ಯತಿ ಸ್ವಂತೀ -266
24-09-2018
ನನಗೆ ಮೈ ಉರಿಯಿತು. ಆದರೆ ತಪ್ಪು ಮಾಡಿದ್ದೆ. ಸುಮ್ಮನಾದೆ. ಇಲ್ಲಿನ ಯಶವಂತಪುರ ಜಯನಗರ ಕೋರಮಂಗಲ ರಾಜಾಜಿನಗರ ಆರ್ ಟಿ ಓಗಳ ರೀತಿ ಅಲ್ಲೂ ಬೇರೆ ಬೇರೆ ಡ್ರೈವಿಂಗ್ ಟೆಸ್ಟ್ ಜಾಗಗಳಿವೆ. ಅಲ್ಲೆಲ್ಲಾ ಟ್ರೈನಿಂಗ್ ನೀಡಿದರು ಮೊಹಮ್ಮದ್. ನಂತರ ಟೆಸ್ಟ್ ಶುರು ಆಯಿತು. ಡ್ರಮ್ ಟೆಸ್ಟ್. ಇದನ್ನೂ ಕಲಿಸಿದ್ದರು ನಮ್ಮ ಗುರು. ಹುಂಡೈ ಎಲಂಟ್ರ ನನ್ನ ಕಾರು. T ಆಕಾರದಲ್ಲಿ ಡ್ರಮ್‌ಗಳು. ಅವುಗಳ ನಡುವೆ ರಿವರ್ಸ್ ಗೇರ್‌ನಲ್ಲಿ L ಆಕಾರದಲ್ಲಿ ಹೋಗಬೇಕು. ನಂತರ ಮತ್ತೊಂದು ಕಡೆಯಿಂದ ಇನ್ನೊಮ್ಮೆ. ಕಾರಿನ ಯಾವ ಭಾಗವೂ ಡ್ರಮ್‌ಗಳಿಗೆ ತಾಕಕೂಡದು. ಮೊದಲ ಸಲ ಫೆಯ್ಲ್! ಎರಡನೇ ಸಲ ಅದು ಪಾಸ್. ಸ್ಲೋಪ್ ಟೆಸ್ಟ್ ಎರಡನೆಯದು. ಕಾರನ್ನು ಒಂದು ಇಳಿಜಾರಿನಲ್ಲಿ ನಿಲ್ಲಿಸಿ ಹಸಿರು ದೀಪಕ್ಕೆ ಕಾದು, ಹಸಿರು ದೀಪ ಬಂದೊಡನೆ ಹಿಂದಕ್ಕೆ ಬರದೇ ಮುಂದಕ್ಕೆ ಹೋಗಬೇಕು. ಇದೂ ಮೊದಲ ಬಾರಿಗೆ ಫೆಯ್ಲ್. ಎರಡನೇ ಸಲ ಇದೂ ಪಾಸ್. ನಂತರ ರೋಡ್ ಟೆಸ್ಟ್. ಮೊದಲ ಸಲ ಪಾಸ್ ಆಗಲಿಲ್ಲ. ಪಕ್ಕದಲ್ಲಿ ಪೊಲೀಸ್, ಹಿಂದೆ ಗುರು. ಎರಡನೇ ಸಲ ನನ್ನನ್ನು ಟೆಸ್ಟ್ ಸ್ಥಳದಲ್ಲಿ ಬಿಟ್ಟು ಗುರು ಎಲ್ಲೋ ಹೋದ. ನನ್ನ ಹೆಸರು ಕೂಗಿದ್ದರೆ ನನಗೆ ಅದು ತಿಳಿಯಲಿಲ್ಲ. ಎಲ್ಲರೂ ಹೊರಟುಹೋದ ನಂತರ ಗುರು ಬಂದ. ನನ್ನನ್ನು ಪೊಲೀಸ್ ಠಾಣೆಗೆ ಕರೆದೊಯ್ದ. ಅಲ್ಲಿ ಹೋಗಿ ಯಾರ ಹತ್ತಿರವೋ ಕೂಗಾಡಿದ. ಒಬ್ಬ ಎತ್ತರದ ಯುವಕ ಪೊಲೀಸ್ ಉರಿಮೊಗದೊಂದಿಗೆ ಬಂದ. ನನ್ನ ಕಾರು ಹತ್ತುವಾಗ ಅವನ ತಲೆ ಕಾರಿನ ಬಾಗಿಲಿನ ಕಟ್ಟಿಗೆ ಬಡಿಯಿತು. ಆಯಿತು... ನನಗಿನ್ನು ಈ ಸಲ ಲೈಸೆನ್ಸ್ ಇಲ್ಲ ಎಂದುಕೊಂಡೆ. ಹೊರಡು ಎಂದ. ಹೊರಟೆ. ಅದು ಬಯಲು. ಸ್ಲೋಪ್ ಟೆಸ್ಟ್ ಮುಗಿಸಿ ಒಬ್ಬ ಚಾಲಕ ಬಂದ. ಅವನಿಗೆ ಹೋಗಲು ಜಾಗ ಬಿಟ್ಟೆ. ನೀನು ಮುಖ್ಯ ರಸ್ತೆಯಲ್ಲಿದ್ದೀ. ನಿಲ್ಲಿಸಕೂಡದಿತ್ತು ಎಂದು ತಾನೇ ಬ್ರೇಕ್ ಒತ್ತಿ ಗಾಡಿ ನಿಲ್ಲಿಸಿ ಬಾಗಿಲು ತೆರೆದು ಹೊರಟುಹೋದ. ಫೆಯ್ಲ್!
this article so useful to my life
ReplyDeleteABestPro
A Best Pro
AbestProDotCom
A Best Pro Dot Com
ABestPro.com
http://abestpro.com/
www.abestpro.com/
Pick a best product to review