-2-
2-1-2018
ಮೈಸೂರು ಮಹಾಜನ ಪ್ರೌಢಶಾಲೆಯಲ್ಲಿ ನಾನು ಎಂಟನೇ ತರಗತಿ ಸೇರಿದೆ. ಅದು 1969 ಜೂನ್ ತಿಂಗಳು. ಕಿವಿ ಕೇಳಿಸದ ಶ್ರೀ ಎಸ್.ಎಸ್.ಆರ್. ಅವರ ತರಗತಿಯಲ್ಲಿ ಕಪ್ಪೆ ರಮೇಶ ಜೋರಾಗಿ ಕೂಗುತ್ತಿದ್ದ. ನಮಗೆಲ್ಲಾ ನಗು. ಆ ಕೂಗು ಎಸ್ಸೆಸ್ಸಾರ್ ಕಿವಿಗೆ ತಲುಪುತ್ತಿರಲಿಲ್ಲ. ಆಗೆಲ್ಲಾ ಇಂಕ್ ಪೆನ್ ಅಥವಾ ಫೌಂಟನ್ ಪೆನ್ ಬಳಸುತ್ತಿದ್ದೆವು. ಒಮ್ಮೆ ಸುರೇಶ ತನ್ನ ಪೆನ್ನಿನ ಕ್ಯಾಪ್‍ನಲ್ಲಿ ಉಫ್ ಎಂದು ಊದಿದ. ಅದು ಸಿಳ್ಳೆಯಂತೆ ಎಸ್ಸೆಸ್ಸಾರ್‍ಗೆ ಕೇಳಿಸಿಬಿಟ್ಟಿತು. ನಾನಲ್ಲ ಸರ್, ನಾವಲ್ಲ ಸರ್ ಕೇಳಿ ಕೇಳಿ ಮುಂದಿನ ಬೆಂಚಿನಲ್ಲಿದ್ದ ನಮ್ಮನ್ನು ಹೊರಗಟ್ಟಿದರು ಮೇಷ್ಟರು. ನಂತರ ಅವರ ಮಗ ಎಸ್ಸಾರ್ಕೆ ವಿಜ್ಞಾನ ಪಾಠ ಮಾಡಲು ಬಂದಾಗ ನಾವು ಗುಜುಗುಜು ಮಾಡಿದರೆ, ಅವರ ಎಡಗೈಯಲ್ಲಿನ ಚಾಕ್‍ಪೀಸ್‍ನ ಒಂದು ಪೀಸ್ ಮುರಿದು ನಮ್ಮ ಮೇಲೆ ಗುರಿಯಿಟ್ಟು ಎಸೆಯುತ್ತಿದ್ದರು. ಒಮ್ಮೆ ಯಾರೋ ಜೀನಿಯಸ್ ಸಹಪಾಠಿ ಆಗ ಬರುತ್ತಿದ್ದ ಉದ್ದನೆಯ ಚೂಯಿಂಗ್‍ಗಮ್ ಬಟರ್ ಪೇಪರ್ ತಂದು ಅದನ್ನು ಮಡಿಚಿ, ರಬ್ಬರ್‍ಬ್ಯಾಂಡನ್ನು ಬಿಲ್ಲಿನಂತೆಯೂ, ಈ ಕಾಗದವನ್ನು ಬಾಣದಂತೆಯೂ ಬಳಸಿ, ಅವರು ಆ ಕಡೆ ತಿರುಗಿ ಬೋರ್ಡಿನ ಮೇಲೆ ಬರೆಯುತ್ತಿದ್ದಾಗ ಸುಂಯ್ ಎಂದು ಅವರಿಗೆ ಹೊಡೆದಿದ್ದ. ಇದೊಂದು ಆಟವಾಗಿಹೋಯಿತು ಹುಡುಗರಿಗೆ. ಪ್ರತಿಯೊಬ್ಬರನ್ನೂ ಚೆಕ್ ಮಾಡಲಾರಂಭಿಸಿದಾಗ, ನಿಕ್ಕರ್ ಅಥವಾ ಪ್ಯಾಂಟ್ (ತೀರಾ ಉದ್ದ ಬೆಳೆದಿದ್ದವರು ಪ್ಯಾಂಟ್, ಗಿಡ್ಡವಾಗಿದ್ದವರು ನಿಕ್ಕರ್ ಧರಿಸುತ್ತಿದ್ದೆವು) ಮುಂದಿನ ಫೋರ್ಕ್ ಸಂದಿಯಲ್ಲಿ ಬಟರ್‍ಪೇಪರ್ ಬಚ್ಚಿಟ್ಟುಕೊಂಡು ನಮ್ಮನ್ನು ನಾವು ಕಾಪಾಡಿಕೊಂಡಿದ್ದು ನೆನಪಿದೆ.
ಇನ್ನೊಮ್ಮೆ ತರಗತಿಯಲ್ಲಿ ಮೇಷ್ಟರಿಲ್ಲದಿದ್ದಾಗ ಎಲ್ಲರೂ ಕೈಗೆ ಸಿಕ್ಕಿದ್ದನ್ನು ಒಬ್ಬರ ಮೇಲೆ ಒಬ್ಬರು ಎಸೆದಾಡುತ್ತಿದ್ದೆವು. ನಾನು ಬಾಗಿಸಿದ್ದ ತಲೆ ಎತ್ತಿ ಬಾಯ್ತೆರೆದಾಗ ಟಮ್ಮೆಂದು ನನ್ನ ಹಲ್ಲಿಗೆ ಕಲ್ಲೊಂದು ಬಡಿದು ಹಲ್ಲಿನ ಚೂರು ಬಾಯಿಗೆ ಬಂದಿತ್ತು!
ನಮ್ಮ ತರಲೆಗಳನ್ನು ಸಹಿಸಲು ಕೆಲವು ಉಪಾಧ್ಯಾಯರು ನಮ್ಮನ್ನು ಬೇರೆ ರೀತಿಯಲ್ಲಿ ಎಂಗೇಜ್ ಮಾಡುತ್ತಿದ್ದರು. ವಿಎಕೆ ಮೇಡಮ್ ನಮ್ಮನ್ನು ಹಾಡೆನ್ನುತ್ತಿದ್ದರು. ‘ಜಯತು ಜಯ ವಿಠಲಾ ನಿನ್ನ ನಾಮವು...’ ನನ್ನ ಫೇವರಿಟ್ ಹಾಡು. ಮಿಡ್ಲ್ ಸ್ಕೂಲ್ ಮತ್ತು ಹೈಸ್ಕೂಲಿನಲ್ಲಿ ಎರಡು ಮೂರು ಸಲವಾದರೂ ಹೇಳಿದ ನೆನಪು. ಇನ್ನೊಮ್ಮೆ ಆಗ ನನ್ನ ಫೇವರಿಟ್ ಆಗಿದ್ದ ಉಯ್ಯಾಲೆ ಚಿತ್ರದ ‘ನಗುತ ಹಾಡಲೇ ಅಳುತ ಹಾಡಲೇ’ ಎಂದು ಶುರು ಮಾಡಿದಾಗ ಎಲ್ಲರೂ ತಲೆಯ ಮೇಲೆ ಕೈ ಹೊತ್ತು ಡೆಸ್ಕ್ ಮೇಲೆ ತಲೆಯಿಟ್ಟುಕೊಂಡಿದ್ದು ನೆನಪಿದೆ!
ಒಮ್ಮೆ ವಿಎಕೆ ಮೇಡಮ್ ‘ವ್ಹಾಟ್ ಈಸ್ ಎ ಸೆಲ್?’ ಎಂದು ಕೇಳಿದಾಗ, ನಮ್ಮ ಸಹಪಾಠಿಯೊಬ್ಬ, ‘ಎ ಸೆಲ್ ಈಸ್ ಎ ಸೆಲ್, ಸಿನ್ಸ್ ಇಟ್ ಈಸ್ ಎ ಸೆಲ್, ಹೆನ್ಸ್ ಇಟ್ ಈಸ್ ಎ ಸೆಲ್, ಬಿಕಾಸ್ ಇಟ್ ಈಸ್ ಎ ಸೆಲ್, ದೇರ್‍ಫೋರ್ ಇಟ್ ಇಸ್ ಎ ಸೆಲ್’ ಎಂದು ಬರೆದು, ಅದು ಮೇಡಂ ಕೈಗೆ ಸಿಕ್ಕಿ ನಮ್ಮನ್ನೆಲ್ಲಾ ತರಾಟೆಗೆ ತೆಗೆದುಕೊಂಡಿದ್ದನ್ನು ಈಗ ನೆನೆದರೆ ನಗು ಬರುತ್ತದೆ!
-0-0-0-

Comments
Post a Comment