ಯತಿ ಸ್ವಂತೀ -86
27-03-2018
ಪ್ರಾಯಶಃ 1983 ಇರಬಹುದು. ನನ್ನ ಅಮ್ಮ ಪ್ರಜಾಮತ ವಾರಪತ್ರಿಕೆ ಓದಿ 'ಈ ಹಾಳು ಕಾದ್ರಾ ಮುಂದಿನ ವಾರ ಆ ಪಾಪದ ಹುಡುಗಿ ತುಳಸಿಗೆ ಏನು ಕಾಟ ಕೊಡ್ತಾನೋ!' ಎಂದಾಗ ಅರೆ! ನನ್ನ ಅಮ್ಮ ಧಾರಾವಾಹಿ ಓದಿ ಈ ರೀತಿ ರಿಯಾಕ್ಟ್ ಆಗ್ತಿರೋದು ಇದೇ ಮೊದಲನೇ ಸಲ ಎಂದುಕೊಂಡೆ. ಆ ಧಾರಾವಾಹಿ ಬರೆದವರಾರೆಂದು ನೋಡಿದೆ. ಯಂಡಮೂರಿ ವೀರೇಂದ್ರನಾಥ್. ತೆಲುಗು ಮೂಲ. ಕನ್ನಡಕ್ಕೆ :ಬೇಲೂರು ಕೃಷ್ಣಕುಮಾರ್. ಓ ಇದು ಅನುವಾದ. ಸಾಮಾನ್ಯವಾಗಿ ಯದ್ದನಪೂಡಿ ಸುಲೋಚನಾ ರಾಣಿ ಮುಂತಾದ ಮಹಿಳಾ ಲೇಖಕಿಯರ ಕಾದಂಬರಿಗಳು ಕನ್ನಡಕ್ಕೆ ಬರುತ್ತಿದ್ದವು. ಈಗ ಯಾರೋ ಗಂಡಸರ ಕಾದಂಬರಿ ಎಂದುಕೊಂಡೆ. ಅಷ್ಟೇ. ಮುಂದೊಂದು ದಿನ ಬಿ. ವಿ. ವೈಕುಂಠ ರಾಜು ಅವರ 'ವಾರಪತ್ರಿಕೆ'ಯಲ್ಲಿ ಅಷ್ಟಾವಕ್ರ ಅನ್ನೋ ಧಾರಾವಾಹಿ ಅಕಸ್ಮಾತ್ ಓದಿದೆ. ಅಷ್ಟೇ! ದಬ್ಬೆಂದು ಅವರ ಶೈಲಿಗೆ ಬಿದ್ದು ಹೋದೆ. ಅಬ್ಬಾ... ಈ ಅನುವಾದವೇ ಇಷ್ಟು ಚೆನ್ನಾಗಿದ್ದರೆ ಇನ್ನು ಮೂಲಭಾಷೆಯಲ್ಲಿ ಹೇಗಿರಬಹುದು! ನಾನು 1969-72 ಹೈಸ್ಕೂಲ್ ಓದುವಾಗ ನನ್ನ ಗೆಳೆಯ ಪ್ರಸಾದ್ ಮನೆಯಲ್ಲಿ ಆಂಧ್ರಪ್ರಭ ವಾರಪತ್ರಿಕೆಯಲ್ಲಿ ಸಿನಿಮಾ ಪುಟದಲ್ಲಿ ತಾರೆಯರ ಚಿತ್ರಗಳ ಕೆಳಗೆ ಮುದ್ರಿಸಲ್ಪಟ್ಟಿದ್ದ ಅವರ ಹೆಸರುಗಳನ್ನು ಓದುತ್ತಿದ್ದೆ. ಕೆಲವು ಅಕ್ಷರಗಳನ್ನು ಓದಲು ಸಾಧ್ಯವಾಗುತ್ತಿಲ್ಲವೆನಿಸಿದಾಗ ಪ್ರಸಾದ್ ಅಕ್ಕಂದಿರಾದ ನಾಗವೇಣಿ ಮತ್ತು ವಿಮಲ ನನಗೆ ಅವನ್ನು ಓದಲು ಸಹಾಯ ಮಾಡುತ್ತಿದ್ದರು. ಈಗ ತೆಲುಗು ಕಲಿಯಲೇಬೇಕು. ನನ್ನ ಮನಸ್ತತ್ವ ಅದು. ಏನಾದರೂ ಬೇಕು ಎಂದರೆ ಬೇಕು. ಅಷ್ಟೇ. ಹಿಗ್ಗಿನ್ ಬಾಥಮ್ಸ್ ಪುಸ್ತಕ ಮಳಿಗೆಯಲ್ಲಿ ಲರ್ನ್ ತೆಲುಗು ಇನ್ ಥರ್ಟೀ ಡೇಸ್ ಕೊಂಡುಕೊಂಡೆ. ಅದು 1986 ಆರಂಭ. ಸುಮಾರು ಅರವತ್ತು ದಿನಗಳಲ್ಲಿ ಬರೆದೂ ಬರೆದೂ ಅಭ್ಯಾಸ ಮಾಡಿದೆ. ಅಷ್ಟರಲ್ಲಿ ನನಗೆ ಮದುವೆ ನಿಶ್ಚಯವಾಯಿತು. ಬಳೇಪೇಟೆ ಬುಕ್ ಹೌಸ್ ಅನ್ನೋ ಅಂಗಡಿಯಲ್ಲಿ ಸೆಕೆಂಡ್ ಹ್ಯಾಂಡ್ ದರದಲ್ಲಿ ಯಂಡಮೂರಿ ಅವರ ಮೊದಲ ಕಾದಂಬರಿಗಳನ್ನು ಕೊಂಡಿದ್ದೆ. ಮದುವೆಯ ನಂತರ ಕೂಡ ಎರಡೂ ಪುಸ್ತಕಗಳನ್ನು ಇಟ್ಟುಕೊಂಡು ಓದತೊಡಗಿದೆ. ಉದಾಹರಣೆಗೆ తులసీదలం ಮತ್ತು ವಂಶಿ ಅನುವಾದದ ತುಳಸೀದಳ ಜೊತೆಯಲ್ಲಿ ಇಟ್ಟುಕೊಂಡು ಓದಿ ಅರ್ಥ ಮಾಡಿಕೊಳ್ಳಲು ಆರಂಭಿಸಿದೆ. ಇದಕ್ಕೆ ಮೊದಲು ಯಂಡಮೂರಿ ಅವರ ಕಾದಂಬರಿ ರಕ್ತಸಿಂಧೂರ ಓದಿ ಅವರಿಗೊಂದು ರಿಪ್ಲೈ ಕಾರ್ಡ್ ಬರೆದಿದ್ದೆ. ನಿಮ್ಮದು ಕಮ್ಯೂನಿಸ್ಟ್ ತತ್ವವಾ ಎಂದು ಕೇಳಿದ್ದೆ. ಹೈದರಾಬಾದ್ಗೆ ಬಂದಾಗ ನನ್ನನ್ನು ಭೇಟಿ ಆಗು ಎಂದು ಉತ್ತರಿಸಿದ್ದರು. ಕಾಯುತ್ತಿದ್ದವನು ಮುಂದಿನ ಕೆಲವೇ ದಿನಗಳಲ್ಲಿ ಅವರ ಮನೆಗೆ ಹೋದೆ. ನನ್ನ ತೆಲುಗು ಪತ್ರವೊಂದನ್ನು ನೋಡಿ ನನಗೆ ಹದಿನೇಳು ವರ್ಷ ಇರಬಹುದು ಎಂದುಕೊಂಡರಂತೆ! ನನಗಾಗ ಹತ್ತಿರ ಹತ್ತಿರ ಮೂವತ್ತು! ಆಗೆಲ್ಲ ಕ್ಯಾಮೆರಾ ಇರಲಿಲ್ಲ. ಫೋಟೋ ತೆಗೆದುಕೊಳ್ಳುವುದಕ್ಕೆ ಸಾಧ್ಯ ಆಗಲಿಲ್ಲ. ಅವರ ಮುಂದಿನ ಕಾದಂಬರಿಗಳನ್ನು ಧಾರಾವಾಹಿ ಆಗುತ್ತಿರುವಾಗಲೇ ಓದಲು ತೆಲುಗು ಪತ್ರಿಕೆಗಳನ್ನು ಓದತೊಡಗಿದೆ ಅಬ್ಬಾ... ಏನು ಸಸ್ಪೆನ್ಸ್ ಏನು ಭಾವುಕತೆ ಏನು ಪಾತ್ರ ಪೋಷಣೆ... ಮುಂದಿನ ಮೂರು ವರ್ಷಗಳಲ್ಲಿ ನನ್ನ ಮೊದಲ ನೀಳ್ಗತೆ ಬರೆದಿದ್ದೆ. ಅವರು ನನಗೆ ದೊಡ್ಡ ಸಹಾಯವೊಂದನ್ನು ಇನ್ನೂ ನಾಲ್ಕು ವರ್ಷಗಳ ನಂತರ ಮಾಡಿದರು...

Comments
Post a Comment