ಯತಿ ಸ್ವಂತೀ -294
23-10-2018
ಒಬ್ಬರು ಕನ್ಸಲ್ಟೆಂಟ್ ಬಳಿ ಹೋದೆ. ಅವರ ಹತ್ತಿರ ಯಾವ ಓಪನಿಂಗ್ ಕೂಡ ಇರಲಿಲ್ಲ. ಅವರೊಂದು ಸಲಹೆ ನೀಡಿದರು. ನೀನು ಇಂಟರ್ವ್ಯೂಗೆ ಹೋದ ಕಂಪೆನಿಯ ಬಾಸ್‌ಗೆ ಗೆ ನೀನೇಕೆ ಒಂದು ಪತ್ರ ಬರೆದು ವಿಷಯವನ್ನು ನೆನಪಿಸಬಾರದು ಎಂದರು. ಮನೆಗೆ ಬಂದು ಒಂದು ಮೆಯಿಲ್ ಕಳಿಸಿದೆ. ಮರು 'ಟಪಾಲು' ತಕ್ಷಣವೇ ಬಂದಿತು. ಶೀಘ್ರದಲ್ಲೇ ಕರೆಯುವೆ ಎಂದು. ನನ್ನ ಬಳಿ ಮೊಬೈಲ್ ಇರಲಿಲ್ಲ. ಲ್ಯಾಂಡ್‌ಲೈನ್ ನಂಬರ್ ನೀಡಿದ್ದೆ. ಅಂದು ಮನೆಗೆ ಬಂಧುಗಳು ಬಂದಿದ್ದರು. ಆ ಸಂದರ್ಭದಲ್ಲಿ ನನಗೊಂದು ಕರೆ ಬಂದಿತು. ಬೆಂಗಳೂರಿನ ಆಫೀಸ್ ಸೆಕ್ರೆಟರಿ ಮಾತಾಡಿ, ನಿಮಗೆ ಸಿಂಗಪೂರಿಂದ ಟೆಲಿಫೋನಿಕ್ ಇಂಟರ್ವ್ಯೂ ಇದೆ ಎಂದಳು. ನನ್ನನ್ನು ಇಂಟರ್ವ್ಯೂ ಮಾಡಿದವರು ಅತಿ ಎತ್ತರದ ಪೋಸ್ಟ್‌ನಲ್ಲಿದ್ದಾಕೆ. ನನ್ನ ಸಿ. ವಿ. ಯನ್ನು ಒಂದೂವರೆ ಪುಟಕ್ಕೆ ಇಳಿಸಿ ಕಳಿಸಿದ್ದೆ. ಪ್ರತಿಯೊಂದು ಅಂಶವನ್ನೂ ಓದಿ ನನ್ನನ್ನು ಪ್ರಶ್ನಿಸಿದರು. ನನಗೆ ತಿಳಿದ ಮಟ್ಟಿಗೆ ಉತ್ತರ ಹೇಳಿ 'ಮೇಡಂ, ನನಗೆ ಯಾವುದೇ ವಿಶೇಷ ಕ್ವಾಲಿಫಿಕೇಶನ್ ಇಲ್ಲ. ಮಾತಾಡುವುದು ಮಾತ್ರ ಬರುತ್ತದೆ' ಎಂದೆ. ನಾನು ಮಸ್ಕತ್‌ನಲ್ಲಿ ಸರ್ಕಾರೀ ಸಿಬ್ಬಂದಿಯೊಂದಿಗೆ ಡೀಲ್ ಮಾಡುತ್ತಿದ್ದ ವಿಷಯ ಹೇಳಿದೆ. 'ಸರಿ ಪುನಃ ಸಂಪರ್ಕಿಸುತ್ತೇವೆ' ಎಂದರು. ಎರಡು ದಿನಗಳ ನಂತರ ಬನ್ನೇರುಘಟ್ಟ ರಸ್ತೆಯ ಆಫೀಸ್‌ನಲ್ಲಿ ಇಂಟರ್ವ್ಯೂಗೆ ಕರೆ ನೀಡಿದರು. ಪ್ರವೀಣ್ ಎಂಬಾತ 'ನಿನಗೆ ಈಆರ್ಪೀ ಗೊತ್ತಾ?' ಎಂದು ಕೇಳಿದ. ನನಗೆ ಹೆಚ್ಚು ತಿಳಿಯದು ಎಂದೆ. ನನ್ನ ಸ್ವಂತ ಸಂಗತಿ ಕೇಳಿಕೊಂಡ ನಂತರ ಪುನಃ ಸಂಪರ್ಕ ಮಾಡುವೆವು ಎಂದರು. ಕೆಲಸ ಸಿಗುವುದು ಖಾಯಂ? ಎಂದುಕೊಂಡೆ. ಮನೆಗೆ ಬಂದೆ. ದುಬೈ ಕೆಲಸದ ವೀಸಾ ಬಂದಿತ್ತು! ಕೈಯಲ್ಲಿ ಇರುವ ಹಕ್ಕಿ ಉತ್ತಮವಾ? ಪೊದೆಯಲ್ಲಿ ಇರಬಹುದಾದದ್ದಾ? ತಿಳಿಯದೇ ತುಮುಲದಲ್ಲಿ ಸಿಲುಕಿದೆ...
Comments
Post a Comment