ಯತಿ ಸ್ವಂತೀ -213
01-08-2018 ದಿನಗಳು ಉರುಳುತ್ತಿದ್ದವು. ನನ್ನ ಉದಯನ ಸ್ಕೂಟರ್ ಸವಾರಿ ಒಂದೆರಡು ವರ್ಷ ನಡೆಯಿತು. ನಾವು ಕೆಲಸಕ್ಕೆ ಸೇರಿದ ಕೆಲವೇ ದಿನಗಳಲ್ಲಿ ನಮ್ಮ ಫ್ಯಾಕ್ಟರಿಯ ಸಸ್ಪೆನ್ಷನ್ ಆಫ್ ಆಪರೇಷನ್ ಆಗಿಬಿಟ್ಟಿತು. ಅದ್ಯಾಕೋ ಅದಕ್ಕೆ ಲಾಕೌಟ್ ಎನ್ನಲಿಲ್ಲ ಅವರು. ನಮಗೆ ಎಂತಹ ವಿಚಿತ್ರ ಪರಿಸ್ಥಿತಿ ಎಂದರೆ ಇಲ್ಲೇ ಇರಬೇಕಾ? ಅಥವಾ ಬೇರೆ ಕೆಲಸ ಹುಡುಕಬೇಕಾ ತೋಚಲಿಲ್ಲ. ಏಕೆಂದರೆ ಅನಿರ್ದಿಷ್ಟ ಕಾಲ ಮುಚ್ಚಲಾಗಿದೆ ಎಂದಿತ್ತು ನಮ್ಮ ಫ್ಯಾಕ್ಟರಿ ಗೇಟಿನ ಮುಂದಿದ್ದ ನೊಟೀಸ್. ಎಂತಹ ಡೋಲಾಯಮಾನ ಸ್ಥಿತಿ... ಬಿಟ್ಟರೆ ಮತ್ತೆ ಹೊಸ ಕೆಲಸ ಸಿಗುವ ಭರವಸೆ ಇರಲಿಲ್ಲ. ಇಲ್ಲೇ ಇದ್ದರೆ ಸಂಬಳ ಇಲ್ಲ. ಫ್ಯಾಕ್ಟರಿ ತೆರೆದಿದ್ದರೆ ತಾನೇ. ನಮಗೆ ಸಿನಿಮಾ ನೋಡುವ ಹುಚ್ಚು. ಆಗೇನೂ ಈಗಿನಂತೆ ಐನೂರು ಸಾವಿರ ಇರುತ್ತಿರಲಿಲ್ಲ ಟಿಕೆಟ್ ಬೆಲೆ. ಆದರೂ ಕಾಸಿಗೆ ತಕ್ಕ ಕಜ್ಜಾಯ! ನನಗೆ ನೆನಪಿದೆ. ಬ್ಯಾಂಕಿಗೆ ಹೋಗಿ ಹಣವನ್ನು ಡ್ರಾ ಮಾಡಲು ವಿತ್‍ಡ್ರಾವಲ್ ಸ್ಲಿಪ್ ಕೊಟ್ಟೆ. ಬ್ಯಾಂಕಿನವರು ಆಗಲ್ಲಾರೀ ಎಂದಿದ್ದರು. ನಾನು ಏಳು ರೂಪಾಯಿ ಬಿಟ್ಟು ಅಲ್ಲಿದ್ದ ಐವತ್ತು ರೂಪಾಯಿ ಡ್ರಾ ಮಾಡಲಿಚ್ಛಿಸಿದ್ದೆ. ‘ಏನು ಆಗಲ್ಲ? ನೀವೇನು ನಮಗೆ ಸಂಬಳ ಕೊಟ್ಟು ಸಾಕ್ತೀರಾ? ನಮ್ಮ ಫ್ಯಾಕ್ಟರಿ ಬೇರೆ ಮುಚ್ಚಿದೆ’ ಎಂದು ಗಲಾಟೆ ಮಾಡಿದ್ದೆ. ಈಗಲೂ ನಾನು ಆಗಾಗ ಅಂಬರೀಷ್ (ರೆಬೆಲ್)ಆಗುವುದು ಬ್ಯಾಂಕಿನಲ್ಲಿ ಉಂಟು. ಬಾಯಿ ಮುಚ್ಚಿ ಹಣ ಕೊಟ್ಟಿದ್ದ ಆಗ. ಅದನ್ನು ತ...