ಯತಿ ಸ್ವಂತೀ -285


14-10-2018
ಒಂದು ಶುಕ್ರವಾರ ಬೆಳಗ್ಗೆ ಸೊಹಾರ್ ಎನ್ನುವ ಊರಿನಲ್ಲಿದ್ದ ಮನೀಷ್ ಎನ್ನುವ ಸಹೋದ್ಯೋಗಿಯ ಮನೆಗೆ ಹೋಗಲು ನಿರ್ಧಾರ ಮಾಡಿದೆವು ನಾನು, ಜೀವನ್. ಆತನಿಗೆ ಮನೀಷ್ ಪರಿಚಯವಿತ್ತು. ನನ್ನ ಬಳಿ ಕಾರು ಮತ್ತು ಕಾರೋಡಿಸುವ ಜೋಷ್ ಇತ್ತು. ರೂವಿಯಲ್ಲಿದ್ದ ಸುರೇಶ್ ಕೂಡ ಮನೀಷ್‌ನ ಗೆಳೆಯ. ಸುರೇಶ್‌ನ ಪತ್ನಿ ಮತ್ತು ಪುಟ್ಟ ಮಗು ಚೆನ್ನೈಯಿಂದ ಬಂದಿದ್ದರು. ಸೋ, ನಾನು ಜೀವನ್ ಬೆಳ್ಳಂಬೆಳಗ್ಗೆಯೇ ಮನೆಯಿಂದ ಹೊರಟೆವು. ನಾನು ಒಂದು ಸ್ಟ್ರೆಚ್‍ನಲ್ಲಿ ಅಷ್ಟು ದೂರ ಎಂದೂ ಕಾರೋಡಿಸಿದ್ದವನಲ್ಲ. ಸುಮಾರು 140 ಕಿಮೀ ದೂರದ ರುಸೈಲ್ ಎನ್ನುವ ಸ್ಥಳ ತಲುಪಿದೆವು. ಅಲ್ಲಿಗೆ ಸುರೇಶ್ ಮತ್ತು ಕುಟುಂಬ 160 ಕಿಮೀ ದೂರಕ್ಕೆ ಟ್ಯಾಕ್ಸಿ ಹಿಡಿದು ಬಂದಿದ್ದರು. ನಂತರ ಇನ್ನೂ 200 ಕಿಮೀ ದುಬೈ ಕಡೆಯ ರಸ್ತೆಯಲ್ಲಿ ಕಾರೋಡಿಸಿದೆ. ಮಹಾ ಅಪಾಯಕಾರಿ ರಸ್ತೆ. ಮೇಲು ಸೇತುವೆ ಈಗಿದೆಯಂತೆ. ಆಗ ಇರಲಿಲ್ಲ. ಇದ್ದಕ್ಕಿದ್ದಂತೆ ಅಡ್ಡ ಬರುತ್ತಿದ್ದ ಕಾರುಗಳು! ಜೊತೆಗೆ ಸುರೇಶ್ ಮಗುವಿನ ಆರೋಗ್ಯ ಕೆಟ್ಟಿತು. ಅಲ್ಲಲ್ಲಿ ವಾಂತಿ ಮಾಡುತ್ತಿತ್ತು. ಬೆಳಗ್ಗೆ ಆರಕ್ಕೆ ಹೊರಟು ಸುಮಾರು 350 ಕಿಮೀ ದೂರದ ಮನೀಷ್ ಮನೆ ಇದ್ದ ಸೊಹಾರ್ ಸುಮಾರು ಒಂಬತ್ತೂವರೆಗೆ ತಲುಪಿದೆವು. ಮನೀಷ್ ಮನೆಯಲ್ಲಿ ತಿಂಡಿ. ಹೊಸದಾಗಿ ಮದುವೆಯಾಗಿದ್ದು ಪತ್ನಿಯನ್ನು ಕರೆಸಿದ್ದ. ನಂತರ ನಮ್ಮ ಕಂಪೆನಿಯ ಸೊಹಾರ್ ಶೋರೂಂ ಇನ್ ಛಾರ್ಜ್ ಅಶೋಕ್ ಮನೆಯಲ್ಲಿ ಊಟ. ಮತ್ತೆ ಸಂಜೆ ನಾಲ್ಕೂವರೆಗೆ ಸೊಹಾರ್ ಬಿಟ್ಟೆವು. ಸುರೇಶ್ ಮತ್ತು ಕುಟುಂಬವನ್ನು ರುಸೈಲ್‌ನಲ್ಲಿಳಿಸಿ  ಒಂಬತ್ತು ಗಂಟೆ ಸುಮಾರಿಗೆ ನಿಜ್ವಾ ತಲುಪಿದೆವು. ಒಂದೇ ದಿನ ಏಳುನೂರು ಕಿಮೀಗಳಷ್ಟು ದೂರ ಕಾರೋಡಿಸಿದ್ದೆ! ಮರುದಿನ ಎಲ್ಲ ಮಾಮೂಲಿ ರೊಟೀನ್. ಆ ಶೋರೂಂ ಇನ್ ಛಾರ್ಜ್ ಪೈ ಮಾಮ್ ಅವರ ರಜೆಯನ್ನು ಮುಂದುವರಿಸಿದ್ದರಿಂದ ನಾನು ನಿಜ್ವಾದಲ್ಲಿ ಉಳಿದುಕೊಳ್ಳುವುದು ಅನಿವಾರ್ಯ ಆಗಿತ್ತು. ಒಮ್ಮೆ ನನ್ನ ದೊಡ್ಡ ಬಾಸ್ ನಮ್ಮ ಕಂಪೆನಿಯ ಕಸ್ಟಮರ್ ಒಬ್ಬರನ್ನು ಕರೆತರಬೇಕೆಂದರು. 200 ಕಿಮೀ ದೂರದ ಆ ಊರಿಗೆ ಹೋಗಿ ಅವರನ್ನು ಕರೆದುಕೊಂಡು ದೊಡ್ಡ ಬಾಸ್ ಮುಂದೆ ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದೆ. ಇನ್ನೊಂದು ಸಲ ಚಲನಚಿತ್ರ ಒಂದನ್ನು ನೋಡಲು ನಿಜ್ವಾದಿಂದ ಶುಕ್ರವಾರ ಹನ್ನೊಂದಕ್ಕೆ ಹೊರಟು ರೂವಿ ಸಿನಿಮಾ ತಲುಪಿ, ಸಿನಿಮಾ ನೋಡಿ ಮತ್ತೆ ಹೊರಟು ರಾತ್ರಿ ಊಟಕ್ಕೆ ನಿಜ್ವಾ ತಲುಪಿದ್ದೆ. ಆ ಸಿನಿಮಾ ಶಾರುಖ್ ಖಾನ್ ನಟಿಸಿದ ಸ್ವದೇಸ್...

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102