13
13-1-2018
ಡಾ. ಬಾಬು ಕೃಷ್ಣಮೂರ್ತಿಯವರು ನನ್ನ ಗುರು ಸಮಾನರು. ಅನೇಕ ಸಲ ನನಗೆ ಅವರಿಂದ ನನ್ನ ಬರವಣಿಗೆಗೆ ಪ್ರೇರಣೆ ದೊರಕಿದೆ.
ಅವರು ಮಂಗಳ ಮತ್ತು ಕರ್ಮವೀರ ಪತ್ರಿಕೆಗಳಿಗೆ ಸಂಪಾದಕರಾಗಿದ್ದಾಗ ನನ್ನ ಅನೇಕ ಕಥೆ ಮತ್ತು ಲೇಖನಮಾಲೆಗಳು ಪ್ರಕಟವಾಗಿವೆ. ಮಲ್ಲಾರ ಮಾಸಿಕದಲ್ಲಿ ನನ್ನ ದಾಸವಾಣಿ (ಪುರಂದರ ದಾಸರ ಪದಗಳ ಬಗ್ಗೆ ನನ್ನ ವಿಶ್ಲೇಷಣೆ) ಧಾರಾವಾಹಿ ಆಗಿ ಪ್ರಕಟವಾದ ನಂತರ ಈಗ ಶ್ರೀ ವಿಷ್ಣು ಸಹಸ್ರನಾಮದ ಮಹಿಮೆ ಧಾರಾವಾಹಿ ಆಗಿ ಹರಿದು ಬರುತ್ತಿದೆ.
ಅವರು ನನಗೆ ‘ಸಿನ್ಸಿಯರ್ ರೈಟರ್’ ಎಂದು ಪ್ರೀತಿಯಿಂದ ಕರೆಯುತ್ತಾರೆ. ಆ ನಿಯತ್ತನ್ನು ಉಳಿಸಿಕೊಂಡೇ ಬರೆಯುವ ನನ್ನ ಪ್ರಯತ್ನ ಮುಂದುವರಿದಿದೆ. ನಾನು ಬರೆದ ನಂತರ ನನಗೇ ಇಷ್ಟವಾಗದ್ದನ್ನು ಮುಲಾಜಿಲ್ಲದೇ ಪಕ್ಕಕ್ಕಿಟ್ಟಿರುವ ಸನ್ನಿವೇಶಗಳು ಬಹಳವಿವೆ.
ಒಮ್ಮೆ ನನಗೆ ಫೋನ್ ಮಾಡಿ, ಆಗ ತನ್ನ ಕಾಂಟ್ರೋವರ್ಸಿಗಳಿಂದ ‘ಜನಪ್ರಿಯ(!)’ವಾಗುತ್ತಿದ್ದ ದ ಡಾವಿಂಚಿ ಕೋಡ್ ಬಗ್ಗೆ ಬರಿ ಎಂದರು. ಪುಸ್ತಕ ಓದು, ಸಿನಿಮಾ ನೋಡು ಹಾಗೆಯೇ ಡಾ ವಿಂಚಿಯ ಬಗ್ಗೆ ಕೂಡ ಕೆಲವು ಮಾಹಿತಿ ಇರಲಿ ಎಂದು ಸಲಹೆ ಮಾಡಿದರು.
ಪುಸ್ತಕ ಓದಿದೆ. ಎಂತಹ ರೇಸಿ ಥ್ರಿಲ್ಲರ್ ಬರೆದಿದ್ದಾನೆ ಡ್ಯಾನ್ ಬ್ರೌನ್ ಎನಿಸದಿರದು ಅದನ್ನು ಓದಿದರೆ. ನಂತರ ಸಿನಿಮಾ ಬಂದಿತು. ಅದನ್ನು ನೋಡಲು ಕೋರಮಂಗಲದ ಪಿವಿಆರ್ ಸಿನಿಮಾಗೆ ಹೋಗಲು ಸಿದ್ಧನಾದೆ.
ಇಲ್ಲಿ ಒಂದು ಚಿಕ್ಕ ಉಪಕಥೆ. ನಾನು ಇಂಗ್ಲೀಷ್ ಪುಸ್ತಕಗಳನ್ನು ಓದಲಾರಂಭಿಸಿದ್ದು ನನ್ನ 15ನೆಯ ವಯಸ್ಸಿನಲ್ಲಿ. ಹತ್ತನೇ ತರಗತಿಯ ನಂತರ ಬೆಂಗಳೂರಿಗೆ ಬಂದಾಗ ಸಮಯವಿತ್ತು. ಅದು ಹೇಗೋ ಎರಡೂ ವರ್ಷ ಪಿಯುಸಿಯಲ್ಲಿ ಯಾವುದೋ ಒಂದು ವಿದ್ಯಾರ್ಥಿ ಮುಷ್ಕರ ನಡೆಯುತ್ತಲೇ ಇತ್ತು. ಹೆಚ್ಚಿನ ರಜೆಗಳು ನಮಗೆ ಲಭ್ಯವಾದವು.
ಎನಿಡ್ ಬ್ಲೈಟನ್ ಎಂಬ ಮಕ್ಕಳ ಪುಸ್ತಕಗಳ ಲೇಖಕಿ ನನಗೆ ಬಹಳ ಇಷ್ಟವಾದಳು. ಅದೇ ಸಮಯದಲ್ಲಿ ನನ್ನ ಕಲ್ಪನೆಗೆ ಇಂಬು ಕೊಟ್ಟವನು ಜೇಮ್ಸ್ ಹ್ಯಾಡ್ಲಿ ಛೇಸ್. ಅವರಿಬ್ಬರಲ್ಲದೇ ಡೆಸ್ಮಂಡ್ ಬ್ಯಾಗ್ಲಿ, ಆಲಿಸ್ಟೈರ್ ಮ್ಯಾಕ್‍ಲೀನ್, ಅರ್ಲ್ ಸ್ಟ್ಯಾನ್ಲಿ ಗಾರ್ಡ್‍ನರ್ ಕೂಡ ಓದಿದೆ.
ನನ್ನ ಮುಂದಿನ ಪೀಳಿಗೆಯಲ್ಲಿ ನನ್ನ ಮಗ, ನನ್ನ ದೊಡ್ಡ ತಂಗಿಯ ದೊಡ್ಡ ಮಗಳು, ನನ್ನ ಚಿಕ್ಕ ತಂಗಿಯ ಮಗಳು ಮಾತ್ರವೇ ಪುಸ್ತಕ ಪಠಣದಲ್ಲಿ ಆಸಕ್ತಿ ಬೆಳೆಸಿಕೊಂಡವರು.
ನನ್ನ ಮಗನಿಗೆ ಒಮ್ಮೆ ‘ನೋಡಪ್ಪಾ, ಈ ಪುಸ್ತಕ ಎನಿಡ್‍ಬ್ಲೈಟನ್ ಬರೆದ ಮಾಲೊರಿ ಟವರ್ಸ್ ತರಹವೇ ಇದೆ. ಆದರೆ ಮ್ಯಾಜಿಕ್ ಕೂಡ ಇದೆ’ ಎಂದೆ. ಅದು ಹ್ಯಾರಿ ಪಾಟರ್ ಮತ್ತು ಫಿಲಾಸಫರ್ಸ್ ಸ್ಟೋನ್. ನಾನದನ್ನು ಪೂರ್ತಿ ಓದಲಿಲ್ಲ. ಆದರೆ ನನ್ನ ಮಗ ಇಡೀ ಜೆ.ಕೆ. ರೌಲಿಂಗ್ ಪುಸ್ತಕಗಳು ಮತ್ತು ಸಿನಿಮಾಗಳ ದೊಡ್ಡ ಫ್ಯಾನ್ ಆಗಿಬಿಟ್ಟ. ಹ್ಯಾರಿ ಪಾಟರ್ ಪುಸ್ತಕ ಜೂನ್ ಅಥವಾ ಜುಲೈ ತಿಂಗಳಲ್ಲಿ ಬಿಡುಗಡೆ ಆದ ದಿನ ಬೆಳಗ್ಗೆ ಆರು ಗಂಟೆಗೆ ಕ್ಯೂ ನಿಂತು (ಮೊದಲೇ ಹಣ ಕೊಟ್ಟು ಬುಕ್ ಮಾಡಿದ್ದು ಬೇರೆ ವಿಷಯ!) ಪುಸ್ತಕ ತರುತ್ತಿದ್ದೆವು ತಂದೆ, ಮಗ!
ಅಯ್ಯೋ, ಉಪಕಥೆಯೇ ದೊಡ್ಡದಾಯಿತು!
ಇನ್ನೊಮ್ಮೆ ಡಾ ವಿಂಚಿ ಕೋಡ್ ಬಗ್ಗೆ!

Comments
Post a Comment