ಯತಿ ಸ್ವಂತೀ -204


23-07-2018

ಒಮ್ಮೆ ನನ್ನ ಸಹಪಾಠಿಗಳ ಜೊತೆಗೆ ಬೆಳಗ್ಗೆ ಏಳೂವರೆಗೆ ಗಣೇಶ ಟಾಕೀಸ್‌ನಲ್ಲಿ ಚಾರ್ಲಿ ಚಾಪ್ಲಿನ್ ಸಿನಿಮಾ ದ ಗೋಲ್ಡ್ ರಶ್ ನೋಡಲು ಹೋದೆ. ಹೊಟ್ಟೆ ತುಂಬಾ ನಕ್ಕ ನಂತರ ಅವರನ್ನು ನನ್ನ ದೊಡ್ಡಮ್ಮನ ಮನೆಗೆ ಕರೆದುಕೊಂಡು ಬಂದೆ. ಔತಣ ಮಾಡಿದರು ದೊಡ್ಡಮ್ಮ.
ಅಂದು ನಾವೆಲ್ಲರೂ ನಮಗೆ ಬರುವ ಹಾಡು ಹೇಳಿದೆವು.
ಕೆಲವು ದಿನಗಳ ನಂತರ ಬೆಂಗಳೂರಿಗೆ ಬಂದೆ.
ಕೈಗೆ ಪದವಿ ಬಂತು. ಸೆಕೆಂಡ್ ಕ್ಲಾಸ್!
ಕೆಲಸದ ಬೇಟೆ ಶುರು ಆಯಿತು.
ನನ್ನ ಹಿರಿಯರೊಬ್ಬರು ಸಲಹೆ ನೀಡಿದರು.
'ನೀನೇ ಕೆಲಸ ಹುಡುಕಿಕೊ. ಅವಮಾನ, ನಿರಾಕರಣ ಎಲ್ಲ ಅಭ್ಯಾಸ ಆಗಬೇಕು ಜೀವನದಲ್ಲಿ' ಎಂದರು.
ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ವಾಂಟೆಡ್ ಕಾಲಂ ನೋಡತೊಡಗಿದೆ.
ಒಂದು ದಿನ ಒಂದು ಜಾಹೀರಾತು ನೋಡಿದೆ.
ವಾಂಟೆಡ್ ಸೇಲ್ಸ್ ಇಂಜಿನಿಯರ್.
ಫೋನ್ ನಂಬರ್ ಇತ್ತು. ಫೋನ್ ಮಾಡಿದೆ.
ಬಾ ಎಂದರು.
ಎನ್ನಾರ್ ಕಾಲೋನಿ ಎರಡನೇ ಮುಖ್ಯ ರಸ್ತೆಯಲ್ಲಿ ಇತ್ತು ಒಂದು ಮನೆ. ಅದರ ಮುಂದಿನ ರೂಂ ಆಫೀಸ್.
ನನ್ನ ಇಂಟರ್ವ್ಯೂ ಮಾಡಿದರು ಹರಿ ಎನ್ನುವ ಮಾಲೀಕರು.
300 ರೂಪಾಯಿ ಸಂಬಳ. ವಾಹ್... ಅದು 1980.
ಖುಷಿ ಆಯಿತು.
ಮರುದಿನ ಬೆಳಗ್ಗೆ ಅಮ್ಮ ಚಪಾತಿ ಮಾಡಿ ಕೊಟ್ಟರು.
ಅದರ ಬುತ್ತಿ ಕಟ್ಟಿಕೊಂಡು ಹೊರಟೆ.
ಮೊದಲ ಕೆಲಸ!
ಅನೇಕ ಬ್ರೋಶರ್‌ಗಳನ್ನು ಓದಿದೆ.
ದೇಶದ ಬೇರೆ ಬೇರೆ ಭಾಗಗಳಲ್ಲಿ ಉತ್ಪಾದನೆ ಆಗುವ ಇಂಜಿನಿಯರಿಂಗ್ ವಸ್ತುಗಳ ಮಾರಾಟ ದಕ್ಷಿಣ ಭಾರತದಲ್ಲಿ.
ಓಹ್ ಮತ್ತೆ ಸುತ್ತಾಟ...

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102