ಯತಿ ಸ್ವಂತೀ -296


24-10-2018
ಸ್ವೀಡನ್ ದೇಶದ ಒಬ್ಬಾತ ನನ್ನ ದೊಡ್ಡ ಬಾಸ್ ಆಗಿ ಬಂದರು. ಆತನ ಜೊತೆಗೆ ಮಾತಾಡಲು ಖುಷಿ ಆಗುತ್ತಿತ್ತು. ಆತನಿಗೆ ನನ್ನ ಹೆಸರು ಹೇಳಲು ಬರುತ್ತಿರಲಿಲ್ಲ. ನನ್ನನ್ನು 'ಜಟ್ರಾಯ್' ಎನ್ನುತ್ತಿದ್ದರು! ಎಲ್ಲರೂ ಕೆಲಕಾಲ ನನ್ನನ್ನು ಜಟ್ರಾಯ್ ಎಂದೇ ಸಂಬೋಧಿಸಿ ರೇಗಿಸುತ್ತಿದ್ದರು. ನನ್ನ ಪದವಿಯ ಮಟ್ಟ ಮತ್ತು ಹೆಸರು ಬದಲಾದವು. ಸ್ವಲ್ಪ ಹೆಚ್ಚಿನ ಗ್ರೇಡ್. ನನ್ನ ಕೆಲವು ಸಹೋದ್ಯೋಗಿಗಳ ಹೆಸರು ನೆನಪಿದೆ. ನದಿಗೆ ಹೊಸನೀರು ಬಂದಂತೆ ಜನ ಬರುತ್ತಿದ್ದರು ಹೋಗುತ್ತಿದ್ದರು. ಹೊಸಬರು ಮತ್ತೆ ಬರುತ್ತಿದ್ದರು. ಕೊನೆಗೆ ನನ್ನ ಪದವಿ ಡಿಜಿಎಂ ಎಂದಾಯಿತು. ಕೆಲಸ ಆಸಕ್ತಿಕರವಾಗಿತ್ತು. ಆ ಸ್ವೀಡಿಷ್ ಬಾಸ್ ರಾಜೀನಾಮೆ ಇತ್ತರು. ಬೀಳ್ಕೊಡುಗೆಯ ಭಾಷಣ ಮಾಡುತ್ತಾ "ಅಬ್ಬಾ ನಿಮ್ಮ ಹೆಸರುಗಳನ್ನು ಉಚ್ಚರಿಸೋದು ಕಷ್ಟ. ನಾನು ಜಟ್ರಾಯ್ ಹೆಸರನ್ನು ಸರಿಯಾಗಿ ಹೇಳಕ್ಕೆ ಒಂದು ವರ್ಷ ತಗೊಂಡೆ" ಎಂದು ನನ್ನ ಹೆಸರನ್ನು ಮತ್ತೆ ಜಟ್ರಾಯ್ ಎಂದು ಹೇಳಿದರು. ಎಲ್ಲರೂ ನಕ್ಕರು. ನನ್ನ ಹೊಸ ಬಾಸ್ ಮುಂಬೈನಲ್ಲಿದ್ದರು. ನನ್ನ ಲೀವ್ ಅಪ್ಲಿಕೇಷನ್ ಕೂಡ ಮುಂಬೈಗೆ ಹೋಗಿ ಅಪ್ರೂವ್ ಆಗಬೇಕಿತ್ತು.

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102