ಯತಿ ಸ್ವಂತೀ -167



16-06-2018

ಛೇಸ್ ಕಾದಂಬರಿಗಳಲ್ಲಿ ನನಗೆ ಬಹಳ ಇಷ್ಟ ಆದ ಮೂರು ನಾಲ್ಕು ಪಾತ್ರಗಳನ್ನು ಬಳಸಿ ಎರಡು, ಮೂರು, ನಾಲ್ಕು ಕಾದಂಬರಿಗಳನ್ನು ಬರೆದಿರುವುದು.

ಉದಾಹರಣೆಗೆ ಹೆಲ್ಗಾ ರಾಲ್ಫ್ : ಶ್ರೀಮಂತನನ್ನು ಮದುವೆಯಾದ ಒಬ್ಬ ಮಹದಾಭಿಲಾಷೆಯ ಹೆಣ್ಣು. ಎಲ್ಲ ತಪ್ಪುಗಳನ್ನು ಮಾಡಿಯೂ ಹೇಗೋ ಗೆಲ್ಲುತ್ತಾಳೆ. ಆನ್ ಏಸ್ ಅಪ್ ಮೈ ಸ್ಲೀವ್, ಐ ಹೋಲ್ಡ್ ಆಲ್ ಏಸಸ್, ದ ಜೋಕರ್ ಇನ್ ದ ಪ್ಯಾಕ್.

ನನ್ನ ಫೇವರಿಟ್ : ಡಾನ್ ಮಿಕ್ಲೆಮ್. ಮಿಷನ್ ಟು ವೆನಿಸ್, ಮಿಷನ್ ಟು ಸಯನಾ

ನನ್ನ ಮತ್ತೊಬ್ಬ ಫೇವರಿಟ್. ಮಾರ್ಕ್ ಗಿರ್ಲಾಂಡ್. ಪ್ಯಾರಿಸ್‍ನಲ್ಲಿ ನೆಲೆಸಿರುವ ಒಬ್ಬ ಅಮೆರಿಕನ್. ಮಹಾ ಅನ್‍ಸ್ಕ್ರುಪುಲಸ್ ಮನುಷ್ಯ. ಅವನ ಎರಡು ಇಷ್ಟವಾದವುಗಳು ಕೋಲ್ಡ್ ಕ್ಯಾಷ್ ಮತ್ತು ಹಾಟ್ ವಿಮೆನ್. ಅವನೆಷ್ಟು ಲಜ್ಜಾಹೀನನಾಗಿ ವರ್ತಿಸಿದರೂ ದೇಶಪ್ರೇಮವನ್ನು ಹೊಂದಿರುತ್ತಾನೆ. ಅವನನ್ನು ವಿಧಿಯಿಲ್ಲದೇ ಕೆಲವು ಕೊಳಕು ಕೆಲಸಗಳಿಗೆ ಹೋಗೆನ್ನುವ ಪ್ಯಾರಿಸ್ ಎಂಬೆಸಿಯ ಜಾನ್ ಡೋರಿಯ ಪಾತ್ರ ಕೂಡ ವಿಶೇಷವೇ. ಓದಿಯೇ ಮಜಾ ತಗೋಬೇಕು. ಗಿರ್ಲಾಂಡ್‍ನ  ನಾಲ್ಕು ಕಾದಂಬರಿಗಳು ಬಂದಿವೆ. ಪ್ರತ್ಯೇಕವಾಗಿ ಓದಿದರೂ ಓಕೆ. ಒಂದರ ನಂತರ ಒಂದು ಓದಿದರೆ ಒಂಥರಾ ಕಂಟಿನ್ಯೂಯಿಟಿ ಇದೆ.

ದಿಸ್ ಈಸ್ ಫಾರ್ ರಿಯಲ್: ಇದರಲ್ಲಿ ಆಫ್ರಿಕಾದ ಸೆನೆಗಲ್‍ನ ಬುಷ್‍ಗಳ ಬಗ್ಗೆ ಓದಿದ್ದೆ. ಇತ್ತೀಚೆಗೆ ಒಂದು ಸಿನಿಮಾದಲ್ಲಿ ನೋಡಿದಾಗ ಆ ಬುಷ್‍ಗಳ ಅಗಾಧತೆ, ವೈಶಿಷ್ಟ್ಯಗಳ ಬಗ್ಗೆ ತಿಳಿಯಿತು.

ಯೂ ಹ್ಯಾವ್ ಯುವರ್‍ಸೆಲ್ಫ್ ಎ ಡೀಲ್ : ನೆನಪಳಿದ ಹೆಣ್ಣೊಬ್ಬಳ ಪತಿಯ ಪಾತ್ರ ಮಾಡುತ್ತಾನೆ ಗಿರ್ಲಾಂಡ್.

ಹ್ಯಾವ್ ದಿಸ್ ಒನ್ ಆನ್ ಮೀ: ಪ್ರೇಗ್‍ನಲ್ಲಿ ಇರುವ  ಅಮೆರಿಕನ್ ಸ್ಲೀಪರ್ ಸೆಲ್ ಒಬ್ಬನನ್ನು ಕೊಲ್ಲಲು ರಷ್ಯನ್ನರು ಹೊಂಚು ಹಾಕಿದಾಗ ಅಲ್ಲಿಗೆ ಅವನನ್ನು ಕಾಪಾಡಲು ಹೋಗಿ ತಪ್ಪಿಸಿಕೊಂಡು ಬರುವ ಕಥೆ.

ದ ವ್ಹಿಫ್ ಆಫ್ ಮನಿ: ಅಮೆರಿಕದ ಸೆನೆಟರ್, ಭಾವೀ ಪ್ರೆಸಿಡೆಂಟನ ಮಗಳು ಒಬ್ಬ ಮೂರನೆಯ ದರ್ಜೆಯ ನಿರ್ದೇಶಕನೊಂದಿಗೆ ನೀಲಿಚಿತ್ರಗಳಲ್ಲಿ ಭಾಗವಹಿಸಿದಾಗ ಅವಳನ್ನು ಕಾಪಾಡಲು ಹೋಗುವ ಕಥೆ.

ಇವುಗಳಲ್ಲೆಲ್ಲ ಗಿರ್ಲಾಂಡ್‍ನ ಎದುರಾಳಿ ಒಬ್ಬ ರಷ್ಯನ್, ಮಲಿಕ್. ನಿಜಕ್ಕೂ ಸುಂದರವಾದ ನೇಯ್ಗೆಗಳು ಈ ಕಾದಂಬರಿ ಬಟ್ಟೆಗಳು!

ಇವುಗಳನ್ನು ಓದುವುದಷ್ಟೇ ಅಲ್ಲದೇ ಇವುಗಳ ಮುಖ್ಯ ಪಾತ್ರಗಳ ಹೆಸರುಗಳನ್ನು, ಕಥೆಯ ಸಾರಾಂಶವನ್ನು ಡೈರಿಯೊಂದರಲ್ಲಿ ಬರೆಯುತ್ತಿದ್ದೆ.

ಇದರಿಂದ ಎರಡು ಅಡ್ವಾಂಟೇಜುಗಳಾದವು. ನನಗೆ ಇಂಗ್ಲೀಷ್ ಓದಲು ಬಂದಿತು. ಜೊತೆಗೆ ನನ್ನ ಕಲ್ಪನೆ ಗರಿಗೆದರಿತು.

ಮುಂದೊಂದು ದಿನ ಕಾದಂಬರಿಕಾರನಾಗಲು ನನಗೆ ಸಹಾಯ ಮಾಡಿತ್ತು.

ನಾನು ಬರೆದಿರುವುದು ಕೇವಲ 22 ಕಾದಂಬರಿಗಳು. ಈಗ ನಾನ್ ಫಿಕ್ಷನ್ 25 ಇರಬಹುದು.

ಕಾರಣವಿಷ್ಟೇ. ನನಗೇ ಆಸಕ್ತಿಕರ ಎನ್ನಿಸದ ಕಾದಂಬರಿಗಳನ್ನು ನಾನ ಬರೆಯಲಾರೆ. ಸರಿಸುಮಾರು ಎಂಟಾದರೂ ಕಾದಂಬರಿಗಳು ನಲವತ್ತು ಐವತ್ತು ಪುಟಗಳಷ್ಟು ಬರೆದು ಬಿಸಾಡಿದ್ದೇನೆ. ಏಕೆಂದರೆ ಮುಂದಕ್ಕೆ  ಬರೆಯಲು ನನಗೇ ಆಸಕ್ತಿಕರ ಎನ್ನಿಸಲಿಲ್ಲ.

                       -0-0-0-

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102