ಯತಿ ಸ್ವಂತೀ -209


28-07-2018
ನನಗೆ ಸೇಲ್ಸ್ ಕೆಲಸ. ಇದೊಂದು ರೀತಿಯ ಹೊಸ ರೀತಿಯ ಸೇಲ್ಸ್ ಎನ್ನಿಸಿತೆನಗೆ. ನನ್ನ ಕೆಲಸವೇನೆಂದರೆ ಗ್ರಾಹಕರಿಂದ ಬಂದ ಆರ್ಡರುಗಳನ್ನು ನೋಡುವುದು. ಅವು ರೆಗ್ಯುಲರ್ ಯಂತ್ರಗಳೋ ಅಥವಾ ವಿಶೇಷ ಯಂತ್ರಗಳೋ ಎಂದು ನೋಡುವುದು.
ಅವು ರೆಗ್ಯುಲರ್ ಎಂದರೆ, ನಮ್ಮ ಪ್ರೊಡಕ್ಷನ್ ಶಾಪ್‍ಗೆ ಆರ್ಡರ್ ಕೊಡುವುದು. ಒಂದು ವೇಳೆ ಅವು ವಿಶೇಷ ಎಂದು ಗೊತ್ತಾದರೆ, ಅವುಗಳ ಸ್ಪೆಸಿಫಿಕೇಶನ್ ತೆಗೆದುಕೊಂಡು ಹೋಗಿ ನಮ್ಮ ಡಿಸೈನ್ ಡಿಪಾರ್ಟ್‍ಮೆಂಟಿಗೆ ಕೊಡುವುದು. ಅವರು ಅದಕ್ಕೆ ತಕ್ಕ ಡಿಸೈನ್ ಮಾಡುತ್ತಿದ್ದರು. ಡಿಸೈನ್ ಎಂದರೆ ಜನರೇಟರ್‍ನಲ್ಲಿ ಇರಬೇಕಾದ ತಾಮ್ರ, ಕಾರ್ಬನ್ ಸ್ಟೀಲ್ ಎಲ್ಲದರ ಅಳತೆಯನ್ನೂ ಡಿಸೈನ್ ಡಿಪಾರ್ಟ್‍ಮೆಂಟಿನವರು ನೋಡಿ, ಅದಕ್ಕೆ ತಕ್ಕ ಸೈಜಿನ ಜನರೇಟರ್ ಡಿಸೈನ್ ಕೊಡುತ್ತಿದ್ದರು.
ಅದರ ವಿವರಗಳನ್ನು ಅಂದರೆ ಡಿಸೈನ್ ಮತ್ತು ಡ್ರಾಯಿಂಗುಗಳನ್ನು ಪ್ರೊಡಕ್ಷನ್ ಷಾಪ್‍ಗೆ ಒಯ್ದು ಅಲ್ಲಿ ಆ ಮೆಟೀರಿಯಲ್ಲುಗಳನ್ನು ಪ್ಲ್ಯಾನ್ ಮಾಡಿಸಬೇಕಿತ್ತು. ಒಮ್ಮೆ ಅದು ಪ್ಲ್ಯಾನ್ ಆದಾಗ ಪರ್ಚೇಸ್ ಡಿಪಾರ್ಟ್‍ಮೆಂಟ್ ಅದನ್ನು ತರಿಸಿಕೊಡುತ್ತಿತ್ತು. ಅದು ಪ್ರೊಡಕ್ಷನ್ ಷಾಪ್ ತಲುಪಿ ಕೆಲಸ ಶುರುವಾಗುತ್ತಿತ್ತು.
ಅಲ್ಲಿ ಅದು ಸಿದ್ಧ ಆದ ಮೇಲೆ ಅದನ್ನು ಟೆಸ್ಟ್ ಮಾಡಿ, ಅದಕ್ಕೆ ಪೆಯಿಂಟ್ ಮಾಡಿ ಅದನ್ನು ರವಾನೆಗೆ ಸಿದ್ಧಗೊಳಿಸುತ್ತಿದ್ದರು. ಆಗ ಆ ಜನರೇಟರ್ ಯಾರಿಗೆ ತಲುಪಬೇಕೋ ಅವರಿಗೆ ಕಳಿಸಬೇಕಿತ್ತು.
ಅವರದೇನಾದರೂ ವಿಶೇಷ ಟರ್ಮ್ಸ್ ಆಫ್ ಪೇಮೆಂಟ್ ಇದ್ದರೆ ಹಣವನ್ನು ಪಡೆದು ನಂತರ ಕಳಿಸಬೇಕಿತ್ತು. ಅಥವಾ ಅವರೊಂದಿಗೆ ಇಷ್ಟು ದಿನಗಳ ನಂತರ ಹಣ ಸಂದಾಯ ಮಾಡುತ್ತಾರೆ ಎಂದು ಮೊದಲೇ ಕರಾರು ಮಾಡಿಕೊಂಡಿದ್ದರೆ, ಆ ದಿನ ಬರುವ ವೇಳೆಗೆ ಆ ಗ್ರಾಹಕನಿಗೆ ‘ಅಯ್ಯಾ, ನೀವು ಕೇಳಿದ ಜನರೇಟರ್ ನೀವು ಹೇಳಿದ ಸಮಯಕ್ಕೇ ಕಳಿಸಿದ್ದೇವೆ. ಆದ್ದರಿಂದ ದಯವಿಟ್ಟು ಹಣವನ್ನು ಕಳಿಸಿ’ ಎಂದು ಫೋನು ಮಾಡುವುದೋ, ಪತ್ರ ಬರೆಯುವುದೋ ಮಾಡಬೇಕಿತ್ತು. ನಂತರ ಫಾಲೋ ಅಪ್ ಮಾಡಿ, ಆ ಹಣ ಬಂದ ಮೇಲೆ ಅಬ್ಬಾ ಬಂತು ಎಂದು ನಿಟ್ಟುಸಿರು ಬಿಡಬೇಕಿತ್ತು.
ಪ್ರತಿಯೊಂದು ಆರ್ಡರ್‍ಗೂ ಒಂದು ಬಾಕ್ಸ್‍ಫೈಲ್ ಇರುತ್ತಿತ್ತು. ಆ ಆರ್ಡರ್‍ಗೆ ಸಂಬಂಧಪಟ್ಟ ಪ್ರತಿ ಕಾಗದ ಪತ್ರವನ್ನೂ ಆ ಬಾಕ್ಸ್‍ಫೈಲಲ್ಲಿ ಹಾಕಬೇಕಿತ್ತು.
ಇದು ನನ್ನ ಕೆಲಸವಾಗಿತ್ತು. ಅಂದರೆ ಈ ಇಡೀ ಪ್ರಾಸೆಸ್ ನಾನು ನೋಡಿಕೊಳ್ಳಬೇಕಿತ್ತು.
ಅರೆ, ಪ್ರತಿಯೊಂದು ಇಲಾಖೆಯೂ ಅವುಗಳ ಕೆಲಸವನ್ನು ನಾವು ಹೇಳಿದ ಸಮಯಕ್ಕೇ ಮಾಡಿಬಿಟ್ಟರೆ ನಮ್ಮ ಆವಶ್ಯಕತೆ ಇರುವುದಿಲ್ಲ ಅಲ್ಲವೇ?
ಏಕೆಂದರೆ ಇದೇ ಡಿಸೈನ್ ಡಿಪಾರ್ಟ್‍ಮೆಂಟು ಅನೇಕಾನೇಕ ಆರ್ಡರುಗಳನ್ನು ಏಕ ಕಾಲದಲ್ಲಿ ನೋಡಿಕೊಳ್ಳಬೇಕಿತ್ತು. ಷಾಪ್‍ನಲ್ಲಿನ ಪ್ಲ್ಯಾನಿಂಗ್‍ನವರಿಗೆ ಇದೊಂದೇ ಅಲ್ಲ ಆರ್ಡರ್ ಇರುತ್ತಿದ್ದುದು. ಪರ್ಚೇಸ್ ಡಿಪಾರ್ಟ್‍ಮೆಂಟ್ ಒಮ್ಮೆಲೇ ಅನೇಕ ಕಚ್ಚಾವಸ್ತುಗಳನ್ನು ತರಿಸಬೇಕಿತ್ತು. ಅದೆಲ್ಲದ್ದಕ್ಕೂ ಹಣಕಾಸು ಇಲಾಖೆ ಹಣವನ್ನು ಸಕಾಲದಲ್ಲಿ ಒದಗಿಸಬೇಕಿತ್ತು.
ನಂತರ ಇದೇ ಸಮಸ್ಯೆ ಪ್ರೊಡಕ್ಷನ್ ಷಾಪ್‍ನಲ್ಲಿ, ರವಾನೆವರೆಗೂ ಇತ್ತು.


ಒಂದು ರೀತಿಯ ಸವಾಲೆಸೆಯುವ ಕೆಲಸವಾಗಿತ್ತು ನನ್ನದು.

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102