ಯತಿ ಸ್ವಂತೀ -315
- Get link
- X
- Other Apps
12-11-2018 ಬೆಳಗ್ಗೆ ಸಿಕಂದರಾಬಾದ್, ನಂತರ ನಾಂಪಲ್ಲಿಯನ್ನು ಆಟೋದಲ್ಲಿ ತಲುಪಿದೆ. ಅಂದು ಅಲ್ಲಿ ಲೋಕಲ್ ಟೂರು. ರಾತ್ರಿ ಸ್ಲೀಪರ್ ಬಸ್ ಹತ್ತಿ ವಿಜಯವಾಡಕ್ಕೆ ಹೋದೆ. ಈ ಸ್ಲೀಪರ್ ಬಸ್ನ ಬರ್ತ್ ರೈಲುಗಾಡಿಯ ಬರ್ತ್ ಹೋಲುತ್ತದೆ. ನೆಮ್ಮದಿಯ ನಿದ್ರಿಸುವ ಮಾಡುವ ಪ್ರಯತ್ನ ಮಾಡಬಹುದು. ಆದರೆ ಸಾಂಗ್ಲಿಗೆ ಹೋದ ಬಸ್ಸಿನ ಸ್ಲೀಪರ್ನಲ್ಲಿ ಇಬ್ಬರು ಮಲಗಬೇಕು. ಅದರಲ್ಲಿ ಒಬ್ಬರು ಮಲಗಿದರೂ ತೊಂದರೆ. ಬಸ್ ತಿರುಗಿದಾಗಲೆಲ್ಲ ಉರುಳಾಡಬೇಕು! ಬೆಲ್ಟ್ ಪ್ರೊವೈಡ್ ಮಾಡಿಕೊಟ್ಟರೆ ಅಲುಗಾಡದೇ ಮಲಗಬಹುದು! ಇಂತಹ ಬಸ್ಸಿನಲ್ಲಿ ಪಾಂಡಿಚೆರಿಯಿಂದ ಒಮ್ಮೆ ಬೆಂಗಳೂರಿಗೆ ಪಯಣಿಸಿದ್ದೆ. ವಿಜಯವಾಡದ ಕೆಲಸ ಮುಗಿಸಿ ಮರುದಿನ ಬೆಳಗ್ಗೆ ಹೊರಡುವ ಪ್ಲಾನ್ ಮಾಡಿದ್ದೆ. ಆಗ ಬಂದಿತು ಗುಂಟೂರಿನಿಂದ ತುರ್ತು ಕರೆ. ಸ್ಥಳೀಯ ಸರ್ಕಾರೀ ಅಧಿಕಾರಿಗಳ ಜೊತೆ ಆ ಸಂಜೆ ಮೀಟಿಂಗ್ ಎಂದು ಅರಿತು ಆಗಲೇ ಗುಂಟೂರಿಗೆ ಹೊರಟೆ. ಮೂವತ್ತು ಕಿಮೀ ದೂರವನ್ನು ಬಸ್ಸಿನಲ್ಲಿ ಕ್ರಮಿಸಿದೆ. ಸಂಜೆ ಮೀಟಿಂಗ್ ಮುಗಿಸಿ ನಾಗಾರ್ಜುನ ಹೊಟೇಲ್ನಲ್ಲಿ ಉಳಿದುಕೊಂಡು ಮರುದಿನ ವಿದ್ಯಾರ್ಥಿಗಳನ್ನು ಭೇಟಿ ಮಾಡಿದೆ. ಉದ್ಯೋಗ ಕೊಡಿಸುತ್ತಾರೆ ನಮ್ಮ ಕಂಪೆನಿಯವರು ಈ ಮುಫತ್ ತರಬೇತಿ ಪಡೆದರೆ ಎಂಬ ಮಾತು ಎಲ್ಲೆಡೆ ಹರಡಿತ್ತು. ಉದ್ಯೋಗಾವಕಾಶ ಕೊಡಿಸುತ್ತೇವೆ ಎಂದು ಎಲ್ಲ ಕಡೆ ತಿದ್ದುಪಡಿ ಮಾಡಿದೆ ನಾನು ಮಾತಾಡಿದೆಡೆಯಲ್ಲೆಲ್ಲಾ.
|
- Get link
- X
- Other Apps
Comments
Post a Comment