ಯತಿ ಸ್ವಂತೀ -283


12-10-2018
90 ಕಿಮೀ ದೂರದ ಸುಮೈಲ್‌ ಎನ್ನುವ ಊರಿಗೆ ಮಸ್ಕತ್‌ ದಿಕ್ಕಿನಲ್ಲಿ ಹೋಗಿ ಸ್ವಲ್ಪ ರೂಟ್ ಬದಲಿಸಬೇಕಿತ್ತು. 40 ಕಿಮೀ ದೂರದ ಇಜ್ಕಿ ಎನ್ನುವ ಮತ್ತೊಂದು ಜಾಗಕ್ಕೆ ಪೈ ಮಾಮ್ ಕರೆದೊಯ್ದಿದ್ದರು. ಅವರು ಮತ್ತು ಕುಟುಂಬ ಮೂಡಬಿದರೆಗೆ ರಜೆಗೆ ಹೋದರು. ನಾನು ಜೀವನ್ ಜೊತೆಗೆ ಅವನ ಮನೆಯಲ್ಲಿ ಇರತೊಡಗಿದೆ. ಬಲು ಚೆನ್ನಾಗಿ ಅಡುಗೆ ಮಾಡುತ್ತಿದ್ದ ಜೀವನ್. ಬಹಳ ದಿನಗಳ ನಂತರ ಮನೆ ಊಟ! ಬೆಳಗ್ಗೆ ಹೊತ್ತು ಮಾತ್ರ ಕಸ್ಟಮರುಗಳ ಭೇಟಿಗೆ ಹೋಗುತ್ತಿದ್ದೆ. ಮಧ್ಯಾಹ್ನ ಜೀವನ್ ನಳಪಾಕ. ಸಂಜೆಯಿಂದ ಶೋರೂಂ. ಒಂದು ವಿಶಿಷ್ಟ ಕಾಲ ಅದು. ಅಪರೂಪಕ್ಕೆ ದೊಡ್ಡ ಬಾಸ್‍ರಿಂದ ಬರುತ್ತಿದ್ದ ಫೋನ್ ಕರೆ ಬಿಟ್ಟರೆ ದಿನಂಪ್ರತಿ ವ್ಯಾಪಾರ. ಅಷ್ಟೇ. ಕಸ್ಟಮರುಗಳ ಭೇಟಿಗೆ ಬೆಳಗ್ಗೆ ಏಳೂವರೆಗೇ ನಿಜ್ವಾದಿಂದ ಹೊರಟು ಬಿಡುತ್ತಿದ್ದೆ. ತಡವಾಗಿ ಹೊರಟಷ್ಟೂ ಟ್ರಾಫಿಕ್ ಹೆಚ್ಚು. ಸಿಂಗಲ್ ಟ್ರ್ಯಾಕ್. ರಸ್ತೆ ಬಿಟ್ಟರೆ ಆ ಕಡೆ ಈ ಕಡೆ ಸಮತಟ್ಟು ಪ್ರದೇಶ. ಅನತಿ ದೂರದಲ್ಲಿ ಎರಡೂ ಕಡೆ ಬೆಟ್ಟಗಳು. ಅಲ್ಲಲ್ಲಿ ಕುರಿ ಮೇಕೆ. ಕೆಲವೊಮ್ಮೆ ಒಂಟೆ. ಒಂಟೆ ಕಾರಿಗೆ ಅಡ್ಡ ಬಂದರೆ ಕಾರು ಮತ್ತು ನಾನು ಎರಡೂ ಪಡ್ಚಾ ಅಂತ ಎಚ್ಚರಿಕೆ ನೀಡಿದ್ದರು ಪೈ ಮಾಮ್. ಸೋ ಕೇರ್‌ಫುಲ್ ಡ್ರೈವಿಂಗ್. ನನ್ನ ಫೇವರಿಟ್ಸ್ ಲತಾ ಕಿಶೋರ್ ರಫಿ ಮುಕೇಶ್ ಪಿಬಿಎಸ್ ರಾಜ್ ಜಾನಕಿ ಸುಶೀಲ ಎಸ್ಪಿಬಿ... ಕ್ಯಾಸೆಟ್ ಕಾಲವದು. ಒಂದು ಕ್ಷಣ ಕೂಡ ಡ್ರೈವಿಂಗ್ ಬೋರ್ ಆಗಲಿಲ್ಲ. ಇಬ್ರಿಯೇ ದೂರ. 140 + 140 ಕಿಮೀ ಪ್ರತಿಸಲ. ಇಜ್ಕಿಗೆ ಸಂಜೆ ಹೋಗಿದ್ದೆ ಒಂದು ದಿನ. ಆಗ ಅಲ್ಲಿ ಒಂದು ಅಪಘಾತಕ್ಕೆ ಸಿಲುಕಿ... ಸುಮೈಲ್‍ನಿಂದ ಬರುವಾಗ ಕುಂಭದ್ರೋಣ ಮಳೆಯಲ್ಲಿ ಸಿಕ್ಕಿಕೊಂಡು... ಮತ್ತೊಮ್ಮೆ ಹೇಳುತ್ತೇನೆ.

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102