ಯತಿ ಸ್ವಂತೀ -291


20-10-2018
ಹೊರಡುವ ದಿನ ಹತ್ತಿರ ಬಂದಿತು. ಕಂಪೆನಿಯ ಸಹೋದ್ಯೋಗಿಗಳು ಸೇರಿ ನನಗೊಂದು ಬಂಗಾರದ ಬ್ರೇಸ್‍ಲೆಟ್ ಕಾಣಿಕೆ ನೀಡಿದರು. ಒಂದು ಚಿಕ್ಕ ಥ್ಯಾಂಕ್ಸ್ ಭಾಷಣ ಬಿಗಿದೆ. ಮರುದಿನ ಒಂದು ಟೆಂಡರ್ ಸಬ್‌ಮಿಟ್ ಮಾಡಲು ಮುನಿಸಿಪಾಲಿಟಿ ಆಫೀಸ್‌ಗೆ ಹೊರಟಿದ್ದೆ. ಮೊಬೈಲ್‌ಗೆ ಹ್ಯಾಂಡ್ಸ್ ಫ್ರೀ ಹಾಕಿಕೊಂಡು ನನ್ನ ಕೊಲೀಗ್ ಒಬ್ಬರೊಂದಿಗೆ ವಾದ ಮಾಡುತ್ತಿದ್ದೆ. ನನ್ನ ಗಮನ ಕ್ಷಣಕಾಲ ಮಾತಿನತ್ತ ಹೋಗಿತ್ತು. ಅಷ್ಟೇ... ನನ್ನ ಮುಂದೆ ಹೋಗುತ್ತಿದ್ದ ಹೊಚ್ಚ ಹೊಸ ಹೋಂಡಾ ಅಕ್ಕಾರ್ಡ್ ಕಾರಿನ ಹಿಂದಿನ ಬಂಪರ್‌ಗೆ ನನ್ನ ಕಾರು ಮುತ್ತಿಕ್ಕಿತ್ತು! ಆ ಮನುಷ್ಯ ಕಾರಿಂದಿಳಿದು ಅರಾಬಿಕ್ ಭಾಷೆಯಲ್ಲಿ ಏನೋ ಹೇಳುತ್ತಾ ಹೋದ. ಆತನ ಮಾತಿನಲ್ಲಿ ಹತ್ತು ರಿಯಾಲ್ ಎನ್ನುವ ಪದಗಳು ನನಗೆ ಅರ್ಥ ಆದವು. ಆದರೆ ಅಲ್ಲೇ ಪಕ್ಕಕ್ಕೆ ಕಾರು ನಿಲ್ಲಿಸಿ 'ಪೊಲೀಸರನ್ನು ಕರೆಯಿರಿ' ಎಂದೆ. ನನ್ನ ಸಹೋದ್ಯೋಗಿ ಶಾನ್‌ಭಾಗ್‌ಗೆ ಫೋನ್ ಮಾಡಿ ಟೆಂಡರ್ ತಗೊಂಡು ಹೋಗೆಂದೆ. ಅವನು ಬಂದ. ಈ ದೃಶ್ಯ ನೋಡಿ ನಕ್ಕು ಹೊರಟು ಹೋದ. ಒಬ್ಬ ಬಲೂಚಿ ಬಂದು 'ಹತ್ತು ರಿಯಾಲ್ ಕೊಟ್ಟರೆ ಬಿಟ್ಟುಬಿಡುತ್ತಾರಂತೆ' ಎಂದ ಹಿಂದಿಯಲ್ಲಿ, ನನಗೆ ಅರಾಬಿಕ್ ಅರ್ಥ ಆಗಿಲ್ಲ ಎಂದುಕೊಂಡು. ನಮ್ಮ ಪಿ ಆರ್ ಓ ಫಹಾದ್‌ಗೆ ಫೋನ್ ಮಾಡಿದೆ. ಅವ ಬಂದ. ಕಾರಿನ ಡ್ರೈವರ್ ಜೊತೆ ಮಾತನಾಡಿದ. ಅಷ್ಟರಲ್ಲಿ ಪೊಲೀಸ್ ಬಂದ. 'ಖಲ್ಲಾಸ್?'(ಮುಗಿಯಿತಾ?) ಎಂದು ಕೇಳಿದ. 'ಕುಲ್ಲು ತಮಾಮ್' ಎಂದ ಫಹಾದ್. ಎಲ್ಲ ಸರಿಯಾಗಿದೆ ಎಂದರ್ಥ. ನಂತರ ಎಲ್ಲರೂ ಚೆದುರಿದೆವು. ಆಮೇಲೆ ನಮ್ಮ ಪಿ ಆರ್ ಓನನ್ನು ಕೇಳಿದೆ. 'ನೀನು ರಾಜೀನಾಮೆ ಕೊಟ್ಟಾಗಿದೆ. ಪರವಾಗಿಲ್ಲ ಕೊಟ್ಟುಬಿಡು. ಸುಮ್ಮನೆ ಇನ್ಷೂರೆನ್ಸ್, ಪೊಲೀಸ್ ಎಲ್ಲ ಯಾಕೆ ನಿನಗೆ' ಎಂದ ಅವ. ಸರಿ, ಪಕ್ಕದ ಬಿಳ್ಡಿಂಗ್‌ನಲ್ಲಿದ್ದ ಆ ಮನುಷ್ಯನನ್ನು ಕಂಡು ಹತ್ತು ರಿಯಾಲ್ ತೆತ್ತೆ. ಹಣ ಪಡೆದು ಅವನು ಬಹಳ ಸಂತೋಷ ಪಟ್ಟ. ತಿರುಪತಿ ಹುಂಡಿಗೆ! ಅಲ್ಲಿಗೆ ನನ್ನ ಮಸ್ಕತ್‌ ಋಣ ತೀರಿತು.

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102