ಯತಿ ಸ್ವಂತೀ -162


11-06-2018

ನಾಗರಹಾವು ಪುಟ್ಟಣ್ಣ ಕಣಗಾಲ್ ಮತ್ತು ವಿಷ್ಣುವರ್ಧನ್ ಇಬ್ಬರಿಗೂ ವಿಶೇಷ. ಮಹಿಳಾ ಪ್ರಧಾನ ಅಲ್ಲದ ಬಹುಶಃ ಪುಟ್ಟಣ್ಣ ಮೊದಲ ಚಿತ್ರ ನಾಗರಹಾವು. ವಂಶವೃಕ್ಷದ ಪುಟ್ಟ ಪಾತ್ರದ ನಂತರ ಇದು ಸಂಪತ್ಕುಮಾರ್‌ಗೆ ಹೊಸ ನಾಮಕರಣ ಮಾಡಿ ಕನ್ನಡ ಚಿತ್ರರಂಗದ ಹೊಸ ತಾರೆಗೆ ಜನ್ಮ ಕೊಟ್ಟರು ಪುಟ್ಟಣ್ಣ. 
ಇತ್ತೀಚೆಗೆ ನನ್ನ ಹಳೆಯ ಪಟಗಳನ್ನು ಫೇಸ್ ಬುಕ್‌ನಲ್ಲಿ ಹಾಕಿದಾಗ ನೀವು ವಿಷ್ಣು ಥರ ಇದ್ದೀರಿ ರಜನಿ ಥರ ಇದ್ದೀರಿ ಅಂತ ಕಾಮೆಂಟ್‌ಗಳು ಬರ್ತವೆ. ನನಗೂ ಆಗ ನಾನು ವಿಷ್ಣು ಥರ ಇದ್ದೇನೆ ಅನ್ನಿಸಿದ್ದು ನಿಜ. ಆದರೆ ಸೋಶಿಯಲ್ ಜಾಲತಾಣ ಇಲ್ಲ. ಯಾರ ಪರಿಚಯ ಕೂಡ ಇಲ್ಲ. ಎಲ್ಲಿಂದ ನಟ ಆಗೋದು? 
ಓದು ಒಂದೇ ಮುಖ್ಯ ಆಗಿತ್ತು ಆಗ. 
ಈ ವಿಷಯ ಏಕೆ ಬಂತೆಂದರೆ ನನ್ನ ಫೇಸ್ ಬುಕ್ ಪಟಗಳನ್ನು ನೋಡಿ ನನಗೆ ತಮ್ಮ ಕಿರುಚಿತ್ರ ರೂಪಾಂತರದಲ್ಲಿ ಪಾತ್ರ ನೀಡಿದರಂತೆ ನಿರ್ದೇಶಕರು. 
ಮತ್ತೊಬ್ಬರು ಬಂದು ನನ್ನ ಒಮ್ಮೆ ಭೇಟಿ ಆಗಿ ನೀವು ನನ್ನ ತಂದೆಯ ಪಾತ್ರ ಮಾಡಿ. ಆದರೆ ಮೀಸೆ ಬೆಳೆಸಿ ಎಂದರು. ಆತ ಆ ಚಿತ್ರದ ನಾಯಕ ಮತ್ತು ನಿರ್ದೇಶಕ. ಇನ್ನೊಂದು ಶೆಡ್ಯೂಲ್ ಬಾಕಿ ಇದೆ. ಮತ್ತೊಬ್ಬ ಜನಪ್ರಿಯ ನಾಯಕ ನಿರ್ದೇಶಕ ಕರೆ ಮಾಡಿ ನನ್ನ ಥ್ರಿಲ್ಲರ್ ಚಿತ್ರದಲ್ಲಿ ಒಂದು ಪುಟ್ಟ ಪಾತ್ರ ಇದೆ. ನಿಮಗೆ ಸೂಟ್ ಆಗತ್ತೆ ಅಂದರು. ಶೂಟಿಂಗ್ ಕೂಡ ಆಗಿದೆ. 
ಅಂತೂ ನಾಯಕ ನಟ ಆಗಲಿಲ್ಲ. ನಟ ಆದೆ. 46 ವರ್ಷಗಳ ನಂತರ! 
ನನ್ನ ಮತ್ತೊಂದು ಆಸೆ ಇಂಗ್ಲಿಷ್ ಕಾದಂಬರಿಗಳನ್ನು ಓದಬೇಕು ಎಂಬುದು. 
ನನ್ನ ಕಸಿನ್ ಮನೆಗೆ ಹೋದಾಗ ಮೊದಲ ಪುಸ್ತಕ ಕೈಗೆತ್ತಿಕೊಂಡೆ. 
-0-0-0-0-0 -

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102