Posts

Showing posts from November, 2018

ಯತಿ ಸ್ವಂತೀ -319

16-11-2018 ದಾರ್ಶನಿಕರೊಬ್ಬರು ಹೇಳಿರುವುದು ಏನೆಂದರೆ ಸುಖವನ್ನು ಇತರರಿಗೆ ಹಂಚಬೇಕು; ದುಃಖವನ್ನು ಒಬ್ಬರೇ ಅನುಭವಿಸಬೇಕು... ಏಕೆಂದರೆ ಅವರವರ ನರಕ ಅವರವರದು. ಈ ಪ್ರಸಕ್ತಿ ಏಕಪ್ಪಾ ಬಂತೂಂತಂದ್ರೆ ನೀವು ನನ್ನ ಬಾಳಿನ ಕೇವಲ ಖುಷಿಯ ವಿಷಯಗಳನ್ನು ಓದುವ ಏರ್ಪಾಡು ಮಾಡುತ್ತಿದ್ದೇನಾದ್ದರಿಂದ. ಮಾರ್ಕೆಟಿಂಗ್ ಡಿಪಾರ್ಟ್‌ಮೆಂಟ್‌ಗೆ ನನ್ನನ್ನು ನನ್ನ ಸಹೋದ್ಯೋಗಿಗಳು ತೆರೆದ ಬಾಹುಗಳಿಂದ ಆಹ್ವಾನಿಸಿದರು. ಅವರಲ್ಲಿ ಬಲು ಬೇಗ ಒಂದಾಗಿ ಹೋದೆ. ದೊಡ್ಡ ಬಾಸ್ ಮೈಕ್ರೋ ಮ್ಯಾನೇಜಿಂಗ್ ಮಾಡಲಿಲ್ಲ. ಒಂದೆರಡು ಬಾರಿ ನನ್ನ ಇಮ್ಮೀಡಿಯೇಟ್ ಬಾಸ್ ಜೊತೆ ಕಸ್ಟಮರುಗಳ ಭೇಟಿ ಮಾಡಿದೆ. ನಂತರ ನನ್ನ ಕೆಲಸ ಶುರುವಾಯಿತು. ನಮ್ಮ ಉತ್ಪಾದನೆಯನ್ನು ಬಳಸಿ ಅದರ ಬಗ್ಗೆ ಖುಷಿಯಿಂದ ಮಾತನಾಡುವವರನ್ನು ಭೇಟಿ ಮಾಡಬೇಕಿತ್ತು. ಪಟ್ಟಿ ತಯಾರಿಸಿ ಭೇಟಿಗೆ ದಿನಾಂಕಗಳನ್ನು ಸಿದ್ಧತೆ ಮಾಡಿದೆ. ಸಹೋದ್ಯೋಗಿಗಳ ಬಗ್ಗೆ ಹೇಳಬೇಕು. ಅದೇನು ಆಫೀಸಾ ಅಂತ ಶಂಕೆ ಬರುವಷ್ಟು ಕೂಲ್ ದಿನಗಳು. ಕಳೆದ ಅನೇಕ ವರ್ಷಗಳಿಂದ ನನ್ನ ಪ್ರತಿ ಹೆಜ್ಜೆಯನ್ನು ಎಣಿಸುತ್ತಿದ್ದ, ನನ್ನ ಕುತ್ತಿಗೆಯ ಹಿಂಭಾಗದಲ್ಲಿ ಬಿಸಿಯುಸಿರು ಬಿಡುತ್ತಿದ್ದ ಬಾಸ್‌ಗಳಿಗಿಂತ ಈ ಬಾಸ್ ಬಹಳ ಡಿಫರೆಂಟು ವೆರಿ ವೆರಿ ಡಿಫರೆಂಟು...

ಯತಿ ಸ್ವಂತೀ-318

  15-11-2018 ಇನ್ನು ನೂರು ದಿನಗಳ ಕಾಲ ರೀಜಿನಲ್ ಆಫೀಸ್‌ನಲ್ಲಿದ್ದೆ. ಒಮ್ಮೆ ಹೆಡ್ ಆಫೀಸ್‌ಗೆ ಹೋಗಿ, ಹಿಂದೆ ನನ್ನ ಸಹೋದ್ಯೋಗಿ ಆಗಿದ್ದಾತ ಈಗ ಮಾರ್ಕೆಟಿಂಗ್ ಹೆಡ್ ಆಗಿದ್ದರು, ಅವರನ್ನು ಕಂಡೆ. 'ಸಾಹೇಬರೇ.. ನನಗೆ ನನ್ನ ಸಾಮರ್ಥ್ಯವನ್ನು ಪೂರ್ಣ ಉಪಯೋಗ ಮಾಡೋಂಥ ಕೆಲಸ ಬೇಕು ಅನ್ಸುತ್ತೆ. ನಿಮ್ಮ ಕಡೆ ಯಾವುದಾದರೂ ಓಪನಿಂಗ್ ಇರಬಹುದಾ?' ಎಂದು ಕೇಳಿದೆ. ನೋಡೋಣ ಎಂದರು. ಆ ಹುಲ್ಲುಕಡ್ಡಿಯನ್ನೇ ಭದ್ರವಾಗಿಟ್ಟುಕೊಂಡು ಅವರ ಕರೆಗೆ ಕಾದೆ. ನಾಲ್ಕು ತಿಂಗಳುಗಳ ನಂತರ ಆ ಕರೆ ಬಂದಿತ್ತು. ಆ ದಿನ ನನ್ನ ಇಂಜಿನಿಯರಿಂಗ್ ಸಹಪಾಠಿಯ ಮಗನ ಮುಂಜಿ ಮತ್ತು ನನ್ನ ಭಾವ ಮೈದುನನ ಮನೆಯ ಗೃಹಪ್ರವೇಶ. ರಜೆ ಹಾಕಿದ್ದೆ ಆ ದಿನ. ಅಂದು ಬಂದಿತ್ತು ಕರೆ -' ನಿನ್ನನ್ನು ತಕ್ಷಣವೇ ಮಾರ್ಕೆಟಿಂಗ್ ಡಿಪಾರ್ಟ್‌ಮೆಂಟ್‌ಗೆ ವರ್ಗ ಮಾಡಲಾಗಿದೆ' ಎಂದಿದ್ದರು ನನ್ನ ಪ್ರಸ್ತುತ ಬಾಸ್. ಬಹಳ  ಸಂತೋಷ ಆಯಿತು. ಆದರೆ ನನ್ನ ಮುಂದೆ ದೊಡ್ಡ ಟಾಸ್ಕ್ ಇತ್ತು. ನನ್ನ ಈ ವರ್ಗದಿಂದಾಗಿ  ಹೊಸ ಸ್ಥಾನದಲ್ಲಿ ನನ್ನ ಸಾಮರ್ಥ್ಯದ ಪುರಾವೆ ನೀಡಿ, ನನ್ನ ವರ್ಗ ಸರಿಯಾದದ್ದು ಎಂದು ಸಾಬೀತು ಪಡಿಸಬೇಕಿತ್ತು. ಈ ಪುರಾವೆ ನೀಡೋದು, ಸಾಬೀತು ಮಾಡೋದು ನನ್ನ ಜನ್ಮಕ್ಕಂಟಿದ ಹಾಗೆ ಕಾಣುತ್ತದೆ!

ಯತಿ ಸ್ವಂತೀ-317

  14-11-2018 ಮರುದಿನ ಶ್ರೀಕಾಕುಳಂಗೆ ಹೋದೆ. ಪುನರಾಯಾನ್ ಅದೇ ಕಥೆ. ಭೇಟಿಗಳನ್ನು ಮುಗಿಸಿ, ವೈಜಾಗ್ ಹಿಂದಿರುಗಿದೆ. ಮರುದಿನ ಬೆಳಗ್ಗೆ ಆರು ಗಂಟೆಗೆ ಛೇರ್ ಕಾರ್ ರೈಲಿನಲ್ಲಿ ಕುಳಿತು ಸಾಮರ್ಲಕೋಟ ತಲುಪಿದೆ. ನಾನು ಕಾಕಿನಾಡಕ್ಕೆ ಹೋಗಬೇಕಿತ್ತು. ಸಾಮರ್ಲಕೋಟದಿಂದ ಟ್ಯಾಕ್ಸಿ ಬಾಡಿಗೆಗೆ ಗೊತ್ತು ಮಾಡಿಕೊಂಡೆ. ದಾರಿಯಲ್ಲಿ ಎಡಗಡೆ ನನ್ನ ಕಣ್ಣಿಗೆ ಬಿತ್ತು ಆ ಶಾಲೆ. ಸರಸ್ವತೀ ವಿದ್ಯಾಪೀಠಂ! ಯಂಡಮೂರಿ ಅವರ ವಿಶಿಷ್ಟ ಶಾಲೆ. ಹೈಸ್ಕೂಲ್ ವಿದ್ಯಾರ್ಥಿಗಳು ಒಂದು ದಿನ ಅಲ್ಲಿಗೆ ಬಂದು ಸ್ವಾವಲಂಬನೆಯ ಅನೇಕ ಪಾಠಗಳನ್ನು ಕಲಿಯುತ್ತಾರೆ. ಮಕ್ಕಳನ್ನು ಸರಸ್ವತೀ ವಿಗ್ರಹದ ಮುಂದೆ ನಿಲ್ಲಿಸಿ ಒಳ್ಳೆಯ ಬುದ್ಧಿಯಿಂದ ಇರುತ್ತೇನೆ. ನನ್ನ ತಾಯಿ ತಂದೆಯರನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಪ್ರತಿ ವಿದ್ಯಾರ್ಥಿಯ ಬಳಿ ಆಣೆ ಮಾಡಿಸಿಕೊಳ್ಳುತ್ತಾರೆ. ಮುಂದಿನ ಪೀಳಿಗೆಗೆ ತಮ್ಮದೇ ರೀತಿಯಲ್ಲಿ ಪಾಠ ಹೇಳುವುದನ್ನು ರೂಢಿಸಿಕೊಂಡಿದ್ದಾರೆ ಯಂಡಮೂರಿ ಅವರು. ಕೆಲವು ಫೋಟೋ ತೆಗೆದುಕೊಂಡು ಕಾಕಿನಾಡ ತಲುಪಿದೆ. ಅಲ್ಲಿನ ಪಾರ್ಟ್‌ನರ್ ಮತ್ತು ಸರ್ಕಾರಿ ಅಧಿಕಾರಿಗಳ ಭೇಟಿ ಮಾಡಿದೆ. ಹದಿನೈದು ದಿನಗಳ ಕಾಲ ಹನ್ನೊಂದು ಊರುಗಳು! ಆಯಾಸ ಸಾಕಷ್ಟು  ... ಉಹೂಂ ಬೇಕಾದಷ್ಟು ಆಗಿತ್ತು. ಸಂಜೆ ಐದೂವರೆಗೆ ಶೇಷಾದ್ರಿ ಎಕ್ಸ್‌ಪ್ರೆಸ್ ಹತ್ತಿ ಮರುದಿನ ಮಧ್ಯಾಹ್ನ ಹನ್ನೆರಡು ಗಂಟೆಗೆ ಬೆಂಗಳೂರು ತಲುಪಿದೆ. ಇನ್ನು ಮುಂದೆ ಹೋಗಲಾರೆ ಇಷ್ಟು ದೊಡ್ಡ ಮತ್ತು ದೀರ್ಘ ಟೂರ್ ಎಂದು...

ಯತಿ ಸ್ವಂತೀ -316

13-11-2018 ಬೆಳಗ್ಗೆ ಕಾಂಪ್ಲಿಮೆಂಟರಿ ಬ್ರೇಕ್‌ಫಾಸ್ಟ್ ತಟ್ಟೆಗೆ ತುಂಬಿಕೊಂಡು ಬಾಯಿಗೆ ಇನ್ನೇನು ಹಾಕಿಕೊಳ್ಳುವ ಸಮಯದಲ್ಲಿ ನನ್ನ ಎದುರು ಬಂದವರನ್ನು ಕಂಡು ಬಾಯಿ ಆ...ಎಂದು ತೆರೆದುಕೊಂಡಿತು! ಬಹಳ ಸಂತಸದಿಂದ ಮಾತಾಡಿಸಿದೆ. ನಾಲ್ಕು ವರ್ಷಗಳಾಗಿದ್ದವು ಅವರನ್ನು ಭೇಟಿ ಮಾಡಿ. 'ನೆನ್ನೆ ಒಬ್ಬನೇ ಬೋರ್ ಹೊಡೆಸಿಕೊಂಡೆ. ನೀನಿರುವೆ ಎಂದು ತಿಳಿದಿದ್ದರೆ ಚೆನ್ನಾಗಿತ್ತು' ಎಂದರು. ತೀರಾ ಪಕ್ಕಪಕ್ಕದ ಕೊಠಡಿ. ಒಂದೇ ಗೋಡೆ ಮಧ್ಯೆ. ಮರೋಚರಿತ್ರದಲ್ಲಿ ಏತೀಗ ಪೂವುನು... ಶಿವರಂಜನಿ ರಾಗದಲ್ಲಿ ಎಸ್ಪಿಬಿ ಹಾಡುವ ಸಮಯದಲ್ಲಿ ಆ ಸಿನಿಮಾದಲ್ಲಿ ನಾಯಕ ನಾಯಕಿ ಹೀಗೇ ಪಕ್ಕ ಪಕ್ಕದ ರೂಮಿನಲ್ಲಿ ಇರುತ್ತಾರೆ. ಅದನ್ನೇ ಹೇಳಿದೆ ನಾನು. ನಕ್ಕರು. ಅಂದೇ ಅವರು ಹೊರಟುಬಿಡುವವರಿದ್ದರು. ನಾನು ವಿಜಯನಗರಂಗೆ ಹೋಗಬೇಕಿತ್ತು. ಕಾಕಿನಾಡ ಬಳಿ ಅವರ ಶಾಲೆಯನ್ನು ನೋಡೆಂದರು. ಭಾರವಾದ ಮನದಿಂದ ನನ್ನ ಕೆಲಸಕ್ಕೆ ಹೊರಟುಬಿಟ್ಟೆ. ಧೋನಿ ನೂರೆಪ್ಪತ್ತೈದು ರನ್ ಚಚ್ಚಿದ್ದ ಸ್ಟೇಡಿಯಮ್ ಮೂಲಕ ವಿಜಯನಗರಂ ತಲುಪಿದೆ. ಎಲ್ಲೆಡೆ ಪಾರ್ಟ್‌ನರ್‌ಗಳು ಆದರದಿಂದ ಸ್ವಾಗತಿಸಿ, ಅವರ ವಿದ್ಯಾರ್ಥಿಗಳಿಗೆ ನಾನು ಸೂಕ್ತ ಸಲಹೆಗಳನ್ನು ನೀಡಲು ಅನುವು ಮಾಡಿಕೊಡುತ್ತಿದ್ದರು. ಸರ್ಕಾರಿ ಅಧಿಕಾರಿಗಳ ಬಳಿ ನಮಗೆ ಬರಬೇಕಾದ ಹಣದ ಬಗ್ಗೆ ಮಾತನಾಡಿ  ವಿಶಾಖಪಟ್ಟಣಂಗೆ ವಾಪಸ್ ಬಂದೆ. ಅವರು ಹೊರಟುಬಿಟ್ಟಿದ್ದರು ಹೈದರಾಬಾದ್‌ಗೆ. ಯಾರೈ ಅವರ್ ಎಂದು ಅರಿವಾಗಿರಬೇಕು ನಿಮಗೆ. ನನ್ನ ಫೇವರಿಟ್ ಲೇಖಕ  ಯ...

ಯತಿ ಸ್ವಂತೀ -315

Image
12-11-2018 ಬೆಳಗ್ಗೆ ಸಿಕಂದರಾಬಾದ್‌, ನಂತರ ನಾಂಪಲ್ಲಿಯನ್ನು ಆಟೋದಲ್ಲಿ ತಲುಪಿದೆ. ಅಂದು ಅಲ್ಲಿ ಲೋಕಲ್ ಟೂರು. ರಾತ್ರಿ ಸ್ಲೀಪರ್ ಬಸ್ ಹತ್ತಿ ವಿಜಯವಾಡಕ್ಕೆ ಹೋದೆ. ಈ ಸ್ಲೀಪರ್ ಬಸ್‍ನ ಬರ್ತ್ ರೈಲುಗಾಡಿಯ ಬರ್ತ್‌ ಹೋಲುತ್ತದೆ. ನೆಮ್ಮದಿಯ ನಿದ್ರಿಸುವ ಮಾಡುವ ಪ್ರಯತ್ನ ಮಾಡಬಹುದು. ಆದರೆ ಸಾಂಗ್ಲಿಗೆ ಹೋದ ಬಸ್ಸಿನ ಸ್ಲೀಪರ್‍ನಲ್ಲಿ ಇಬ್ಬರು ಮಲಗಬೇಕು. ಅದರಲ್ಲಿ ಒಬ್ಬರು ಮಲಗಿದರೂ ತೊಂದರೆ. ಬಸ್ ತಿರುಗಿದಾಗಲೆಲ್ಲ ಉರುಳಾಡಬೇಕು! ಬೆಲ್ಟ್ ಪ್ರೊವೈಡ್ ಮಾಡಿಕೊಟ್ಟರೆ ಅಲುಗಾಡದೇ ಮಲಗಬಹುದು! ಇಂತಹ ಬಸ್ಸಿನಲ್ಲಿ ಪಾಂಡಿಚೆರಿಯಿಂದ ಒಮ್ಮೆ ಬೆಂಗಳೂರಿಗೆ ಪಯಣಿಸಿದ್ದೆ.   ವಿಜಯವಾಡದ ಕೆಲಸ ಮುಗಿಸಿ ಮರುದಿನ ಬೆಳಗ್ಗೆ ಹೊರಡುವ ಪ್ಲಾನ್ ಮಾಡಿದ್ದೆ. ಆಗ ಬಂದಿತು ಗುಂಟೂರಿನಿಂದ ತುರ್ತು ಕರೆ. ಸ್ಥಳೀಯ ಸರ್ಕಾರೀ ಅಧಿಕಾರಿಗಳ ಜೊತೆ ಆ ಸಂಜೆ ಮೀಟಿಂಗ್ ಎಂದು ಅರಿತು ಆಗಲೇ ಗುಂಟೂರಿಗೆ ಹೊರಟೆ. ಮೂವತ್ತು ಕಿಮೀ ದೂರವನ್ನು ಬಸ್ಸಿನಲ್ಲಿ ಕ್ರಮಿಸಿದೆ. ಸಂಜೆ ಮೀಟಿಂಗ್ ಮುಗಿಸಿ ನಾಗಾರ್ಜುನ ಹೊಟೇಲ್‌ನಲ್ಲಿ ಉಳಿದುಕೊಂಡು ಮರುದಿನ ವಿದ್ಯಾರ್ಥಿಗಳನ್ನು ಭೇಟಿ ಮಾಡಿದೆ. ಉದ್ಯೋಗ ಕೊಡಿಸುತ್ತಾರೆ ನಮ್ಮ ಕಂಪೆನಿಯವರು ಈ ಮುಫತ್ ತರಬೇತಿ ಪಡೆದರೆ ಎಂಬ ಮಾತು ಎಲ್ಲೆಡೆ ಹರಡಿತ್ತು. ಉದ್ಯೋಗಾವಕಾಶ ಕೊಡಿಸುತ್ತೇವೆ ಎಂದು ಎಲ್ಲ ಕಡೆ ತಿದ್ದುಪಡಿ ಮಾಡಿದೆ ನಾನು ಮಾತಾಡಿದೆಡೆಯಲ್ಲೆಲ್ಲಾ. Reply...

ಯತಿ ಸ್ವಂತೀ -314

11-11-2018 ರಾತ್ರಿ ವಾರಂಗಲ್‍ನ ಸುಮಾರಾಗಿದ್ದ ಹೊಟೇಲ್‌ನಲ್ಲಿದ್ದು ಬೆಳಗ್ಗೆ ಕರೀಂನಗರಕ್ಕೆ ಹೊರಟೆ. ಹಿಂದೊಮ್ಮೆ ನನ್ನ ಬಾಸ್ ಒಬ್ಬರು ಬೆಂಗಳೂರಿನಿಂದ ನನ್ನೊಂದಿಗೆ ಕರೀಂನಗರಕ್ಕೆ ಬಂದಿದ್ದ ನೆನಪು. ಬೆಂಗಳೂರಿನಿಂದ ಹೈದರಾಬಾದ್‌ಗೆ ವಿಮಾನ. ಅಲ್ಲಿಂದ ಹೈದರಾಬಾದ್‌ ಬಸ್ ನಿಲ್ದಾಣಕ್ಕೆ ಬಸ್. ಆಮೇಲೆ ಮತ್ತೊಂದು ಬಸ್ಸಿನಲ್ಲಿ ಕರೀಂನಗರ. ಅಲ್ಲಿ ಆವತ್ತು ಉಳಿದುಕೊಳ್ಳದೇ ರಾತ್ರಿ ಆದಿಲಾಬಾದ್‌ಗೆ ಬಸ್ ಹತ್ತಿದೆವು. ಆ ಕಾಡಿನ ರಸ್ತೆಯಲ್ಲಿ ಪ್ರಯಾಣಿಕರನ್ನು ದಾರಿಗಳ್ಳರು ತಡೆಗಟ್ಟಿದ್ದಾರೆಂದು ಕೇಳಿದ್ದೆ. ನಮ್ಮ ಪುಣ್ಯ! ಯಾರೂ ನಮ್ಮ ಬಸ್‌ಗೆ ಅಡ್ಡ ಹಾಕಲಿಲ್ಲ! ಬೆಳಗ್ಗೆ ಆದಿಲಾಬಾದ್ ತಲುಪಿದರೆ ಹೊಟೇಲ್ ರೂಂ ಸಿಗದೇ ಮೂರು ಹೊಟೇಲ್‌ಗಳಿಗೆ ಆಟೋದಲ್ಲಿ ತಿರುಗಾಟಗಳಿಂದ ನಿಜವಾಗಿಯೂ ಬಲು ಆಯಾಸವಾದ ಸಮಯವದು. ಈ ಸಲ ಬೆಳಗ್ಗೆ ಕರೀಂನಗರ ತಲುಪಿ ಕೆಲಸ ಮುಗಿಸಿ ಅಲ್ಲಿನ ಒಳ್ಳೆಯ ಹೊಟೇಲ್‌ನಲ್ಲಿದ್ದು ಬೆಳಗ್ಗೆ ಆದಿಲಾಬಾದ್. ಮಳೆ ಆ ಸಲ ಆ ಊರಲ್ಲಿ. ಹಾಗೆಯೇ ಪಾರ್ಟ್‌ನರ್ ಮತ್ತು ಕೆಲವು ಗ್ರಾಹಕರ ಭೇಟಿ ಮಾಡಿ ರಾತ್ರಿ ಸ್ಟೇಶನ್‌ಗೆ ಬಂದೆ. ಯಥಾಪ್ರಕಾರ ಕತ್ತಲೆ. ರೈಲು ಹೊರಡುವವರೆಗೂ ಜನರ ಸುಳಿವೇ ಇರದು.

ಯತಿ ಸ್ವಂತೀ -313

10-11-2018 ನನ್ನ ದೊಡ್ಡ ಟ್ರಿಪ್‌ನ ಬಗ್ಗೆ ನೋಡೋಣ. ನಾನು ಊರುಗಳ ಪಟ್ಟಿ ಮಾಡಿಕೊಂಡು ಬಾಸ್ ಬಳಿ ಹೋದೆ. ಅವರು ಅದನ್ನು ಒಮ್ಮೆ ನೋಡಿ, ಯಾಕೆ ಉಳಿದ ಜಿಲ್ಲೆಗಳನ್ನು ಕೂಡ ನೋಡಿ ಬರಬಾರದು? ಎಂದರು. ಸರಿ, ನಮ್ಮ ಟಿಕೆಟಿಂಗ್ ಸೆಲ್‌ಗೆ ಹೋದೆ. ನನ್ನ ಟೂರು ನೋಡಿ ಬೆರಳು ಕಚ್ಚಿದ (ಅವನದೇ!). ಒಟ್ಟಿನಲ್ಲಿ ಎಲ್ಲ ಪ್ರಯಾಣಗಳ ಟಿಕೆಟ್ ಪಡೆದು ಹೊರಟೆ. ರಾತ್ರಿ ಯಶವಂತಪುರದಿಂದ ಸಿಕಂದರಾಬಾದ್‌ಗೆ ಹೊರಟೆ. ಯಥಾಪ್ರಕಾರ ನನ್ನ ಗೆಳೆತನ ನನ್ನ ಮೊಬೈಲ್‌ಗೆ ತುಂಬಿಕೊಂಡಿದ್ದ ರಫಿ ಲತಾ ಕಿಶೋರ್ ಮುಕೇಶ್ ರಾಜಣ್ಣ ಪಿಬಿಎಸ್ ಎಸ್ಪೀಬಿ ಜಾನಕಿ ಸುಶೀಲ ಮುಂತಾದವರ ಮಧುರ ಗಾನ. ಬೆಳಗ್ಗೆ ಅದೇ ಹರ್ಷ ಹೊಟೇಲ್. ಶುಚಿ ರುಚಿ ತಿಂಡಿ. ನಡೆದು ನಮ್ಮ ಹೈದರಾಬಾದ್ ಆಫೀಸ್ ತಲುಪಿದೆ. ಅಲ್ಲಿಯೂ ಎಲ್ಲ ಯುವಕರೂ ದೋಸ್ತ್‌ಗಳು. ಪಟಪಟನೆ ತೆಲುಗು ಮಾತನಾಡಿದರು. ನಾನೂ ಅಷ್ಟೇ ತೆಲುಗು ಸುಲಭವಾಗಿ ಬಳಸಿದೆ. ಅಂದು ಬೆಳಗ್ಗೆ ಸರ್ಕಾರೀ ಕಛೇರಿಗಳ ಮುಖ್ಯ ಶಾಖೆಯ ಅಧಿಕಾರಿಗಳ ಭೇಟಿ ಮಾಡಿದೆ. ಮರುದಿನ ಬೆಳಗ್ಗೆ ಸಿಕಂದರಾಬಾದ್‌ಗೆ ಹೋಗಿ ಅಲ್ಲಿ ಕೃಷ್ಣ ಎಕ್ಸ್‌ಪ್ರೆಸ್ ಏರಿ ವಾರಂಗಲ್ ತಲುಪಿದೆ. ಕೆಲಸ ಮುಗಿಸಿ ಆ ಊರಲ್ಲಿದ್ದ ಕಾಕತೀಯ ಗುಡಿಗೆ ಹೋದೆ. ಸಾವಿರ ಕಂಬಗಳ ದೇವಾಲಯ ಅದು. ನಮ್ಮ ಮೂಡಬಿದರೆಯ ಸಾವಿರ ಕಂಬದ ಬಸದಿಗೂ ಇದಕ್ಕೂ ಕಂಬಗಳ ಜೋಡಣೆಯಲ್ಲಿ ಬಹಳ ವ್ಯತ್ಯಾಸ ಇದೆ.

ಯತಿ ಸ್ವಂತೀ 312

09-11-2018 ಒಮ್ಮೆ ಚಿತ್ತೂರಿಗೆ ಹೋಗಿದ್ದೆ. ಆ ಊರು ಹತ್ತಿರ ಆಗುತ್ತಿದ್ದಂತೆ ನಮ್ಮ ಮೊಬೈಲ್‌ಗಳು ಕನ್‌ಫ್ಯೂಸ್ ಆಗಿ ತಮಿಳುನಾಡಿಗೆ ಸ್ವಾಗತ, ಆಂಧ್ರಪ್ರದೇಶಕ್ಕೆ ಸ್ವಾಗತ ಎಂದು ಸಂದೇಶ ನೀಡುತ್ತವೆ. ಮೂರು ರಾಜ್ಯಗಳ ಗಡಿ ಅದಿರಬೇಕು. ಕೆಲಸ ಮುಗಿಸಿದ ನಂತರ ನಮ್ಮ ಕಂಪೆನಿಯ ಪಾರ್ಟ್‌ನರ್ ನನ್ನನ್ನು ಅಲ್ಲಿಗೆ ಹನ್ನೆರಡು ಕಿಮೀ ದೂರದ ಕಾಣಿಪಾಕಂ ಎನ್ನುವ ಊರಿಗೆ ಕರೆದುಕೊಂಡು ಹೋದರು. ಅಲ್ಲೊಂದು ವಿಶೇಷ ಗಣಪತಿ ವಿಗ್ರಹವಿದೆ. ಆ ಮೂರ್ತಿ ಪ್ರತಿ ವರ್ಷ ಒಂದಿಷ್ಟಿಷ್ಟೇ ನೆಲದಿಂದ ಮೇಲೆ ಬರುತ್ತಿದೆಯಂತೆ. ಆ ಕಾರಣದಿಂದಲೇ ಆ ಮೂರ್ತಿಗೆ ಪ್ರತಿ ವರ್ಷ ಹೊಸ ಆಭರಣಗಳನ್ನು ಮಾಡಿಸುತ್ತಾರಂತೆ. ನನ್ನ ಮುಖ ನೋಡಿ ಏನನ್ನಿಸಿತೋ, ವಿಗ್ರಹದ ಬಲು ಹತ್ತಿರದ ಹೊಸ್ತಿಲಿನ ಆಚೆಯವರೆಗೆ ಬರಲು ಆಹ್ವಾನಿಸಿದರು ಪೂಜಾರಿ. ಕಾಣಿಪಾಕಂ ಗಣಪತಿಯನ್ನು ಬಹಳ ಶಕ್ತಿಯುತ ದೇವರೆನ್ನುತ್ತಾರೆ. ಅನೇಕ ನ್ಯಾಯಮೂರ್ತಿಗಳು ಅಂತಿಮ ತೀರ್ಪು ನೀಡುವ ಹಿಂದಿನ ದಿನ ಬಂದು ಭಕ್ತಿಯಿಂದ ನಮಿಸುವುದರಿಂದ ಅವರ ನ್ಯಾಯ ತೀರ್ಮಾನ ಸರಿಯಾಗಿ ಇರುವುದೆಂಬ ಪ್ರತೀತಿ ಇದೆ. ಆ ಪಾರ್ಟ್‌ನರ್ ಅಚ್ಚರಿಯಿಂದ 'ಇದು ವಿಶೇಷ ಸರ್. ಇಷ್ಟು ದೂರ ಯಾರನ್ನು ಬಿಟ್ಟಿದ್ದನ್ನೂ ನಾನು ನೋಡಿಲ್ಲ' ಎಂದು ನನಗೆ ಹೇಳಿದ ನಾವು ಹೊರಗೆ ಬಂದಾಗ. ನಾನು ಅದೃಷ್ಟವಂತ..!

ಯತಿ ಸ್ವಂತೀ -311

08-11-2018 ಯತೀ... ಒಂದು ರೌಂಡ್ ಟ್ರಿಪ್ ರೆಡಿ ಮಾಡು ಎಂದರು ನನ್ನ ಬಾಸ್.  ಇದಕ್ಕೆ ಮುಂಚೆ ನನ್ನ ತೆಲುಗು ನಾಡಿನ ಪಯಣ ಇನ್ನೂ ಅನೇಕ ಸಲ ಆಗಿರುವುದು ಈಗ ನೆನಪಾಗುತ್ತಿದೆ.  ಇದು ಹೆಡ್ ಆಫೀಸ್‌ನಲ್ಲಿ ಇದ್ದ ಸಮಯ. ತಿರುಮಲ ತಿರುಪತಿ ದೇವಸ್ಥಾನದವರಿಗೆ ನಮ್ಮ ಉತ್ಪಾದನೆಯನ್ನು ವಿಶೇಷವಾಗಿ ಮಾರ್ಪಡಿಸಿ ಮಾರಾಟ ಮಾಡುವ ಆರ್ಡರ್ ಬಂದಿತು. ಮಾರ್ಕೆಟಿಂಗ್ ಇಲಾಖೆಯ ನಾನು ಆ ಪ್ರಾಜೆಕ್ಟ್ ಲೀಡರ್ ಆದೆ. ಬಸ್‌ನಲ್ಲಿ ತಿರುಪತಿಗೆ ಹೋಗಿ ಹೊಟೇಲ್‌ನಲ್ಲಿ ರೂಂ ಮಾಡಿ ಅಲ್ಲಿಯೇ ಇದ್ದ ಟಿಟಿಡಿ ಆಫೀಸ್‌ನಲ್ಲಿ ಡಿಸ್ಕಶನ್.  ಹುಂಡಿಗೆ ಹಾಕಲ್ಪಟ್ಟ ನೋಟುಗಳನ್ನು ಬ್ಯಾಂಕ್‌ಗೆ ಡಿಪಾಜಿಟ್ ಮಾಡುವ ವೈಖರಿಯೇ ವಿಶಿಷ್ಟ. ಅಲ್ಲಿನ ಮುಖ್ಯ ಹಣಕಾಸು ಅಧಿಕಾರಿ ನಮ್ಮನ್ನು ಬೆಳಗ್ಗೆ ಒಮ್ಮೆ ಭೇಟಿ ಮಾಡಿ ಮತ್ತೆ ಅಂದಿನ ಮೀಟಿಂಗನ್ನು ರಾತ್ರಿ ಎಂಟಕ್ಕೆ ಇಟ್ಟುಕೊಳ್ಳುತ್ತಿದ್ದರು. ಏಕೆಂದು ನಂತರ ತಿಳಿಯಿತು. ಆತ ಮೊದಲು ಪ್ರೈವೇಟ್ ಸಾಫ್ಟ್‌ವೇರ್ ಕಂಪೆನಿಯೊಂದರಲ್ಲಿ ಉದ್ಯೋಗಿ ಆಗಿದ್ದರೆಂದು... ಆದತ್ ಸೇ ಮಜಬೂರ್! ನಮ್ಮ ಈ ಸ್ವಕಾರ್ಯದ ನಡುವೆ ಸ್ವಾಮಿಕಾರ್ಯ ಮಾಡಬೇಕಿತ್ತಲ್ಲವೇ! ಟಿಟಿಡಿಯಲ್ಲಿ ಅನೇಕ ಇಲಾಖೆಗಳು. ಶಾಲೆ, ಕಾಲೇಜು, ಆಸ್ಪತ್ರೆ, ಲಾಡು, ಆಭರಣ, ನೋಟುಗಳು, ಚಿಲ್ಲರೆ ನಾಣ್ಯಗಳು ಮತ್ತು ಇನ್ನೂ ಅನೇಕ ಇಲಾಖೆಗಳು. ಪ್ರತಿ ಇಲಾಖೆಗೆ ಹೋದಾಗಲೂ ಆ ಇಲಾಖೆಯ ಮುಖ್ಯಸ್ಥರ ಬಳಿ ಒಂದು ಪತ್ರ ಪಡೆಯುವುದು. ತಿರುಮಲ ಬೆಟ್ಟವನ್ನು ಬಸ್ ಹಿಡಿದು ಹತ್ತುವುದು. ಅಲ್ಲ...

ಯತಿ ಸ್ವಂತೀ -310

07-11-2018 ನಾಂಪಲ್ಲಿ ಸ್ಟೇಶನ್ ಬಳಿಯಿದ್ದ ಹೈದರಾಬಾದ್ ಹರ್ಷ ಹೊಟೇಲ್ ನನ್ನ ಸ್ಥಾವರವಾಗಿತ್ತು. ಬೆಳಗ್ಗೆ ತಿಂಡಿ ಹೇಗೂ ಕಾಂಪ್ಲಿಮೆಂಟು. ಅಲ್ಲೇ ತಗೊಳ್ತಿದ್ದೆ. ಅಲ್ಲಿದ್ದ ಕನ್ನಡ ಬಲ್ಲ ಎಲ್ಲ ವೆಯ್ಟರುಗಳೂ ನನ್ನನ್ನು ಆದರದಿಂದ ಮಾತನಾಡಿಸುತ್ತಿದ್ದರು. ಕೆಲವು ದಿನಗಳ ರಾತ್ರಿ ಊಟಕ್ಕೆ ನನ್ನ ಅದೇ ಗೆಳೆಯ ಬರುತ್ತಿದ್ದ. ಅವನ ಬೈಕ್ ಅಥವಾ ಕಾರಿನಲ್ಲಿ ಹೈದರಾಬಾದ್ ಸುತ್ತುತ್ತಿದ್ದೆವು. ತೆಲುಗಿನವರಂತೆ ನಾನೂ ಸಿನಿಮಾಪ್ರಿಯ. ಸೋ ಅನೇಕ ಸಿನಿಮಾಗಳನ್ನು ನೋಡಿದ ನಂತರ ರಾತ್ರಿ ಹೊಟೇಲ್ ಡ್ರಾಪ್ ಮಾಡಿ ಹೊರಟುಬಿಡುತ್ತಿದ್ದ. ಒಮ್ಮೆ ಕಾಚಿಗೂಡದಿಂದ ಬೆಂಗಳೂರಿಗೆ ರೈಲು ಟಿಕೆಟ್ ಬುಕ್ ಮಾಡಿಸಿದ್ದೆ. ನನ್ನ ಕಂಪೆನಿಯಲ್ಲಿ ಟಿಕೆಟ್ ಬುಕಿಂಗ್ ಮಾಡುತ್ತಿದ್ದ ಹುಡುಗರು ಮಹಾ ಎಫಿಶಿಯೆಂಟ್.ನಾನೂ ಕನ್‌ಫರ್ಮ್ಡ್ ಟಿಕೆಟ್ ಪಡೆಯದೇ ಹೊರಡುತ್ತಿರಲಿಲ್ಲ. ಹಿಂದಿನ ರಾತ್ರಿ ಹನ್ನೆರಡು ಗಂಟೆ ಸುಮಾರಿಗೆ ಪ್ರಸಾದ್ ಸಿನಿಮಾಸ್‍ನಲ್ಲಿ ಯಾವುದೋ ತೆಲುಗು ಸಿನೆಮಾ ನೋಡಿ ಬರುವಾಗ ಹುಸೇನ್ ಸಾಗರ್ ಹಿಂಭಾಗಕ್ಕೆ ಬಂದಾಗ (ಬುದ್ಧನ ಪ್ರತಿಮೆಯ ಬೆನ್ನಿನ ಭಾಗದ ಕೆರೆಗೆ ಹಿಂಭಾಗ ಎನ್ನುತ್ತಿದ್ದೇನೆ!) ಅಲ್ಲಿ ಒಂದು ಕ್ರೇನ್ ಮತ್ತು ಅನೇಕ ಲಾರಿಗಳನ್ನು ಕಂಡೆ. ಪ್ರತಿ ಲಾರಿಯ ಮೇಲೆ ಗಣೇಶ ವಿಗ್ರಹ. ಸರತಿಯಲ್ಲಿ ಕೆರೆಯಲ್ಲಿ ಪ್ರತಿಮೆಯ ವಿಸರ್ಜನೆಗೆ ಕಾದಿದ್ದರು. ಮರುದಿನ ಸಂಜೆ ಆರು ಗಂಟೆ ಸುಮಾರಿಗೆ ನನ್ನ ರೈಲು ಬೆಂಗಳೂರಿಗೆ. ನನ್ನ ಗೆಳೆಯ ಬಂದ. ಸ್ಥಳೀಯ ಸುದ್ದಿ ಛಾನೆಲ್ ಆನ್ ಮಾಡಿ...

ಯತಿ ಸ್ವಂತೀ -309

06-11-2018 ನನ್ನ ಸೀಟು ರೀಜಿನಲ್ ಆಫೀಸ್‌ನಲ್ಲಿ. ಆದರೆ ನನ್ನ ಬಾಸ್ ಹೆಡ್ ಆಫೀಸಿನಲ್ಲಿ! ಮುಂಬೈನಲ್ಲಿ ಬಾಸ್ ಇರುವುದಕ್ಕಿಂತ ಇದು ಉತ್ತಮ. ಬೇಕಾದಾಗ ಹೊಸೂರು ರಸ್ತೆಯ ಆಫೀಸಿಗೆ ಹೋಗಿ ಬಾಸ್‍ನ ಭೇಟಿ ಸುಲಭವಾಗಿ ಆಗಬಹುದಿತ್ತು! ಅದು ಆಗಸ್ಟ್ 2009. ಇನ್ನೊಂದು ಟೂರ್ ಮಾಡಿಬಿಡು ಎಂದರು ಬಾಸ್. ಆ ಟೂರ್ ಮಾಡುವಾಗ ನನಗೆ ಜೀವನವೇ ಗಲಿಬಿಲಿ ಎನಿಸಿತ್ತು. ಬೆಳಗ್ಗೆ ಕಣ್ಣು ಬಿಟ್ಟೊಡನೆ ನಾನು ಎಲ್ಲಿದ್ದೇನೆ ಎನ್ನುವ ಕನ್‌ಫ್ಯೂಶನ್. ಬಸ್‌ನಲ್ಲಿರುವೆನಾ? ರೈಲಿನಲ್ಲಿರುವೆನಾ? ಹೊಟೇಲ್‌ನಲ್ಲಿರುವೆನಾ? ಹೊಟೇಲ್ ಆದರೆ ಯಾವೂರ ಹೊಟೇಲ್? ಮೊದಲೇ ಹೇಳಿದಂತೆ ನಿಜಕ್ಕೂ ಅದೊಂದು ಗಲಿಬಿಲಿ ಟೂರ್! ನನ್ನ ಪ್ರಯಾಣ ಬೆಂಗಳೂರಿನಿಂದ ಆರಂಭವಾಯಿತು. ರಾತ್ರಿ ರೈಲುಗಾಡಿ ಹತ್ತಿ ಹೈದರಾಬಾದ್‌ಗೆ ಹೊರಟೆ. ಅರೆ... ಒಂದು ವಿಷಯ ಮರೆತುಬಿಟ್ಟೆ. ಅದನ್ನು ಹೇಳಿ, ನಂತರ ಈ ಟೂರ್ ಮುಂದುವರಿಸುತ್ತೇನೆ. ಒಮ್ಮೆ ಹೈದರಾಬಾದ್‌ಗೆ ಹೋದಾಗ ಪರಸ್ಪರ ಪರಿಚಿತರ ಮೂಲಕ ಯುವಕನೊಬ್ಬನ ಪರಿಚಯವಾಯಿತು. ಅವನೊಂದಿಗೆ ಒಮ್ಮೆ ಹರ್ಷ ಹೊಟೇಲ್‌ನಲ್ಲಿ ಊಟ ಮಾಡುತ್ತಿರುವಾಗ ವೆಯ್ಟರ್ ಒಬ್ಬ ನನ್ನ ಯುವ ಗೆಳೆಯನನ್ನು ಸಾರ್ ನೀವು ಹೀರೋನಾ ಎಂದು ಕೇಳಿದ್ದ! ಆ್ಯಕ್ಚುಯಲೀ ಆತ ಸಿನಿಮಾ ಒಂದರಲ್ಲಿ ಪುಟ್ಟ ಪಾತ್ರ ವಹಿಸಿದ್ದ. ಇನ್ನೊಮ್ಮೆ ಬೆಳಗ್ಗೆ ಅದೇ ಹೊಟೇಲ್‌ನಲ್ಲಿ ತಿಂಡಿ ತಿನ್ನುವಾಗ ನಿರ್ದೇಶಕ ನಾಗಾಭರಣ ಸಿಕ್ಕಿದ್ದರು. ನಿಮ್ಮ ಹತ್ತಿರ ಜಗಳ ಆಡಕ್ಕೆ ಏಳು ವರ್ಷಗಳ ಕಾಲದಿಂದ ಕಾದಿದ್ದೇನೆ ಎಂದೆ....

ಯತಿ ಸ್ವಂತೀ -308

05-11-2018 ಗೊಲ್ಲಪೂಡಿ ಎನ್ನುವ ಜಾಗ ನಮ್ಮೂರಿಗೆ ಯಲಹಂಕ ಹೇಗೋ ಹಾಗೆ ಅದು ವಿಜಯವಾಡಕ್ಕೆ. ತೆಲುಗು ನಟ ಮಾರುತಿ ರಾವ್ ಈ ಊರಿನ ಹೆಸರನ್ನು ಪ್ರಸಿದ್ಧ ಮಾಡಿದರು. ನಮ್ಮ ಸಂಪರ್ಕ ಹೊಂದಿದ್ದ ಸರ್ಕಾರಿ ಅಧಿಕಾರಿಯನ್ನು ನೋಡಲು ಅಲ್ಲಿಗೆ ಅನೇಕ ಸಲ ಆಟೋದಲ್ಲಿ ಹೋಗುತ್ತಿದ್ದ ನೆನಪು.  ಒಮ್ಮೆ ವಿಜಯವಾಡದಿಂದ ಹೌರಾ ಮೆಯಿಲ್‌ನಲ್ಲಿ ಹೊರಟೆ. ಯಾವ ಪ್ಲಾಟ್‌ಫಾರಂ ಎಂದು ಬರೆದಿರಲಿಲ್ಲ. ವಿಚಾರಣೆಯಲ್ಲಿ ಕೇಳಿದಾಗ 4 ಅಥವಾ 7 ನೇ ಪ್ಲಾಟ್‌ಫಾರಂ ಅಂದಳಾ ಪುಣ್ಯಾತ್ಗಿತ್ತಿ! ಅಲ್ಲಿ ಹೆಚ್ಚು ಹೊತ್ತು ಆ ರೈಲು ನಿಲ್ಲದು. 'ಅಲ್ರೀ ಹ್ಯಾಗ್ರೀ ಕೊನೆಯ ಘಳಿಗೆಯಲ್ಲಿ ಓಡೋದು?' ಎಂದೆ. 'ಫುಟ್ ಓವರ್ ಬ್ರಿಡ್ಜ್ ಮೇಲೆ ನಿಲ್ಲಿ. ಘೋಷಣೆ ಕೇಳಿಸಿಕೊಂಡು ಆ ಪ್ಲಾಟ್‌ಫಾರಂ ತಲುಪಿ ರೈಲು ಹತ್ತಿ' ಎಂದು ಸಲಹೆ ನೀಡಿದಳು!  ಮತ್ತೊಬ್ಬ ಅಧಿಕಾರಿ 'ಬಂದರು'ನಲ್ಲಿ ಇದ್ದಾರೆ ಎಂಬ ವಿಷಯ ತಿಳಿಯಿತು. ಮಲ್ಲಾದಿ ಅವರ ಕೆಲವು ಕಾದಂಬರಿಗಳಲ್ಲಿ ಈ ಹೆಸರು ಓದಿದ್ದೆ. 'ಬಂದರು' ಎನ್ನುವ 'ಬಂದರು'ವಿನ ನಿಜವಾದ ಹೆಸರು ಮಛಲೀಪಟ್ಟಣಂ. ಮಛಲಿ ಅಂದರೆ ಗೊತ್ತಲ್ವಾ? ಮೀನು! ಟ್ಯಾಕ್ಸಿಯಲ್ಲಿ ಸುಮಾರು ಎರಡೆರಡು ಗಂಟೆಗಳ ಪ್ರಯಾಣ ಎರಡೂ ಕಡೆ. ಭಾರೀ ಸ್ಟ್ರೆಯಿನ್ ಆದ ಪಯಣ.  ಹೀಗೇ ಅನೇಕ ಸಲ ಆದಿಲಾಬಾದ್, ಕರೀಂನಗರ, ವಿಜಯವಾಡಗಳಿಗೆ ಹೋದೆ. ಅಲ್ಲಿನ ಸರ್ಕಾರೀ ಅಧಿಕಾರಿಗಳ ಬಳಿ ವಾಚಾಮಗೋಚರ ಬೈಯಿಸಿಕೊಂಡು ನನ್ನ ಪ್ರತಿಕ್ರಿಯೆಯನ್ನು ಕೇವಲ ನಗುವಿನ ರೂಪದಲ...

ಯತಿ ಸ್ವಂತೀ 307

04-11-2018 ಒಮ್ಮೆ ಕನಕದುರ್ಗಮ್ಮನ ಬೆಟ್ಟಕ್ಕೆ ಬೆಳಗ್ಗೆ ಬೇಗ ಹೋಗಿ ದರ್ಶನ ಮಾಡಿದೆವು. ಪಕ್ಕದಲ್ಲೇ ಇದ್ದ ಮಂಗಳಗಿರಿಯ ಪಾನಕದ ನರಸಿಂಹನ ದರ್ಶನ ಮಾಡಲಾಗಲಿಲ್ಲ. ಏಪ್ರಿಲ್ ತಿಂಗಳಲ್ಲಿ ಬೆಜವಾಡ (ಇದು ಹಳೆಯ ಹೆಸರು ವಿಜಯವಾಡಕ್ಕೆ) ಧಗಧಗ ಉರಿಯುತ್ತದೆ. ಕೃಷ್ಣ ನದಿ ತುಂಬಿ ಹರಿದಿದ್ದರೂ  ಸೆಕೆ ತಡೆಯಲಾಗದು. ಅಲ್ಲಿಂದ ಒಮ್ಮೆ ಮೂವತ್ತು ಕಿಮೀ ದೂರದ ಗುಂಟೂರು ತಲುಪಿದೆ. ಈಗ ಆಂಧ್ರ ಪ್ರದೇಶದ ಹೊಸ ರಾಜಧಾನಿ ಅಮರಾವತಿಯನ್ನು ಇದರ ಹತ್ತಿರ ಕಟ್ಟುತ್ತಿದ್ದಾರೆ. ನಾಗಾರ್ಜುನ ಅನ್ನೋ ಹೊಟೇಲ್ ತ್ರಿತಾರಾ ದರ್ಜೆಯದು. ಅದರಲ್ಲಿ ರೂಮ್ ಪಡೆದೆ. ಒಳ್ಳೆಯ ಊಟ. ನಿಜಕ್ಕೂ ಆ ಊರಿಗೆ ಬಹಳ ದೊಡ್ಡ ಹೊಟೇಲ್ ಆಗ. ಅಲ್ಲಿನ ಪಾರ್ಟ್‌ನರ್‌ ಆಫೀಸ್ ತಲುಪಿ ವಿದ್ಯಾರ್ಥಿಗಳಿಗೆ ಉದ್ಯೋಗದ ಪ್ರಾಮುಖ್ಯತೆಯ ಬಗ್ಗೆ ಮನವರಿಕೆ ಮಾಡಿದೆ. ಅಫ್ ಕೋರ್ಸ್ ತೆಲುಗು ಭಾಷೆಯಲ್ಲಿ! ಮತ್ತೆ ಹೈದರಾಬಾದ್‌ಗೆ ವಾಪಸ್ ಬಂದೆ. ಅಲ್ಲೆರಡು ದಿನವಿದ್ದು ಬೆಂಗಳೂರು ನಗರಕ್ಕೆ ಮರಳಿದೆ. ಇದೊಂದು ರೊಟೀನ್ ಆಯಿತು. ಏನು ಮಾಡುವುದು? ಕರ್ತವ್ಯದ ಕರೆ...

ಯತಿ ಸ್ವಂತೀ 306

  03-11-2018 ಒಮ್ಮೆ ನಾನು ನನ್ನ ವೈಜಾಗ್ ಸಹೋದ್ಯೋಗಿ ಇಬ್ಬರೂ ಸಿಕಂದರಾಬಾದ್‌ನಿಂದ ವಿಜಯವಾಡಾಗೆ ಹೊರಟೆವು. ರಾತ್ರಿ ಹತ್ತೂ ಮುಕ್ಕಾಲರ ಟ್ರೈನ್. ನಮ್ಮ ಕಂಪಾರ್ಟ್‌ಮೆಂಟಿನಲ್ಲಿ ಟಿಟಿಇ ಕೂಡ ಮಲಗಿದ. ವಿಜಯವಾಡಕ್ಕೆ ಎಂದಾಗ ಓ ಎಂದಿದ್ದ. ಅವನ 'ಓ' ಬಹಳ ಅರ್ಥವುಳ್ಳದ್ದಾಗಿತ್ತೆಂದು ಬಹಳ ಹೊತ್ತಿನ ನಂತರ ತೀರಾ ತಡವಾಗಿ ತಿಳಿಯಿತು. ಸರಿ.. ರೈಲು ಒಂದು ಊರಲ್ಲಿ ಬಹಳ ಹೊತ್ತು ನಿಂತಿತ್ತು. ನಾವು ಬೆಳಗ್ಗೆ ಐದು ಗಂಟೆಗೆ ವಿಜಯವಾಡ ತಲುಪಿ, ನಾಲ್ಕು ಗಂಟೆಗಳ ಕಾಲ ನಿದ್ದೆ ಮಾಡಿ ಹತ್ತು ಗಂಟೆ ಸುಮಾರಿಗೆ ಹತ್ತಿರ ಇದ್ದ ಪಾರ್ಟ್‌ನರ್‌ ಆಫೀಸ್ ತಲುಪಿ ಅಲ್ಲಿಗೆ ಬರಲಿದ್ದ ಸರ್ಕಾರೀ ಅಧಿಕಾರಿಗಳೊಂದಿಗೆ ವಿದ್ಯಾರ್ಥಿಗಳನ್ನು ಭೇಟಿ ಆಗಬೇಕಿತ್ತು. ರೈಲು ಕೊನೆಗೂ ಹೊರಟಿತು. ಟಿಟಿಇ ಈಗ ವಾಪಸ್ ಬಂದು, 'ಓ... ನೀವು ವಿಜಯವಾಡಕ್ಕೆ ಹೋಗಬೇಕಿತ್ತಲ್ವಾ? ಇದು ಹೋಗಲ್ಲ. ಅರ್ಧ ಟ್ರೈನು ವಿಜಯವಾಡಕ್ಕೆ ಈಗ ತಾನೇ ಹೊರಟಿತು. ಛೇ..' ಎನ್ನುವುದೇ! ನಾವು ತಬ್ಬಿಬ್ಬು. ಮಾಮೂಲಿ ದಿನ ಅಲ್ಲ. ವಿಶೇಷ ಮೀಟಿಂಗ್. ಹೇಗೆ ಸಮಯಕ್ಕೆ ತಲುಪುವುದು?

ಯತಿ ಸ್ವಂತೀ -305

02-11-2018 ನಾನು ಸರಿ ಸುಮಾರು ಐದು ತಿಂಗಳು ವಿಜಯವಾಡದಲ್ಲಿದ್ದೆ. ಅಲ್ಲಿಂದ ಅನೇಕ ಇಂಟೀರಿಯರ್ ಊರುಗಳಿಗೆ ಹೋದೆ. ಏಲೂರು, ನೂಜಿವೀಡು, ಗುಡಿವಾಡ, ಗೊಲ್ಲಪೂಡಿ, ಮುಂತಾದ ಊರುಗಳು. ಆ ಪುಟ್ಟ ಊರುಗಳಲ್ಲಿ 'ಜಾಬ್ ಮೇಳ' ಮಾಡಿದೆವು. ಅಲ್ಲೆಲ್ಲ ಮದುವೆಗಳು ಸಣ್ಣ ಪ್ರಾಯದಲ್ಲಿ ಜರುಗುವುದರಿಂದ ಮಕ್ಕಳು ಪದವಿ ಪಡೆದ ಸಮಯದಲ್ಲಿ ತಾಯ್ತಂದೆಯರ ಉದ್ಯೋಗದ ಸರ್ವೀಸ್ ಇನ್ನೂ ಹಲವು ವರ್ಷಗಳ ಕಾಲ ಇದ್ದಿರುತ್ತಿತ್ತು. ಅದಕ್ಕೇ ಮಕ್ಕಳನ್ನು ಬಹಳ ದೂರಕ್ಕೆ ಕೆಲಸಕ್ಕೆ ಕಳಿಸಲು ಇಚ್ಛಿಸುತ್ತಿರಲಿಲ್ಲವೇನೋ... ಫ್ರೀ ತರಬೇತಿ ಓಕೆ ಆಗಿತ್ತು ಅವರಿಗೆ. ಅವರೂರುಗಳಿಗೇ ಹೋಗಿ ಕೆಲಸಕ್ಕೆ ಸೇರಿ ಎಂದರೂ ಊಹೂಂ. ಆ ಸಮಯದಲ್ಲಿ మగధీర ಸಿನಿಮಾ ಬಿಡುಗಡೆ ಆಗಿ ಸೂಪರ್ ಹಿಟ್ ಆಗಿತ್ತು. ಪಾಪ... ರಾಂಚರಣ್ ನನಗೆ ಉದಾಹರಣೆಯಾಗಿ ಸಿಲುಕಿಕೊಳ್ಳುತ್ತಿದ್ದ! ಹೇಗೆನ್ನುವಿರಾ? 'ನನ್ನ ಜೊತೆ ಈ ಟ್ರೈನಿಂಗ್ ಮಾಡಿದೋನಿಗೆ ನನಗೆ ಬರೋ ಸಂಬಳಕ್ಕೆ ಡಬಲ್. ನನಗ್ಯಾಕೆ ಇಲ್ಲ?' ಅನ್ನೋ ಪ್ರಶ್ನೆ ಎಲ್ಲ ಕಡೆ ಕೇಳಿದರು ಮಕ್ಕಳು. ಪಲ್ಲಕ್ಕಿಯಲ್ಲಿ ಕೂರೋದೆಷ್ಟು ಜನ, ಹೊರೋರೆಷ್ಟು ಜನ ಎಂದು ಕೇಳಿದಾಗ ಉತ್ತರ ಸರಿಯಾಗಿ ಬರುತ್ತಿತ್ತು. 'ಮಗಧೀರ ಸಿನಿಮಾ ನೋಡದಿರೋರು ಕೈಯೆತ್ತಿ' ಅನ್ನುತ್ತಿದ್ದೆ. ಒಂದು ಕೈ ಕೂಡ ಮೇಲೆ ಎತ್ತಲ್ಪಡುತ್ತಿರಲಿಲ್ಲ!  'ನೋಡಿ ಮಕ್ಕಳಾ... ರಾಂಚರಣ್‌ಗೆ ಕೂಡ ಆತನ ತಂದೆ ಸಿನಿಮಾ ಸೇರಲು ಒಮ್ಮೆ ಸಹಾಯ ಮಾಡಬಹುದು. ಒಂದು ಸಿನಿಮಾ ಕೊಡಿಸಿರಬಹ...