yathi swantee -264
21-09-2018
ನಾನು ದಿನಾ ಮನೆಯಿಂದ ಆಫೀಸ್‌ಗೆ ನಡೆದು ಹೋಗಿ ಬಂದು, ಆ ಉರಿ ಬಿಸಿಲು ನನ್ನ ಮೈ ಬಣ್ಣವನ್ನು ಬದಲಾಯಿಸಿತು. ಒಂದು ದಿನ ನನ್ನ ಸರ್ದಾರ್ಜಿ ಬಾಸ್ 'ಹೇಗೆ ಬರ್ತಿದ್ದೀ ಆಫೀಸ್‌ಗೆ?' ಅಂದರು. 'ನಡೆದುಕೊಂಡು' ಅಂದೆ. 'ನೀನು ಡ್ರೈವಿಂಗ್ ಕಲಿಯೋದು ಯಾವಾಗ?' ಅಂದರು. 'ನಮ್ಮ ಜೀಯೆಮ್ ಇಂಡಿಯಾದಿಂದ ವಾಪಸ್ ಬಂದು ಅನುಮತಿ ಕೊಟ್ಟ ಮೇಲೆ' ಅಂದೆ. ನನ್ನ ಫ್ಲ್ಯಾಟ್ ಮೇಟ್ ಪ್ರವೀಣನಿಗೆ ಫೋನ್ ಮಾಡಿ 'ಅರೆ ಪ್ರವೀಣ್.. ಮಧ್ಯಾಹ್ನ ಮನೆಗೆ ಹೋಗುವಾಗ ಇವನನ್ನು ಕರಕೊಂಡು ಹೋಗು. ಈ ಬಿಸಿಲಿಗೆ ಸತ್ತು ಗಿತ್ತು ಹೋದಾನು' ಎಂದರು. ಅಂದಿನಿಂದ ಪ್ರವೀಣ್ ಮಧ್ಯಾಹ್ನ ನನ್ನನ್ನು ಮನೆಗೆ ಕರೆದೊಯ್ಯತೊಡಗಿದ. ಒಮಾನ್ ಎಕ್ಸ್‌ಪ್ರೆಸ್ ಊಟ ಬೇರೆ ಬೇರೆ ಪ್ಲಾಸ್ಟಿಕ್ ಕವರುಗಳಲ್ಲಿ ಬರುತ್ತಿತ್ತು. ಅನ್ನ ಸಾರು ಸಾಂಬಾರು ಪಲ್ಯ ಹಪ್ಪಳ ಉಪ್ಪಿನಕಾಯಿ ಮತ್ತು ಮೊಸರು. ನಾನು ಪ್ರವೀಣ್ ಮತ್ತು ಸುರೇಶ್ ಒಟ್ಟಿಗೇ ಉಣ್ಣುತ್ತಿದ್ದೆವು. ಮೊದಮೊದಲು ನನಗೆ ಕವರ್ ಗಂಟುಗಳನ್ನು ಸುರೇಶ್ ತೆಗೆದುಕೊಡುತ್ತಿದ್ದ. ಎಲ್ಲವನ್ನೂ ಅರ್ಧ ಭಾಗ ತಿನ್ನುವುದು. ಮತ್ತೆ ಗಂಟು ಹಾಕಿ ಫ್ರಿಜ್‌ನಲ್ಲಿ ಇಡುವುದು. ಪ್ರವೀಣ್ ಏಳು ಗಂಟೆ ಸುಮಾರಿಗೆ ಮನೆಗೆ ಬಂದು ಎಲ್ಲರ ಊಟದ ಶೇಷವನ್ನೂ ಪಿಂಗಾಣಿ ತಟ್ಟೆ ಸಹಿತ ಹೊರಗಿಡುತ್ತಿದ್ದ. ನಾವು ತಿನ್ನುವ ವೇಳೆಗೆ ಫ್ರಿಜ್ ಕೋಲ್ಡ್ ಹೋಗಿ ರೂಂ ಟೆಂಪರೇಚರ್‌ಗೆ ಬಂದಿರುತ್ತಿತ್ತು ಆ ಊಟ. ಪ್ರವೀಣ್ ಗ್ರಾಹಕರ ಭೇಟಿಗೆ ಹೋಗಿ ಬರುತ್ತಿದ್ದ. ಸುರೇಶ್ ನನ್ನ ಹಾಗೆ ಮತ್ತೊಂದು ಶೋ ರೂಮ್‌ನಲ್ಲಿ ಇದ್ದ. ರಾತ್ರಿ ಒಟ್ಟಿಗೇ ಊಟ. ಒಂದು ರೀತಿ ಭಯಾನಕ ಏಕತಾನತೆ. ರಾತ್ರಿ ನನ್ನ ರೂಮ್ ಸೇರಿ ಟೇಪ್ ರೆಕಾರ್ಡರ್‌ನಲ್ಲಿ ಹಾಡು ಶ್ಲೋಕ ಕೇಳುತ್ತಾ ನಿದ್ದೆಗೆ ಪ್ರಯತ್ನ. ಅನೇಕ ಸಲ ಕ್ಯಾಸೆಟ್ ಎರಡೂ ಕಡೆ ಕೇಳಿದರೂ ನಿದ್ದೆ ನಾಸ್ತಿ. ಒಂದು ವರ್ಷದ ಕಾಲ ಮನೆಯವರನ್ನು ನೋಡುವಂತಿಲ್ಲ ಎನ್ನುವ ಕೊರಗು ನನ್ನ ನಿದ್ದೆಯನ್ನು ಅನೇಕ ರಾತ್ರಿಗಳು ಕದ್ದೋಡುತ್ತಿತ್ತು.

Comments
Post a Comment