ಯತಿ ಸ್ವಂತೀ -77




18-03-2018
ಒಂದು  ರೀತಿಯ ಪ್ಯಾಟ್ರನ್‍ಗೆ ಬಿದ್ದಿತು ನನ್ನ ಬದುಕು. ಆಗಾಗ ಒಂದಿಷ್ಟು ಮನೋರಂಜನೆ. ನಮ್ಮ ಮಾರ್ಕೆಟಿಂಗ್ ಹೆಡ್ ನಮ್ಮ ಆರ್ ಆಂಡ್ ಡಿ ಡಿಪಾರ್ಟ್‍ಮೆಂಟ್‍ನೋರಿಗೆ ಪಾರ್ಟಿ ಕೊಡಲು ಆಲೋಚಿಸಿದರು. 
ನಮ್ಮ ಸಹೋದ್ಯೋಗಿಯೊಬ್ಬರ ತಂದೆಯ ಗೆಳೆಯರ ಒಂದು ಫಾರ್ಮ್‍ಹೌಸ್‍ನಲ್ಲಿ ಪಾರ್ಟಿ. ಒಂದು ದೊಡ್ಡ ಮನೆ ಮತ್ತು ಒಂದು ದೊಡ್ಡ ಆಲದಮರ. ಹ್ಞಾಂ... ದೊಡ್ಡಾಲದ ಮರಕ್ಕೆ ಹೋಗುವ ದಾರಿಯಲ್ಲೆಲ್ಲೋ ಒಂದು ಡೀವಿಯೇಷನ್ ತೆಗೆದುಕೊಂಡರೆ ಅಲ್ಲಿತ್ತು ಈ ಮನೆ, ಮರ.
ಬಣ್ಣಬಣ್ಣದ ಬೆಳಕಿನಲ್ಲಿ ಹಾಡುಗಳಿಗೆ ಕುಣಿದು ಕುಪ್ಪಳಿಸಿದರು ಎಲ್ಲರೂ. ಮರುದಿನ ವೈಕುಂಠ ಏಕಾದಶಿ. ಅದಕ್ಕೇ ಸಾತ್ವಿಕ ಆಹಾರವನ್ನು ಸೇವಿಸಿದ ನೆನಪು.
ಮರುದಿನ ಬೆಳಗ್ಗೆ ಬೆಳಗ್ಗೆಯೇ ವೇಂಕಟೇಶ್ವರನ ದರುಶನ ಪಡೆದೆ.
ಒಂದು ದಿನ ನನ್ನ ಬಾಸ್ ಸುಧೀರ್ (ಈಗ ನನ್ನ ಬಾಸ್ ಮುಂಬೈನವರು. ನನ್ನ ಲೀವ್‍ಲೆಟರ್ ಕೂಡ ಅಲ್ಲಿ ಹೋಗಿ ಅಪ್ರೂವ್ ಆಗಿ ಬರುತ್ತಿತ್ತು!) ನನ್ನನ್ನು ಇಲ್ಲಿರಬೇಡ. ನೀನೇಕೆ ರೀಜಿನಲ್ ಆಫೀಸಿಗೆ ಹೋಗಬಾರದು ಎಂದರು. ಸರಿ, ಅಲ್ಲಿಗೆ ನನ್ನನ್ನು ವರ್ಗಾವಣೆ ಮಾಡಲಾಯಿತು.
ಈಗ ಕೋರಮಂಗಲದಿಂದ ನನ್ನ ಗ್ರಾಹಕರನ್ನು ಭೇಟಿ ಆಗಲು ಹೋಗುತ್ತಿದ್ದೆ. ಕೆಲವೊಮ್ಮೆ ಹೆಡ್ಡಾಫೀಸಿನವರ ಸಹಾಯವನ್ನು ಡೆಮೋಗಾಗಿ ಪಡೆಯುತ್ತಿದ್ದೆ.
ಮತ್ತೊಂದು ಏಕತಾನತೆಯ ಬದುಕು. ಈಗ ನನಗೆ ಕ್ಯಾಬ್ ಇರಲಿಲ್ಲ. ಒಂದು ತಿಂಗಳು ರಾಜರಾಜೇಶ್ವರಿನಗರದಿಂದ ಸ್ಕೂಟರ್‍ನಲ್ಲಿ ಆಫೀಸಿಗೆ ಹೋದೆ. ಆದರೆ ಏಕೋ ಬಹಳ ಆಯಾಸದ ಕೆಲಸ ಎನಿಸಿತು. ನಮಗೆ ಆಟೋದಲ್ಲಿ ಓಡಾಡಬಹುದೆಂದು ಅನುಮತಿ ಸಿಕ್ಕಿತು.
ಇಡೀ ಬೆಂಗಳೂರಿನ ಸರ್ಕಾರಿ ಕಛೇರಿಗಳಿಗೆ ದಿನವೂ ಭೇಟಿ ಕೊಡುತ್ತಾ ಹೋದೆ.
ಇಲ್ಲಿನ ಸಹೋದ್ಯೋಗಿಗಳ ಸಂಖ್ಯೆ ಕಡಿಮೆ. ಬಹಳವೇ ಫ್ರೆಂಡ್ಲಿ ಗ್ರೂಪ್.
ಕೋರಮಂಗಲದ ರಹೇಜ ಆರ್ಕೇಡ್‍ನಲ್ಲಿ ಆಫೀಸ್. ಸುತ್ತಲೂ ಒಳ್ಳೊಳ್ಳೆಯ ಹೊಟೇಲ್‍ಗಳು.
ದಿನಕ್ಕೊಂದು ವಿಧದ ಊಟ. ಇಂದು ಪರಾಠ ತಿಂದರೆ ನಾಳೆ ಆಂಧ್ರದ ಊಟ. ಮೂರನೆಯ ದಿನ ಉಡುಪಿ ಹೊಟೇಲ್‍ನಲ್ಲಿ ನೀರುದೋಸೆ... ಹೀಗೆ.
ಆಫೀಸಿನ ಕೆಳಗೆ ಹಿಂಬದಿಯ ರಸ್ತೆಯಲ್ಲಿದ್ದ ಮಲ್ಲು ಹೊಟೇಲ್ ಚೇಟ ಸಾಗರ್. ಅಲ್ಲಿ ಲೆಮನ್ ಟೀ ಕುಡಿಯೋದೊಂದು ಖುಷಿ. ಅವನದೇ ಒಂದು ವಿಶೇಷ ಬಿಸ್ಕತ್ತಿನೊಂದಿಗೆ ಟೀ. ಸುಲೇಮಾನಿ ಎನ್ನುತ್ತಿದ್ದೆವು ಈ ಟೀಯನ್ನು ಮಸ್ಕತ್‍ನಲ್ಲಿ.
ಹಾಲಿಲ್ಲದ ಟೀ ಕಷಾಯಕ್ಕೆ ಸುಲೇಮಾನಿ ಎಂದು ಹೆಸರು. ಹಾಲು ಹಾಕದ ಏಲಕ್ಕಿ ಹಾಕಿದ ಕಾಫಿಗೆ ಕಾವ್ಹಾ ಎಂದು ಹೆಸರು.
ಮಸ್ಕತ್‍ನಲ್ಲಿ ನಡೆದುಕೊಂಡು ಅಂಗಡಿಗೆ ಹೋಗುವುದು ಎನ್ನುವುದೊಂದು ವಿಶೇಷವೇ. ಬಿಸಿಲು, ಸೆಖೆ... ಅದಕ್ಕೇ ಎಂದಿಗೂ ನಡೆದು ಓಡಾಡಿದ್ದು ಕಡಿಮೆ.
ಅಬ್ಬಬ್ಬಾ ಎಂದರೆ ನ್ಯಾಷನಲ್ ಬ್ಯಾಂಕ್ ಆಫ್ ಒಮಾನ್‍ನಲ್ಲಿ ಸಂಬಳ ಪಡೆಯಲು ಕೆಲವೊಮ್ಮೆ ನಡೆದು ಹೋಗಿದ್ದುಂಟು. ಏಕೆಂದರೆ ಅದು ಕೇವಲ ಒಂದು ಫರ್ಲಾಂಗ್ ದೂರದಲ್ಲಿತ್ತು. ಇಲ್ಲದಿದ್ದರೆ ಸದಾ ಕಾರು. 
ಬೆಂಗಳೂರಿನಲ್ಲಿ ಆ ಕಷ್ಟ ಇರಲಿಲ್ಲ. ಮೇಘ ಸಾಗರ್‍ನ ಬಿರ್ಯಾನಿ, ಜಯಂತಿ ಸಾಗರ್‍ನ ಅಕ್ಕಿ ರೊಟ್ಟಿ... ಹೀಗೆ ದಿನಕ್ಕೊಂದು ವೆರೈಟಿ.
-0-0-0-

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102