ಯತಿ ಸ್ವಂತೀ -319
16-11-2018
ದಾರ್ಶನಿಕರೊಬ್ಬರು ಹೇಳಿರುವುದು ಏನೆಂದರೆ ಸುಖವನ್ನು ಇತರರಿಗೆ ಹಂಚಬೇಕು; ದುಃಖವನ್ನು ಒಬ್ಬರೇ ಅನುಭವಿಸಬೇಕು... ಏಕೆಂದರೆ ಅವರವರ ನರಕ ಅವರವರದು.
ಈ ಪ್ರಸಕ್ತಿ ಏಕಪ್ಪಾ ಬಂತೂಂತಂದ್ರೆ ನೀವು ನನ್ನ ಬಾಳಿನ ಕೇವಲ ಖುಷಿಯ ವಿಷಯಗಳನ್ನು ಓದುವ ಏರ್ಪಾಡು ಮಾಡುತ್ತಿದ್ದೇನಾದ್ದರಿಂದ.
ಮಾರ್ಕೆಟಿಂಗ್ ಡಿಪಾರ್ಟ್‌ಮೆಂಟ್‌ಗೆ ನನ್ನನ್ನು ನನ್ನ ಸಹೋದ್ಯೋಗಿಗಳು ತೆರೆದ ಬಾಹುಗಳಿಂದ ಆಹ್ವಾನಿಸಿದರು. ಅವರಲ್ಲಿ ಬಲು ಬೇಗ ಒಂದಾಗಿ ಹೋದೆ. ದೊಡ್ಡ
ಬಾಸ್ ಮೈಕ್ರೋ ಮ್ಯಾನೇಜಿಂಗ್ ಮಾಡಲಿಲ್ಲ. ಒಂದೆರಡು ಬಾರಿ ನನ್ನ ಇಮ್ಮೀಡಿಯೇಟ್ ಬಾಸ್ ಜೊತೆ ಕಸ್ಟಮರುಗಳ ಭೇಟಿ ಮಾಡಿದೆ. ನಂತರ ನನ್ನ ಕೆಲಸ ಶುರುವಾಯಿತು.
ನಮ್ಮ ಉತ್ಪಾದನೆಯನ್ನು ಬಳಸಿ ಅದರ ಬಗ್ಗೆ ಖುಷಿಯಿಂದ ಮಾತನಾಡುವವರನ್ನು ಭೇಟಿ ಮಾಡಬೇಕಿತ್ತು. ಪಟ್ಟಿ ತಯಾರಿಸಿ ಭೇಟಿಗೆ ದಿನಾಂಕಗಳನ್ನು ಸಿದ್ಧತೆ ಮಾಡಿದೆ. ಸಹೋದ್ಯೋಗಿಗಳ ಬಗ್ಗೆ ಹೇಳಬೇಕು. ಅದೇನು ಆಫೀಸಾ ಅಂತ ಶಂಕೆ ಬರುವಷ್ಟು ಕೂಲ್ ದಿನಗಳು. ಕಳೆದ ಅನೇಕ ವರ್ಷಗಳಿಂದ ನನ್ನ ಪ್ರತಿ ಹೆಜ್ಜೆಯನ್ನು ಎಣಿಸುತ್ತಿದ್ದ, ನನ್ನ ಕುತ್ತಿಗೆಯ ಹಿಂಭಾಗದಲ್ಲಿ ಬಿಸಿಯುಸಿರು ಬಿಡುತ್ತಿದ್ದ ಬಾಸ್‌ಗಳಿಗಿಂತ ಈ ಬಾಸ್ ಬಹಳ ಡಿಫರೆಂಟು ವೆರಿ ವೆರಿ ಡಿಫರೆಂಟು...
Comments
Post a Comment