ಯತಿ ಸ್ವಂತೀ -288


17-10-2018
ವಾಪಸ್ ಹೋಗಲು ಖುಷಿ. ಮಸ್ಕತ್‌ನ ನನ್ನ 'ಮನೆ'ಗೆ ಮರಳುವ ಸಂಭ್ರಮ. ಆದರೆ ಅಲ್ಲಿ ಒಂದು ತಾಪತ್ರಯ ಜರುಗಲಿತ್ತು. ಮತ್ತೆ ನನ್ನ ಮಾಮೂಲಿ ಟೆಂಡರ್ ಕೆಲಸದಲ್ಲಿ ಮಗ್ನನಾದೆ. ನನ್ನ ಶ್ರೀಮತಿಯವರು ಮಸ್ಕತ್‌ಗೆ ಬರಬೇಕಿತ್ತು. ವೀಸಾಗಾಗಿ ವಿನಂತಿ ಮಾಡಿದೆ. ಏಕೋ ಏನೋ ಕೊಡುವುದಿಲ್ಲ ಎಂದುಬಿಟ್ಟರು. ಮನಸ್ಸಿಗೆ ಕಹಿ ಎನಿಸಿತ್ತು. 'ನನ್ನ ಭಾವನವರಿಗೆ ಫೋನ್ ಮಾಡಿದೆ. ಬೆಂಗಳೂರಿನಲ್ಲಿ ಕೆಲಸ ಸಿಗಲ್ವಾ? ಬಿಟ್ಟುಬಿಡಲು ಸಾಧ್ಯ ಆದರೆ ಕೆಲಸ ಬಿಡು: ಎಂದರು. ಅಂದು ನಮ್ಮ ಎರಡನೇ ಬಾಸ್ ಜೊತೆಗೆ ಲಿಫ್ಟ್‌ನಲ್ಲಿ ಆಫೀಸಿಗೆ ಹೋಗುವಾಗ' ನಾನು ರಾಜೀನಾಮೆ ಕೊಡ್ತೀನಿ' ಎನ್ನುವ ಮಾತು ಥಟ್ಟನೆ ನನ್ನಿಂದ ಹೊರಬಿದ್ದುಬಿಟ್ಟಿತು. ಸರಸರನೆ ಆ ಮಾತು ಆಫೀಸ್‌ನಲ್ಲಿ ಹರಡಿತು. ಏಪ್ರಿಲ್ 11, 2005 ನನ್ನ ಕೊನೆಯ ದಿನ ಎಂದಾಯಿತು. ಆಗ ಮುಂದ? ಎನ್ನುವ ಪ್ರಶ್ನೆ ಎದುರಾಯಿತು. ಅದಕ್ಕೆ ಮೊದಲು...

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102