ಯತಿ ಸ್ವಂತೀ -314


11-11-2018
ರಾತ್ರಿ ವಾರಂಗಲ್‍ನ ಸುಮಾರಾಗಿದ್ದ ಹೊಟೇಲ್‌ನಲ್ಲಿದ್ದು ಬೆಳಗ್ಗೆ ಕರೀಂನಗರಕ್ಕೆ ಹೊರಟೆ.
ಹಿಂದೊಮ್ಮೆ ನನ್ನ ಬಾಸ್ ಒಬ್ಬರು ಬೆಂಗಳೂರಿನಿಂದ ನನ್ನೊಂದಿಗೆ ಕರೀಂನಗರಕ್ಕೆ ಬಂದಿದ್ದ ನೆನಪು. ಬೆಂಗಳೂರಿನಿಂದ ಹೈದರಾಬಾದ್‌ಗೆ ವಿಮಾನ. ಅಲ್ಲಿಂದ ಹೈದರಾಬಾದ್‌ ಬಸ್ ನಿಲ್ದಾಣಕ್ಕೆ ಬಸ್. ಆಮೇಲೆ ಮತ್ತೊಂದು ಬಸ್ಸಿನಲ್ಲಿ ಕರೀಂನಗರ. ಅಲ್ಲಿ ಆವತ್ತು ಉಳಿದುಕೊಳ್ಳದೇ ರಾತ್ರಿ ಆದಿಲಾಬಾದ್‌ಗೆ ಬಸ್ ಹತ್ತಿದೆವು. ಆ ಕಾಡಿನ ರಸ್ತೆಯಲ್ಲಿ ಪ್ರಯಾಣಿಕರನ್ನು ದಾರಿಗಳ್ಳರು ತಡೆಗಟ್ಟಿದ್ದಾರೆಂದು ಕೇಳಿದ್ದೆ. ನಮ್ಮ ಪುಣ್ಯ! ಯಾರೂ ನಮ್ಮ ಬಸ್‌ಗೆ ಅಡ್ಡ ಹಾಕಲಿಲ್ಲ! ಬೆಳಗ್ಗೆ ಆದಿಲಾಬಾದ್ ತಲುಪಿದರೆ ಹೊಟೇಲ್ ರೂಂ ಸಿಗದೇ ಮೂರು ಹೊಟೇಲ್‌ಗಳಿಗೆ ಆಟೋದಲ್ಲಿ ತಿರುಗಾಟಗಳಿಂದ ನಿಜವಾಗಿಯೂ ಬಲು ಆಯಾಸವಾದ ಸಮಯವದು.
ಈ ಸಲ ಬೆಳಗ್ಗೆ ಕರೀಂನಗರ ತಲುಪಿ ಕೆಲಸ ಮುಗಿಸಿ ಅಲ್ಲಿನ ಒಳ್ಳೆಯ ಹೊಟೇಲ್‌ನಲ್ಲಿದ್ದು ಬೆಳಗ್ಗೆ ಆದಿಲಾಬಾದ್.
ಮಳೆ ಆ ಸಲ ಆ ಊರಲ್ಲಿ. ಹಾಗೆಯೇ ಪಾರ್ಟ್‌ನರ್ ಮತ್ತು ಕೆಲವು ಗ್ರಾಹಕರ ಭೇಟಿ ಮಾಡಿ ರಾತ್ರಿ ಸ್ಟೇಶನ್‌ಗೆ ಬಂದೆ.
ಯಥಾಪ್ರಕಾರ ಕತ್ತಲೆ. ರೈಲು ಹೊರಡುವವರೆಗೂ ಜನರ ಸುಳಿವೇ ಇರದು.

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102