ಅವಳೊಂದು ಧಾರಾವಾಹಿ
4
4.1.2018
ಸಾವಿರದ ಒಂಬೈನೂರ ಎಪ್ಪತ್ತೈದರ ಮೊದಲ ಭಾಗ. ನನ್ನ ಸೋದರತ್ತೆಯ ಮಗ ರಾಜಸಿಂಹ ನಮ್ಮ ಮನೆಗೆ ಬಂದ. ಅವನು ಒಬ್ಬ ಸಿವಿಲ್ ಇಂಜಿನಿಯರ್. ಅದ್ಭುತವಾಗಿ ಫೋಟೋ ತೆಗೆಯಬಲ್ಲ. ಜರ್ಮನ್ ಕ್ಯಾಮೆರಾ ವ್ಹೈಸ್‍ಲ್ಯಾಂಡರ್ ಇತ್ತು ಅವನ ಬಳಿ.
ಅವನು ಬಂದಿದ್ದು ಮೈಸೂರು ಚಾಮರಾಜ ಜೋಡಿ ರಸ್ತೆಯ ಲಕ್ಷ್ಮಿ ಚಿತ್ರಮಂದಿರದ ಪರದೆಯನ್ನು ನವೀಕರಿಸಲು. ಅವನು ಬಂದಿದ್ದು ನಮಗೊಂದು ಹೊಸಗಾಳಿಯ ಅಲೆ ಬಂದಂತೆ ಆಗಿತ್ತು.
ಏಕೆಂದರೆ ಅವನಿಂದ ನಾನು ಅನೇಕ ಹೊಸ ವಿಷಯಗಳನ್ನು ಕಲಿತೆ. ಆಸ್ಟರಿಕ್ಸ್ ಎನ್ನುವ ಕಾಮಿಕ್ಸ್ ಪುಸ್ತಕಗಳನ್ನು ನನಗೆ ಅವನು ಪರಿಚಯಿಸಿದ. ಈಗಲೂ ಅದು ನನ್ನ ಬಲು ಇಷ್ಟದ ಕಾಮಿಕ್ಸ್. ಟಿನ್‍ಟಿನ್ ಕೂಡ ಆಗಲೇ ಓದಿದ್ದರೂ ನನ್ನ ಒಲವು ಆಸ್ಟರಿಕ್ಸ್ ಕಡೆಗೆ. ಒಂದು ರೀತಿಯ ಸಟಲ್ ಹ್ಯೂಮರ್ ಇರುವುದು ಆ ಕಾಮಿಕ್ ಪುಸ್ತಕಗಳಲ್ಲಿ.
ಲಕ್ಷ್ಮಿ ಟಾಕೀಸ್‍ನಲ್ಲಿ ಹಿಂದಿನ ಪರದೆಯನ್ನು ನವೀನಗೊಳಿಸುವಾಗ ಸಿನಿಮಾ ನಿಲ್ಲಬಾರದಲ್ಲ! ಅದಕ್ಕೇ ಮೂಲ ಪರದೆಯ ಮುಂದೆ ಒಂದು ತಾತ್ಕಾಲಿಕ ಪರದೆಯನ್ನು ನಿಲ್ಲಿಸಿದರು.
ಆ ಸಮಯದಲ್ಲಿ ಬಂದ ಅನೇಕ ಸಿನಿಮಾಗಳಿಗೆ ನನ್ನ ಅಮ್ಮನನ್ನು ಕರೆದೊಯ್ದಿದ್ದ ರಾಜಣ್ಣ. ಅವನನ್ನು ನಾವು ರಾಜಣ್ಣ ಎಂದೇ ಕರೆಯುತ್ತಿದ್ದುದು. ಅವನು ದೊಡ್ಡ ರಾಜ ನಾನು ಪುಟ್ಟರಾಜ. ಬಹಳ ವರ್ಷ ನನ್ನನ್ನು ಎಲ್ಲರೂ ಪುಟ್ರಾಜೂ ಎಂದೇ ಕರೆಯುತ್ತಿದ್ದುದು ನೆನಪಿದೆ.
ಯಾವ ನೆಂಟರು ಮನೆಗೆ ಬಂದರೂ, ‘ಯಾವತ್ತು ಹೋಗ್ತೀರಿ?’ ಎಂದು ಕೇಳಿ ಅಮ್ಮನಿಂದ ಬೈಸಿಕೊಳ್ತಿದ್ದೆ. ನನ್ನ ಆಸಕ್ತಿ ಇದ್ದುದೆಲ್ಲಾ ಅವರು ಎಷ್ಟು ದಿನ ಇರುತ್ತಾರೆ? ಅವರಿರುವವರೆಗೂ ನಮಗೂ ಖುಷಿ.
ಅಮ್ಮನನ್ನು ಒಮ್ಮೆ ಒಂದು ತಮಿಳು ಸಿನಿಮಾಗೆ ಕರೆದೊಯ್ದಿದ್ದ ರಾಜಣ್ಣ. ಆಗ ನಾವು ಗೆಳೆಯರು ಕನ್ನಡ ಸಿನಿಮಾಗಳನ್ನು ಮಾತ್ರ ನೋಡುತ್ತಿದ್ದ ಕಾಲ. ಅಮ್ಮ ತರಕಾರಿ ಹೆಚ್ಚುತ್ತಿರುವಾಗ ‘ಕಥೆ ಏನಮ್ಮಾ ಸಿನಿಮಾದು?’ ಎಂದೆ. ಏಕೆಂದರೆ ಬಹಳವೇ ಹೊಗಳಿದ್ದರು ಆ ಸಿನಿಮಾವನ್ನು.
ಹೇಳುತ್ತಾ ಹೋದರು, ಹೇಳುತ್ತಾ ಹೋದರು, ಹೇಳುತ್ತಾ ಹೋದರು. ಮುಗಿಯುವುದೇ ಇಲ್ಲವೇನೋ ಎನ್ನುವಷ್ಟು ಹೇಳಿದರು.
ಫಾಸ್ಟ್ ಫಾರ್ವರ್ಡ್: ನನ್ನ ಮಗನಿಗೆ ಏಳು, ನನ್ನ ಮಗಳಿಗೆ ಮೂರು ವರ್ಷಗಳಿದ್ದಾಗ ನನ್ನ ಅಮ್ಮ ಪ್ರತಿದಿನ ಅನುಪಮಾ ನಿರಂಜನ ಅವರ ದಿನಕ್ಕೊಂದು ಮಕ್ಕಳ ಕಥೆ ಪುಸ್ತಕದಿಂದ ಒಂದು ಕಥೆಯನ್ನು ಓದಿ ಸುಮಾರು ಮುಕ್ಕಾಲರಿಂದ ಒಂದು ಗಂಟೆ ಕಾಲ ಮಕ್ಕಳಿಗೆ ಕಥೆ ಹೇಳುತ್ತಿದ್ದರು. ನನ್ನ ಪತ್ನಿ ಉಷಾ ಅವರನ್ನು ರೇಗಿಸುತ್ತಿದ್ದಳು. ಅಮ್ಮಾ ಅವರು ನಾಳೆ ಬೆಳಗ್ಗೆ ಬೇಗ ಏಳಬೇಕು. ಕಥೆ ನೀವು ಓದಿದ್ದು ಎರಡು ಪೇಜಿನದು. ಒಂದು ಗಂಟೆ ಕಾಲ ಆಯ್ತು ಎಂದು ನಗುತ್ತಿದ್ದಳು.
ಹ್ಞಾಂ... ಎಷ್ಟು ರೀಲಿತ್ತಮ್ಮಾ ಸಿನಿಮಾ? ಎಂದೆ. ಹದಿನಾರು ರೀಲು ಎಂದರು. ಅಬ್ಬಾ... ಇಷ್ಟು ದೊಡ್ಡ ಕತೆಯನ್ನ ಹದಿನಾರು ಕೇವಲ ಹದಿನಾರು ರೀಲಲ್ಲಿ ಹೇಳಿದ್ದಾರಾ? ಎಂದು ಅಚ್ಚರಿ ಪಟ್ಟೆ.
ಖ್ಯಾತ ನಿರ್ದೇಶಕ ರಾಜ್‍ಕಪೂರ್ ಆ ಸಿನಿಮಾದ ಚಿತ್ರಕಥೆಯನ್ನು ಅತ್ಯುತ್ತಮ ಚಿತ್ರಕಥೆ ಎಂದಿದ್ದಾರೆ. ಹಿಂದಿಯಲ್ಲಿ ಕೂಡ ಆ ಚಿತ್ರ ಬಂದಿತು. ನಟ ರಾಜ್‍ಬಬ್ಬರ್‍ಗೆ ನಾಯಕಿಯ ಗೆಳೆಯನ ಪಾತ್ರ ನೀಡಿದಾಗ ಅವನು ನಾಯಕಿಯ ಅಣ್ಣನ ಪಾತ್ರವನ್ನು ಆರಿಸಿಕೊಂಡ.
ಇದು ಕೆ. ಬಾಲಚಂದರ್ ಅವರ ‘ಅವಳ್ ಒರು ತೊಡರ್‍ಕದೈ’ (ಅವಳೊಂದು ಧಾರಾವಾಹಿ) ತಮಿಳು ಸಿನಿಮಾ. ಸುಜಾತಾ ನಟಿಸಿದ ನಾಯಕಿಯ ಪಾತ್ರವನ್ನು ತೆಲುಗಿನಲ್ಲಿ ಜಯಪ್ರದಾ, ಹಿಂದಿಯಲ್ಲಿ ರೇಖಾ ಮತ್ತು ಕನ್ನಡದಲ್ಲಿ ಸುಹಾಸಿನಿ ವಹಿಸಿದ್ದರು. (ಬೆಂಕಿಯಲ್ಲಿ ಅರಳಿದ ಹೂ). ಒಂದು ಅದ್ಭುತ ಚಿತ್ರ ಅದು.
-0-0-0-

Comments
Post a Comment