ಯತಿ ಸ್ವಂತೀ - 303


31-10-2018
ಆದಿಲಾಬಾದ್‌ ನಮ್ಮ ರಾಜ್ಯಕ್ಕೆ ಬೀದರ ಹೇಗೋ ಹಾಗೆ, ಎಲ್ಲ ಜಿಲ್ಲೆಗಳಿಗಿಂತ ಮೇಲಿರುವ ಜಿಲ್ಲಾ ಕೇಂದ್ರ. ಮಹಾರಾಷ್ಟ್ರದ ಗಡಿ ಇದು. ಕರೀಂನಗರ ಮತ್ತು ಆದಿಲಾಬಾದ್ ನಡುವೆ ಇರುವ ಕಾಡು ಸ್ವಲ್ಪ ಅಪಾಯಕಾರಿ ಅನ್ನುತ್ತಾರೆ. ಪ್ರಾಣಿಭಯವೋ ಅಲ್ಲಿ ಅವಿತ ಮನುಷ್ಯರ ಭಯವೋ ತಿಳಿಯದು. ಬೆಳಗ್ಗೆ ಹನ್ನೊಂದು ಗಂಟೆಗೆ ಆದಿಲಾಬಾದ್ ತಲುಪಿ ಪಾರ್ಟ್‌ನರ್ ಹುಡಿಕ್ಯಂಡು ಹೋದೆ. ಚಿಕ್ಕ ಊರು. ಇಲ್ಲಿ ನನಗೆ ಅಡ್ವಾಂಟೇಜ್ ಎಂದರೆ ಜನರೊಂದಿಗೆ ಪಟಪಟನೆ ತೆಲುಗು ಭಾಷೆಯಲ್ಲಿ ಮಾತಾಡಬಲ್ಲವನಾಗಿದ್ದೆ. ರಾತ್ರಿ ರೈಲ್ವೆ ನಿಲ್ದಾಣಕ್ಕೆ ಬಂದರೆ ಏನೋ ತವಕ, ತಳಮಳ. ಇಡೀ ಸ್ಟೇಷನ್ ಕತ್ತಲಲ್ಲಿತ್ತು. ಒಂದು ರೀತಿಯ ಭಯ ಆವರಿಸಿತು ನನ್ನಲ್ಲಿ. ಜನರೂ ರೈಲು ಹೊರಡುವವರೆಗೂ ಕಾಣಿಸಿರಲಿಲ್ಲ! ಕೃಷ್ಣ ಎಕ್ಸ್‌ಪ್ರೆಸ್ ರಾತ್ರಿ ಒಂಬತ್ತು ಗಂಟೆಗೆ ಆದಿಲಾಬಾದ್‌ನಿಂದ ಹೊರಟು ಸಿಕಂದರಾಬಾದ್‌ಗೆ ಬೆಳಗ್ಗೆ ಆರು ಗಂಟೆಗೆ ತಲುಪಿತು. ಅಂದು ಹೈದರಾಬಾದ್‍ನಲ್ಲಿನ ಸರ್ಕಾರಿ ಕಛೇರಿಗಳಿಗೆ ಹೋಗಿ ಹಣಸಂದಾಯದ ಬಗ್ಗೆ ಚರ್ಚೆ ನಡೆಸಿದೆವು. ಇದು ಕೇವಲ ಎರಡನೇ ಟ್ರಿಪ್. ಪಿಕ್ಚರ್ ಅಭೀ ಬಾಕಿ ಹೈ ಮೇರೆ ದೋಸ್ತೋ...

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102