ಯತಿ ಸ್ವಂತೀ -284
13-10-2018
ಜೀವನ ಒಂದು ಪ್ಯಾಟ್ರನ್ ಪಡೆಯಿತು. ಬೆಳಗ್ಗೆ ಎದ್ದು ಸ್ನಾನ ಮುಗಿಸಿ ಜೀವನ್ ಮಾಡುತ್ತಿದ್ದ ರುಚಿಯಾದ ತಿಂಡಿ ತಿಂದು ಕಾರಿಗೆ ಇಬ್ರಿ ಊರಿನ ಕಸ್ಟಮರುಗಳು ಆರ್ಡರ್ ಮಾಡಿದ ವಸ್ತುಗಳನ್ನು ಹಾಕಿಕೊಂಡು ಹೊರಡುತ್ತಿದ್ದೆ. ಟ್ರಾಫಿಕ್ ಜಾಮ್ ತಪ್ಪಿಸಲು ಏಳೂವರೆಗೆ ನಿಜ್ವಾ ಬಿಡುತ್ತಿದ್ದೆ. ರಸ್ತೆಯಲ್ಲಿ ಹಿಂದೀ ಕನ್ನಡ ಹಾಡುಗಳನ್ನು ಕೇಳುತ್ತಿದ್ದೆ. ಇಬ್ರಿ ತಲುಪಿ ನನ್ನ ಪ್ರಕೃತಿ ಕರೆ ಮುಗಿಸಲೇಬೇಕಿತ್ತು. ನವೆಂಬರ್ ತಿಂಗಳಲ್ಲಿ ನಿಜ್ವಾ ಗಡಗಡಗಡ ನಡುಗಿಸುವಷ್ಟು ಛಳಿ ಹೊಂದಿರುತ್ತಿತ್ತು. ಜೊತೆಗೆ ಮಂಜು ಇಡೀ ಜಾಗ ಮಬ್ಬಾಗುವಂತೆ ಮಾಡುತ್ತಿತ್ತು. ಸುಮಾರು ಒಂದೂವರೆ ಹೊತ್ತಿಗೆ ಮರಳಿ ನಿಜ್ವಾ ತಲುಪುತ್ತಿದ್ದೆ. ಜೀವನ್ ಬಿಸಿ ಬಿಸಿ ಅಡುಗೆ ಮಾಡಿರುತ್ತಿದ್ದ. ನಂತರ ನಿದ್ದೆ. ಬೆಳಗ್ಗೆ ಅವನು ಶೋರೂಂ ತೆರೆದಿರುತ್ತಿದ್ದ. ಸಂಜೆ ನಾಲ್ಕಕ್ಕೆ ಶೋರೂಂ ತೆರೆಯುತ್ತಿದ್ದ. ನಮ್ಮ ಮನೆ ಅದರ ಪಕ್ಕದಲ್ಲಿನ ಬಿಳ್ಡಿಂಗ್ ಮಹಡಿಯ ಮೇಲಿತ್ತು. ಅನತಿ ದೂರದಲ್ಲಿ ನಿಜ್ವಾದ ಪುರಾತನ ಕೋಟೆ. ಅದಕ್ಕೆ ಬಹಳ ಜನ ಪ್ರವಾಸಿಗರು ಬರುತ್ತಿದ್ದರು. ಜನ ನಮ್ಮ ಶೋ ರೂಂಗೆ ಬಂದು ಲೈಟು, ಸ್ವಿಚ್ ಮತ್ತು ಇತರ ವಿದ್ಯುತ್ ಉಪಕರಣ ಕೊಳ್ಳುತ್ತಿದ್ದರು. ಎಂಟಕ್ಕೆ ಅಂಗಡಿ ಮುಚ್ಚಿ ಹತ್ತಿರದ ಸೂಪರ್ ಮಾರ್ಕೆಟ್ ತಲುಪುತ್ತಿದ್ದೆವು. ಎಂಟೂವರೆ ರಾತ್ರಿಯಲ್ಲಿ ಆ ಛಳಿಯಲ್ಲಿ ಐಸ್ ಕ್ರೀಂ ತಿನ್ನುತ್ತಿದ್ದೆವು! ನಮ್ಮ ಈ ವರ್ತನೆ ಜನಕ್ಕೆ ಅಚ್ಚರಿ ತರುತ್ತಿತ್ತು. ಉಳಿದವರು ಕುಬೂಸ್ ರೋಟಿ ನಡುವೆ ಎಣ್ಣೆಯಲ್ಲಿ ಕರಿಯಲ್ಪಟ್ಟ ಬಿಸಿ ಮಾಂಸವನ್ನು ತುಂಬಿಸಿಕೊಂಡು ತಿನ್ನುತ್ತಿದ್ದರು. ಬೇಕಾದ ತರಕಾರಿ, ತುಪ್ಪ ಇತ್ಯಾದಿ ಕೊಳ್ಳುತ್ತಿದ್ದರು. ರಾತ್ರಿಗೆ ಬಿಸಿ ಚಪಾತಿ ಮಾಡುತ್ತಿದ್ದ ಜೀವನ್. ಊಟ ಮುಗಿಸಿ ಹಾಡು ಕೇಳುತ್ತಾ, ಹರಟೆ ಹೊಡೆಯುತ್ತಾ ಮಲಗುತ್ತಿದ್ದೆವು. ನಾನಿದ್ದ ರೂವಿಯಲ್ಲಿ ಬಹಳ ಬಿಸಿಲು. ಅದೂ ಮಸ್ಕತ್ ದೇಶದ ಭಾಗವೇ. ರೂಂ ಹೀಟರ್ ಮಸ್ಕತ್‌ನ ಈ ಭಾಗದಲ್ಲಿ ಬೇಕು... ಅಂದರೆ ನಿಜ್ವಾದಲ್ಲಿ ಬೇಕು ಎಂದರೆ ಒಂದೇ ದೇಶ, ಎರಡು ಹವಾಮಾನ ಎಂದು ಆಶ್ಚರ್ಯಗೊಂಡೆ.
Comments
Post a Comment