ಯತಿ ಸ್ವಂತೀ -220
08-08-2018
ನಾವು 13 ಜನ ಗೆಳೆಯರು ಒಟ್ಟಿಗೇ ಸೇರಿದರೆ ಒಂದೇ ಗಲಾಟೆ.
ಒಂದು ವರ್ಷದ ಶಿವರಾತ್ರಿಯ ರಾತ್ರಿ ಶಾಂತಲಾ ಟಾಕೀಸಿನಲ್ಲಿ ಅಣ್ಣಾವ್ರ ತ್ರಿಮೂರ್ತಿ ಸಿನಿಮಾ ನೋಡಿದ್ದ ನೆನಪು. ಅನೇಕ ಸಿನಿಮಾಗಳನ್ನು ಮೊದಲ ದಿನವೂ ನೋಡಿದ್ದೆವು.
ನನ್ನ ಸೋದರತ್ತೆಯ ಮಗ ಮೈಸೂರಿನಲ್ಲಿ ಲಕ್ಷ್ಮಿ ಟಾಕೀಸಿನ ಪರದೆಯನ್ನು ನವೀಕರಿಸಲು ಬಂದ. 1975ನೇ ಇಸವಿ.
ನಮ್ಮ ಮನೆಯಲ್ಲಿದ್ದ. ನನ್ನ ಅನೇಕ ಪಟಗಳನ್ನು ಆ ಸಮಯದಲ್ಲಿ ತೆಗೆದ. ಅವನ ಬಳಿ ಜರ್ಮನಿಯ ವೈಸ್ ಲ್ಯಾಂಡರ್ ಕ್ಯಾಮೆರಾ ಇತ್ತು. ಎಲ್ಲಾ ಕಡೆ ಸುತ್ತಾಡಿ ಫೋಟೋಗಳನ್ನು ತೆಗೆಸಿಕೊಂಡೆ.
ನನ್ನ ಅಮ್ಮ ಅಯ್ಯ ಇಬ್ಬರನ್ನೂ ತಮಿಳು ಸಿನಿಮಾಗೆ ಕರೆದುಕೊಂಡು ಹೋದ.
ನಾವು ಗೆಳೆಯರು ತಮಿಳು ಸಿನಿಮಾ ನೋಡದಿದ್ದ ಕಾಲ ಅದು.
ಅಮ್ಮನನ್ನು ಏನಮ್ಮಾ ಆ ತಮಿಳು ಸಿನಿಮಾ ಕಥೆ ಅಂದರೆ ಹೇಳಿದರು ಹೇಳಿದರು ಹೇಳಿದರೂ ಮೂರು ದಿನ.
ಅಮ್ಮಾ ಎಷ್ಟು ರೀಲು ಸಿನಿಮಾ ಅಂದೆ. 16 ಅಂದರು. ಆ... ಎಂದೆ.
ನಾನೂ ಆ ಸಿನಿಮಾ ನೋಡಬೇಕು ಅಂದೆ. ಕರೆದೊಯ್ದ ಆ ನನ್ನ ಕಸಿನ್.
ಅಬ್ಬಾ... ಹೇಗೆ ತೆಗೆಯಲು ಸಾಧ್ಯ ಇಂತಾ ಸಿನಿಮಾ ಅಂದುಕೊಂಡೆ.
ಅವಳೊಂದು ಧಾರಾವಾಹಿ... ಪ್ರತಿಯೊಂದು ಪಾತ್ರವೂ ಜೀವಂತ. ನನಗೆ ತಿಳಿದ ಮಟ್ಟಿಗೆ ದಕ್ಷಿಣದ ನಾಲ್ಕು ಹಿಂದೀ ಮತ್ತು ಬಂಗಾಳಿ ಭಾಷೆಗಳಲ್ಲಿ ಈ ಸಿನಿಮಾ ಬಂತು. ರಾಜ್ ಕಪೂರ್ ಈ ಚಿತ್ರಕಥೆಯನ್ನು ಅದ್ಭುತ ಎಂದನಂತೆ.
ಕೆ ಬಾಲಚಂದರ್ ಸಿನಿಮಾಗಳ ಫ್ಯಾನ್ ಆಗಿಬಿಟ್ಟೆ ನಾನು.
ಕನ್ನಡದಲ್ಲಿ ಬೆಂಕಿಯಲ್ಲಿ ಅರಳಿದ ಹೂ ಸಿನಿಮಾ ನೋಡಿದೆ. ಅದು ಕೂಡ ಅವರದೇ ನಿರ್ದೇಶನ.
ನಂತರ ಬಾಲಚಂದರ್ ಅವರ ಅರಂಗೇಟ್ರಂ, ಅಬೂರ್ವ ರಾಗಂಗಳ್, ಸೊಲ್ಲತ್ತಾನ್ ನಿನೈಕ್ಕಿರೇನ್, ಮನ್ಮದ ಲೀಲೈ, ನೂಲ್ ವೇಲಿ ಇವುಗಳನ್ನು ನೋಡಿ ಆ ನಿರ್ದೇಶಕರ ಜಾಣ್ಮೆಯನ್ನು ಇಷ್ಟ ಪಟ್ಟೆ.
Comments
Post a Comment