ಯತಿ ಸ್ವಂತೀ-298

 
26-10-2018
ನನ್ನ ಕೆಲಸ ಶುರು ಆಯಿತು. ಪಾರ್ಟ್‌ನರ್‌ಗಳ ಬಳಿ ಹೋಗಿ, ಅವರ ಉದ್ಯೋಗಿಗಳ ಜೊತೆಗೆ ಅವರ ಕಸ್ಟಮರುಗಳ ಹತ್ತಿರ ಹೋಗಿ ನಮ್ಮ ಉತ್ಪಾದನೆ ಮಾರಬೇಕಿತ್ತು. ಬೆಂಗಳೂರಿನ ಹೆಚ್ಚು ಕಡಿಮೆ ಎಲ್ಲಾ ಪಾರ್ಟ್‌ನರ್‌ಗಳ ಜೊತೆ ನನ್ನ ಸಂಪರ್ಕವೇರ್ಪಟ್ಟಿತು. ಈ ಸಮಯದಲ್ಲಿ ಬೆಂಗಳೂರಿನ ನಾನಾ ಮೂಲೆಗಳಿಗೆ ಹೋದೆ. ಪೀಣ್ಯದಲ್ಲಿ ಡೋರ್ ಟು ಡೋರ್ ನಡೆದು... ಉಫ್! ಭಾರೀ ಆಯಾಸದ ಕಾಲವದು... ಉಪೂದಪ ಆಫ್ ಬೆಂಗಳೂರು. ಅಂದರೆ ಉತ್ತರ ಪೂರ್ವ ದಕ್ಷಿಣ ಮತ್ತು ಪಶ್ಚಿಮ ದಿಕ್ಕುಗಳಲ್ಲಿ ಕಸ್ಟಮರುಗಳಿಗಾಗಿ ಓಡಾಡಿದೆ. ಆ ನಂತರ ಮತ್ತೆ ಸರ್ಕಾರಿ ಇಲಾಖೆಗಳ ಸುತ್ತಾಟ ನಡೆಸಿದೆ. ಕೆಲವು ಡೆಮೋ ಏರ್ಪಡಿಸಿದೆವು. ಹಲವು ಉತ್ಪನ್ನಗಳ ಮಾರಾಟವಾಯಿತು. ಹೊಸದಾಗಿ ನಮ್ಮ ಉತ್ಪನ್ನವನ್ನು ಚಾರ್ಟರ್ಡ್ ಅಕೌಂಟೆಂಟುಗಳಿಗೆ ಸಿದ್ಧಗೊಳಿಸಿದರು ಕಂಪೆನಿಯವರು. ಸುಮಾರು ನಲವತ್ತು ಸಿ. ಎ.ಗಳನ್ನು ಭೇಟಿ ಆದೆ. ಕೆಲವರು ಸ್ನೇಹಿತರಾದರು. ಬಾಗಿಲು ಕೂಡ ತೆರೆಯದೇ ನನ್ನನ್ನು ಓಡಿಸಿದವರಿದ್ದಾರೆ! ಆ ನಂತರ ಕಂಪೆನಿಯಲ್ಲಿ 'ಅರ್ನ್ ವ್ಹೈಲ್ ಯೂ ಲರ್ನ್' ಸ್ಕೀಮ್ ತಂದರು. ವಿದ್ಯಾರ್ಥಿಗಳು ನಮ್ಮ ಉತ್ಪಾದನೆ ಮಾರಲು, ಅವರನ್ನು ಪ್ರೇರೇಪಿಸಬೇಕಿತ್ತು. ಅಂದ ಹಾಗೆ ಬೆಂಗಳೂರಿಗೆ ಬಂದೊಡನೆ ಮುಖಕೇಶ ಮುಂಡನ ಆಯಿತು. ಅರ್ಥಾತ್ ಮೀಸೆ ಬೋಳಿಸಿದೆ!

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102