ಯತಿ ಸ್ವಂತೀ -255


12-09-2018

ನನ್ನ ಮತ್ತು ನನ್ನ ಬಾಸ್ ಮಧ್ಯೆ ಮಾತಿಲ್ಲದ ಕಮ್ಯೂನಿಕೇಶನ್ ಇತ್ತು. ಬೇರೆಯವರಿಗೆ ಗೊತ್ತಾಗದಂತೆ ಸುದ್ದಿ ಒಬ್ಬರಿಂದ ಒಬ್ಬರಿಗೆ ನಮ್ಮಿಬ್ಬರಿಗೆ ಮಾತ್ರ ತಿಳಿಯುತ್ತಿತ್ತು!
ಅನೇಕ ಸಲ ಗ್ರಾಹಕರು ಅವರೆದುರಿಗೆ ಕುಳಿತಿದ್ದಾಗ ಸಡನ್ನಾಗಿ ನನ್ನನ್ನು ಒಳಗೆ ಕರೆದು ಜನರೇಟರ್ ಡೆಲಿವರಿ ಬಗ್ಗೆ ಕೇಳುತ್ತಿದ್ದರು. ನಾನು ಒಂದಿಷ್ಟೂ ಮುಖದ ಭಾವನೆ ಬದಲಿಸದೇ ಉತ್ತರ ಕೊಡಬೇಕು. ಅದು ಅವರು ಕಸ್ಟಮರ್‌ಗೆ ಹೇಳಿರುವ ಉತ್ತರವನ್ನು ಹೊಂದಿಕೊಳ್ಳಬೇಕಿತ್ತು.
ಅದು ಕಷ್ಟದ ಕೆಲಸ ಅದು...
ಒಮ್ಮೆ ಇದು ಬಹಳ ದೊಡ್ಡ ಸಂಕಷ್ಟಕ್ಕೆ ಸಿಲುಕಿಸಿತ್ತು.
ದೊಡ್ಡ ಒ ಇ ಎಂ ಮೀಟಿಂಗ್ ಹಾಲಿಡೇ ಇನ್ ಹೊಟೇಲ್‌ನಲ್ಲಿ ನಡೆಯುತ್ತಿತ್ತು.
ನಾನು ಬೆಳಗ್ಗೆ ಬಂದು ನನ್ನ ಪಾಲಿನ ಲೆಕ್ಚರ್ ಮುಗಿಸಿ ಯಶವಂತಪುರದ ನಮ್ಮ ಫ್ಯಾಕ್ಟರಿಗೆ ಹಿಂದಿರುಗಿದ್ದೆ. ಆಗ ನಮ್ಮ ಬಾಸ್ ಅವರ ಬಾಸ್ ಅವರ ಬಾಸ್ ಜೊತೆಗೆ ಒ ಇ ಎಂ ಮುಚ್ಚಿದ ಬಾಗಿಲ ಮೀಟಿಂಗ್ ಶುರು ಮಾಡಿದರು.
ನನಗೆ ಇದ್ದಕ್ಕಿದ್ದಂತೆ ಕರೆ ಬಂದಿತು ಬಾಸ್ ಕರೀತಿದ್ದಾರೆ ಅಂತ. ಏನಪ್ಪಾ ನನಗೆ ಕೆಲಸ ದೊಡ್ಡವರ ಮೀಟಿಂಗ್ ನಡೀವಾಗ ಅಂದ್ಕೊಂಡೆ.
ಹೋದೆ.
ಒಳಗೆ ಕರೆದರು. ಅವರ ಬಾಸ್ ಮತ್ತು ಅವರ ಬಾಸ್ ಮುಂದೆ ನನ್ನ ಬಾಸ್ 'ಯತಿರಾಜ್ ಆ ಜನರೇಟರ್ ಬಗ್ಗೆ ಹೇಳು' ಅಂದರು.
ತಬ್ಬಿಬ್ಬಾದರೂ ಅವರ ಮಾತಿಗೆ ಅರ್ಥ ಏನಿರಬಹುದೂಂತ ಗೆಸ್ ಮಾಡಿ ಒಂದು ಹಸೀ ಸುಳ್ಳನ್ನು ಸತ್ಯದ ತಲೆ ಮೇಲೆ ಹೊಡೆದಂತೆ ಉರುಳಿಸಿದೆ. ನಂತರ ನನ್ನ ಬಾಸ್ ಕಡೆ ನೋಡಿದೆ. ನನ್ನ ಮಾತನ್ನು ಅವರ ಬಾಸ್ ಮತ್ತು ಅವರ ಬಾಸ್ ನಂಬಿದರು ಅಂತ ತಿಳಿಯಿತು. ನನಗೇ ತಿಳಿಯದೇ ನನ್ನ ಬಾಸ್‌‌ನ ಬಚಾವ್ ಮಾಡಿದ್ದೆ.
ಅವರಂತೆಯೇ ಮಾತು ಅವರಂತೆಯೇ ವರ್ತನೆ... ನನ್ನ ಬಾಸ್‌ಗೆ ನನ್ನನ್ನು ನೋಡಿದಾಗ ಅವರಿಗೆ ಕನ್ನಡಿ ನೋಡಿದಂತಾಗಿ ನನ್ನನ್ನು ಹೇಟ್ ಮಾಡತೊಡಗಿದರು.
ನನ್ನ ಪತನ ಆರಂಭ ಆಯಿತು...

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102