ಯತಿ ಸ್ವಂತೀ - ೨೬೫

೨೩-೦೯-೨೦೧೮
ನಮ್ಮ ಕಂಪೆನಿಯ ಹಿರಿಯ ಸಹೋದ್ಯೋಗಿ ಒಬ್ಬರು ಇದೆಲ್ಲಾ ಬೇಡ. ನಿನಗೆ ಉದ್ಯೋಗವೇ ಮುಖ್ಯ ಅಂತ ಎಲ್ಲರಿಗೂ ತಿಳೀಬೇಕಾದ್ರೆ ಇವು ಅಡ್ಡ ಬರ್ತವೆ. ಬೇರೆ ಯಾರೂ ಇದು ವರೆಗೆ ಇಂಥವೆಲ್ಲ ಬರೆದಿಲ್ಲ ಎಂದರು. ನನ್ನ ಮುಖ್ಯ ಗುರಿ ಎಂದರೆ ಹಣ ಸಂಪಾದನೆ ಮತ್ತು ನನ್ನ ಮನೆಯವರ ದೇಖ್‌ಪಾಲ್. ಸೋ ಇನ್ನು ನಾನು ಬರೆಯಲಿಲ್ಲ. ವಿಚಿತ್ರವೆಂದರೆ ನಾನು ಎರಡು ಸಾವಿರದ ಇಸವಿಯಿಂದ ಬರೆಯುವುದನ್ನು ಬಿಟ್ಟಿದ್ದೆ. ಒಂಟಿಯಾಗಿ ಇರೋದನ್ನು ಅಭ್ಯಾಸ ಮಾಡಿಕೊಳ್ಳತೊಡಗಿದೆ. ಕೆಲಸ ಅದರ ಪಾಡಿಗೆ ನಡೆಯುತ್ತಿತ್ತು. ಒಂದು ದಿನ ಬಹಳ ಬಿಸಿಲಿತ್ತು. ಮಧ್ಯಾಹ್ನ ನಡೆದು ಹೋಗುತ್ತಿದ್ದಾಗ ತಲೆ ತಿರುಗಿ ಒಂದು ಅಂಗಡಿಯ ಬಾಗಿಲಲ್ಲಿ ಸುಸ್ತಾಗಿ ನಿಂತೆ. ಅಲ್ಲಿದ್ದ ಪಠಾಣ 'ಅರೆ ಸಾಬ್ ಬನ್ನಿ ಒಳಗೆ' ಎಂದು ಹೇಳಿ ಕೂರಿಸಿ ಬಲು ತಣ್ಣನೆ ನೀರಿತ್ತ. ಆ ದೇಶ ಸೇರಿದ ಮರುದಿನವೇ ನನ್ನ ಗೆಳೆಯ ಶ್ರೀವತ್ಸನ ಭೇಟಿ ಆಗಿತ್ತು. ಅನೇಕ ಸಲ ಅವನ ಮನೆಯಲ್ಲಿ ಶುಕ್ರವಾರ ಮಧ್ಯಾಹ್ನ ಅಥವಾ ರಾತ್ರಿ ಊಟಕ್ಕೆ ಹೋಗಿದ್ದೆ. ನನ್ನ ಭಾವನವರು ಒಂದು ಕಾಲದಲ್ಲಿ ಮಸ್ಕತ್‌ನಲ್ಲಿ ಇದ್ದವರು. ಆಗ ಅವರ ಜೊತೆ ಕೆಲಸ ಮಾಡುತ್ತಿದ್ದ ಪ್ರಕಾಶ್ ನನ್ನನ್ನು ಅವರ ಮನೆಗೆ ಕರೆದುಕೊಂಡು ಹೋಗುತ್ತಿದ್ದರು. ಅವರ ಇಬ್ಬರು ಪುಟ್ಟ ಗಂಡು ಮಕ್ಕಳು ಮತ್ತು ಅವರ ಪತ್ನಿ ಬಹಳವೇ ಆದರದಿಂದ ಅನೇಕ ವಾರಾಂತ್ಯಗಳಲ್ಲಿ ಊಟ ನೀಡಿದ್ದಾರೆ. ನನ್ನ ಸಹೋದ್ಯೋಗಿಗಳೊಂದಿಗೆ ಶುಕ್ರವಾರ ಕೃಷ್ಣನ ಗುಡಿ, ಶನಿವಾರ ಮತ್ತು ಸೋಮವಾರ ಶಿವ+ಹನುಮಂತ ಗುಡಿ. ಜನ್ಮಾಷ್ಟಮಿಗೆ ನಡುರಾತ್ರಿ ಕೃಷ್ಣ ದರ್ಶನ. ಮೊದಲು ಹೊರಗೆ ಸಿಸಿ ಟಿವಿ ನಂತರ ಒಳಗೆ ಸಮೀಪ ದರ್ಶನ. ಗುಡಿಯ ಹಾಲ್‌ನಲ್ಲಿ ಫ್ಲೋರಿಂಗ್ ತೆಗೆದು ಕೃಷ್ಣನನ್ನು ಅಲಂಕಾರ ಮಾಡಿದ ತೆಪ್ಪದಲ್ಲಿ ಇಟ್ಟಿದ್ದರು. ಸಹೋದ್ಯೋಗಿಗಳ ಮನೆಯಲ್ಲಿ ಸತ್ಯ ನಾರಾಯಣ ಪೂಜೆ. ಆಫೀಸ್‌ನಲ್ಲಿಯೇ ಗಣಪತಿ ಹಬ್ಬ, ಉಗಾದಿ, ದೀಪಾವಳಿ ಆಚರಿಸಿದರು. ಎಲ್ಲ ಸಹೋದ್ಯೋಗಿಗಳ ಮನೆಯವರು ಸೇರುತ್ತಿದ್ದರು. ಮನೆಗಳಿಂದ ತಿಂಡಿ ಊಟ ತರುತ್ತಿದ್ದರು. ವರ್ಷದ ಕೊನೆಯ ದಿನ ದೊಡ್ಡ ಪಾರ್ಟಿ ಇತ್ತು. ಅದೊಂದು ಅವಿಸ್ಮರಣೀಯ ಅನುಭವ.

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102