ಯತಿ ಸ್ವಂತೀ -293
22-10-2018
ಸುಮಾರು 33 ತಿಂಗಳುಗಳ ಕಾಲ ಈ ದೇಶದಲ್ಲಿ ಉದ್ಯೋಗ. ಅದರಲ್ಲಿ ಸುಮಾರು 80 ದಿನಗಳು ಬೆಂಗಳೂರಿನಲ್ಲಿ. ಮನೆಯವರಿಂದ ದೂರ. ಒಂಟಿತನದ ಬದುಕು. ಹಲವು ಸಿಹಿ ನೆನಪುಗಳು. ಕೆಲವು ಕಹಿ ಜ್ಞಾಪಕಗಳು. ಮುಕೇಶ್ ಲತಾ ಹಾಡಿರುವ 'ಕುಛ್ ಖೋ ಕರ್ ಪಾನಾ ಹೈ ಕುಛ್ ಪಾ ಕರ್ ಖೋನಾ ಹೈ' ಹಾಡು ಎಂದೆಂದಿಗೂ ಎಲ್ಲರಿಗೂ ಅನ್ವಯ. ಹೇಳಿದೆನಲ್ಲಾ... ರಾತ್ರಿ ಊಟ ಮಾಡಿ ಮನೆಗೆ ಬಂದು ಬೀಗ ತೆಗೆದು ದೀಪ ಹಾಕುವಾಗ ದುಃಖ ಉಮ್ಮಳಿಸಿ ಬರುತ್ತಿತ್ತು. ಉಳಿದಂತೆ ಎಲ್ಲವೂ ಮನೆಯಲ್ಲಿ ಇದ್ದಾಗ ಮಾಡುವ ಕೆಲಸಗಳೇ. ಏಳು ದಡಬಡ ಸಿದ್ಧನಾಗು ತಿಂಡಿ ತಿಂದು ಆಫೀಸ್‌ಗೆ ದೌಢಾಯಿಸು ಕೆಲಸ ಮಾಡು. ಒಮ್ಮೆ ಆಫೀಸ್ ಒಳಗೆ ಕೂತ ನಂತರ ಭಾರತ, ಒಮಾನ್, ಅಮೆರಿಕ ಎಲ್ಲ ಒಂದೇ. ನಂತರ ಊಟ. ಮತ್ತೆ ಓಟ. ಕೆಲಸ. ನಂತರ ಊಟ. ಮನೆ. ನಿದ್ದೆ. ಆದರೆ ಮತ್ತದೇ ಸಂಜೆ. ಫಿರ್ ವಹೀ ತನಹಾಯೀ. ವಾಪಸ್ ಬಂದ ನಂತರ ಮಕ್ಕಳು ಗಲಾಟೆ ಮಾಡಿದರೆ ಕಿವಿ ಮುಚ್ಚಿ ಕೂರುತ್ತಿದ್ದೆ. ಒಂಟಿತನದ ಆ ಸಿನಿಕತೆ ಹೋಗಲು ಕೆಲಕಾಲ ಹಿಡಿಯಿತು. ಕೆಲಸ ಸಿಕ್ಕಿದೆ ಎಂಬ ಖುಷಿಯಲ್ಲಿ ಓಡಾಡುತ್ತಿದ್ದೆ. ನಂತರ ಬೆಂಗಳೂರಿನಲ್ಲಿ ಉದ್ಯೋಗ ಮಾಡುವ ಅವಕಾಶ ದೊರಕಿತು. ಬದುಕು ಮತ್ತೊಂದು ತಿರುವು ಪಡೆಯಿತು. ಬದಲಾವಣೆ ಒಂದೇ ಶಾಶ್ವತ ಎಂಬ ಮಾತು ನನ್ನ ಜೀವನದಲ್ಲಿ ಮತ್ತೆ ಸಾಬೀತಾಯಿತು.
Comments
Post a Comment