ಯತಿ ಸ್ವಂತೀ -267


25-09-2018 
ಮತ್ತೆ ಮತ್ತೆ ಪರೀಕ್ಷೆಗಾಗಿ ಕಾರೋಡಿಸುತ್ತಿದ್ದ ನಾನು ನಿಪುಣನಾದೆ. ಒಮ್ಮೆ ನನ್ನನ್ನು ಮೊಹಮ್ಮದ್ ಕೆಣಕಿದ್ದಕ್ಕೆ ಕಾರಿನ ಬಾಗಿಲನ್ನು ದಢಾರನೆ ತೆರೆದೆ. ಲಾಕ್ ಹಾಕಿದ್ದರಿಂದ ಕಾರಿನ ಪಿಡಿ ಮುರಿಯಿತು. ಬಿರಬಿರನೆ ರಸ್ತೆಯಲ್ಲಿ ನಡೆದೆ. ರಾಜ್ ರಾಜ್ ಎಂದು ಪಕ್ಕದಲ್ಲೇ ಡ್ರೈವ್ ಮಾಡುತ್ತಾ ಬಂದ. ಮೂರು ರಿಯಾಲ್ ದಂಡ ನನಗೆ ಬಾಗಿಲ ಪಿಡಿ ಮುರಿದಿದ್ದಕ್ಕೆ! ಮತ್ತೊಮ್ಮೆ ಟೊಯೋಟಾ ಕಾರು ತಂದ. ನನಗೆ ಅದರ ಹ್ಯಾಂಡ್‌ ಬ್ರೇಕ್ ತೆಗೆಯಲಾಗಲಿಲ್ಲ. ಅಭ್ಯಾಸ ಇಲ್ಲದ ಕಾರು. ಫೆಯ್ಲ್. ನನಗೆ ಡ್ರೈವಿಂಗ್ ಬರಲ್ಲ ಅಂತ ತೀರ್ಮಾನ ಮಾಡಿ ಮೊಹಮ್ಮದ್ ಬೈ ಬೈ ಹೇಳಿದ. ಮತ್ತೊಬ್ಬ ಬಂದ. ಅವನಿಗೆ ಕೇವಲ ಅರಾಬಿಕ್ ಬರುತ್ತಿತ್ತು. ಸೋ ಒಂದೆರಡು ಕ್ಲಾಸಿನ ನಂತರ ಬೇಡ ಎಂದೆ. ಮೂರನೆಯ ಗುರು ಅಲಿ. ನನ್ನನ್ನು ಯಾಕೀ (ಅಂದರೆ ಗೆಳೆಯ ಅಂತೆ ಅರಾಬಿಕ್ ಭಾಷೆಯಲ್ಲಿ) ಅಂತಿದ್ದ. ಅವನಿಗೆ ಇಂಗ್ಲಿಷ್ ಬರುತ್ತಿತ್ತು. ನನಗಿಂತ ಅಗಲ, ಎತ್ತರ ಮತ್ತು ದಪ್ಪ. ಅವನೊಂದಿಗೆ ಮೊದಲ ಟೆಸ್ಟ್‌ನಲ್ಲಿ ಫೆಯ್ಲ್. ಎರಡನೇ ಸಲ ಅಪ್‍ನಲ್ಲಿ ನಿಲ್ಲಿಸಿದ್ದೆ. ಪೊಲೀಸ್ ಕಣ್ಮುಚ್ಚಿ ಕುಳಿತಿದ್ದ. ನನ್ನ ಮುಂದಿನ ಕಾರು ಹಿಂದಕ್ಕೆ ಜಾರಿತ್ತು. ದೂರ ಮೆಯಿನ್‌ಟೈನ್ ಮಾಡಲು ನಾನು ಹಿಂದೆ ಹೋಗಲಾಗಲಿಲ್ಲ. ಏಕೆಂದರೆ ಅಲ್ಲೊಂದು ಕಾರಿತ್ತು. ಕಣ್ಣು ಬಿಟ್ಟ ಪೊಲೀಸ್ ಫೆಯ್ಲ್ ಅಂದ. ಅಲಿ ಅಂದ. 'ಯಾಕೀ ನಿನಗೆ ಡ್ರೈವಿಂಗ್ ಚೆನ್ನಾಗಿ ಬರುತ್ತೆ. ಯಾಕೆ ಫೆಯ್ಲ್ ಆಗ್ತಿದ್ದೀ?' ಅಂದ. ಪ್ರತಿ ಸಲ ಐದು ರಿಯಾಲ್ ಕಟ್ಟಬೇಕು. ಲೈಸೆನ್ಸ್ ತಗೊಳ್ಳದೇ ವಿಧಿಯಿಲ್ಲ. ಈ ಸಲ ಕಾರನ್ನು ರಿವರ್ಸ್‍‌ನಲ್ಲಿ ಹಾಕಲು ಹೇಳಿದೆ . ಸೋ, ಸುಲಭವಾಗಿ ಸುತ್ತಾಡಿದೆ. ಆ ಇನ್ಸ್‌ಪೆಕ್ಟರ್ ನನ್ನ ಪಾರ್ಕಿಂಗ್ ವೈಖರಿ ಕೂಡ ನೋಡದೇ ಇಳಿದುಹೋದ. ಅಂದರೆ ನಪಾಸ್ ಅಥವಾ ನಾ ಪಾಸ್? ಅಲಿ ಬಂದ. 'ಯಾಕೀ, ನೀನು ಪಾಸ್' ಅಂದ. ಹಾಗೆಯೇ ಎಗರಿ ಅವನನ್ನು ನನ್ನ ಎರಡೂ ತೋಳುಗಳಿಂದ ತಬ್ಬಲು ನೋಡಿದೆ. ಅಲ್ಲಿದ್ದ ಎಲ್ಲರಿಗೂ ನನ್ನ ಚರ್ಯೆಯಿಂದ ನಗು.

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102