ಯತಿ ಸ್ವಂತೀ 307


04-11-2018
ಒಮ್ಮೆ ಕನಕದುರ್ಗಮ್ಮನ ಬೆಟ್ಟಕ್ಕೆ ಬೆಳಗ್ಗೆ ಬೇಗ ಹೋಗಿ ದರ್ಶನ ಮಾಡಿದೆವು. ಪಕ್ಕದಲ್ಲೇ ಇದ್ದ ಮಂಗಳಗಿರಿಯ ಪಾನಕದ ನರಸಿಂಹನ ದರ್ಶನ ಮಾಡಲಾಗಲಿಲ್ಲ. ಏಪ್ರಿಲ್ ತಿಂಗಳಲ್ಲಿ ಬೆಜವಾಡ (ಇದು ಹಳೆಯ ಹೆಸರು ವಿಜಯವಾಡಕ್ಕೆ) ಧಗಧಗ ಉರಿಯುತ್ತದೆ. ಕೃಷ್ಣ ನದಿ ತುಂಬಿ ಹರಿದಿದ್ದರೂ  ಸೆಕೆ ತಡೆಯಲಾಗದು. ಅಲ್ಲಿಂದ ಒಮ್ಮೆ ಮೂವತ್ತು ಕಿಮೀ ದೂರದ ಗುಂಟೂರು ತಲುಪಿದೆ. ಈಗ ಆಂಧ್ರ ಪ್ರದೇಶದ ಹೊಸ ರಾಜಧಾನಿ ಅಮರಾವತಿಯನ್ನು ಇದರ ಹತ್ತಿರ ಕಟ್ಟುತ್ತಿದ್ದಾರೆ. ನಾಗಾರ್ಜುನ ಅನ್ನೋ ಹೊಟೇಲ್ ತ್ರಿತಾರಾ ದರ್ಜೆಯದು. ಅದರಲ್ಲಿ ರೂಮ್ ಪಡೆದೆ. ಒಳ್ಳೆಯ ಊಟ. ನಿಜಕ್ಕೂ ಆ ಊರಿಗೆ ಬಹಳ ದೊಡ್ಡ ಹೊಟೇಲ್ ಆಗ. ಅಲ್ಲಿನ ಪಾರ್ಟ್‌ನರ್‌ ಆಫೀಸ್ ತಲುಪಿ ವಿದ್ಯಾರ್ಥಿಗಳಿಗೆ ಉದ್ಯೋಗದ ಪ್ರಾಮುಖ್ಯತೆಯ ಬಗ್ಗೆ ಮನವರಿಕೆ ಮಾಡಿದೆ. ಅಫ್ ಕೋರ್ಸ್ ತೆಲುಗು ಭಾಷೆಯಲ್ಲಿ! ಮತ್ತೆ ಹೈದರಾಬಾದ್‌ಗೆ ವಾಪಸ್ ಬಂದೆ. ಅಲ್ಲೆರಡು ದಿನವಿದ್ದು ಬೆಂಗಳೂರು ನಗರಕ್ಕೆ ಮರಳಿದೆ. ಇದೊಂದು ರೊಟೀನ್ ಆಯಿತು. ಏನು ಮಾಡುವುದು? ಕರ್ತವ್ಯದ ಕರೆ...

Comments