ಯತಿ ಸ್ವಂತೀ -260
17-09-2018
ಫ್ಲ್ಯಾಷ್
ಫಾರ್ವರ್ಡ್
ಸಲ್ತನತ್ ಆಫ್ ಒಮಾನ್
ಏಪ್ರಿಲ್ 2002 ಅಂದರೆ ಸುಮಾರು ಹದಿನೈದು ತಿಂಗಳುಗಳ ನಂತರ ಉದ್ಯೋಗ ಮತ್ತೆ ಸಿಗುವ ಸುದ್ದಿ! ಕೊನೆಗೂ ನಾನು ಬೆಂಗಳೂರು ಬಿಟ್ಟು ಹೋದಾಗಲೇ ಉದ್ಯೋಗ ದೊರಕುವ ಸಮಾಚಾರ ಬಂದಿತ್ತು. ಮೇ ತಿಂಗಳಲ್ಲಿ ಅಪಾಯಿಂಟ್‌ಮೆಂಟ್ ಆರ್ಡರ್ ಬಂದಿತು. ಸಹಿ ಮಾಡಿ ಒಪ್ಪಿಗೆ ನೀಡಬೇಕು. ಅದರಲ್ಲಿ ಇದ್ದ ಒಂದು ಷರತ್ತು ನನ್ನ ತಲೆ ತಿರುಗುವ ಹಾಗೆ ಮಾಡಿತು. ಒಂದು ವರ್ಷ ಅಂದರೆ ಕನಿಷ್ಠ 365 ದಿನಗಳು ಮರಳಿ ಬರುವಂತಿಲ್ಲ. 78 ಕೆ. ಜಿ. ಇದ್ದ ದೇಹದ ತೂಕ, ನಾನು ಚೆನ್ನಾಗಿ ತಿನ್ನುತ್ತಿದ್ದರೂ 'ಒಂದು ವರ್ಷ ಒಂದು ವರ್ಷ' ಜಪದಿಂದ ನಾಲ್ಕು ಕೆ. ಜಿ. ಇಳಿಯಿತು. ವೀಸಾ ಬಂದಿತ್ತು! ಅಮ್ಮನಿಗೆ ಹೇಳಿದೆ ಹುಷಾರು ತಪ್ಪಬೇಡ. ಬರಕ್ಕಾಗಲ್ಲ ಅಂತ. ನಕ್ಕರು. ನನ್ನ ಕೈಲಿಲ್ಲ. ಆದರೂ ಪ್ರಯತ್ನ ಮಾಡ್ತೀನಿ ಅಂದರು. ನನ್ನ ಡ್ರೆಸ್ ಕೋಡ್ ಏನೆಂದು ಕೇಳಿದ್ದಾಗ ಫಾರ್ಮಲ್ಸ್ ಪ್ಲಸ್ ಟೈ ಎಂದಿದ್ದರು. ನನಗೆ ಇಂಟರ್‌ನೆಟ್ ಬಗ್ಗೆ ಗೊತ್ತಿರಲಿಲ್ಲ. ಸೋ ಆ ದೇಶದ ಬಗ್ಗೆ, ನನ್ನ ಉದ್ಯೋಗದ ಬಗ್ಗೆ, ನನ್ನ ಕಂಪೆನಿಯ ಬಗ್ಗೆ ಏನೇನೂ ತಿಳಿಯದೇ ಹೊರಟಿದ್ದೆ. ಜೂನ್ 20, 2002. ಸಂಜೆ ಹೊರಟಿತು ಫ್ಲೈಟ್. ಮೂರೂವರೆ ಗಂಟೆ ಪ್ರಯಾಣ. ಗಗನ ಸಖಿ ಸೀಬ್ ವಿಮಾನ ನಿಲ್ದಾಣಕ್ಕೆ ನಿಮಗೆ ಸ್ವಾಗತ. ಹೊರಗಿನ ತಾಪಮಾನ 45 ಡಿಗ್ರಿ ಸೆಲ್ಶಿಯಸ್ ಎಂದಾಗ ನನ್ನ ಎದೆ ಧಸಕ್ಕೆಂದಿತು. ಆಗ ರಾತ್ರಿ ಎಂಟೂವರೆ. ಎಲ್ಲಿ ಬಂದು ಸಿಲುಕಿಕೊಂಡೆ ಎನಿಸಿತು!

Comments
Post a Comment