ಯತಿ ಸ್ವಂತೀ -297


25-10-2018
ಅನೇಕ ಸರ್ಕಾರಿ ಕಛೇರಿಗಳಿಗೆ ಭೇಟಿ ಕೊಟ್ಟು ನಮ್ಮ ಟೈಲರ್ - ಮೇಡ್ ಉತ್ಪಾದನೆ ಬಗ್ಗೆ ವಿವರಿಸಿದ್ದೆ. ಒಂದು ಕಛೇರಿ ಆ ಉತ್ಪಾದನೆಯ ಬಗ್ಗೆ ಆಸಕ್ತಿ ತೋರಿತ್ತು. ನಾನು ಅಂದು ಭೋಪಾಲ್‍ನಿಂದ ಬಂದಿಳಿದಾಗ ವಿಮಾನದೊಳಗೆ ಸ್ವೀಕರಿಸಿದ ಕರೆ ಅದೇ! ನಮ್ಮ ಒಂದು ಟೀಂ ಅವರ ಆಫೀಸ್‌ಗೆ ಹೋಗಿ ಡೆಮೋ ಕೊಟ್ಟೆವು. ಆ ಕಛೇರಿಯ ಹಿರಿಯ ಅಧಿಕಾರಿ ಅದರಿಂದ ಪ್ರಭಾವಿತರಾಗಿ ನಮಗೆ ಆರ್ಡರ್ ಕೊಟ್ಟು ಮುಂಗಡ ಹಣವನ್ನು ಚೆಕ್ ರೂಪದಲ್ಲಿ ನೀಡಿದರು. ನನ್ನನ್ನು ಸಿಂಗಪೂರಿಂದ ಟೆಲಿಫೋನಿಕ್ ಇಂಟರ್ವ್ಯೂ ಮಾಡಿದ್ದ ಮೇಡಂ ಖುಷಿ ಆದರು. ಎಲ್ಲರೆದುರೂ ನನಗೆ ಶಹಬ್ಬಾಷ್‌ಗಿರಿ ಕೊಟ್ಟರು. ಮತ್ತೊಮ್ಮೆ ತ್ರಿಶೂರಿಗೆ ಹೋಗಿ ಟೆಂಡರ್ ಓಪನಿಂಗ್‍ನಲ್ಲಿ ಭಾಗವಹಿಸಿದೆ. ಕೆಲವು ದಿನಗಳ ನಂತರ ನನ್ನ ಇಮ್ಮೀಡಿಯೇಟ್ ಬಾಸ್ ಬದಲಾದರು. ನನ್ನನ್ನು ರೀಜಿನಲ್ ಆಫೀಸ್‌ಗೆ ಹೋಗೆಂದರು. ಹಾಗೆ ನಾನು ಬನ್ನೇರುಘಟ್ಟ ರಸ್ತೆ ಆಫೀಸ್‌ನಿಂದ ಕೋರಮಂಗಲ ರಹೇಜ ಆರ್ಕೇಡ್ ಆಫೀಸ್‌ಗೆ ಬಂದೆ. ಎಂದಿನಂತೆ ಎಲ್ಲರೂ ಗೆಳೆಯರಾದರು. ನಾನು ಒಮ್ಮೆ 'ಹೌ ಟು ವಿನ್ ಫ್ರೆಂಡ್ಸ್ ಆ್ಯಂಡ್ ಇನ್‌ಫ್ಲೂಯೆನ್ಸ್ ಪೀಪಲ್' ಪುಸ್ತಕ ಓದುತ್ತಿದ್ದಾಗ ನನ್ನ ಗೆಳೆಯನೊಬ್ಬ 'ನಿನಗೆ ಈ ಪುಸ್ತಕದ ಆವಶ್ಯಕತೆ ಇಲ್ಲ. ನೀನು ಹಾಗೆಯೇ ಗೆಳೆತನ ಮಾಡಬಲ್ಲೆ' ಎಂದಿದ್ದ. ಅವನ ಮಾತಲ್ಲಿ ಎಷ್ಟು ಸತ್ಯ ಇದೆಯೋ ತಿಳಿಯದು. ಆದರೆ ಗೆಳೆತನ ಮಾಡುವ ಸಂಗತಿಯಲ್ಲಿ ನಾನು ಅದೃಷ್ಟವಂತ. ಬೇಗನೆ ಗೆಳೆಯರಾಗುತ್ತಾರೆ ಜನ ನನ್ನೊಂದಿಗೆ. ಬಹಳ ವರ್ಷಗಳ ಹಿಂದಿನಿಂದಲೂ ಪರಿಚಿತರಂತೆ ಎಲ್ಲ ಸಹೋದ್ಯೋಗಿಗಳ ವರ್ತನೆ ಇತ್ತು. ಇಲ್ಲಿ ಇದ್ದವರು ಕಡಿಮೆ ಮಂದಿ. ಎಲ್ಲರೊಂದಿಗೆ ನನ್ನ ಸ್ನೇಹ ಚೆನ್ನಾಗಿತ್ತು. ಆದರೆ...

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102