ಯತಿ ಸ್ವಂತೀ -184
03-07-2018
ಗಾನಾಮೃತ ವರ್ಷಿಣಿ...ಸಂಗೀತ ಪ್ರೀತಿ
ನನ್ನ ಪತ್ನಿಯ ಅಣ್ಣ ಮುಂಬೈಯಿಂದ ಬಂದರೆ ನಮ್ಮ ಚರ್ಚೆ ಸಂಗೀತದತ್ತ ಸ್ವಾಭಾವಿಕವಾಗಿ ಹೊರಳುತ್ತದೆ. ನಾನು ಮತ್ತು ಅವನು ಎರಡು ಸಲ ಡಿಸೆಂಬರ್ ತಿಂಗಳಲ್ಲಿ (2008 & 2010) ಚೆನ್ನೈಗೆ ಹೋಗಿ ಪ್ರತಿಸಲ ಹೆಚ್ಚು ಕಡಿಮೆ ತಲಾ ಹನ್ನೆರಡು ಸಂಗೀತ ಕಛೇರಿಗಳಿಗೆ ಹೋಗಿದ್ದೇವೆ. ಅದ್ಭುತ ಅನುಭವ ಅದು!
ಇತ್ತೀಚೆಗೆ ಒಂದು ದಿನ ಸುಮಾರು ಎರಡು ಗಂಟೆಗಳ ಕಾಲ ಸಂಗೀತದ ಬಗ್ಗೆ ಹರಟೆ ಹೊಡೆದೆವು. ಅವನು ಅನೇಕ ಸಾವಿರ ಗೈಗಾಬೈಟ್‌ಗಳ ಸಂಗೀತ ಸಂಗ್ರಹ ಮಾಡಿದ್ದಾನೆ.
ಕೊಳಲುವಾದಕ ಎನ್ ರಮಣಿ 1965ರ ನಗುಮೋಮು, ಯೇಸುದಾಸ್ ಮನಸುಲೋನಿ ಮರ್ಮಮು, ರಂಜನಿ-ಗಾಯತ್ರಿ ಹಿಂದೋಳ ತಾನ,
ಓ... ನಿಮಗೆ ಬೋರ್ ಆಗಬಹುದು.
'ಲೇಡಿ ಟೀಚರ್' ಅನ್ನೋ ಮಲಯಾಳಂ ಸಿನಿಮಾದಲ್ಲಿ ಜೇಸುದಾಸ್ ಹಾಡಿರುವ 'ಬಾನಲ್ಲು ನೀನೆ' ರಾಗದ ಹಾಡು, ಬಾನಲ್ಲು ನೀನೆ ಹಾಡಿನಲ್ಲಿನ ವೇಣು ಧ್ವನಿ... ಆಹಾ.. ಸಂಗೀತ ಸುಧಾಪಾನ ಆಯ್ತು.
ಅದಕ್ಕೇ ನನಗೆ ಸಂಗೀತದ ಬಗ್ಗೆ ಲೇಖನ ಕಥೆ ಕಾದಂಬರಿಗಳಲ್ಲಿ ಬರೆಯುವಾಗ ಸುಲಭ ಆಗುತ್ತದೆ.
ಬದುಕಿನಲ್ಲಿ ಕಂಡ ಕ್ಷಣಗಳು ಅಕ್ಷರ ರೂಪ ತಾಳುತ್ತವೆ.
ನನ್ನ ಮೈಸೂರು ರೈಲ್ವೆ ಲೋಕೋ ಕಾಲೋನಿ ಬದುಕಿನ ಒಂದು ತುಣುಕು ನನ್ನ ಕಾದಂಬರಿ 'ಒಂದೊಂದಾಗಿ ಜಾರಿದರೆ'ಯಲ್ಲಿದೆ. ಆದರೆ ಸತ್ಯ ಮತ್ತು ಕಲ್ಪನೆ ಅಲ್ಲಿ ಹೇಗೆ ಬೆರೆತಿದೆಯೆಂದರೆ ನನ್ನ ಅನೇಕ ಹತ್ತಿರದವರಿಗೆ, ಅದರಲ್ಲಿ ಬರುವ 'ಚಂಚಲ' ನನ್ನ ಕಲ್ಪನೆಯಲ್ಲಿ ಮೂಡಿ ಬಂದ ಪಾತ್ರ ಅಂತ ಅರ್ಥ ಮಾಡಿಸಲು ಕಷ್ಟ ಆಯ್ತು!
ಬಹುಶಃ ನನಗೆ ಆಗುವ, ಆಗುತ್ತಿರುವ ಅನೇಕ ವಿಶಿಷ್ಟ ಸಂಬಂಧಗಳು, ನನ್ನ ಜೀವನದ ಅನೇಕ ವಿಚಿತ್ರ ಅನುಭವಗಳು ನನಗೆ ಬರೆಯಲು ಸಹಾಯ ಮಾಡಲೆಂದೇ ಆಗುತ್ತಿರಬೇಕು.
ಒಂದು ಕಾಲದಲ್ಲಿ ನನ್ನ ಕೆಲವು ಸಹೋದ್ಯೋಗಿಗಳು 'ಇವನ ಹತ್ತಿರ ಏನೂ ಹೇಳಬಾರದು. ತನ್ನ ಕಥೇಲಿ ಬರೆದು ಬಿಡ್ತಾನೆ' ಅಂತಿದ್ರು.
ಕೆಲವೊಮ್ಮೆ ಹಾಗಾಗಿರುವುದೂ ನಿಜ!
Comments
Post a Comment