ಯತಿ ಸ್ವಂತೀ -290
19-10-2018
ಇದನ್ನು ಇಂದು ಬರೆಯುತ್ತಿರುವೆ ಎಂದರೆ ಅಂದು ಬದುಕಿ ಉಳಿದಿದ್ದೇ ಕಾರಣ ಎಂದು ನಂಬುತ್ತೇನೆ. ಪಕ್ಕದ ವಾದಿಯಿಂದ ಒಂದು ಕತ್ತೆ ಮೇಲೆ ಬಂದು ವೇಗವಾಗಿ ಹೋಗುತ್ತಿದ್ದ ನಮ್ಮ ಕಾರಿಗೆ ಢಿಕ್ಕಿ ಹೊಡೆದಿತ್ತು. ಕಾರಿನ ಗೇರ್ ಬಾಕ್ಸ್ ಢಮ್ಮೆಂದು ಒಡೆಯಿತು. ಕತ್ತೆ ಮತ್ತೆ ಓಡಿ ವಾದಿಯಲ್ಲಿ ಬಿದ್ದು ಹೋಯಿತು. ನಾನು ಪ್ಯಾಸೆಂಜರ್ ಸೀಟಿನಲ್ಲಿದ್ದೆ. ಡ್ರೈವರ್ ಕಡೆ ಬ್ರೇಕ್ ಆಯಿಲ್ ಸುರಿಯಲಾರಂಭಿಸಿತ್ತು. ಕಾರು ಅಲುಗಾಡದೇ ನಿಂತಿತು. ಇಳಿದು ಹೋಗಿ ವಾದಿಯಲ್ಲಿ ನೋಡಿದೆ. ಕತ್ತೆ ಅಲ್ಲಿ ಸತ್ತುಬಿದ್ದಿತ್ತು. ಪೊಲೀಸ್‌ಗೆ ಫೋನ್ ಮಾಡಿದೆವು. ಅವರು ನೂರೈವತ್ತು ಕಿಮೀ ದೂರದಿಂದ ಬರಬೇಕಿತ್ತು. ಮಧ್ಯಾಹ್ನದ ಮಟಮಟ ಬಿಸಿಲು. ಸ್ವಲ್ಪ ದೂರದಲ್ಲಿ ಸಮುದ್ರ. ಅದರ ಮೇಲೆ ಬಿಸಿಲಿನ ಝಳ ಕಾಣಿಸುತ್ತಿತ್ತು. ನನ್ನನ್ನು ಮಸ್ಕತ್ ಕಡೆ ಹೋಗುತ್ತಿದ್ದ ಒಂದು ಕಾರಿನಲ್ಲಿ ಕಳಿಸಿದರು. ಏಕೆಂದರೆ ಪೊಲೀಸ್ ಬರುವ ವರೆಗೂ ಆ ಕಾರಿನ ಡ್ರೈವರ್ ಕಾಯಲೇಬೇಕಿತ್ತು. ಇಬ್ಬರು ಯುವಕರಿದ್ದ ಕಾರದು. ಡ್ರೈವಿಂಗ್ ಲೈಸೆನ್ಸ್ ಪಡೆದೇ ಇರಲಿಲ್ಲ ಅವರು! ಅಂತೂ ಅವರು ನನ್ನನ್ನು ಡ್ರಾಪ್ ಮಾಡುವ ವರೆಗೆ ಸ್ವಲ್ಪ ಹೆದರಿಕೆ ಇದ್ದೇ ಇತ್ತು. ನಂತರ ಮುಖ್ಯ ರಸ್ತೆಯಲ್ಲಿ ಪಾರ್ಕ್ ಮಾಡಿದ್ದ ನನ್ನ ಕಾರು ಹತ್ತಿ ಮನೆಗೆ ಬಂದೆ. ಆದರೆ ನನ್ನ ಅಪಘಾತಗಳ ಪಟ್ಟಿ ಇನ್ನೂ ಮುಗಿದಿರಲಿಲ್ಲ!
Comments
Post a Comment