ಯತಿ ಸ್ವಂತೀ -೨೪೩


೩೧-೦೮-೨೦೧೮
ಗುಲ್ ಮಾರ್ಗ್ ಒಂದು ಸುಂದರ ತಾಣ. ನಾವು ಹೋದಾಗ ಸ್ನೋ ಇರಲಿಲ್ಲ. ನಾವು ಹೋದಾಗ ಫ್ರೂಟ್ಸ್ ಆಂಡ್ ಫ್ಲವರ್ಸ್ ಸೀಸನ್.
ಸುಂದರ ವಾತಾವರಣದಲ್ಲಿ ಅಲ್ಲಿ ಇಲ್ಲಿ ಕೂತು ಪಟ ತೆಗೆಸಿಕೊಂಡೆವು.
ಆಮೇಲೆ ಏನೇನೋ ಆಸೆ ನೆನಪು ನುಗ್ಗಿ ಬಂದಿತು.. ಏಕೆ ಗೊತ್ತೇ? ಜಯಮಾಲಾ ಮತ್ತು ಅಣ್ಣಾವ್ರು ಒಂದು ಟ್ರಾಲಿ ಮೇಲೆ ಕೂತು ಹಾಡುವರಲ್ಲಾ... ನೆನಪಾಯಿತಾ?
ಅದೊಂದು ರೋಪ್ ವೇ. ಓವಲ್ ಶೇಪ್ ‌ನಲ್ಲಿ ಇತ್ತು. ಕುರ್ಚಿಯಲ್ಲಿ ಹತ್ತಿ ಕೂತರೆ ನಾಲ್ಕೈದು ರೌಂಡ್ ಹೊಡೆಸುತ್ತಾರೆ. ಕೆಳಗೆ ಆಳವಾದ ಕಣಿವೆ. ನಿಜಕ್ಕೂ ರುದ್ರ ರಮಣೀಯ ಆ ಜಾಗ.
ಸಂಜೆಯಾಗುತ್ತಿದ್ದಂತೆ ಅಲ್ಲೆಲ್ಲಾ ಸುತ್ತಾಡಿ ಅದೇ ಟ್ಯಾಕ್ಸಿಯಲ್ಲಿ ಮಲಯಾಳಿ ಹೊಟೇಲ್‌ಗೆ  ಬಂದು ತಿಂದು ಬೋಟ್ ಹತ್ತಿ ದಾಲ್ ಲೇಕ್ ದಾಟಿ ಹೊಟೇಲ್ ತಲುಪಿದೆವು.
ಮರುದಿನ ಬೆಳಗ್ಗೆ ಸೋನಾಮಾರ್ಗ್.
ಬಹುದೂರದ ರಸ್ತೆ. ಹಾದಿಯಲ್ಲಿ ಅನೇಕಾನೇಕ ಭಾರತೀಯ ಯೋಧರ ಜೀಪುಗಳು, ಟ್ರಕ್ಕುಗಳನ್ನು ಕಂಡೆವು.
ಸುಮಾರು ದೂರ ನಡೆದಾಗ ಕುದುರೆಯೊಂದನ್ನು ಹತ್ತಿ ಹೋಗುವ ಆಸೆ ಬಂದಿತು. ದುರದೃಷ್ಟವಶಾತ್ ಕುದುರೆ ಒಬ್ಬರನ್ನು ಎತ್ತಿ ಹಾಕಿತು.
ಸೋನಾಮಾರ್ಗ್ ಬಹು ದೂರದಲ್ಲಿ ಇತ್ತು. ಒಂದು ಗಿರಿಯ ಮೇಲ್ಭಾಗದಲ್ಲಿ ಟೊಪ್ಪಿಗೆಯಂತೆ ಹಿಮವನ್ನು ಹೊಂದಿತ್ತು. ಅದನ್ನು ಗ್ಲೇಸಿಯರ್ ಎನ್ನುತ್ತಾರೆ. ಎಂದಿಗೂ ಕರಗದ ಹಿಮ.
ಮುಕ್ಕಾಲು ದೂರ ಹೋಗುವ ವೇಳೆಗೆ ಎಲ್ಲರೂ ಸುಸ್ತು. ಶಂಕರ ಒಬ್ಬ ಹೊರಟ. ನಾನು ಅವನ ಹಿಂದೆ ಬಾಲ. ನಾನು ಆ ಗಿರಿಯ ಬುಡದಲ್ಲಿ ಮಲಗಿದೆ. ಅವನೊಬ್ಬ ಮೇಲ್ವರೆಗೆ ಹೋಗಿ ಬಂದ.
ಇದು ನಮ್ಮ ಸೋನಾಮಾರ್ಗ್ ಕಥೆ.
ಮೂರನೆಯ ದಿನ ಬೆಳಗ್ಗೆ ಪಹಲ್‍ಗಾಂಗೆ ಹೊರಟೆವು.
ಅದೊಂದು ಸುಂದರ ಹಳ್ಳಿ.
ಅಂದ ಹಾಗೆ ಇಡೀ ಹಾದಿ ಕಶ್ಮೀರದಲ್ಲಿ ಅದ್ಭುತವಾದ ಸುಂದರ ತಾಣ.
ಅಮೀರ್ ಖುಸ್ರೋ ಹೇಳಿದ್ದಾನೆ. ಸ್ವರ್ಗವೆಲ್ಲಾದರೂ ಇರುವುದಾದರೆ ಅದು ಇಲ್ಲಿಯೇ ಇದು ಇಲ್ಲಿಯೇ ಇದು ಇಲ್ಲಿಯೇ (ಹಮೀನಸ್ತೋ....)
ಈ ಜಾಗವನ್ನು ನಾವು ಅನೇಕ ಸಿನಿಮಾಗಳಲ್ಲಿ ಕಂಡಿದ್ದೇವೆ. ರಾಜೇಶ್‍ಖನ್ನ ಮುಮ್ತಾಜರ ‘ರೋಟಿ’ ಚಿತ್ರವು ಇಲ್ಲಿಯೇ ಚಿತ್ರಿತವಾಗಿತ್ತು ಎಂದು ನೆನಪು.
ಅಲ್ಲಿಂದ ನಾವು ಮರಳಿ ಬಂದು ರೆಸ್ಟು ಮಾಡಿದೆವು.
ಮರುದಿನ ಬೆಳಗ್ಗೆ ಶಂಕರ ಬೆಟ್ಟ ಹತ್ತಿದರೆ ಅಲ್ಲಿ ಮೇಲೆ ಶಿವನ ಹಸಿರು ಬಣ್ಣದ ಲಿಂಗವಿತ್ತು.
ಮರುದಿನ ನಾವು ಮತ್ತೆ ಬೆಳಗ್ಗೆ ಬಸ್ ಹತ್ತಿದೆವು. ಬೈ ಬೈ ಶ್ರೀನಗರ್!
ಸುಮಾರು ದೂರದ ಪ್ರಯಾಣ. ಹನ್ನೊಂದು ಗಂಟೆಗಳ ಕಾಲ ಪಯಣಿಸಿ ನಾವು ಗುಪ್ತಾಜೀ ಅವರ ಮನೆಗೆ ಬಂದೆವು.
ಅವರು ನಮ್ಮನ್ನು ಬಹಳ ಚೆನ್ನಾಗಿ ನೋಡಿಕೊಂಡರು. ಅಷ್ಟೂ ಜನಕ್ಕೆ ಊಟ ಹಾಕಿದರು. ಇರಲು ಜಾಗ ಕೊಟ್ಟರು.
ಮರುದಿನ ಬೆಳಗ್ಗೆ ನಾವು ಬಸ್ ಹತ್ತಿದೆವು ಕಾಟ್ರಾ ಎನ್ನುವ ಜಾಗಕ್ಕೆ. ಸುಮಾರು ಹತ್ತು ಗಂಟೆಗೆ ಕಾಟ್ರಾ ಸೇರಿದೆವು.
ಅಲ್ಲೊಂದು ದೊಡ್ಡ ಬೆಟ್ಟ. ಅದರ ನಡುವೆ ಎಲ್ಲೋ ಇದ್ದಾಳೆ ವೈಷ್ಣೋದೇವಿ!

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102