ಯತಿ ಸ್ವಂತೀ 312
09-11-2018
ಒಮ್ಮೆ ಚಿತ್ತೂರಿಗೆ ಹೋಗಿದ್ದೆ. ಆ ಊರು ಹತ್ತಿರ ಆಗುತ್ತಿದ್ದಂತೆ ನಮ್ಮ ಮೊಬೈಲ್‌ಗಳು ಕನ್‌ಫ್ಯೂಸ್ ಆಗಿ ತಮಿಳುನಾಡಿಗೆ ಸ್ವಾಗತ, ಆಂಧ್ರಪ್ರದೇಶಕ್ಕೆ ಸ್ವಾಗತ ಎಂದು ಸಂದೇಶ ನೀಡುತ್ತವೆ. ಮೂರು ರಾಜ್ಯಗಳ ಗಡಿ ಅದಿರಬೇಕು. ಕೆಲಸ ಮುಗಿಸಿದ ನಂತರ ನಮ್ಮ ಕಂಪೆನಿಯ ಪಾರ್ಟ್‌ನರ್ ನನ್ನನ್ನು ಅಲ್ಲಿಗೆ ಹನ್ನೆರಡು ಕಿಮೀ ದೂರದ ಕಾಣಿಪಾಕಂ ಎನ್ನುವ ಊರಿಗೆ ಕರೆದುಕೊಂಡು ಹೋದರು. ಅಲ್ಲೊಂದು ವಿಶೇಷ ಗಣಪತಿ ವಿಗ್ರಹವಿದೆ. ಆ ಮೂರ್ತಿ ಪ್ರತಿ ವರ್ಷ ಒಂದಿಷ್ಟಿಷ್ಟೇ ನೆಲದಿಂದ ಮೇಲೆ ಬರುತ್ತಿದೆಯಂತೆ. ಆ ಕಾರಣದಿಂದಲೇ ಆ ಮೂರ್ತಿಗೆ ಪ್ರತಿ ವರ್ಷ ಹೊಸ ಆಭರಣಗಳನ್ನು ಮಾಡಿಸುತ್ತಾರಂತೆ. ನನ್ನ ಮುಖ ನೋಡಿ ಏನನ್ನಿಸಿತೋ, ವಿಗ್ರಹದ ಬಲು ಹತ್ತಿರದ ಹೊಸ್ತಿಲಿನ ಆಚೆಯವರೆಗೆ ಬರಲು ಆಹ್ವಾನಿಸಿದರು ಪೂಜಾರಿ. ಕಾಣಿಪಾಕಂ ಗಣಪತಿಯನ್ನು ಬಹಳ ಶಕ್ತಿಯುತ ದೇವರೆನ್ನುತ್ತಾರೆ. ಅನೇಕ ನ್ಯಾಯಮೂರ್ತಿಗಳು ಅಂತಿಮ ತೀರ್ಪು ನೀಡುವ ಹಿಂದಿನ ದಿನ ಬಂದು ಭಕ್ತಿಯಿಂದ ನಮಿಸುವುದರಿಂದ ಅವರ ನ್ಯಾಯ ತೀರ್ಮಾನ ಸರಿಯಾಗಿ ಇರುವುದೆಂಬ ಪ್ರತೀತಿ ಇದೆ. ಆ ಪಾರ್ಟ್‌ನರ್ ಅಚ್ಚರಿಯಿಂದ 'ಇದು ವಿಶೇಷ ಸರ್. ಇಷ್ಟು ದೂರ ಯಾರನ್ನು ಬಿಟ್ಟಿದ್ದನ್ನೂ ನಾನು ನೋಡಿಲ್ಲ' ಎಂದು ನನಗೆ ಹೇಳಿದ ನಾವು ಹೊರಗೆ ಬಂದಾಗ. ನಾನು ಅದೃಷ್ಟವಂತ..!
Comments
Post a Comment