ಯತಿ ಸ್ವಂತೀ 306

 
03-11-2018
ಒಮ್ಮೆ ನಾನು ನನ್ನ ವೈಜಾಗ್ ಸಹೋದ್ಯೋಗಿ ಇಬ್ಬರೂ ಸಿಕಂದರಾಬಾದ್‌ನಿಂದ ವಿಜಯವಾಡಾಗೆ ಹೊರಟೆವು. ರಾತ್ರಿ ಹತ್ತೂ ಮುಕ್ಕಾಲರ ಟ್ರೈನ್. ನಮ್ಮ ಕಂಪಾರ್ಟ್‌ಮೆಂಟಿನಲ್ಲಿ ಟಿಟಿಇ ಕೂಡ ಮಲಗಿದ. ವಿಜಯವಾಡಕ್ಕೆ ಎಂದಾಗ ಓ ಎಂದಿದ್ದ. ಅವನ 'ಓ' ಬಹಳ ಅರ್ಥವುಳ್ಳದ್ದಾಗಿತ್ತೆಂದು ಬಹಳ ಹೊತ್ತಿನ ನಂತರ ತೀರಾ ತಡವಾಗಿ ತಿಳಿಯಿತು. ಸರಿ.. ರೈಲು ಒಂದು ಊರಲ್ಲಿ ಬಹಳ ಹೊತ್ತು ನಿಂತಿತ್ತು. ನಾವು ಬೆಳಗ್ಗೆ ಐದು ಗಂಟೆಗೆ ವಿಜಯವಾಡ ತಲುಪಿ, ನಾಲ್ಕು ಗಂಟೆಗಳ ಕಾಲ ನಿದ್ದೆ ಮಾಡಿ ಹತ್ತು ಗಂಟೆ ಸುಮಾರಿಗೆ ಹತ್ತಿರ ಇದ್ದ ಪಾರ್ಟ್‌ನರ್‌ ಆಫೀಸ್ ತಲುಪಿ ಅಲ್ಲಿಗೆ ಬರಲಿದ್ದ ಸರ್ಕಾರೀ ಅಧಿಕಾರಿಗಳೊಂದಿಗೆ ವಿದ್ಯಾರ್ಥಿಗಳನ್ನು ಭೇಟಿ ಆಗಬೇಕಿತ್ತು. ರೈಲು ಕೊನೆಗೂ ಹೊರಟಿತು. ಟಿಟಿಇ ಈಗ ವಾಪಸ್ ಬಂದು, 'ಓ... ನೀವು ವಿಜಯವಾಡಕ್ಕೆ ಹೋಗಬೇಕಿತ್ತಲ್ವಾ? ಇದು ಹೋಗಲ್ಲ. ಅರ್ಧ ಟ್ರೈನು ವಿಜಯವಾಡಕ್ಕೆ ಈಗ ತಾನೇ ಹೊರಟಿತು. ಛೇ..' ಎನ್ನುವುದೇ! ನಾವು ತಬ್ಬಿಬ್ಬು. ಮಾಮೂಲಿ ದಿನ ಅಲ್ಲ. ವಿಶೇಷ ಮೀಟಿಂಗ್. ಹೇಗೆ ಸಮಯಕ್ಕೆ ತಲುಪುವುದು?

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102