಸಿ ಭರದ್ವಾಜ್ ತಮ್ಮ ಕಟ್ಟುತ್ತಿದ್ದ ಮನೆಯ ಮೇಲೆ ಹತ್ತುವಾಗ ಕೆಳಗೆ ಬಿದ್ದು ಅಸುನೀಗಿದರು..

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102