ಯತಿ ಸ್ವಂತೀ -286
15-10-2018
ಒಮ್ಮೆ ಸುಮೈಲ್‌ಗೆ ಮಧ್ಯಾಹ್ನ ಹೊರಟೆ. ಸುಮಾರು 200 ಕಿಮೀ ಡ್ರೈವಿಂಗ್. ಕಸ್ಟಮರುಗಳ ಭೇಟಿಯ ನಂತರ ವಾಪಸ್ ಹೊರಟೆ. ಇದ್ದಕ್ಕಿದ್ದಂತೆ ಮಳೆ ಶುರುವಾಯಿತು. ಅಬ್ಬಾ! ಕುಂಭದ್ರೋಣ ಮಳೆ. ಗಾಬರಿಯಿಂದ ಕಾರೋಡಿಸಿದೆ. ನನಗೆ ವೈಪರ್ ಕೂಡ ಆಪರೇಟ್ ಮಾಡಲು ಬರುತ್ತಿರಲಿಲ್ಲ. ಏಕೆಂದರೆ ಎಂದಿಗೂ ಮಳೆಯಲ್ಲಿ ಕಾರೋಡಿಸಿರಲಿಲ್ಲ. ಈಗ ಮುಂದಿನ ಹಾದಿ ಕಾಣಿಸುತ್ತಿಲ್ಲ. ಹೆಡ್ ಲೈಟ್, ಬ್ಯಾಕ್ ಲೈಟ್, ಹಝಾರ್ಡ್ ಲೈಟ್ಸ್ ಹಾಕಿಕೊಂಡು ಮೆಲ್ಲನೆ ಚಾಲಿಸಿದೆ. ಬೆಟ್ಟದ ಮೇಲಿನ ರಸ್ತೆ. ಮಳೆನೀರು ರಸ್ತೆಯ ಮೇಲೆ ನಿಲ್ಲದಿದ್ದುದು ಪುಣ್ಯ. ಜೀವನ್‌ಗೆ ಫೋನ್ ಮಾಡಿದೆ. ಏನೂ ಕೇಳಿಸಲಿಲ್ಲ. ಬಲಗಡೆಗೇ ಹೋಗುತ್ತಿದ್ದೆ. ಆದರೆ ನನಗಿಂತ ನಿಧಾನವಾಗಿ ಹೋಗುವವರನ್ನು ಓವರ್‌ಟೇಕ್ ಮಾಡಲೇಬೇಕಿತ್ತು. ಇನ್ನೊಂದು ಕಡೆ ಉಲ್ಟಾ ಬಿದ್ದಿದ್ದ ಕಾರು ನೋಡಿ ಏಸಿ ಕಾರೊಳಗೇ ಬೆವರಿದೆ. ಕ್ಯಾಸೆಟ್‌ನಿಂದ ಹಾಡು 'ನಜರ್ ಆ ರಹಾ ಹೈ ಸಾಫ್ ಯೇ' ಕೇಳಿ ಮೈ ಉರಿಯಿತು. ಎಂತಹ ವಿಪರ್ಯಾಸ! ಮಳೆ ಕಡಿಮೆ ಆಗುವ ವರೆಗೂ ವೈಪರ್ ಆ್ಯಕ್ಷನ್ ಒಂದು ಕ್ಷಣ ಆಗುವಂತಹದ್ದು ಮಾಡುತ್ತಿದ್ದೆ. ಆ ಆ್ಯಕ್ಷನ್‌ನಿಂದ ಮುಂದಿನ ಗಾಜು 'ಸಾಫ್' ಆಗುವುದೆಂದು ತಿಳಿದಿತ್ತು. ಮಳೆ ನಿಂತು ಹೋದ ಮೇಲೆ ನನ್ನ ಹಣೆಯ ಮೇಲೆ ಬೆವರಿನ ಹನಿಯೊಂದು ಮೂಡಿತ್ತು. ಜೀವನ್‌ಗೆ ಫೋನ್ ಮಾಡಿ ಮನೆ ತಲುಪುವ ವರೆಗೂ ಮಾತಾಡುತ್ತಲೇ ಇದ್ದೆ. ಅಬ್ಬಾ... ಇದೊಂದು ಭಯಾನಕ ಅನುಭವ. ಮತ್ತೊಂದು ಅಪಘಾತ ಶೀಘ್ರವೇ ಸಂಭವಿಸುವುದರಲ್ಲಿತ್ತು.
Comments
Post a Comment